twitter
    For Quick Alerts
    ALLOW NOTIFICATIONS  
    For Daily Alerts

    ಪೊಲೀಸ್ ಕುಟುಂಬದಿಂದ ಬಂದು ಹೀರೋ ಆದ ಹುಡುಗ

    |

    ಇತ್ತೀಚೆಗಷ್ಟೇ ಅನುಕ್ತ' ಎನ್ನುವ ಸಿನಿಮಾ ಟ್ರೇಲರ್ ಮೂಲಕ ಸುದ್ದಿ ಮಾಡಿತ್ತು. ಆದರೆ, ಚಿತ್ರ ತೆರೆ ಕಂಡಾಗ ಚಿತ್ರ ನೋಡಿದವರು ಯಾಕೋ ಪೂರ್ತಿಯಾಗಿ ಒಪ್ಪಿಕೊಳ್ಳಲಿಲ್ಲ. ಅವರು ಇಷ್ಟ ಪಟ್ಟಿದ್ದು ಚಿತ್ರದ ಮೇಕಿಂಗ್ ಮತ್ತು ನಾಯಕನನ್ನು ಮಾತ್ರ. ಆದರೆ ಅವೆರಡರಿಂದ ಚಿತ್ರ ಗೆಲ್ಲಲಿಲ್ಲ. ಆದರೆ ಕನ್ನಡಕ್ಕೆ ಮತ್ತೊಬ್ಬ ಆರಡಿ ಮೀರಿದ ನಾಯಕ ಸಿಕ್ಕಿದ್ದಂತೂ ನಿಜ.

    ಆತನ ಹೆಸರು ಕಾರ್ತಿಕ್ ಅತ್ತಾವರ. ನಾಯಕನಾಗಿ ಮೊದಲ ಚಿತ್ರವಾದರೂ ಕಿರುತೆರೆ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡವರು ಇವರು. ಅನುಕ್ತ ಯಶಸ್ವಿಯಾಗಿದ್ದರೆ ಕಾರ್ತಿಕ್ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗುತ್ತಿತ್ತು. ಆದರೆ ಈಗ ಒಂದಷ್ಟು ಹೊಸ ಯೋಜನೆಗಳನ್ನು ತಲೆ ತುಂಬಿಸಿಕೊಂಡು ಹೊಸ ದಾರಿ ಹುಡುಕುವ ಪ್ರಯತ್ನದಲ್ಲಿದ್ದಾರೆ. ಅವರ ಯೋಜನೆ, ಯೋಚನೆಗಳ ಕುರಿತು ನಡೆಸಲಾದ ಮಾತು ಕತೆ ಇದು. ಮುಂದೆ ಓದಿ..

    `ಅನುಕ್ತ' ನಿಮ್ಮ ಮೊದಲ ಚಿತ್ರವಾಗಿತ್ತೇ?

    `ಅನುಕ್ತ' ನಿಮ್ಮ ಮೊದಲ ಚಿತ್ರವಾಗಿತ್ತೇ?

    ಕನ್ನಡದಲ್ಲಿ ಹೌದು ಎಂದೇ ಹೇಳಬಹುದು. ಆದರೆ ‘ರಿಕ್ಷಾ ಡ್ರೈವರ್' ಎನ್ನುವ ತುಳು ಚಿತ್ರಕ್ಕೆ ನಿರ್ದೇಶಕ ಹ.ಸು ರಾಜಶೇಖರ್ ಅವರು ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದ್ದರು. ಹಾಗೆ ನಾಯಕನಾಗಿ ನಟಿಸಿದ ಚಿತ್ರಕ್ಕೆ ಶ್ರೇಷ್ಠ ಚಿತ್ರವಾಗಿ ರಾಜ್ಯ ಪ್ರಶಸ್ತಿಯೂ ದೊರಕಿತ್ತು. ಆದರೆ ಚಿತ್ರರಂಗದ ಸಂಪರ್ಕ ಅಥವಾ ಬಣ್ಣದ ಲೋಕದ ಯಾವುದೇ ಹಿನ್ನೆಲೆ ಇರದ ಕಾರಣ ಮತ್ತೆ ಚಿತ್ರರಂಗದಲ್ಲಿ ಮುಂದುವರಿಯುವ ಅವಕಾಶಗಳಿರಲಿಲ್ಲ. ಅದರ ಬಳಿಕ ಸಿಕ್ಕಂಥ ಅವಕಾಶವೇ 'ಅನುಕ್ತ'.

    ನಿಮ್ಮ ಕೌಟುಂಬಿಕ ಹಿನ್ನೆಲೆ ಹೇಳಿ

    ನಿಮ್ಮ ಕೌಟುಂಬಿಕ ಹಿನ್ನೆಲೆ ಹೇಳಿ

    ನಾನು ಪೊಲೀಸ್ ಕುಟುಂಬದಿಂದ ಬಂದವನು. ಯಾಕೆಂದರೆ ನನ್ನ ತಂದೆ ಕೃಷ್ಣ ಅತ್ತಾವರ ಮಂಗಳೂರಿನ ಕೊಟ್ಟಾರದಲ್ಲಿ ಲೋಕಾಯುಕ್ತದಲ್ಲಿ ವೃತ್ತಿಯಲ್ಲಿದ್ದವರು. ಬಳಿಕ ಪ್ರಮೋಶನ್ ಪಡೆದು ಸಬ್ ಇನ್ಸ್ಪೆಕ್ಟರ್ ಆಗಿ ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಆದರೆ ಏಕೈಕ ಪುತ್ರನಾದ ನನ್ನ ಆಸಕ್ತಿ ಮಾತ್ರ ಸಿನಿಮಾ ಕ್ಷೇತ್ರದಲ್ಲಿತ್ತು. ವಿಶೇಷ ಏನೆಂದರೆ ‘ಅನುಕ್ತ' ಚಿತ್ರದಲ್ಲಿ ನನಗೆ ಪೊಲೀಸ್ ತನಿಖಾಕಾರಿಯಾಗಿಯೇ ನಟಿಸುವ ಅವಕಾಶ ದೊರಕಿತ್ತು. ನನ್ನ ತಾಯಿಯ ಹೆಸರು ಸರಸ್ವತಿ. ತಂಗಿ ಕೃತ್ತಿಕಾ ವಿವಾಹವಾಗಿ ವಿದೇಶದಲ್ಲಿ ನೆಲೆಸಿದ್ದಾಳೆ.

    ರಂಗಭೂಮಿ ಮತ್ತು ಸಿನಿಮಾ : ಒಂದೇ ನಾಣ್ಯದ ಎರಡು ಮುಖಗಳು ರಂಗಭೂಮಿ ಮತ್ತು ಸಿನಿಮಾ : ಒಂದೇ ನಾಣ್ಯದ ಎರಡು ಮುಖಗಳು

    ಕಿರುತೆರೆಯಲ್ಲಿ ಕೂಡ ನೀವು ಒಂದಷ್ಟು ಗುರುತಿಸಿಕೊಂಡಿರುವ ಬಗ್ಗೆ?

    ಕಿರುತೆರೆಯಲ್ಲಿ ಕೂಡ ನೀವು ಒಂದಷ್ಟು ಗುರುತಿಸಿಕೊಂಡಿರುವ ಬಗ್ಗೆ?

    'ರಿಕ್ಷಾ ಡ್ರೈವರ್' ಸಿನಿಮಾದಲ್ಲಿ ನಾನು ನಟಿಸಿದಾಗ ನನ್ನ ಕುರಿತಾಗಿ ಪತ್ರಕರ್ತೆಯೊಬ್ಬರು ಬರೆದ ಲೇಖನ ನೋಡಿಯೇ ‘ಯಶೋಧೆ' ಎನ್ನುವ ಕಿರುತೆರೆ ಧಾರಾವಾಹಿಗೆ ನಾಯಕರನ್ನಾಗಿಸಿದವರು ನಿರ್ದೇಶಕ ವಿನೋದ್ ದೊಂಡಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದೂವರೆ ವರ್ಷಗಳ ಕಾಲ ಪ್ರಸಾರವಾದ ಯಶಸ್ವಿ ಧಾರಾವಾಹಿಗೆ ಬಿಗ್ ಬಾಸ್ ಪ್ರವೇಶವಾಗುವ ಮೂಲಕ ರಾತ್ರಿ ಒಂಬತ್ತು ಗಂಟೆಯ ಸಮಯವನ್ನು ತೊರೆಯಬೇಕಾಗಿ ಬಂತು. ಆದರೆ ಮುಂದೆ ಹತ್ತು ಗಂಟೆಗೆ ಬದಲಾಯಿಸಬೇಕು ಎಂದಾಗ ನಿರ್ದೇಶಕರು ಆಸಕ್ತಿ ಕಳೆದುಕೊಂಡು, ಸಮಯ ಬದಲಾವಣೆಗಿಂತ ವೈಂಡಪ್ ಮಾಡೋದೇ ಬೆಟರ್ ಎಂದರು. ವಿನೋದ್ ಅವರೇ ನಿರ್ಮಾಪಕರು ಕೂಡ ಆಗಿರುವ ಕಾರಣ ಅವರು ‘ಯಶೋಧೆಗೆ ಇತಿಶ್ರೀ ಹಾಡಿದರು. ಹಾಗೆ ನಾನು ಮಂಗಳೂರಿಗೆ ವಾಪಾಸಾಗಬೇಕಾಗಿ ಬಂದಿತ್ತು. ಇದರ ನಡುವೆ ಡ್ಯಾನ್ಸಿಂಗ್ ಸ್ಟಾರ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಂದ ಪ್ರಶಂಸೆ ಕೂಡ ಪಡೆದುಕೊಂಡಿದ್ದೆ. ಅದು ನನ್ನ ಜೀವನದಲ್ಲಿ ಮರೆಯಲಾಗದ ಸಂದರ್ಭ.

    ನಟನೆ, ನೃತ್ಯದ ಜೊತೆಗೆ ಕತೆಯನ್ನೂ ಬರೆಯುತ್ತೀರಿ. ಇದೆಲ್ಲ ಹೇಗೆ ಸಾಧ್ಯವಾಯಿತು?

    ನಟನೆ, ನೃತ್ಯದ ಜೊತೆಗೆ ಕತೆಯನ್ನೂ ಬರೆಯುತ್ತೀರಿ. ಇದೆಲ್ಲ ಹೇಗೆ ಸಾಧ್ಯವಾಯಿತು?

    ಮಂಗಳೂರಿನಲ್ಲಿ ಕಾರ್ತಿಕ್ ನನಗೆ ಯಶಸ್ಸು ಕೊಟ್ಟಂಥ ಚಿತ್ರ ‘ರಿಕ್ಷಾ ಡ್ರೈವರ್.' ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ಸಂತೋಷ ಕುಮಾರ್ ಕೊಂಚಾಡಿಯವರೊಂದಿಗೆ ಸೇರಿ ಒಂದು ಕತೆ ಬರೆಯಲು ಮುಂದಾದೆ. ಹಾಗೆ ಸೃಷ್ಟಿಯಾದ ಕತೆಯೇ ಅನುಕ್ತ! ನನಗೆ ನಿರ್ದೇಶನದಲ್ಲಿಯೂ ಆಸಕ್ತಿ ಇದ್ದು ಈಗಾಗಲೇ ಒಂದು ಕಿರುಚಿತ್ರವನ್ನು ನಿರ್ದೇಶಿಸಿದ್ದೇನೆ. ಅದರ ಹೆಸರು ಅನಮೋಲ್. ಹೌದು, ಅದೊಂದು ಹಿಂದಿ ಕಿರುಚಿತ್ರ. ಹದಿನೈದು ನಿಮಿಷಗಳ ಅವಧಿಯನ್ನು ಹೊಂದಿರುವ ಈ ಚಿತ್ರದಲ್ಲಿರುವ ವೃದ್ಧಾಶ್ರಮಕ್ಕೆ ಸಂಬಂಧಿಸಿದ ಕತೆಯಿದೆ. ಯುನಿವರ್ಸಲ್ ಸಬ್ಜೆಕ್ಟ್ ಗಮನಿಸಿದ ಸ್ನೇಹಿತರು ಚಿತ್ರವನ್ನು ಹಿಂದಿಯಲ್ಲಿ ತೆಗೆದರೆ ದೇಶದಾದ್ಯಂತ ಒಳ್ಳೆಯ ರೀಚ್ ಪಡೆಯುವ ಸಾಧ್ಯತೆ ಇದೆ ಎಂದರು. ಹಾಗಾಗಿ ಚಿತ್ರವನ್ನು ಹಿಂದಿಯಲ್ಲಿ ಮಾಡಿದ್ದೇನೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ.

    ಆನಂದ್ ಆಡಿಯೋಗೆ 20 ವರ್ಷ : ಅತಿ ಹೆಚ್ಚು ಮಾರಾಟವಾದ ಕ್ಯಾಸೆಟ್ ಇದು! ಆನಂದ್ ಆಡಿಯೋಗೆ 20 ವರ್ಷ : ಅತಿ ಹೆಚ್ಚು ಮಾರಾಟವಾದ ಕ್ಯಾಸೆಟ್ ಇದು!

    ನಿಮ್ಮ ಮುಂದಿನ ಕನಸುಗಳೇನು?

    ನಿಮ್ಮ ಮುಂದಿನ ಕನಸುಗಳೇನು?

    ನನಗೆ ಸಿನಿಮಾ ಎಂದರೆ ನಟನೆ ಮಾತ್ರ ಕನಸಲ್ಲ. ಒಂದೊಳ್ಳೆಯ ಚಿತ್ರಕತೆಗೆ ತಂತ್ರಜ್ಞನಾಗಿ ಹಿಂದೆಯೇ ಇದ್ದು ಕೆಲಸ ಮಾಡುವುದಕ್ಕೂ ಸಿದ್ಧನಿದ್ದೇನೆ. ಸದ್ಯಕ್ಕೆ ಮಂಗಳೂರಿಗೆ ವಾಪಾಸಾಗಿದ್ದು ಕತೆ, ಚಿತ್ರಕತೆ ಮಾಡುತ್ತಿದ್ದೇನೆ.

    English summary
    kannada actor, Anukta movie fame Karthik Attavar interview.
    Sunday, March 31, 2019, 13:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X