For Quick Alerts
  ALLOW NOTIFICATIONS  
  For Daily Alerts

  ಹೀರೋ ಲುಕ್, ವಿಲನ್ ಖದರ್: ಸಕಲ ಪಾತ್ರಕ್ಕೂ ಸೈ ಎನ್ನುವ 'ಕಲಾವಿದ'

  By Bharath Kumar
  |

  ಕನ್ನಡದಲ್ಲಿ ಖಳನಾಯಕರು ಕಮ್ಮಿ ಅಂತಾರೆ. ಆದ್ರೆ, ಇಲ್ಲೊಬ್ಬ ನಟ ಆ ಕೊರಗನ್ನ ನೀಗಿಸುತ್ತಿದ್ದಾರೆ. ಹೆಸರು ರಾಜ್ ದೀಪಕ್ ಶೆಟ್ಟಿ ರಾಜ್. ಆರಡಿ ಕಟೌಟ್, ಜಬರ್ ದಸ್ತ್ ಫಿಟ್ನೆಸ್. ನೋಡಿದ ತಕ್ಷಣ ಇದ್ಯಾರೋ ಹೀರೋ ಲುಕ್ ಅನಿಸದೇ ಇರಲ್ಲ. ಆದ್ರೆ, ವಿಲನ್ ಗಾಗಿಯೇ ಹುಟ್ಟಿರಬಹುದು ಎಂಬ ಭಾವನೆ ಬರೋದು ಸಹಜ.

  ಒಬ್ಬ ವಿಲನ್ ಗೆ ಬೇಕಾಗಿರುವ ಗತ್ತು, ಗಮ್ಮತ್ತು, ಧ್ವನಿ, ಲುಕ್, ಹೈಟು, ಪರ್ಸನಾಲಿಟಿ ಎಲ್ಲವೂ ಇವರಲ್ಲಿದೆ. ಇವರನ್ನ ಉತ್ತಮವಾಗಿ ಬಳಸಿಕೊಂಡರೇ ಕನ್ನಡಕ್ಕೊಬ್ಬ ಖದರ್ 'ನಾಯಕ' ಹಾಗೂ ಖಳನಾಯಕ ಆಗ್ತಾರೆ ಎನ್ನುದ್ರಲ್ಲಿ ಎರಡು ಮಾತಿಲ್ಲ.

  ಮಂಗಳೂರಿನ ರಾಜ್ ದೀಪಕ್ ಶೆಟ್ಟಿ...ಸ್ವಲ್ಪ ಮಿಸ್ ಆಗಿದ್ರು, ಇವರು ಇಂಡಸ್ಟ್ರಿಗೆ ಸಿಕ್ತಿರಲಿಲ್ಲ. ಯಾಕಂದ್ರೆ, ಆರಂಭದಲ್ಲೇ ಸೋತು ನಿರಾಸೆಯ ಮನೆ ಸೇರಿದ್ದರು. ಆದ್ರೆ, ಬಣ್ಣದ ರುಚಿ ನೋಡಿದ್ದ ಕಲಾವಿದ, ಇಲ್ಲೇ ಬದುಕು ಕಟ್ಟಿಕೊಳ್ಳಬೇಕೆಂಬ ಛಲ ಕೊನೆಗೂ ಇಲ್ಲಿಯೇ ಕರೆದುಕೊಂಡು ಬಂತು. ಎರಡನೇ ಅವಕಾಶವನ್ನ ಎರಡು ಕೈಗಳಿಂದ ಬಾಚಿಕೊಂಡ ಈ ನಟ ಚಂದನವನದಲ್ಲಿ ಸೋತು ಗೆದ್ದರು.

  ರಾಜ್ ದೀಪಕ್ ಶೆಟ್ಟಿ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಫಿಲ್ಮಿಬೀಟ್ ಕನ್ನಡದಲ್ಲಿ ಹಂಚಿಕೊಂಡಿದ್ದಾರೆ. ಪೂರ್ತಿ ಸಂದರ್ಶನ ಓದಲು ಮುಂದೆ ಓದಿ......

  ಸಂದರ್ಶನ: ಭರತ್ ಕುಮಾರ್

  ನಿಮ್ಮ ಆಕ್ಟಿಂಗ್ ಎಲ್ಲಿಂದ ಶುರುವಾಯ್ತು.?

  ನಿಮ್ಮ ಆಕ್ಟಿಂಗ್ ಎಲ್ಲಿಂದ ಶುರುವಾಯ್ತು.?

  ''ಕಾಲೇಜ್ ನಲ್ಲಿ ಓದುವಾಗ ಒಮ್ಮೆ ನಾಟಕ ಮಾಡಿದೆ. ಆಮೇಲೆ ಅಭಿನಯ ಇಷ್ಟ ಆಗೋಕೆ ಶುರುವಾಯ್ತು. ಇದರಲ್ಲೇ ಸಾಧನೆ ಮಾಡಬೇಕು ಎಂಬ ಛಲ ಹುಟ್ಟಿತು. ಆಮೇಲೆ ಧಾರವಾಹಿ ಸಿಕ್ತು. ಆರಂಭದಲ್ಲಿ ತುಂಬಾ ಕಷ್ಟ ಇತ್ತು. ಆಮೇಲೆ 'ಕಾದಂಬರಿ' ಅಂತ ಧಾರಾವಾಹಿಯಲ್ಲಿ ಸಣ್ಣ ಪಾತ್ರ ಮಾಡಿದೆ. 'ಬಂದೇ ಬರುತ್ತವೆ ಕಾಲ' ಸೀರಿಯಲ್ ನಲ್ಲಿ ಹೀರೋ ಆಗಿ ಮಾಡಿದೆ. ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡ್ಕೊಂಡು, ಕೆಲವು ಧಾರವಾಹಿಗಳಲ್ಲಿ ನಟಿಸುತ್ತಿದ್ದೆ''.

  ಹೀರೋ ಆಗಲು ಹೋಗಿ ಊರು ಬಿಟ್ಟಿದ್ದರು

  ಹೀರೋ ಆಗಲು ಹೋಗಿ ಊರು ಬಿಟ್ಟಿದ್ದರು

  ಧಾರವಾಹಿಯಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದ ಮೇಲೆ ಮತ್ತೊಂದು ಹೆಜ್ಜೆ ಮುಂದೆ ಹೋದ ದೀಪಕ್ ಶೆಟ್ಟಿ, ಎಲ್ಲರಂತೆ ಫೋಟೋಶೂಟ್ ಮಾಡಿಸಿ, ಕೈಯಲ್ಲಿ ಆಲ್ಬಂ ಇಡ್ಕೊಂಡು ಅವಕಾಶಕ್ಕಾಗಿ ಗಾಂಧಿನಗರದ ತಿರುಗಾಡಿದ್ದರು. ಆದ್ರೆ, ಅವರಿಗೆ ಎದುರುಗಾಗಿದ್ದು ನಿರಾಸೆ ಮಾತ್ರ. ಶಿವಧ್ವಜ ನಿರ್ದೇಶನದ 'ನೀನೇ ನೀನೇ' ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದರು. ಆದ್ರೆ, ಅದು ಮುಂದಿನ ಹಾದಿಗೆ ಮೆಟ್ಟಿಲಾಗಲಿಲ್ಲ. ಇದರಿಂದ ಬೇಸರಗೊಂಡ ಅವರು ಇದು ನಮ್ಮಂತವರಿಗಲ್ಲ ಎಂದು ಊರಿನ ಕಡೆ ಹೋಗಿಬಿಟ್ಟರು. ನಂತರ 2009 ರಲ್ಲಿ ದುಬೈ ಏರ್ ಲೈನ್ಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು.

  ಆಸೆ ಬಿಟ್ಟಿಲ್ಲ, ಛಲ ಕೈಕೊಡಲಿಲ್ಲ

  ಆಸೆ ಬಿಟ್ಟಿಲ್ಲ, ಛಲ ಕೈಕೊಡಲಿಲ್ಲ

  ಒಂದು ಸರಿ ಬಣ್ಣದ ಹಚ್ಚಿದ ದೇಹವಾಗಿದ್ದರಿಂದ ಆ ನಂಟು ಮತ್ತೆ ಇಂಡಸ್ಟ್ರಿಗೆ ಕರೆದುಕೊಂಡ ಬಂತು. ಮತ್ತೆ 2014ರಲ್ಲಿ ಧಾರವಾಹಿಯಲ್ಲಿ ನಟಿಸಲು ಶುರು ಮಾಡಿದರು. 'ಲವಲವಿಕೆ' ಎಂಬ ಧಾರವಾಹಿಯಲ್ಲಿ ನಾಯಕ ನಟನಿಗೆ ಅಪ್ಪನ ಪಾತ್ರ ನಿಭಾಯಿಸಿದರು. ದೀಪಕ್ ಅವರ ಪ್ರತಿಭೆ ಗುರುತಿಸಿದ್ದ ನಿರ್ದೇಶಕ ನಂದಕಿಶೋರ್ 'ಟೈಗರ್' ಚಿತ್ರದಲ್ಲಿ ಖಳನಾಯಕನಾಗುವ ಅವರ ಅವಕಾಶ ಕೊಟ್ಟರು. ಅಲ್ಲಿಂದ ತನ್ನ ಅಭಿನಯವನ್ನೇ ಬಂಡವಾಳ ಮಾಡಿಕೊಂಡ ದೀಪಕ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಬೇಡಿಕೆಯ ಖಳನಟರಲ್ಲಿ ಒಬ್ಬರಾಗಿದ್ದಾರೆ.

  ನಿರ್ದೇಶಕರ ನಟ ನಾನು

  ನಿರ್ದೇಶಕರ ನಟ ನಾನು

  ''ಪಾತ್ರಕ್ಕೆ ನಾನು ಅವಶ್ಯಕತೆ ಇದ್ದರೇ ಅದೇ ಯಾವ ರೀತಿಯ ಪಾತ್ರವಿದ್ದರೂ ನಿಭಾಯಿಸುತ್ತೇನೆ. ಬರಿ ವಿಲನ್ ಅಲ್ಲ, ಅಥವಾ ಅಪ್ಪನ ಪಾತ್ರವಲ್ಲ, ಎಲ್ಲ ರೀತಿಯಲ್ಲೂ ಅಭಿನಯಿಸುವೆ. ಅದೊಂದು ಪಾತ್ರ, ಅದನ್ನ ಮಾಡುವುದರಿಂದ ನನಗೆ ಕಲಿಯುವ ಅವಕಾಶ ಮತ್ತು ಅನುಭವ ಸಿಗುತ್ತೆ ಎಂಬ ವಿಶ್ವಾಸ.'' ನಿರ್ದೇಶಕರು ನನ್ನಿಂದ ಯಾವ ಪಾತ್ರ ನಿರೀಕ್ಷೆ ಮಾಡ್ತಾರೋ ಆ ಪಾತ್ರಕ್ಕೆ ನಾನು ಸೈ''

  ಹೀರೋ ಆಗಿಲ್ಲ ಅಂತ ಬೇಜಾರಿಲ್ಲ, ನಟನಾಗಿರುವುದು ಖುಷಿ

  ಹೀರೋ ಆಗಿಲ್ಲ ಅಂತ ಬೇಜಾರಿಲ್ಲ, ನಟನಾಗಿರುವುದು ಖುಷಿ

  ''ನಾನು ತಂದೆ ಪಾತ್ರ ಮಾಡಿದಾಗಲೂ ಹೀರೋಗಿಂತ ಅಪ್ಪನೇ ತುಂಬಾ ಚೆನ್ನಾಗಿದ್ದಾರೆ ಅಂತ ಅನೇಕರು ಹೇಳಿದ್ದಾರೆ. ಒಬ್ಬರ ಹೀರೋ ಹೇಗೆ ಇಡೀ ಸಿನಿಮಾವನ್ನ ಕರೆದುಕೊಂಡು ಹೋಗ್ತಾನೋ ಅದೇ ರೀತಿ ವಿಲನ್ ಕೂಡ ಅವರದ್ದೇ ಸ್ಟೈಲ್ ನಲ್ಲಿ ಆ ಸಿನಿಮಾಗೆ ಮುಖ್ಯ. ಹಾಗಾಗಿ, ಹೀರೋ ಆಗಿಲ್ಲ ಅಂತ ಬೇಜಾರಿಲ್ಲ. ಇಂಡಸ್ಟ್ರಿಯಲ್ಲಿದ್ದೀನಿ ಎಂಬುದು ಖುಷಿ''.

  ಕನ್ನಡದಲ್ಲಿ ವಿಲನ್ ಗಳಿಗೆ ಸ್ಪರ್ಧೆ ಇದೆಯಾ.?

  ಕನ್ನಡದಲ್ಲಿ ವಿಲನ್ ಗಳಿಗೆ ಸ್ಪರ್ಧೆ ಇದೆಯಾ.?

  ''ಕಾಂಪಿಟೇಶನ್ ಆರೋಗ್ಯಕರವಾಗಿದ್ದರೇ ಉತ್ತಮ. ಸದ್ಯದ ಮಟ್ಟಿಗೆ ಕನ್ನಡದಲ್ಲಿ ವಿಲನ್ ಗಳು ಕಮ್ಮಿ. ಗೆಳೆಯರಾದ ಅನಿಲ್-ಉದಯ್ ಅವರನ್ನ ಕಳೆದುಕೊಳ್ಳಬೇಕಾಯಿತು. ರವಿಶಂಕರ್ ಸರ್ ಬಿಟ್ಟರೇ ಈಗ ಯಾರೂ ಇಲ್ಲ. ಸೋ ವಿಲನ್ ಗೆ ಸ್ಪರ್ಧೆ ಇಲ್ಲ ಅನಿಸುತ್ತೆ''

  ಪರಭಾಷೆಯಲ್ಲಿ ಆಫರ್, ಕನ್ನಡದಲ್ಲೇ ಬ್ಯುಸಿ

  ಪರಭಾಷೆಯಲ್ಲಿ ಆಫರ್, ಕನ್ನಡದಲ್ಲೇ ಬ್ಯುಸಿ

  ''ಪರಭಾಷೆ ಸಿನಿಮಾಗಳಲ್ಲಿ ಅವಕಾಶ ಬರ್ತಿದೆ. ಆದ್ರೆ, ಅದನ್ನ ಇನ್ನು ಒಪ್ಪಿಕೊಂಡಿಲ್ಲ. ಯಾಕಂದ್ರೆ, ಕನ್ನಡದಲ್ಲಿ ಹೆಚ್ಚು ಸಿನಿಮಾ ಇದೆ, ಅದನ್ನ ಮೊದಲು ಮುಗಿಸಬೇಕು. ತೆಲುಗು ಸಿನಿಮಾ ಆಫರ್ ಮಾಡ್ತಿದ್ದಾರೆ. ಮುಂದೆ ನೋಡೋಣ''

  ನಿಮ್ಮ ಫಿಟ್ನೆಸ್ ಹೇಗೆ.?

  ನಿಮ್ಮ ಫಿಟ್ನೆಸ್ ಹೇಗೆ.?

  ''ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಸಕ್ರೀಯನಾಗಿದ್ದೆ. ಸುಮಾರು 18 ವರ್ಷದಿಂದ ವರ್ಕೌಟ್ ಮಾಡ್ತಿದ್ದೀನಿ. ಶೂಟಿಂಗ್ ಇಲ್ಲ ಅಂದ್ರೆ ಬೆಳಿಗ್ಗೆ ಮತ್ತೆ ಸಂಜೆ ಜಿಮ್ ನಲ್ಲಿ ಸಮಯ ಕಳೆಯುತ್ತೇನೆ. ಡಯೇಟ್ ಮಾಡ್ತೀನಿ, ಆಹಾರದಲ್ಲಿ ನಿಯಂತ್ರಣ ಇರುತ್ತೆ. ಮೊದಲನಿಂದಲೂ ಇದು ಅಭ್ಯಾಸವಾಗಿದೆ''

  'ಶ್ರೀಕಂಠ' ಶಿವಣ್ಣ ಜೊತೆಗಿನ ಅನುಭವ ಹೇಗಿತ್ತು.?

  'ಶ್ರೀಕಂಠ' ಶಿವಣ್ಣ ಜೊತೆಗಿನ ಅನುಭವ ಹೇಗಿತ್ತು.?

  ''ಕ್ಯಾಮೆರಾ ಮುಂದೆ ಸರಗವಾಗಿ ಮಾತನಾಡುತ್ತಿದ್ದ ನಾನು ಶಿವಣ್ಣ ಎದುರುಗಡೆ ಡೈಲಾಗ್ ಮರಿತಿದ್ದೆ. ಚಿಕ್ಕ ವಯಸ್ಸಿನಿಂದಲೂ ಅವರ ಸಿನಿಮಾಗಳನ್ನ ನೋಡಿ ಬೆಳೆದಿದ್ದು. ಅವರ ತರ ಆಗ್ಬೇಕು ಅಂತ ಅಂದುಕೊಂಡಿದ್ವಿ. ಎದುರುಗಡೆ ಬಂದಾಗ ನಾನು ನರ್ವಸ್ ಆದೆ. ಆಮೇಲೆ ಶಿವಣ್ಣನೇ ಮಾಡಿ ಮಾಡ್ತೀರಾ ಅಂತ ಬೆನ್ನುತಟ್ಟಿ ಮಾಡಿಸಿದ್ರು. ತುಂಬಾ ಖುಷಿ ಆಯ್ತು''

  ದೀಪಕ್ ಶೆಟ್ಟಿಯ ಮುಂದಿನ ಸಿನಿಮಾಗಳು

  ದೀಪಕ್ ಶೆಟ್ಟಿಯ ಮುಂದಿನ ಸಿನಿಮಾಗಳು

  ಟೈಗರ್, ಶ್ರೀಕಂಠ, ಭರ್ಜರಿ, ಅಸತೋಮ ಸದ್ಗಮಯ, ಗೌಡ್ರು ಹೋಟೆಲ್, ಕಾಲಚಕ್ರ ಚಿತ್ರಗಳಲ್ಲಿ ನಟಿಸಿರುವ ದೀಪಕ್ ಈಗ ವಾಸು ನಾನ್ ಪಕ್ಕಾ ಕಮರ್ಷಿಯಲ್, ಲೈಪ್ ಜೊತೆ ಒಂದು ಸೆಲ್ಫಿ, ಪ್ರಯಾಣಿಕರ ಗಮನಕ್ಕೆ, ಬಜಾರ್, ಪಂಚತಂತ್ರ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂಬರೀಶ್ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾದಲ್ಲಿ ಅವರ ತಂದೆ ಪಾತ್ರ ಮಾಡ್ತಿದ್ದಾರೆ. ಸಿಂಪಲ್ ಸುನಿಯ 'ಬಜಾರ್', ವಿನೋದ್ ಪ್ರಭಾಕರ್ 'ರಗಡ್', 'ಪೊಗರು', 'ಭರಾಟೆ' ಹಾಗೂ ಚಿರಂಜೀವಿ ಸರ್ಜಾ ಅವರ ಹೊಸ ಚಿತ್ರವೊಂದರಲ್ಲಿಯೂ ದೀಪಕ್ ಶೆಟ್ಟಿ ನಟಿಸುತ್ತಿದ್ದಾರೆ.

  English summary
  Kannada famous villain raj deepak shetty shares his acting experience with filmibeat kannada interview. he was acted in shivarajkumar srikanta, dhruva sarja's bharjari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X