»   » 'ರಾಜಾ ಹುಲಿ'ಯ ಅಣ್ತಮ್ಮ ಹರ್ಷ ವಿಶೇಷ ಸಂದರ್ಶನ

'ರಾಜಾ ಹುಲಿ'ಯ ಅಣ್ತಮ್ಮ ಹರ್ಷ ವಿಶೇಷ ಸಂದರ್ಶನ

Posted By:
Subscribe to Filmibeat Kannada

ಬೆಳ್ಳಿ ಚಮಚವನ್ನು ಹುಟ್ಟುತ್ತಲೇ ಬಾಯಲ್ಲಿಟ್ಟುಕೊಂಡಿದ್ದರೂ, ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸ್ಟಾರ್ ಆಗಬೇಕು ಅನ್ನುವ ಹಂಬಲ ಇವರದ್ದು. ಕಲಾ ವಿದ್ಯಾರ್ಥಿಯಾಗಿರುವ ಇವರು ಈಗ ಕನ್ನಡದ ಭರವಸೆಯ ಯುವ ನಟ.

'ಮೊಗ್ಗಿನ ಮನಸ್ಸು', 'ರಾಜಾ ಹುಲಿ', 'ಪವರ್ ***' ಚಿತ್ರಗಳಲ್ಲಿ ಹೀರೋ ಸಮನಾಗಿ ಕಾಣಿಸಿಕೊಂಡಿದ್ದ ಹರ್ಷವರ್ಧನ್, ಇದೀಗ 'ಗಜಪಡೆ' ಚಿತ್ರದ ಮೂಲಕ ನಾಯಕ ನಟನ ಪಟ್ಟಕ್ಕೇರಿದ್ದಾರೆ.


ಕನಸುಗಳು ನನಸಾಗುತ್ತಿರುವ ಖುಷಿಯಲ್ಲಿ 'ಫಿಲ್ಮಿಬೀಟ್ ಕನ್ನಡ' ಜೊತೆ ತಮ್ಮ ಸಿನಿ ಜರ್ನಿ ಮತ್ತು 'ಗಜಪಡೆ' ಚಿತ್ರದ ಬಗ್ಗೆ, ನಾಯಕ ಹರ್ಷವರ್ಧನ್ ಮನತುಂಬಿ ಮಾತನಾಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ.


harsha-gajapade

* ನಮ್ಮ ಓದುಗರಿಗೆ ನಿಮ್ಮ ಪರಿಚಯ....
- ನಾನು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ. ಶೇಷಾದ್ರಿಪುರಂ ಕಾಲೇಜ್ ನಲ್ಲಿ ಬಿ.ಎ. ಮಾಡಿದ್ದೀನಿ. ನಮ್ಮದು ಚಿಕ್ಕ ಕುಟುಂಬ. ತಂದೆ ಸೈಂಟಿಸ್ಟ್. ಸಿಲ್ಕ್ ಬೋರ್ಡ್ ನಲ್ಲಿ ಜಾಯಿಂಟ್ ಡೈರೆಕ್ಟರ್. ಸಹೋದರ ಐ.ಎ.ಎಸ್ ಮಾಡ್ತಿದ್ದಾನೆ. ಅಮ್ಮ ಹೌಸ್ ವೈಫ್.


* ಹಾಗಾದ್ರೆ, ನಿಮಗೆ ಸಿನಿಮಾ ನಂಟು ಹೇಗೆ?
- ಸಿನಿಮಾ ಅಂದ್ರೆ ನನಗೆ ತುಂಬಾ ಇಷ್ಟ. ಚಿಕ್ಕವಯಸ್ಸಿನಿಂದಲೂ ಇದ್ರಲ್ಲೇ ಇಂಟ್ರೆಸ್ಟ್. ಹೀರೋ ಆಗಬೇಕು ಅನ್ನುವ ಆಸೆ ಇತ್ತು. ಕನ್ನಡದ ಎಲ್ಲಾ ಸೀನಿಯರ್ ನಟರನ್ನ ನೋಡಿ, ನನಗೂ ಹಾಗೇ ಆಗಬೇಕು ಅಂತ ಅನಿಸುತ್ತಿತ್ತು. ಮನೆಯಲ್ಲೂ ಸಪೋರ್ಟ್ ಮಾಡಿದ್ರು.


harsha-gajapade

* ಕನ್ನಡ ಚಿತ್ರರಂಗಕ್ಕೆ ನಿಮ್ಮ ಎಂಟ್ರಿಯಾಗಿದ್ದು ಹೇಗೆ?
- ನನಗೆ ಫಸ್ಟ್ ಚಾನ್ಸ್ ಸಿಕ್ಕಿದ್ದು 'ತನನಂ ತನನಂ' ಚಿತ್ರದಲ್ಲಿ. ತುಂಬಾ ಚಿಕ್ಕ ಪಾತ್ರ. ರಕ್ಷಿತಾ ಜೊತೆ ಆಕ್ಟ್ ಮಾಡುವ ಚಾನ್ಸ್ ಸಿಕ್ತು. ಅದಾದ ಮೇಲೆ 'ಗಂಗೇ ಬಾರೆ ತುಂಗೇ ಬಾರೆ' ಚಿತ್ರದಲ್ಲಿ ನಟಿಸ್ದೆ. 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆ ಜೋಡಿಯಾಗಿದ್ದೆ. 'ಶಬ್ದಮಣಿ' ಅನ್ನುವ ಆರ್ಟ್ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದೀನಿ. ನನಗೆ ಬ್ರೇಕ್ ಸಿಕ್ಕಿದ್ದು 'ರಾಜಾ ಹುಲಿ' ಚಿತ್ರದಲ್ಲಿ. 'ಪವರ್ ***' ಚಿತ್ರದಲ್ಲಿ ಸಣ್ಣ ಪಾತ್ರವಾಗಿದ್ದರೂ, ನನಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.


harsha-gajapade

* 'ಗಜಪಡೆ' ಚಿತ್ರದಲ್ಲಿ ಮೊದಲ ಬಾರಿ ನಾಯಕ ನಟನಾಗಿದ್ದೀರಾ. ನಿಮ್ಮ ಅನುಭವ?
- ತುಂಬಾ ಒಳ್ಳೆಯ ಎಕ್ಸ್ ಪೀರಿಯೆನ್ಸ್. ಕನ್ನಡ ಚಿತ್ರರಂಗದಲ್ಲಿ ಕಾಲಿಟ್ಟ ಎಂಟು ವರ್ಷಗಳಲ್ಲಿ ಈಗ ಹೀರೋ ಆಗುವ ಚಾನ್ಸ್ ಸಿಕ್ತು. ನಿರ್ದೇಶಕ ಸೀನು ತುಂಬಾ ಟ್ಯಾಲೆಂಟೆಡ್. 'ಭಜರಂಗಿ' ಚಿತ್ರದಲ್ಲಿ ಅವರು ಸಹಾಯಕ ನಿರ್ದೇಶಕರಾಗಿದ್ದರು. ಇದು ಅವರು ನಿರ್ದೇಶನದ ಮೊದಲ ಚಿತ್ರ. ಒಳ್ಳೆಯ ಟೀಂ ಇದೆ. ಕಷ್ಟ ಪಟ್ಟು, ಇಷ್ಟ ಪಟ್ಟು ಸಿನಿಮಾ ಮಾಡ್ತಿದ್ದೀವಿ. 'ರಾಜಾ ಹುಲಿ' ಚಿತ್ರದಲ್ಲಿ ಜನ ನನ್ನನ್ನ ಹೇಗೆ ಸ್ವೀಕರಿಸಿದರು, ಈ ಚಿತ್ರದಲ್ಲೂ ಹಾಗೆ ಸ್ವೀಕರಿಸುತ್ತಾರೆ ಅನ್ನುವ ನಂಬಿಕೆ ನನಗಿದೆ. [ಗಜಪಡೆ ಚಿತ್ರದ ಪೋಟೋ ಗ್ಯಾಲರಿ]


harsha-gajapade

* 'ಗಜಪಡೆ' ಚಿತ್ರದಲ್ಲಿ ನಿಮ್ಮ ಪಾತ್ರ?
- ಸಿಂಪಲ್ ಹುಡುಗ. ಮಗನಾಗಿ, ಸ್ನೇಹಿತನಾಗಿ, ಲವ್ವರ್ ಆಗಿ, ಸಮಾಜಕ್ಕೆ ಒಳ್ಳೆಯ ನಾಗರೀಕನಾಗಿ ಹೇಗೆ ನಿಭಾಯಿಸುತ್ತೀನಿ ಅನ್ನೋದೇ ನನ್ನ ಕ್ಯಾರೆಕ್ಟರ್ ಮತ್ತು 'ಗಜಪಡೆ' ಸಿನಿಮಾದ ಸಬ್ಜೆಕ್ಟ್. ತುಂಬಾ ಜವಾಬ್ದಾರಿ ಇರುವ ಪಾತ್ರ. ಫಸ್ಟ್ ಹಾಫ್ ತುಂಬಾ ಲೈವ್ಲಿಯಾಗಿರುತ್ತೆ. ಸೆಕೆಂಡ್ ಹಾಫ್ ನಲ್ಲಿ ಆಕ್ಷನ್ ಓರಿಯೆಂಟೆಡ್. ನನ್ನ ಗೆಟಪ್ ಸೆಕೆಂಡ್ ಹಾಫ್ ನಲ್ಲಿ ಚೇಂಜ್ ಆಗುತ್ತೆ. ಅದಕ್ಕೆ ತುಂಬಾ ತಯಾರಿ ನಡೆಸಿದ್ದೀನಿ. ಚೆನ್ನಾಗಿ ಬಂದಿದೆ ಸಿನಿಮಾ.


harsha-gajapade

* ಯಾವ ತರಹದ ಪಾತ್ರಗಳನ್ನ ಎದುರು ನೋಡುತ್ತಿದ್ದೀರಿ?
- ನನ್ನ ಡ್ರೀಮ್ ರೋಲ್ ಅಂದ್ರೆ, 'ರಂಗೀಲಾ' ಚಿತ್ರದಲ್ಲಿ ಆಮೀರ್ ಖಾನ್ ಮಾಡಿರುವ ಪಾತ್ರ ಬಹಳ ಇಷ್ಟ. 'ಪೋಕಿರಿ' ಚಿತ್ರದಲ್ಲಿ ಮಹೇಶ್ ಬಾಬು ನಟಿಸಿರುವ ಪಾತ್ರ ಖುಷಿ ಕೊಡುತ್ತೆ. ಆ ತರಹ ಲೋ ಪ್ರೊಫೈಲ್ ಹುಡುಗನ ಕ್ಯಾರೆಕ್ಟರ್ಸ್, ಲೋವರ್ ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗನಾಗಿ ಅಭಿನಯಿಸಬೇಕು ಅಂತ ಆಸೆ.


harsha-gajapade

* 'ಗಜಪಡೆ' ರಿಲೀಸ್ ಪ್ಲಾನ್?
- ಶೂಟಿಂಗ್ ಕಂಪ್ಲೀಟ್ ಆಗಿದೆ. ಒಳ್ಳೆಯ ಸಿನಿಮಾ. ಇಡೀ ಫ್ಯಾಮಿಲಿ ಕೂತು ನೋಡುವಂತಹ ಸಿನಿಮಾ. ಸೆಂಟಿಮೆಂಟ್ ಇದೆ. ಸ್ನೇಹಿತರ ಬಗ್ಗೆ ಒಳ್ಳೆಯ ಮೆಸೇಜ್ ಇದೆ. ಕಾಮಿಡಿ ಇದೆ. ಏಪ್ರಿಲ್ ನಲ್ಲಿ ರಿಲೀಸ್ ಆಗಲಿದೆ.


ಸಂದರ್ಶನ : ಹರ್ಷಿತಾ ನಾಗರಾಜ್

English summary
Actor Harshavardhan of 'Rajahuli' fame has now turned Hero for the Movie Gajapade. Here is an Exclusive Interview with the Actor on his New Project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada