»   » ಪೂನಂ ಪಾಂಡೆ ಜೊತೆ ಡ್ಯುಯೆಟ್ ಹಾಡೋ ಹ್ಯಾಂಡ್ಸಮ್ ರಾಜೀವ್ ಸಂದರ್ಶನ

ಪೂನಂ ಪಾಂಡೆ ಜೊತೆ ಡ್ಯುಯೆಟ್ ಹಾಡೋ ಹ್ಯಾಂಡ್ಸಮ್ ರಾಜೀವ್ ಸಂದರ್ಶನ

Posted By:
Subscribe to Filmibeat Kannada

ಬಾಲಿವುಡ್ ನ ಹಾಟ್ ಬೆಡಗಿ ಬಿಚ್ಚಮ್ಮ ಪೂನಂ ಪಾಂಡೆ ಅವರು ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಹಾರರ್-ಥ್ರಿಲ್ಲರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ಕೊಡುತ್ತಿರುವ ನವ ನಿರ್ದೇಶಕ ರಾಜು ಅಲಿಯಾಸ್ ಯುವರಾಜ್ ಅವರು ಬಂಡವಾಳ ಹೂಡುವ ಜೊತೆಗೆ ನಿರ್ದೇಶನ ಮಾಡುತ್ತಿರುವ ಹಾರರ್ ಕಮ್ ಥ್ರಿಲ್ಲರ್ ಚಿತ್ರದಲ್ಲಿ ಪೂನಂ ಪಾಂಡೆ ಅವರು ಭಯಂಕರವಾಗಿ ಮಿಂಚಲಿದ್ದಾರೆ.[ಹಾರರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಪೂನಂ ಪಾಂಡೆ.!]

ಈಗಾಗಲೇ ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ನಟಿ ಪೂನಂ ಪಾಂಡೆ ಅವರು ಕೂಡ ಬೆಂಗಳೂರಿನಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.[ಕನ್ನಡಕ್ಕೆ ಬರಲು ಪೂನಂ ಪಾಂಡೆ ಪಡೆದುಕೊಂಡ ಸಂಭಾವನೆ ಎಷ್ಟು?]

ಅಂದಹಾಗೆ ನಟಿ ಪೂನಂ ಪಾಂಡೆ ಅವರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ಅವರ ಜೊತೆ ಹಾರರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಾಯಕ ನಟನಾಗಿ ಮಿಂಚುತ್ತಿರುವ ಬೆಂಗಳೂರಿನ ಹುಡುಗ ರಾಜೀವ್ ರಾಥೋಡ್ ಬಗ್ಗೆ ಯಾರಿಗಾದ್ರೂ ಗೊತ್ತಾ?. ಇಲ್ಲಾಂದ್ರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...(ಫಿಲ್ಮಿಬೀಟ್ ಕನ್ನಡಕ್ಕೆ ಮಾತಿಗೆ ಸಿಕ್ಕಾಗ ರಾಜೀವ್ ಹಂಚಿಕೊಂಡ ಹಲವು ಸಂಗತಿಗಳು)

ಕನ್ನಡದ ಹುಡುಗ ರಾಜೀವ್ ರಾಥೋಡ್

ನಟ ರಾಜೀವ್ ರಾಥೋಡ್ ಅವರು ಮೂಲತಃ ನಮ್ಮ ರಾಜಧಾನಿ ಬೆಂಗಳೂರಿನ ಹುಡುಗ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಪೂರೈಸಿರುವ ನಟ ಪಕ್ಕಾ ಕನ್ನಡದ ಕುವರ. ಇವರು ಹಲವಾರು ಕನ್ನಡ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಾತ್ರವಲ್ಲದೇ, ಖಳನಟನಾಗಿ ಕೂಡ ಹಲವಾರು ಸಿನಿಮಾಗಳಲ್ಲಿ ಮಿಂಚಿದ್ದಾರೆ.

ವಿದ್ಯಾಭ್ಯಾಸ:

ನಟ ರಾಜೀವ್ ರಾಥೋಡ್ ಅವರು ಡಿಪ್ಲೋಮಾ ಇನ್ ಟೂರಿಸಂನಲ್ಲಿ ಪದವಿ ಪಡೆದಿದ್ದು, ನಮ್ಮ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಪೂರ್ತಿಗೊಳಿಸಿದ್ದಾರೆ.

ಉತ್ತಮ ಕ್ರೀಡಾಪಟು

ಅಂದಹಾಗೆ ಇವರು ಬರೀ ನಟನಾ ಕ್ಷೇತ್ರದಲ್ಲಿ ಮಿಂಚಿದ್ದು, ಮಾತ್ರವಲ್ಲದೇ, ಉತ್ತಮ ಕ್ರೀಡಾಪಟು ಕೂಡ ಆಗಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ಇವರು ಬೇಸ್ ಬಾಲ್ ಟೂರ್ನಮೆಂಟ್ ನಲ್ಲಿ ಎಕ್ಸ್ ಪರ್ಟ್ ಆಗಿದ್ದು, ಕರ್ನಾಟಕ ತಂಡದ ಕ್ಯಾಪ್ಟನ್ ಆಗಿದ್ದರು. ಆದರೆ ಬೇಸ್ ಬಾಲ್ ಪಂದ್ಯಾಟವನ್ನು ಯಾರೂ ಅಷ್ಟಾಗಿ ಪ್ರೋತ್ಸಾಹಿಸದ ಕಾರಣ ಅದು ಅರ್ಧಕ್ಕೆ ನಿಂತುಹೋಯಿತು.

ಬಹುಭಾಷಾ ನಟ

ನಟ ರಾಜೀವ್ ರಾಥೋಡ್ ಅವರು ಕನ್ನಡದ ಹುಡುಗ ಆದರೂ ಕೂಡ 'ಆಡು ಮುಟ್ಟದ ಸೊಪ್ಪಿಲ್ಲ' ಎನ್ನುವಂತೆ ಕನ್ನಡ ಭಾಷೆ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಖಳನಟನ ಪಾತ್ರದಲ್ಲಿ ಮಿಂಚಿ ಅಲ್ಲೂ ಸೈ ಎನಿಸಿಕೊಂಡಿದ್ದಾರೆ.

ಗಿನ್ನಿಸ್ ದಾಖಲೆ ಮಾಡಿದ ನಟ

ತೆಲುಗಿನ 'ಪುಟ್ಟಿನ ರೋಜು' ಎಂಬ ಸಿನಿಮಾದಲ್ಲಿ ನಟ ರಾಜೀವ್ ರಾಥೋಡ್ ಅವರು ಮುಖ್ಯ ಪಾತ್ರ ವಹಿಸಿದ್ದು, ಈ ಸಿನಿಮಾವನ್ನು ಕೇವಲ 12 ಘಂಟೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಆದ್ದರಿಂದ ಇದೀಗ ಈ ಸಿನಿಮಾ ಸದ್ಯಕ್ಕೆ ಗಿನ್ನಿಸ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ ಪಡೆದುಕೊಂಡಿದೆ.

ಕ್ಯಾಮೆರಾ ಎದುರಿಸಿದ್ದು

ಮಾಡೆಲ್ ಆಗಿ ಕ್ಯಾಮೆರಾ ಎದುರಿಸಿದ ನಟ ರಾಜೀವ್ ರಾಥೋಡ್ ಅವರು ಮೊದಲು ಕಾಣಿಸಿಕೊಂಡಿದ್ದು, 'ತಾಜ್ ಮಹಲ್ ಟೀ' ತದನಂತರ 'ಅಮ್ಕೋ ಬ್ಯಾಟರಿ', 'ಮಹೇಂದ್ರ ಕಾರ್', 'ವಿಕ್ಟೋರಿಯಾ ಶರ್ಟ್ಸ್', 'ಇಂಡಿಯಾ ಟುಡೆ' ಕವರ್ ಮ್ಯಾಗಜೀನ್ ಮುಂತಾದವುಗಲ್ಲಿ ಮಾಡೆಲ್ ಆಗಿ ಕೆಲಸ ಮಾಡಿರುವ ಅನುಭವಿ.

ಸಿನಿಮಾ ಜರ್ನಿ

ನಟ ರಾಜೀವ್ ರಾಥೋಡ್ ಅವರು 'ಯುವರಾಜ' ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ಜರ್ನಿ ಆರಂಭ ಮಾಡಿದರು, ಆ ನಂತರ ಪುನೀತ್ ಅವರ ಜೊತೆ 'ಅಪ್ಪು', 'ಆಕಾಶ್', 'ಸೇವಂತಿ ಸೇವಂತಿ', 'ಧ್ರುವ', 'ನಂದ', 'ಪರಮೇಶ ಪಾನಾವಾಲ', 'ಮದರಂಗಿ' 'ಲೈಫ್ ಇಸ್ ಬ್ಯೂಟಿಫುಲ್' ಮುಂತಾದ ಕನ್ನಡ ಚಿತ್ರಗಳಲ್ಲಿ ಸೆಕೆಂಡ್ ಲೀಡ್ ಪಾತ್ರಗಳಲ್ಲಿ ನಟಿಸಿದ್ದಾರೆ.

ಬೇರೆ ಭಾಷೆಯ ಚಿತ್ರಗಳಲ್ಲಿ

ತಮಿಳು ನಟ ಅರ್ಜುನ್ ಸರ್ಜಾ ಅವರ ಜೊತೆ ತಮಿಳು ಚಿತ್ರ 'ಮಾಸಿ'ಯಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಆಮೇಲೆ 'ಕೊಲಪ್ಪಮ್' ಸೇರಿದಂತೆ ತೆಲುಗಿನ 'ಚೌರಸ್ತಾ' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮತ್ತು 'ಪುಟ್ಟಿನ ರೋಜು' ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ.

ಪೂನಂ ಜೊತೆ ಡ್ಯುಯೆಟ್

ಎಲ್ಲಾ ಸಿನಿಮಾ ಕ್ಷೇತ್ರಗಳಲ್ಲಿ ಒಂದು ಸುತ್ತು ಕೈಯಾಡಿಸಿರುವ ಹ್ಯಾಂಡ್ಸಮ್ ನಟ ರಾಜೀವ್ ರಾಥೋಡ್ ಅವರು ಇದೀಗ ಮಾತೃಭಾಷೆ ಕನ್ನಡದಲ್ಲಿ ಅದೂ ಹಾಟ್ ಅಂಡ್ ಸೆಕ್ಸಿ ಪೂನಂ ಪಾಂಡೆ ಅವರ ಜೊತೆ ಹಾರರ್ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿದ್ದಾರೆ.

English summary
Kannada Actor Rrajiv Raathod spoke to Filmibeat. Actor Rrajiv Raathod Shared his experience about upcoming project. Actress Poonam Pandey in the lead role. Here is the exclusive interview.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X