For Quick Alerts
  ALLOW NOTIFICATIONS  
  For Daily Alerts

  ಆಗ ನ್ಯೂಸ್ ರೀಡರ್ ಈಗ ಕನ್ನಡ ಇಂಡಸ್ಟ್ರಿ ಹೀರೋಯಿನ್

  By ಶಶಿಕರ ಪಾತೂರು
  |

  ''ಅಮ್ಮನಿಗೆ ಸ್ವತಃ ಸಿನಿಮಾ ನಟಿಯಾಗಬೇಕೆನ್ನುವುದು ಬಾಲ್ಯದ ಕನಸಾಗಿತ್ತು. ಅವರು ತಮ್ಮ ಕನಸನ್ನು ನನ್ನ ಮೂಲಕ ಈಡೇರಿಸಿಕೊಂಡಿದ್ದಾರೆ'' ಎಂದು ಖುಷಿ ವ್ಯಕ್ತಪಡಿಸಿದ ನಟಿ ಪ್ರಣತಿ ಆರ್ ಗಾಣಿಗ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಾರೆ.

  ಇತ್ತೀಚಿಗಷ್ಟೆ 'ಒಂದ್ ಕಥೆ ಹೇಳ್ಲಾ' ಚಿತ್ರದ ಐದು ನಾಯಕಿಯರ ಪೈಕಿ ಒಬ್ಬರಾಗಿ ನಟಿಸಿದ್ದ ಪ್ರಣತಿ, ಮೂಲತಃ ಸುದ್ದಿ ನಿರೂಪಕಿಯಾಗಿದ್ದರು. ಸ್ಥಳೀಯ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಣತಿ, ಕಿರುತೆರೆ ಹಾಗೂ ಸಾಕ್ಷ್ಯಚಿತ್ರಗಳಲ್ಲೂ ನಟಿಸುತ್ತಿದ್ದಾರೆ.

  ಹವ್ಯಾಸವಾಗಿ ಆರಂಭವಾದ ನಟನೆ ಈಗ ವೃತ್ತಿಯಾಗಿ ಬದಲಾಗಿದೆ. ಬಣ್ಣದ ಲೋಕದಲ್ಲೇ ಜೀವನ ಕಟ್ಟಿಕೊಳ್ಳಬೇಕೆಂಬ ಛಲ ಹುಟ್ಟಿದೆ. ಹಾಗಿದ್ರೆ, ಪ್ರಣತಿ ಯಾರು? ಎಲ್ಲಿಯವರು? ಬಣ್ಣದ ನಂಟು ಈಕೆಗೆ ಅಂಟಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಸ್ವತಃ ಪ್ರಣತಿ ಫಿಲ್ಮಿಬೀಟ್ ಕನ್ನಡದ ಜೊತೆ ಮಾಡಿದ್ದಾರೆ. ಮುಂದೆ ಓದಿ...

  ನಿಮ್ಮ ಕೌಟುಂಬಿಕ ಹಿನ್ನೆಲೆಯ ಬಗ್ಗೆ ಹೇಳಿ

  ನಿಮ್ಮ ಕೌಟುಂಬಿಕ ಹಿನ್ನೆಲೆಯ ಬಗ್ಗೆ ಹೇಳಿ

  ನನ್ನ ತಂದೆ ರಮೇಶ್ ಗಾಣಿಗ ಹೋಟೆಲ್ ಉದ್ಯಮಿ. ಸಹೋದರ ಪ್ರತೀಕ್ ಕೂಡ ತಂದೆಗೆ ಸಾಥ್ ನೀಡಿದ್ದಾರೆ. ಆದರೆ ಅಮ್ಮ ಸುನೀತಾ ಸುಗಮ ಸಂಗೀತ ಗಾಯಕಿ. ಹಾಗಾಗಿ ನನಗೆ ಕಲಾಸಕ್ತಿ ಅವರಿಂದಲೇ ಬಂತು ಎನ್ನಬಹುದು. ಅಮ್ಮನಿಗೆ ಸ್ವತಃ ಸಿನಿಮಾ ನಟಿಯಾಗಬೇಕೆನ್ನುವುದು ಬಾಲ್ಯದ ಕನಸಾಗಿತ್ತು. ಅವರು ತಮ್ಮ ಕನಸನ್ನು ನನ್ನ ಮೂಲಕ ಈಡೇರಿಸಿಕೊಂಡಿದ್ದಾರೆ ಎಂದು ಕೂಡ ಹೇಳಬಹುದು.

  ಬಾಲ್ಯದ ಬದುಕು ಹೇಗಿತ್ತು?

  ಬಾಲ್ಯದ ಬದುಕು ಹೇಗಿತ್ತು?

  ನಾನು ಹುಟ್ಟಿ ಬೆಳೆದಿದ್ದೆಲ್ಲ ದೊಡ್ಡ ಬಳ್ಳಾಪುರದಲ್ಲಿ. ಬಾಲ್ಯದಿಂದಲೇ ಶಾಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಐದನೇ ತರಗತಿಯಲ್ಲಿದ್ದಾಗ ಕುಟುಂಬ ಸಮೇತ ತಾಯಿಯ ಊರಾದ ಶಿವಮೊಗ್ಗಕ್ಕೆ ಹೋದರು. ಆನಂತರದ ಬದುಕೆಲ್ಲ ಶಿವಮೊಗ್ಗದ ಆಯನೂರಲ್ಲೇ ಮುಂದುವರಿಯಿತು. ಆಚಾರ್ಯ ತುಳಸೀ ನ್ಯಾಷನಲ್ ಕಾಲೇಜ್ ಕಾಮರ್ಸ್ನಲ್ಲಿ ಬಿಕಾಮ್ ಮಾಡಿದ ಬಳಿಕ ವೃತ್ತಿಪರವಾಗಿ ಆರಿಸಿದ್ದು ಮಾತ್ರ ಮಾಧ್ಯಮ ಕ್ಷೇತ್ರವನ್ನು.

  ಮಾಧ್ಯಮರಂಗದಿಂದ ಸಿನಿಮಾದ ಕಡೆಗಿನ ಪಯಣ ಹೇಗಿತ್ತು?

  ಮಾಧ್ಯಮರಂಗದಿಂದ ಸಿನಿಮಾದ ಕಡೆಗಿನ ಪಯಣ ಹೇಗಿತ್ತು?

  ಶಿವಮೊಗ್ಗದಲ್ಲಿ ಸ್ಥಳೀಯ ಕೇಬಲ್ ವಾಹಿನಿ 'ಅಮೋಘ'ದಲ್ಲಿ ವಾರ್ತಾವಾಚಕಿಯಾಗಿದ್ದೆ. ಅದಾಗಲೇ ಸಾಕಷ್ಟು ವೇದಿಕೆ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದೆ ಕಾರಣ, ನೇರವಾಗಿ ಟಿ.ವಿ ವಾರ್ತಾ ವಾಚಕಿಯಾಗಿ, ನಿರೂಪಕಿಯಾಗಿ ಕಾಣಿಸಿಕೊಂಡಿದ್ದರಲ್ಲಿ ವಿಶೇಷ ಏನೂ ಇರಲಿಲ್ಲ. ವಾರ್ತಾ ವಾಚಕಿಯಾಗಿದ್ದಾಗಲೇ ಒಂದಷ್ಟು ಕಿರುಚಿತ್ರಗಳಲ್ಲಿ ನಟಿಸಿದೆ. ಸಿನಿಮಾರಂಗದ ಕನಸು ಇದ್ದ ಕಾರಣ, ಅದಕ್ಕೊಂದು ಮೆಟ್ಟಿಲಾಗಿ ಕಿರುಚಿತ್ರವನ್ನು ಬಳಸಿಕೊಳ್ಳುವಂಥ ತಂಡದ ಜೊತೆಗೆ ನಾನೂ ಸೇರಿಕೊಂಡೆ.

  ಸುಮಾರು ಎಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದೀರಿ?

  ಸುಮಾರು ಎಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದೀರಿ?

  ಇದುವರೆಗೆ 'ಪರಿಸರ ಇನ್ ಅವಸರ' ಅದರ ಬಳಿಕ 'ದೊಡ್ಮನೆ', 'ಓಟು' ಮತ್ತು 'ಇದು ನನ್ನ ಗೆಲುವಲ್ಲ' ಎಂಬ ನಾಲ್ಕು ಕಿರುಚಿತ್ರಗಳಲ್ಲಿ ನಟಿಸಿದ್ದೇನೆ. ನಮ್ಮೂರಿನ ಕಲಾವಿದರೇ ಆದ ಶಿವಮೊಗ್ಗ ರಾಮಣ್ಣ ಈ ಕಿರುಚಿತ್ರಗಳ ಯೂ ಟ್ಯೂಬ್ ಲಿಂಕ್ಅನ್ನು ಬೆಂಗಳೂರು ತನಕ ಸೇರಿಸಿದರು. ಹಾಗೆ ಕಿರುತೆರೆ ಧಾರಾವಾಹಿ ‘ಶಾಂತಂ ಪಾಪಂ' ನಿರ್ದೇಶಕರ ಪರಿಚಯವಾದರು. ಅವರು ವಾಟ್ಸ್ಯಾಪ್ನಲ್ಲೇ ಸನ್ನಿವೇಶವೊಂದನ್ನು ನೀಡಿ ನಡೆಸಿದ ಆಡಿಶನ್ನಲ್ಲಿ ಪಾಸಾಗಿ ಬೆಂಗಳೂರಿಗೆ ಬಂದು ಕಿರುತೆರೆ ನಟಿಯಾದೆ.

  ಸಿನಿಮಾಗಿಂತ ಮೊದಲು ಎಷ್ಟು ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದೀರಿ?

  ಸಿನಿಮಾಗಿಂತ ಮೊದಲು ಎಷ್ಟು ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದೀರಿ?

  ಪಾತ್ರ ‘ಸ್ಟಾರ್ ಸುವರ್ಣ'ದಲ್ಲಿ ಪ್ರಸಾರವಾಗುತ್ತಿರುವ ‘ಸಿಂಧೂರ' ಧಾರಾವಾಹಿಯಲ್ಲಿ ಒಂದು ವಿಶೇಷ ಪಾತ್ರ ಮಾಡಿದ್ದೆ. ಮುಂಬೈನಿಂದ ಆಗಮಿಸುವ ಮೋನಿಷಾ ಎಂಬ ಪಾತ್ರಕ್ಕಾಗಿ ನಾನು ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಸೆಟ್ಲಾಗಬೇಕಾಯಿತು. ತಿಂಗಳ ಕಾಲ ಕಾಣಿಸಿಕೊಂಡ ಆ ಪಾತ್ರದ ಬಳಿಕ ಸಿನಿಮಾ ಅವಕಾಶಗಳು ಸಿಗತೊಡಗಿತು. ನನ್ನ ತಾಯಿ ಗಾಯಕಿಯಾಗಿರುವುದರಿಂದ ಹಾಡಿನಲ್ಲಿ ಕೂಡ ನನಗೆ ಒಲವು ಇದೆ. ಶಾಸೀಯವಾಗಿ ತುಂಬ ಕಲಿತಿಲ್ಲವಾದರೂ ಶಾಲಾ ಕಾಲೇಜು ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದೇನೆ. ಚಿಕ್ಕೋಳಾಗಿದ್ದಾಗ ಒಂದಷ್ಟು ಸಂಗೀತ, ಭರತನಾಟ್ಯದ ಬೇಸಿಕ್ ಅಭ್ಯಾಸ ಮಾಡಿದ್ದು ಇಂದು ಸಿನಿಮಾ ನಟಿಯಾಗಿರುವಾಗ ಉಪಯೋಗಕ್ಕೆ ಬರುತ್ತಿದೆ.

  ನಿಮ್ಮ ಮೆಚ್ಚಿನ ತಾರೆಯರು ಯಾರು?

  ನಿಮ್ಮ ಮೆಚ್ಚಿನ ತಾರೆಯರು ಯಾರು?

  ಎಲ್ಲ ಕನ್ನಡಿಗ ಸಿನಿಮಾ ಪ್ರೇಮಿಗಳಂತೆ ನಾನು ಕೂಡ ಡಾ.ರಾಜ್ಕುಮಾರ್ ಅವರ ಸಿನಿಮಾಗಳ ಅಭಿಮಾನಿ. ಪಾತ್ರಗಳಲ್ಲಿ ಅವರು ತುಂಬುವ ಭಾವನೆ ನನಗೆ ಸದಾ ಸ್ಫೂರ್ತಿ. ಅದೇ ಸಂದರ್ಭಲ್ಲಿ ವಿಷ್ಣುವರ್ಧನ್ ಅವರ ಕೆಲವೊಂದು ಪಾತ್ರಗಳನ್ನು ಕೂಡ ಮರೆಯಲು ಸಾಧ್ಯವಿಲ್ಲ. ಈಗಿನ ಸ್ಟಾರ್ಗಳಲ್ಲಿ ಯಶ್ ಅಂದರೆ ಇಷ್ಟ. ಹಾಗೆ ಅಜಯ್ ರಾವ್ ಕೂಡ ಪರ್ಸನಲ್ ಫೇವರಿಟ್ ಆಕ್ಟರ್. ಅವರ ಜೊತೆಗೆ ನಟಿಸುವ ಕನಸಿದೆ.

  English summary
  Kannada actress pranati r gaaniga interview. pranati acted in ondu kathe hella movie in recently.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X