Just In
Don't Miss!
- News
‘ನಕಲಿ ವ್ಯಾಕ್ಸಿನೇಷನ್’ ವಿಡಿಯೋ ವೈರಲ್: ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಸುಧಾಕರ್
- Education
Karnataka SSLC Exam 2021: ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾತಿ ಕಡ್ಡಾಯ ಇಲ್ಲ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Sports
ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!
- Automobiles
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
- Lifestyle
ಶೇವಿಂಗ್ ಟಿಪ್ಸ್: ಹೀಗೆ ಮಾಡಿದರೆ ತ್ವಚೆ ಮೃದುವಾಗಿರುತ್ತೆ, ತುರಿಕೆ ಇರಲ್ಲ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಡ್ರಾಮಾ ಜೂನಿಯರ್'ನಲ್ಲಿ ಫೇಲ್, 'ಕನ್ನಡದ ಕಣ್ಮಣಿ'ಯಲ್ಲಿ ಫೈನಲಿಸ್ಟ್
'ಸೋಲೇ ಗೆಲುವಿನ ಮೆಟ್ಟಿಲು' ಎನ್ನುವುದು ಹಳೆಯ ಡೈಲಾಗ್ ಆಗಿದ್ದರೂ, ಅದು ಇಂದಿಗೂ.. ಎಂದಿಗೂ ಪ್ರಸ್ತುತ. ಆ ಮಾತು ಅನೇಕರ ಜೀವನದಲ್ಲಿ ನಿಜ ಆಗಿದೆ. ಈಗ ಅಮೂಲ್ಯ ಕೂಡ ಅದನ್ನು ಸಾಬೀತು ಮಾಡಿದ್ದಾರೆ.
ಅರೇ ಯಾರಿ ಅಮೂಲ್ಯ ಅಂತ ನೀವು ಯೋಚನೆ ಮಾಡ್ತಿದ್ದೀರಾ. ಅಮೂಲ್ಯ ಜೀ ಕನ್ನಡ ವಾಹಿನಿಯ 'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಸ್ಪರ್ಧಿ. ತಮ್ಮ ಮಾತು ಹಾಗೂ ಪ್ರತಿಭೆಯ ಮೂಲಕ ಈ ಹುಡುಗಿ ಈಗ ಪೈನಲ್ ಹಂತಕ್ಕೆ ಬಂದಿದ್ದಾರೆ. ತಮ್ಮ 'ಕನ್ನಡದ ಕಣ್ಮಣಿ' ಜರ್ನಿ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದಾರೆ.
ಸಂದರ್ಶನ: ಬೇರೆ ಶೋಗಳು TRPಗೆ ಆದ್ರೆ, 'ಕನ್ನಡದ ಕಣ್ಮಣಿ' ಆತ್ಮತೃಪ್ತಿಗೆ
ಅಮೂಲ್ಯ ಗುಲ್ಬರ್ಗದ ಹುಡುಗಿ. ಮೊದಲು 'ಡ್ರಾಮಾ ಜೂನಿಯರ್ ಸೀಸನ್ 1' ಕಾರ್ಯಕ್ರಮಕ್ಕೆ ಈ ಹುಡುಗಿ ಆಡಿಷನ್ ನೀಡಿದ್ದರಂತೆ. ಅದು ಅವರ ಮೊದಲ ಆಡಿಷನ್ ಆಗಿತ್ತು. ಆಯ್ಕೆ ಆಗುತ್ತಾರೆ ಎನ್ನುವ ನಂಬಿಕೆ ಇದ್ದರೂ ಆಗಲು ಸಾಧ್ಯ ಆಗುವುದಿಲ್ಲ.
ಬಳಿಕ 'ಸರಿಗಮಪ' ಕಾರ್ಯಕ್ರಮಕ್ಕೆ ಆಡಿಷನ್ ನೀಡುತ್ತಾರೆ. ಅಲ್ಲೂ ಕೂಡ ಫೇಲ್ ಆಗುತ್ತಾರೆ. ನಂತರ 'ಡ್ರಾಮಾ ಜೂನಿಯರ್ ಸೀಸನ್ 2' ಪ್ರಯತ್ನ, ಆದರೆ ಅಲ್ಲೂ ಕೂಡ ಆಯ್ಕೆ ಆಗುವುದಿಲ್ಲ. ಈ ಎಲ್ಲ ಸೋಲುಗಳ ನಂತರ ಅಮೂಲ್ಯ ಮತ್ತೊಂದು ಪ್ರಯತ್ನ ಮಾಡಿದರು. ಅದೇ 'ಕನ್ನಡದ ಕಣ್ಮಣಿ'. ಹಳೆಯ ಆಡಿಷನ್ ಗಳಲ್ಲಿ ಕಲಿತ ಪಾಠವನ್ನು 'ಕನ್ನಡದ ಕಣ್ಮಣಿ' ಯಲ್ಲಿ ಅಪ್ಲೇ ಮಾಡಿ ಆಯ್ಕೆ ಆದರು.
ಕಾರ್ಯಕ್ರಮದಲ್ಲಿ ಈವರಗೆ ಅವಿಭಕ್ತ ಕುಟುಂಬ, ನೀರಿನ ದುರ್ಬಳಕೆ, ಕಾಯಕವೇ ಕೈಲಾಸ, ವೀರ ಯೋಧ ಹೀಗೆ ತನಗೆ ಸಿಕ್ಕ ವಿಷಯಗಳನ್ನು ಅದ್ಭುತವಾಗಿ ಈ ಹುಡುಗಿ ಮಾತನಾಡಿದ್ದಾರೆ.
ತನ್ನ ಈ ಹೆಜ್ಜೆಗೆ ಮೊದ ಮೊದಲು ಯಾರು ಹೆಚ್ಚು ಪ್ರೋತ್ಸಾಹ ಮಾಡಲಿಲ್ಲ. ಆದರೆ, ನಮ್ಮನ್ನು ನಾವು ಸಾಬೀತು ಮಾಡಿಕೊಂಡ ಮೇಲೆ ಎಲ್ಲರೂ ಖುಷಿ ಪಡುತ್ತಾರೆ ಎನ್ನುತ್ತಾರೆ ಅಮೂಲ್ಯ. 'ಕನ್ನಡದ ಕಣ್ಮಣಿ' ಗೆದ್ದು, ಟ್ರೋಫಿ ತೆಗೆದುಕೊಂಡು ತನ್ನ ಊರಿಗೆ ಕೀರ್ತಿ ತರುವ ಮಹದಾಸೆ ಹೊಂದಿದ್ದಾರೆ.
ಮುಂದೆ ದೊಡ್ಡ ಎಮ್ ಎನ್ ಸಿ ಕಂಪನಿಯಲ್ಲಿ ರಿಸರ್ಜ್ ಮಾಡಬೇಕು ಎನ್ನುವ ಕನಸು ಅಮೂಲ್ಯ ಅವರದ್ದಾಗಿದೆ.