»   » ಗಾಂಧಿನಗರದಲ್ಲಿ 'ಕಿರಿಕ್‌ ಪಾರ್ಟಿ' ಮಾಡಿದ ರಕ್ಷಿತ್ ಶೆಟ್ಟಿ ಸಂದರ್ಶನ

ಗಾಂಧಿನಗರದಲ್ಲಿ 'ಕಿರಿಕ್‌ ಪಾರ್ಟಿ' ಮಾಡಿದ ರಕ್ಷಿತ್ ಶೆಟ್ಟಿ ಸಂದರ್ಶನ

By: ಸುನೀಲ್
Subscribe to Filmibeat Kannada

'ಉಳಿದವರು ಕಂಡಂತೆ' ಡೈರೆಕ್ಟರ್ ಕಮ್‌ ಆಕ್ಟರ್ ರಕ್ಷಿತ್ ಶೆಟ್ಟಿ 'ರಿಕ್ಕಿ' ಸಿನಿಮಾ ಮುಗಿದ ಮೇಲೆ ಎಲ್ಲಿಯೂ ಕಾಣ್ತಿಲ್ಲವಲ್ಲ. ಏನ್‌ ನಾಪತ್ತೆ ಆಗ್ಬಿಟ್ರಾ? ಅಂತ ಸ್ವಲ್ಪ ಜನರು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಆದ್ರೆ ರಕ್ಷಿತ್ ಶೆಟ್ಟಿ ಗಾಂಧಿನಗರದಲ್ಲಿ 'ಕಿರಿಕ್‌ ಪಾರ್ಟಿ' ಮಾಡ್ತಿರೋದು ಎಷ್ಟೋ ಜನರಿಗೆ ಗೊತ್ತಿಲ್ಲಾ.!

ಏನ್‌ ಕಿರಿಕ್‌ ಮಾಡಿದ್ದಾರೆ ಅಂತ ಮಾತ್ರ ಕೇಳ್ಬೇಡಿ. ಯಾಕಂದ್ರೆ ಅವರು 'ಕಿರಿಕ್‌ ಪಾರ್ಟಿ' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ ಅಂತ ಹೇಳಿದ್ವಿ ಅಷ್ಟೆ. ಈಗಾಗಲೇ ಟ್ರೈಲರ್ ನೋಡಿರುವವರಿಗೆ ಈ ಬಗ್ಗೆ ಸ್ವಲ್ಪ ಗೊತ್ತಿದೆ. ರಕ್ಷಿತ್ ಅಭಿಮಾನಿಗಳಿಗೂ ಸಮಾಧಾನ ಆಗ್ಲಿ ಅಂತ ನಾವು 'ಏನ್‌ ಸರ್ ನಿಮ್ ಕಿರಿಕ್‌?' ಅಂತ 'ಕಿರಿಕ್‌ ಪಾರ್ಟಿ' ಸಿನಿಮಾ ಬಗ್ಗೆ ಹಲವು ಪ್ರಶ್ನೆಗಳನ್ನ ಕೇಳಿದ್ವಿ, ಅದಕ್ಕೆ ಅವರು ಈ ಕೆಳಗಿನಂತೆ ಉತ್ತರಿಸಿದ್ದಾರೆ. ಏನಿದು ಕಿರಿಕ್ ಅಂತ ನೀವು ಒಮ್ಮೆ ಓದಿಕೊಳಿ..


ರಕ್ಷಿತ್ ಶೆಟ್ಟಿ ಏನಿದು ಹೊಸ ಕಿರಿಕ್‌?

- ಹೊಸ ಕಿರಿಕ್‌ ಏನಲ್ಲಾ, ತುಂಬಾ ಹಳೇ ಕಿರಿಕ್‌ ಅನ್ನೇ ತೆರೆ ಮೇಲೆ ಮೆಲುಕು ಹಾಕುವ ಆಸೆ ಅಷ್ಟೇ. ಕಾಲೇಜು ದಿನಗಳ ಎಲ್ಲಾ ಕಿರಿಕ್‌ ಗಳನ್ನು ತೆರೆ ಮೇಲೆ ಮೆಲುಕು ಹಾಕ್ತಿದ್ದೀವಿ. [ಶೆಟ್ರ ಸ್ಫೂರ್ತಿಯಾಗಿರೋ 'ಈ' ನಟನಿಂದ 'ಕಿರಿಕ್ ಪಾರ್ಟಿ' ಟ್ರೈಲರ್ ರಿಲೀಸ್]


ಚಿತ್ರಕಥೆ ನಿಮ್ಮದೇ, ಕಥೆ ಬಗ್ಗೆ ಹೇಳಿ.. ಅಂತಹ ವಿಶೇಷತೆ ಏನಿದೆ?

- ಚಿತ್ರಕಥೆಯನ್ನ 5-6 ವರ್ಷಗಳ ಹಿಂದೇನೆ, ಕಿರುಚಿತ್ರ ನಿರ್ಮಾಣ ಮಾಡುವಾಗಲೇ ಬರೆದಿಟ್ಟಿದ್ದೆ. ಚಿತ್ರಕಥೆ ಮಾತ್ರವಲ್ಲದೇ ಅದಕ್ಕೆ ಸ್ಕ್ರಿಪ್ಟ್‌ ಅನ್ನೂ ಆಗಲೇ ಬರೆದಿಟ್ಟಿದ್ದೆ. ನಾವ್ ಏನ್‌ ಕಾಲೇಜು ಸಮಯದಲ್ಲಿ ಕಾಮಿಡಿ ಮಾಡ್ತಿದ್ವೋ ಅದೇ ರಿಯಲ್‌ ಕಾಮಿಡಿಗಳನ್ನು ಈಗ ತೆರೆ ಮೇಲೆ ತೋರಿಸ್ತಿದೀವಿ. ವಿಶೇಷ ಅಂದ್ರೆ ಕಾಲೇಜು ದಿನಗಳ ಕಂಪ್ಲೀಟ್ ರಿಯಲ್‌ ಕಾಮಿಡಿಗಳನ್ನು ಸಿನಿಮಾದಲ್ಲಿ ನೋಡಬಹುದು. ['ಕಿರಿಕ್ ಪಾರ್ಟಿ' ಟ್ರೈಲರ್ ನೋಡಿ, ಕಾಲೇಜು ದಿನದತ್ತ ಜಾರಿ ಹೋಗಿ]


ಚಿತ್ರಕಥೆ ನಿಮ್ಮದೇ ಆದ ಮೇಲೆ ನೀವೇ ಡೈರೆಕ್ಟ್ ಮಾಡಬಹುದಿತ್ತು. ಆದರೆ ರಿಷಬ್ ಶೆಟ್ಟಿ ಡೈರೆಕ್ಟ್ ಮಾಡ್ತಿದ್ದಾರಲ್ಲಾ?

- ಕೆಲವೊಂದು ಸಿನಿಮಾಗಳ ಸ್ಕ್ರಿಪ್ಟ್‌ ಬರೆದಿಟ್ಟ ಮೇಲೆ ಡೈರೆಕ್ಟ್ ಮಾಡಬೇಕು ಅನ್ನೋ ಹುಚ್ಚು ಹೊರಟು ಹೋಗಿದೆ. ಆದರೆ ಆಕ್ಟ್ ಮಾಡಬೇಕು ಅನ್ನೋ ಹುಚ್ಚು ಇನ್ನೂ ಇದೆ ನೋಡಿ. ಅಲ್ಲದೇ ಈ ಸಿನಿಮಾ ಡೈರೆಕ್ಟ್ ಮಾಡಬೇಕು ಅನ್ನೋದು ರಿಷಬ್ ಅವರ ಆಸೆ. ಸೋ, ನಾನು ಆಕ್ಟಿಂಗ್ ಮೇಲೆ ಹೆಚ್ಚು ಗಮನ ಹರಿಸಬಹುದು ಅಂತ ಡಿಸೈಡ್ ಮಾಡಿದೆ. [ರಕ್ಷಿತ್ ಶೆಟ್ಟಿಯ 'ತಿರಬೋಕಿ ಜೀವನ' ಸಖತ್ ವೈರಲ್]


ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಕಾಲೇಜ್‌ ಸ್ಟೋರಿಗಳು, ಕಾಲೇಜು ಆಧಾರಿತ ಸ್ಟೋರಿಗಳು ಕಡಿಮೆ ಇದರ ಬಗ್ಗೆ ಏನ್‌ ಹೇಳ್ತಿರಾ?

- ಎಸ್‌... ಆಕ್ಚುಲಿ ಈ ಪ್ರಶ್ನೆ ನನಗೂ ಬಂದಿತ್ತು. ಅದಕ್ಕೆ ನನಗೆ ವಯಸ್ಸಾಗಿ ಹೋದರೆ ಆ ಮೇಲೆ ಸಿನಿಮಾ ಮಾಡಲು ಆಗೋದಿಲ್ಲಾ ಅಂತ ಬರೆದಿಟ್ಟಿದ್ದ ಸ್ಕ್ರಿಪ್ಟ್‌ ಅನ್ನು ಕೈಗೆ ಎತ್ತಿಕೊಂಡು ಸಿನಿಮಾ ಮಾಡಲು ಶುರುಮಾಡಿದ್ವಿ. ಅದ್ರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಈಗಲೂ ಕಾಲೇಜ್ ಆಧಾರಿತ ಸ್ಟೋರಿಗಳು ಬರ್ತಿವೆ.


ಪಾತ್ರಗಳ ಬಗ್ಗೆ ಹೇಳಿ..

- ಕ್ಯಾರೆಕ್ಟರ್‌ ಬಂದು ಸಿನಿಮಾದಲ್ಲಿ ಒಬ್ಬಳು ಕಂಪ್ಲೀಟ್ ನಾಟಿ ಹುಡುಗಿ.. ಇವಳೇ ಕಿರಿಕ್ ಪಾರ್ಟಿ. ಇನ್ನೊಬ್ಬಳು ಪೂರ್ಣ ಮೆಚ್ಯೂರ್ ಮೆಂಡೆಡ್ ಫೈನಲ್ ಇಯರ್ ಹುಡುಗಿ. ಈ ಇಬ್ಬರು ಸಿನಿಮಾದಲ್ಲಿ ಹೀರೋಯಿನ್ ಗಳು. ಸಿನಿಮಾದಲ್ಲಿ ಹಳೆಯ ನಟಿಯರೇ ಇದ್ರೆ ಪ್ರೇಕ್ಷಕರು ಸಹ ಅದೇ ನಟಿ ಅಂತ ಫಿಕ್ಸ್ ಆಗಿಬಿಡ್ತಾರೆ. ಅದಕ್ಕೆ 4000 ಜನರನ್ನು ಆಡಿಷನ್ ಮಾಡಿ ಇಬ್ಬರು ಹುಡುಗಿಯರನ್ನ ಹೀರೋಯಿನ್ ಆಗಿ ಸೆಲೆಕ್ಟ್ ಮಾಡಿದ್ದೀವಿ. ಕಾಲೇಜ್‌ ಸ್ಟೋರಿ ಆದ್ರಿಂದ ಎಲ್ಲರೂ ಹೊಸಬರೇ ಇರಬೇಕು ನೋಡಿ. ಸಿನಿಮಾದಲ್ಲಿ ಅಚ್ಯುತ್ ಅಣ್ಣ ಬಿಟ್ರೆ ಇನ್ನೆಲ್ಲರೂ ಹೊಸಬರು, ಮೊದಲೇ ಹೇಳಿದ ಇಬ್ಬರೂ ಹೀರೋಯಿನ್ ಗಳು ಮತ್ತು ನಾವು 6 ಜನ ಕಾಲೇಜ್‌ ಕಿರಿಕ್‌ ಪಾರ್ಟಿಗಳು. ಒಂದು ಹಾಸ್ಟೆಲ್ ಗ್ಯಾಂಗ್.


ಸಿನಿಮಾದ ಹಾಡುಗಳ ಬಗ್ಗೆ ಹೇಳಿ...

- ಸಿನಿಮಾದಲ್ಲಿ ಒಟ್ಟಾರೆ 10 ಹಾಡುಗಳಿವೆ. ಇದೇ ಸೋಮವಾರ ಆಡಿಯೋ ರಿಲೀಸ್ ಇದೆ, ಮೊದಲ ಆಲ್ಬಂನಲ್ಲಿ 6 ಹಾಡುಗಳನ್ನು ರಿಲೀಸ್ ಮಾಡುತ್ತಿದ್ದೇವೆ.


ಕಾಲೇಜ್‌ ಗಳಲೆಲ್ಲಾ ನಿಮ್ಮದೇ ಕಿರಿಕ್? ಏನ್‌ ಈಗಿನಿಂದಲೇ ಪ್ರಮೋಶನ್ ಸ್ಟಾರ್ಟ್‌ ಮಾಡಿದ್ದೀರಾ ಹೇಗೆ?

- ಸಿನಿಮಾ ಇನ್ನೊಂದು ತಿಂಗಳಿದೆ ಅಂದ್ರೆ ಪ್ರಮೋಶನ್ ಬೇಕೇಬೇಕು ಅಲ್ವಾ.... ಡಿಸೆಂಬರ್ 30th ಸಿನಿಮಾ ರಿಲೀಸ್.


'ಕಬಾಲಿ' ಬಹು ನಿರೀಕ್ಷೆ ಹುಟ್ಟಿಸಿ ಹುಸಿಯಾಯ್ತು? ಆ ರೀತಿ ನಿಮ್ಮ ಸ್ಟೋರಿಗೆ ಭಯ ಇಲ್ವಾ?

- ಎಲ್ಲಾ ಸಿನಿಮಾಗಳಿಗೆ ನಿರೀಕ್ಷೆ ಹುಟ್ಟಿಸಲೇ ಬೇಕು. ಇಲ್ಲಾಂದ್ರೆ ಜನ ಥಿಯೇಟರ್‌ಗೆ ಬರಲ್ಲಾ. ಸಿನಿಮಾ ಚೆನಾಗಿದ್ರೆ ಓಡುತ್ತೆ. ಇಲ್ಲಾಂದ್ರೆ, ಓಡಲ್ಲಾ ಅಷ್ಟೇ. ಆದ್ರೆ ಆರಂಭದಲ್ಲಿ ಜನ ಥಿಯೇಟರ್‌ಗೆ ಬರಬೇಕು ಅಂದ್ರೆ ನಿರೀಕ್ಷೆ ಹುಟ್ಟಿಸಲೇ ಬೇಕು.


ನಿರ್ಮಾಪಕರು ನೀವೇ ಅಂತೆ? ಏನಿದರ ಗುಟ್ಟು?

- ಸಿನಿಮಾನ ನಾವೇ ಮಾಡೋಣ ಅಂತ ಹೊರಟಿದ್ವಿ. ನಮ್ಮದೇ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡೋದು ದೊಡ್ಡ ಜವಾಬ್ದಾರಿಯೂ ಹೌದು. ರಿಸ್ಟ್ರಿಕ್ಷನ್ ಇರೊಲ್ಲಾ, ಒತ್ತಡ ಇರೊಲ್ಲಾ, ಇನ್ನೊಂದು ನಮ್ಮ ಸ್ಕ್ರಿಪ್ಟ್‌ ಮೇಲೆ ಭರವಸೆ ಜಾಸ್ತಿ ಸೋ... ಈ ಹಿಂದೆ 'ರಿಕ್ಕಿ' ಸಿನಿಮಾನ ನಾವೇ ಮಾಡ್ಬೇಕು ಅಂದುಕೊಂಡಿದ್ವಿ ಅಷ್ಟರಲ್ಲಿ ಒಬ್ಬರು ನಿರ್ಮಾಪಕರು ಸಿಕ್ಕಿದ್ರು.


ಸಿನಿಮಾದಲ್ಲಿ ಏನಾದ್ರು ಮೆಸೇಜ್‌ ಹೇಳೋಕೆ ಹೊರಟಿದ್ದೀರಾ?

- ಬೇಡ ಅಂದ್ರು ಸಹ ಪ್ರತಿಯೊಂದು ಸಿನಿಮಾಗಳಲ್ಲಿ ಒಂದಲ್ಲಾ ಒಂದು ರೀತಿಯ ಮೇಸೇಜ್ ಇದ್ದೇ ಇರುತ್ತೇ. ಆದ್ರೆ ಕಾಲೇಜ್‌ ಲೈಫೇ ಒಂದು ದೊಡ್ಡ ಮೆಸೇಜ್‌. ಹಾಗಂತ ನೀತಿ ಪಾಠ ಹೇಳಲು ಹೋಗಿಲ್ಲ. ಆದ್ರೆ ಕಿರಿಕ್ ಪಾರ್ಟಿಯಲ್ಲಿ ಕಂಪ್ಲೀಟ್ ಕಾಮಿಡಿ ನೋಡಬಹುದು.


English summary
Kannada Actor, Director Rakshit Shetty shared interesting facts about his next movie 'Kirik Party' in an exclusive interview with Filmibeat Kannada. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada