twitter
    For Quick Alerts
    ALLOW NOTIFICATIONS  
    For Daily Alerts

    'ಜೋಗಿ' ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟ ಮೈಕೋ ನಾಗರಾಜ್

    |

    'ಇವತ್ತು ರಾತ್ರಿ ಸಿನಿಮಾ ಟಿವಿಯಲ್ಲಿ ಹಾಕಿ, ಬೆಳಗ್ಗೆ ಥಿಯೇಟರ್‌ನಲ್ಲಿ ಹಾಕಿದ್ರು ಜನ ಮುಗಿಬಿದ್ದು ನೋಡ್ತಾರೆ. ಇದೆಲ್ಲ ಎವರ್‌ಗ್ರೀನ್ ಸಿನಿಮಾ ಕಣ್ರೀ.....ಇವತ್ತು ಸಿನಿಮಾ ರಿಲೀಸ್ ಮಾಡಿದ್ರು, ಹೊಸ ಸಿನಿಮಾ ಅನ್ನೋ ರೀತಿ ಜನ ನೋಡ್ತಾರೆ.....'

    ಜೋಗಿ ಸಿನಿಮಾದ ಬಗ್ಗೆ ಇಂತಹದೊಂದು ಅಭಿಪ್ರಾಯ ಹಂಚಿಕೊಂಡಿದ್ದ ಕೋಟೆ ಸಿದ್ದ ಅಲಿಯಾಸ್ ಮೈಕೋ ನಾಗರಾಜ್. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಜೋಗಿ ಸಿನಿಮಾ ಬಿಡುಗಡೆಯಾಗಿ ಇಂದಿಗೆ (ಆಗಸ್ಟ್ 18ಕ್ಕೆ) 15 ವರ್ಷ ಆಗಿದೆ.

    ನಿರ್ದೇಶಕ ಪ್ರೇಮ್ ಅವರ ನಾಲ್ಕು ಸಾಲಿನಿಂದ ಸೃಷ್ಟಿಯಾಯ್ತು 'ಜೋಗಿ' ಸಿನಿಮಾನಿರ್ದೇಶಕ ಪ್ರೇಮ್ ಅವರ ನಾಲ್ಕು ಸಾಲಿನಿಂದ ಸೃಷ್ಟಿಯಾಯ್ತು 'ಜೋಗಿ' ಸಿನಿಮಾ

    ಈ ಸಂಭ್ರಮವನ್ನು ಶಿವಣ್ಣ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮಿಸುತ್ತಿದ್ದಾರೆ. ಕಾಮನ್ ಡಿಪಿ ಬಿಡುಗಡೆ ಮಾಡಿರುವ ಜೋಗಿ ಫ್ಯಾನ್ಸ್ ಜೋಗಿ ಜಾತ್ರೆ ಮಾಡ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜೋಗಿ ಸಿನಿಮಾದಲ್ಲಿ ಕೋಟೆ ಸಿದ್ದನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಮೈಕೋ ನಾಗರಾಜ್ ಅವರು ಸಿನಿಮಾ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ.....

    ಜೋಗಿಯಲ್ಲಿ ಸವಾಲಿನ ಪಾತ್ರ

    ಜೋಗಿಯಲ್ಲಿ ಸವಾಲಿನ ಪಾತ್ರ

    ಅದಾಗಲೇ ಪ್ರೇಮ್ ನಿರ್ದೇಶನದ ಕರಿಯ ಮತ್ತು ಎಕ್ಸ್ ಕ್ಯೂಸ್‌ಮಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಮೈಕೋ ನಾಗರಾಜ್ ಅವರಿಗೆ ಜೋಗಿ ಚಿತ್ರದಲ್ಲೂ ಒಂದು ಪ್ರಧಾನ ಪಾತ್ರ ಫಿಕ್ಸ್ ಆಗಿತ್ತು. ಆದರೆ, ಈ ಹಿಂದಿನ ಪಾತ್ರಗಳಿಗಿಂತ ಈ ಕ್ಯಾರೆಕ್ಟರ್ ಸ್ವಲ್ಪ ಸವಾಲು ಎನಿಸಿತ್ತು. ಅದಕ್ಕೆ ಕಾರಣ, ಧ್ವನಿ ಬದಲಾವಣೆ. ಮೈಕೋ ನಾಗರಾಜ್ ಅವರು ಹೊಟ್ಟೆಗೆ ಬಿಗಿಯಾಗಿ ಬಟ್ಟೆ ಕಟ್ಕೊಂಡು ಧ್ವನಿ ಬದಲಾಯಿಸಿ ಮಾತನಾಡಿದ್ದಾರೆ. ಇದು ಈ ಪಾತ್ರದ ವಿಶೇಷ. ತೆರೆಮೇಲೆ ಆ ಧ್ವನಿಯ ಬದಲಾವಣೆ ಸಹ ಗಮನಿಸಬಹುದು.

    ವಾಯ್ಸ್ ಬದಲಾಯಿಸಿದ್ದು ಪ್ಲಸ್ ಪಾಯಿಂಟ್

    ವಾಯ್ಸ್ ಬದಲಾಯಿಸಿದ್ದು ಪ್ಲಸ್ ಪಾಯಿಂಟ್

    'ಜೋಗಿ ಸಿನಿಮಾದ ಕೋಟೆ ಸಿದ್ದನ ಪಾತ್ರಕ್ಕಾಗಿ ಏಳೆಂಟು ರೀತಿ ವಾಯ್ಸ್ ಚೇಂಜ್ ಮಾಡಿ ಪ್ರಯತ್ನ ಮಾಡಿದ್ದೆ. ಅದರಲ್ಲಿ ಒಂದನ್ನು ಪ್ರೇಮ್ ಆಯ್ಕೆ ಮಾಡಿದ್ರು. ಹೊಟ್ಟೆಗೆ ಬಿಗಿಯಾಗಿ ಬೆಲ್ಟ್ ಹಾಕಿ ಮಾತನಾಡುವುದು, ಅಥವಾ ಗಟ್ಟಿಯಾಗಿ ಬಟ್ಟೆ ಕಟ್ಕೊಂಡು ಮಾತನಾಡುವುದು ಅಭ್ಯಾಸ ಮಾಡಿದ್ದೆ. ಆರೇಳು ದಿನ ಹಾಗೆ ಶೂಟಿಂಗ್ ಮಾಡಿದ್ವಿ. ನನ್ನ ಕಷ್ಟ ನೋಡಿದ ಶಿವಣ್ಣ, 'ಸರ್ ಈಗ ನಾರ್ಮಲ್ ಆಗಿ ಮಾಡಿ, ಆಮೇಲೆ ಡಬ್ಬಿಂಗ್‌ನಲ್ಲಿ ಮಾಡ್ಕೊಳ್ಳೋಣ ಅಂದ್ರು. ಆದರೆ, ನನಗ್ಯಾಕೋ ಅದು ಸೂಕ್ತ ಅನ್ನಿಸಿಲ್ಲ. ಟೇಕ್ ಮಾಡುವಾಗಲೇ ಧ್ವನಿ ಬದಲಾಯಿಸಿಯೇ ಮಾಡಿದೆ' ಎಂದು ಹಳೆಯ ನೆನಪು ಮೆಲುಕು ಹಾಕಿದರು.

    4 ನಿಮಿಷದ ದೃಶ್ಯವನ್ನು ಒಂದೇ ಟೇಕ್‌ನಲ್ಲಿ ಮುಗಿಸಿದ್ವಿ

    4 ನಿಮಿಷದ ದೃಶ್ಯವನ್ನು ಒಂದೇ ಟೇಕ್‌ನಲ್ಲಿ ಮುಗಿಸಿದ್ವಿ

    ''ಅಂದು ದೇವನಹಳ್ಳಿ ಹತ್ತಿರ ವಿಜಯಪುರದಲ್ಲಿ ಶೂಟಿಂಗ್. ಅದು ನಾಲ್ಕು ನಿಮಿಷ ಸೀನ್. ಒಂದೇ ಟೇಕ್‌ನಲ್ಲಿ ಮಾಡಿದ್ವಿ. ಈ ಸೀನ್ ಮಾಡಬೇಕಾದ್ರೆ ಅರ್ಧ ಪ್ರಾಣ ಹೋಗಬಿಟ್ಟಿತ್ತು. ಶಿವಣ್ಣಗೆ ಈ ಸೀನ್ ಒಂದೇ ಟೇಕ್ ನಲ್ಲಿ ಆಗುತ್ತೆ ಅಂತ ಅನುಮಾನ ಇತ್ತು. ಬಹುಶಃ ದಿನಪೂರ್ತಿ ಒಂದೇ ದೃಶ್ಯ ಮಾಡಬೇಕಾಗುತ್ತೆ ಅಂದುಕೊಂಡಿದ್ದರು. ಬ್ರೇಕ್‌ಗೆ ಮುಂಚೆ ಒಂದು ಮಾನಿಟರ್ ಮಾಡೋಣ ಅಂತ ಮಾಡಿದ್ದು. 20-25 ನಿಮಿಷದಲ್ಲಿ ಈ ದೃಶ್ಯ ಟೇಕ್ ಓಕೆ ಮಾಡಿದ್ವಿ. ಶಿವಣ್ಣ ಫುಲ್ ಖುಷಿ ಆಗೋದ್ರು''

    'ಜೋಗಿ' ಸಂಭ್ರಮಕ್ಕೆ 15 ವರ್ಷ: ಶಿವರಾಜ್ ಕುಮಾರ್ ಕಾಮನ್ ಡಿಪಿ ವೈರಲ್'ಜೋಗಿ' ಸಂಭ್ರಮಕ್ಕೆ 15 ವರ್ಷ: ಶಿವರಾಜ್ ಕುಮಾರ್ ಕಾಮನ್ ಡಿಪಿ ವೈರಲ್

    ಪ್ರೇಮ್ ಒಳ್ಳೆಯ ಕೆಲಸಗಾರ

    ಪ್ರೇಮ್ ಒಳ್ಳೆಯ ಕೆಲಸಗಾರ

    ''ಕೆಲಸದ ವಿಚಾರದಲ್ಲಿ ಪ್ರೇಮ್ ಬ್ರಿಲಿಯೆಂಟ್. ಎಲ್ಲ ಪ್ಲಾನ್ ಮಾಡಿ ಮಾಡ್ತಿದ್ರು. ಇದು ಬೇಕು ಅಂದ್ರೆ ಬೇಕು ಅಷ್ಟೇ. ಎಲ್ಲೂ ಕಾಂಪ್ರುಮೈಸ್ ಆಗ್ತಿರಲಿಲ್ಲ. ಕಥೆ ಯಾರಿಗೂ ಪೂರ್ತಿ ಹೇಳಲ್ಲ, ಒಬ್ಬರ ಕಥೆ ಇನ್ನೊಬ್ಬರಿಗೆ ಹೇಳಲ್ಲ. ನಿಮ್ಮ ಕ್ಯಾರೆಕ್ಟರ್ ಹಿಂಗೆ ಇದೆ. ಹೀಗೆ ಮಾಡ್ಬೇಕು ಅಷ್ಟೇ. ಸಿನಿಮಾ ಚಿತ್ರೀಕರಣಕ್ಕೆ ಯಾವುದೇ ಸಮಸ್ಯೆ ಇಲಿಲ್ಲ. ಅಶ್ವಿನಿ ಎಂಟರ್‌ ಪ್ರೈಸಸ್ ರಾಮ್ ಪ್ರಸಾದ್ ಅವರು ನಿರ್ಮಾಪಕರು. ನಾವೆಲ್ಲ ಅವರ ಸಹಾಯಕ್ಕೆ ಇದ್ವಿ. ಫಸ್ಟ್ ಶೋ ವೇಳೆ ನಿರ್ಮಾಪಕರಿಗೆ ಭಯ ಇತ್ತು. ಏನಾಗುತ್ತೋ ಏನೋ ಅಂತ. ಆದರೆ. ಪ್ರೇಮ್ ಬಹಳ ನಂಬಿಕೆಯಿಂದ ಇದ್ದರು. ಈ ಹಿಂದಿನ ಎರಡು ಚಿತ್ರಕ್ಕಿಂತ ಇದು ಹೆಚ್ಚು ಸಕ್ಸಸ್ ಕಾಣುತ್ತೆ ಅಂತ ಹೇಳ್ತಿದ್ರು''.

    ಐಟಂ ಸಾಂಗ್ ವೇಳೆ ಏನಾಯ್ತು ಅಂದ್ರೆ....

    ಐಟಂ ಸಾಂಗ್ ವೇಳೆ ಏನಾಯ್ತು ಅಂದ್ರೆ....

    ''ಜೋಗಿ ಸಿನಿಮಾದಲ್ಲಿ ಒಂದು ಐಟಂ ಸಾಂಗ್ ಇದೆ. (ಬಿನ್ ಲಾಡೆನ್ ನಮ್ಮ ಮಾವ, ಬಿಲ್ ಕ್ವಿಂಟೆನ್ ನಮ್ಮ ಭಾವ). ಈ ಹಾಡು ಮಾಡಬೇಕಾದ್ರೆ ಯಾನಾ ಗುಪ್ತಾ ಹತ್ತು ಹದಿನೈದು ಸ್ಟೆಪ್ ಮಾಡಿದ್ರು ಟೇಕ್ ಓಕೆ ಆಗ್ತಿರಲಿಲ್ಲ. ಶಿವಣ್ಣ ಒಂದೇ ಟೇಕ್ನಲ್ಲಿ ಮಾಡ್ತಿದ್ರು. ಇದರಿಂದ ಆಕೆಗೆ ಮುಜುಗರ ಆಗ್ತಿತ್ತು. ಸಾಂಗ್ ಶೂಟಿಂಗ್ ವೇಳೆ ನಾವು ಮೂವತ್ತು ನಾಲವತ್ತು ಜನ ಇದ್ವಿ. ನಾವೆಲ್ಲ ನೋಡ್ತಿದ್ದಕ್ಕೆ ಅವರು ಶೂಟಿಂಗ್ ಮಾಡಲ್ಲ ಅಂತ ಹಠ ಮಾಡಿಬಿಟ್ರು. ಯಪ್ಪಾ...ನಾವು ಕಲಾವಿದರು, ಆದ್ರೆ, ಆ ನಟಿ ಅದೇನ್ ಅಂದುಕೊಂಡ್ಲೊ. ಆಮೇಲೆ ಪ್ರೇಮ್ ಬಂದು ನೀವೆಲ್ಲ ಆ ಕಡೆ ಇರಿ ಅಂದ್ರು. ಆಮೇಲೆ ಟೇಕ್ ಆಯ್ತು. ಈ ಹಾಡನ್ನು ನಾಲ್ಕೈದು ದಿನ ಶೂಟ್ ಮಾಡಿದ್ರು''

    ಒಳ್ಳೆ ಬಿಸಿನೆಸ್ ಮಾಡಿದ ಚಿತ್ರ

    ಒಳ್ಳೆ ಬಿಸಿನೆಸ್ ಮಾಡಿದ ಚಿತ್ರ

    ಜೋಗಿ ಆ ಕಾಲಕ್ಕೆ ಅತಿ ಹೆಚ್ಚು ಗಳಿಕೆ ಮಾಡಿದೆ. ಒಳ್ಳೆ ಲಾಭ ಮಾಡಿದ ಸಿನಿಮಾ. ಇವತ್ತು ರಾತ್ರಿ ಸಿನಿಮಾ ಟಿವಿಯಲ್ಲಿ ಹಾಕಿ, ಬೆಳಗ್ಗೆ ಥಿಯೇಟರ್ ಗೂ ಹಾಕಿದ್ರು ಜನ ನೋಡ್ತಾರೆ. ಇದೆಲ್ಲ ಎವರ್‌ಗ್ರೀನ್ ಸಿನಿಮಾಗಳು. ಇವತ್ತು ಸಿನಿಮಾ ರಿಲೀಸ್ ಮಾಡಿದ್ರು, ಹೊಸ ಸಿನಿಮಾ ಅಂತಾನೇ ಜನ ನೋಡ್ತಾರೆ.

    ಮೈಕೋ ಸಂಸ್ಥೆಯಲ್ಲಿ ಕೆಲಸ!

    ಮೈಕೋ ಸಂಸ್ಥೆಯಲ್ಲಿ ಕೆಲಸ!

    1990ರಿಂದ ಮೈಕೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನಾಗರಾಜ್ ಅವರು ಈಗಲೂ ಆ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ. ಸಮಯ ಬಿಡುವು ಮಾಡಿಕೊಂಡು ನಟನೆ ಆರಂಭಿಸಿದರು. ಕರಿಯ, ಜೋಗಿ, ಎಕ್ಸ್ ಕ್ಯೂಸ್‌ಮಿ, ಮೈಲಾರಿ, ಜಯಮ್ಮನ ಮಗ, ಎಲೆಕ್ಷನ್, ರೋಸ್, ಕೃಷ್ಣಲೀಲಾ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

    English summary
    Kannada actor Mico Nagaraj interview About Jogi movie. shiva rajkumar starrer and jogi movie completes 15 years in industry. the movie directed by Prem.
    Wednesday, August 19, 2020, 11:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X