»   » ಸಂದರ್ಶನ : ಒಂಟಿಯಾಗಿ ಹನಿಮೂನ್ ಗೆ ಹೊರಟ 'ಬಟರ್ ಫ್ಲೈ' ಪಾರೂಲ್

ಸಂದರ್ಶನ : ಒಂಟಿಯಾಗಿ ಹನಿಮೂನ್ ಗೆ ಹೊರಟ 'ಬಟರ್ ಫ್ಲೈ' ಪಾರೂಲ್

Posted By:
Subscribe to Filmibeat Kannada
ಪಾರುಲ್ ಯಾದವ್ : ಒಂಟಿಯಾಗಿ ಹನಿಮೂನ್ ಗೆ ಹೊರಟ ಬಟರ್ ಫ್ಲೈ | Filmibeat Kannada

ಬಾಲಿವುಡ್ 'ಕ್ವೀನ್' ಸಿನಿಮಾ ಸೌತ್ ಚಿತ್ರರಂಗದ ನಾಲ್ಕು ಭಾಷೆಗಳಲ್ಲಿ ಬರುತ್ತಿದೆ. ಇದರ ಕನ್ನಡದ ಅವತರಣಿಕೆಯಲ್ಲಿ ನಟಿ ಪಾರೂಲ್ ಯಾದವ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ನಾಯಕಿ ಮಾತ್ರವಲ್ಲದೆ ಪಾರೂಲ್ ಸಹ ನಿರ್ಮಾಪಕಿ ಕೂಡ ಆಗಿದ್ದಾರೆ.

ಪಾರೂಲ್ ಕನ್ನಡಕ್ಕೆ ಬಂದು ಸದ್ಯ 5 ವರ್ಷ ಆಗಿದೆ. ಇಷ್ಟು ದಿನ ಹೆಚ್ಚಾಗಿ ಗ್ಲಾಮರ್ ಮತ್ತು ಕಮರ್ಶಿಯಲ್ ಚಿತ್ರಗಳಿಗೆ ಅಂಟಿಕೊಂಡಿದ್ದ ಪಾರೂಲ್ ಈಗ ವಿಭಿನ್ನ ಪಾತ್ರ ಮಾಡಲು ಮುಂದೆ ಬಂದಿದ್ದಾರೆ. ಹಿಂದಿಯ 'ಕ್ವೀನ್' ಚಿತ್ರದ ಕಥೆಯನ್ನು ತುಂಬನೇ ಇಷ್ಟ ಪಟ್ಟಿರುವ ಪಾರೂಲ್ ಆ ಸಿನಿಮಾದ ರಿಮೇಕ್ ನಲ್ಲಿ ನಟಿಸಲು ಬಹಳ ಉತ್ಸುಕರಾಗಿದ್ದಾರೆ. 'ಕ್ವೀನ್' ಕನ್ನಡದಲ್ಲಿ 'ಬಟರ್ ಫ್ಲೈ' ಆಗಿದ್ದು ಈ ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ.

ಪ್ಯಾರಿಸ್ ನಲ್ಲಿ 80 ರಷ್ಟು ಚಿತ್ರೀಕರಣ ಮುಗಿಸಿ ಪಾರೂಲ್ ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ಕನಸಿನ ಚಿತ್ರ 'ಬಟರ್ ಫ್ಲೈ' ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ, ಫಿಲ್ಮಿಬೀಟ್ ಕನ್ನಡಕ್ಕೆ ನಟಿ ಪಾರೂಲ್ ಯಾದವ್ ನೀಡಿರುವ ವಿಶೇಷ ಸಂದರ್ಶನದ ಆಯ್ದ ಭಾಗ ಮುಂದಿದೆ ಓದಿ....

ಸಂದರ್ಶನ : ನವೀನ.ಎಂ.ಎಸ್

ಹಿಂದಿಯಲ್ಲಿ ಕಂಗಾನಾ 'ಕ್ವೀನ್' ಆಗಿದ್ದರು, ಆದರೆ ಕನ್ನಡದ 'ಬಟರ್ ಫ್ಲೈ' ಬಗ್ಗೆ ಹೇಳಿ?

''ಬಟರ್ ಫ್ಲೈ' ರಿಮೇಕ್ ಸಿನಿಮಾ ಎನ್ನುವುದನ್ನು ನಾನು ಮೊದಲು ಮರೆತೆ. ನಾವು ಇದು ಒಂದು ಹೊಸ ವಿಷಯ ಅಂತ ಈ ಚಿತ್ರ ಶುರು ಮಾಡಿದ್ವಿ. 'ಬಟರ್ ಫ್ಲೈ' ಗೋಕರ್ಣದಲ್ಲಿ ಇರುವ ಪಾರ್ವತಿ ಎಂಬ ಒಬ್ಬ ಹುಡುಗಿಯ ಕಥೆ. ವಿವಾಹದ ಒಂದೇ ಒಂದು ದಿನ ಮುಂಚೆ ಆಕೆಯ ಮದುವೆ ಮುರಿದುಬೀಳುತ್ತದೆ. ಆಗ ಆಕೆ ಒಬ್ಬಳೆ ಪ್ಯಾರಿಸ್ ಗೆ ಹನಿಮೂನ್ ಗೆ ಹೋಗುತ್ತಾಳೆ. ಈ ಪ್ರಕ್ರಿಯೆಯಲ್ಲಿ ಆಕೆ ತನ್ನನ್ನು ತಾನು ಕಂಡುಕೊಳ್ಳುತ್ತಾಳೆ. ಇದೇ ನಮ್ಮ 'ಬಟರ್ ಫ್ಲೈ' ಸಿನಿಮಾ.''

ನಿಮ್ಮ ಸಿನಿಮಾ ಜರ್ನಿ 'ಬಟರ್ ಫ್ಲೈ' ಮೂಲಕ ಯೂಟರ್ನ್ ತೆಗೆದುಕೊಂಡಿದೆ ಅಂತ ಹೇಳಬಹುದಾ?

''ನನ್ನ ಸಿನಿಮಾ ಜರ್ನಿಗೆ ಈ ರೀತಿಯ ಸಿನಿಮಾ ತುಂಬ ಮುಖ್ಯವಾಗಿ ಆಗಿತ್ತು. 'ಬಟರ್ ಫ್ಲೈ' ಒಂದು ಮಹಿಳಾ ಪ್ರಧಾನ ಸಿನಿಮಾ. ಈ ರೀತಿಯ ಚಿತ್ರಗಳು ಹೆಚ್ಚು ಬರುವುದಿಲ್ಲ. ನಾವು ಯಾವಾಗಲು ಹೀರೋಗಳ ಜೊತೆ ಇರುವಂತಹ ಪಾತ್ರದಲ್ಲಿ ನಟಿಸಬೇಕಾಗಿದೆ. ಅದಕ್ಕೆ ನಾನು ವಿರೋಧಿ ಅಲ್ಲ. ಆದರೆ ಅದೇ ರೀತಿಯ ಕಥೆಗಳು ನಟಿಯರಿಗೆ ಹೆಚ್ಚು ಬರುವುದು ವಾಸ್ತವ. ನನಗೆ ಒಂದು ವಿಭಿನ್ನ ಶೈಲಿಯ ಮಹಿಳಾ ಪ್ರಧಾನ ಸಿನಿಮಾ ಮಾಡುವ ಆಸೆ ಇತ್ತು. ಅದೇ ರೀತಿ ಈ ಚಿತ್ರ ತುಂಬ ಮನರಂಜನೆಯೊಂದಿಗೆ ಕೊನೆಯಲ್ಲಿ ಸಮಾಜಿಕ ಸಂದೇಶ ಸಾರುತ್ತದೆ. ನಿಮ್ಮನ್ನು ನೀವು ಮೊದಲು ಪ್ರೀತಿಸಿ ಎಂದು ಈ ಸಿನಿಮಾ ಎಲ್ಲರಿಗೆ ಹೇಳುತ್ತಿದೆ.''

ಸಂದರ್ಶನ : ಇಂದಿನ ಸಮಾಜದ ಪ್ರತಿಬಿಂಬವೇ ಈ 'ಬಟರ್ ಫ್ಲೈ'

ಚಿತ್ರದಲ್ಲಿ ನಿಮ್ಮದು ತುಂಬ ಸ್ಟ್ರಾಂಗ್ ಪಾತ್ರ.. ಮೊದಲು ನಿಮಗೆ ಭಯ ಇತ್ತ?

''ಹೌದು.. ಈ ಚಿತ್ರದಲ್ಲಿ ಮೊದಲ ದೃಶ್ಯದಿಂದ ಕೊನೆಯ ದೃಶ್ಯದ ವರೆಗೆ ನನ್ನ ಪಾತ್ರ ಇರುತ್ತದೆ. ಸೋ, ಇಡೀ ಚಿತ್ರದ ತುಂಬ ನನ್ನನ್ನು ನೋಡುವುದಕ್ಕೆ ಜನರಿಗೆ ಬೋರ್ ಆಗಬಹುದಾ ಎನ್ನುವ ಸಣ್ಣ ಭಯ ನನಗೆ ಇತ್ತು. ಆದರೆ ಇದು ತುಂಬ ಎಂಟರ್ಟೈನಿಂಗ್ ಆಗಿದೆ. ಸಖತ್ ಫನ್ನಿ ದೃಶ್ಯಗಳು ಚಿತ್ರದಲ್ಲಿದೆ. ಚಿತ್ರ ನೋಡುವ ಜನರು ಖುಷಿಯಾಗಿ ಜೊತೆಗೆ ಒಂದು ಸಂದೇಶವನ್ನು ಚಿತ್ರಮಂದಿರದಿಂದ ತೆಗೆದುಕೊಂಡು ಹೋಗುತ್ತಾರೆ.''

ಗೋಕರ್ಣ ಹುಡುಗಿ ಪಾರ್ವತಿ ಪಾತ್ರಕ್ಕೆ ನಿಮ್ಮ ತಯಾರಿ ಹೇಗಿತ್ತು..?

''ಈ ಪಾತ್ರಕ್ಕೆ ಕನ್ನಡ ಉಚ್ಛಾರಣೆ ಚೆನ್ನಾಗಿ ಗೊತ್ತಿರಬೇಕು. ಅದೇ ಕಾರಣಕ್ಕೆ 10 ದಿನ ಕನ್ನಡ ಕಲಿಯುವುದಕ್ಕೆ ಟ್ಯೂಶನ್ ಇತ್ತು. ರಮೇಶ್ ಸರ್ ಕೂಡ ತುಂಬ ಸಹಾಯ ಮಾಡಿದ್ದರು. ಪ್ರತಿ ದಿನ ಎರಡು ಮೂರು ಗಂಟೆ ಚಿತ್ರದ ಡೈಲಾಗ್ ಪೂರ್ತಿ ಓದಿಕೊಳ್ಳುತ್ತಿದೆ. ಮೊದಲೇ ಈ ಪಾತ್ರಕ್ಕೆ ಲುಕ್ ಟೆಸ್ಟ್ ಮಾಡಿಕೊಂಡಿದೆವು. ಎರಡು ತಿಂಗಳು ಬರಿ ಆ ಪಾತ್ರದ ಕಾಸ್ಟೂಮ್ ಬಗ್ಗೆ ಚರ್ಚೆ ಮಾಡಿದ್ವಿ. ಅಲ್ಲದೆ ಈ ಚಿತ್ರಕ್ಕಾಗಿ ನಾನು ಒಂದುವರೆ ವರ್ಷ ಮೀಸಲಿಟ್ಟಿದ್ದೇನೆ. 'ಕಿಲ್ಲಿಂಗ್ ವೀರಪ್ಪನ್' ಮತ್ತು 'ಜೆಸ್ಸಿ' ನಂತರ ನಾನು 'ಬಟರ್ ಫ್ಲೈ' ಚಿತ್ರ ಮಾಡುತ್ತಿದ್ದೇನೆ.''

ರಮೇಶ್ ಅರವಿಂದ್ ನಿರ್ದೇಶನದಲ್ಲಿ ನಟಿಸಿದ್ದು ಖುಷಿ ಆಯ್ತಾ?

''ಎಸ್...ರಮೇಶ್ ಸರ್ ತುಂಬ ಬುದ್ದಿವಂತ ಮತ್ತು ಗೌರವಪೂರ್ವಕ ನಿರ್ದೇಶಕ. ಪ್ರಮುಖವಾಗಿ ಈ ಚಿತ್ರ ಸ್ವಲ್ಪ ಕಷ್ಟ ಇತ್ತು. ಮನರಂಜನೆ ಜೊತೆಗೆ ರಿಯಾಲಿಟಿಗೆ ಈ ಚಿತ್ರ ಬಹಳ ಹತ್ತಿರ ಆಗಿತ್ತು. ಒಂದು ಹೆಣ್ಣಿನ ಚಿಕ್ಕ ಚಿಕ್ಕ ವಿಷಯಗಳನ್ನು ತೆರೆ ಮೇಲೆ ಅಷ್ಟು ಚೆನ್ನಾಗಿ ರಮೇಶ್ ಅರವಿಂದ್ ಬಿಟ್ಟರೆ ಬೇರೆ ಯಾರು ತೊರಿಸುವುದಕ್ಕೆ ಸಾಧ್ಯ ಇಲ್ಲ ಅಂತ ನನಗೆ ಅನಿಸುತ್ತದೆ.''

'ಬಟರ್ ಫ್ಲೈ' ಚಿತ್ರದ ಮೊದಲ ನೋಟ ಸಖತ್ ಕಲರ್ ಫುಲ್

ಚಿತ್ರರಂಗಕ್ಕೆ ಬಂದು 5 ವರ್ಷ ಆಗಿದೆ.. ಹೇಗನಿಸುತ್ತಿದೆ ಸ್ಯಾಂಡಲ್ ವುಡ್ ?

''ಕನ್ನಡ ಪ್ರೇಕ್ಷಕರು ನನ್ನನ್ನು ಬಹಳ ಪ್ರೀತಿಸಿದ್ದಾರೆ. ಒಬ್ಬ ನಟಿಯಾಗಿ ನಾನು ಇನ್ನಷ್ಟು ಬೆಳೆಯಲು ಇದು ಒಳ್ಳೆಯ ಸಮಯ ಎನ್ನುವುದು ನನ್ನ ಭಾವನೆ. ಅದೇ ಕಾರಣದಿಂದ ಈ ರೀತಿಯ ಸಿನಿಮಾ ಮಾಡುತ್ತಿದ್ದೇನೆ. ಕನ್ನಡ ಚಿತ್ರರಂಗ ನನಗೆ ಕೊಟ್ಟ ಪ್ರೀತಿಯನ್ನು ಬೇರೆ ಯಾವ ಚಿತ್ರರಂಗ ನೀಡಿಲ್ಲ. ನಾನು ಕೂಡ ಕನ್ನಡತಿ. ಈ ಚಿತ್ರದ ಪೋಸ್ಟರ್ ನಲ್ಲಿ ನೋಡಿದರೆ ನಾನು ಪಕ್ಕಾ ಗೋಕರ್ಣದ ಹುಡುಗಿಯ ರೀತಿ ಕಾಣುತ್ತೇನೆ. ಇಷ್ಟು ದಿನ ಗ್ಲಾಮರ್ ಮತ್ತು ಪ್ಯಾರ್ಗೆ ಹುಡುಗಿ ಆಗಿ ನೋಡಿದ್ದ ಜನ ಈಗ ನನ್ನನ್ನು ಗೋಕರ್ಣದ ಪಾರ್ವತಿ ಎಂಬ ಹುಡುಗಿಯಾಗಿ ನೋಡಬಹುದು.''

'ಬಟರ್ ಫ್ಲೈ' ಜೊತೆ ರಮೇಶ್ ಅರವಿಂದ್, ಪಾರೂಲ್ ಹಾರಾಟ

ನಿಮ್ಮ ಕನಸಿನ ಪಾತ್ರ ಅಂತ ಯಾವುದಾದರೂ ಇದೇಯಾ..?

''ಇದೇ ನನ್ನ ಕನಸಿನ ಪಾತ್ರ. ನನಗೆ ಮಾತ್ರ ಅಲ್ಲ.. ಎಲ್ಲ ಹುಡುಗಿಯರಿಗೆ ಈ ಪಾತ್ರ ಕನಸಿನ ಪಾತ್ರವೇ. ಒಂದು ಬಾರಿ ಜನ ಇದನ್ನು ನೋಡಿದರೆ ಖಂಡಿತ ಇಷ್ಟ ಪಡುತ್ತಾರೆ. ಒಬ್ಬ ನಟಿಯಾಗಿ ನಾನು ಮುಂದೆಯೂ ಕಮರ್ಶಿಯಲ್ ಚಿತ್ರಗಳನ್ನು ಹಾಗೂ ಈ ರೀತಿಯ ಮಹಿಳಾ ಪ್ರಧಾನ ಚಿತ್ರಗಳನ್ನು ಎರಡನ್ನೂ ನಿಭಾಹಿಸುತ್ತೇನೆ.''

English summary
Kannada actress Parul Yadav spoke about 'Butterfly' kannada movie in an Interview with Filmibeat Kannada. The movie is directed by Ramesh Aravind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X