ವೈರಲ್ ಮಾಡೋದಲ್ಲ, ಗಿಡ ನೆಟ್ಟರೆ ನಂಗೆ ಖುಷಿಯಾಗುತ್ತೆ - ನಿನಾದ್
''ನಾನು ಕಾಡಿನ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆದ್ರೆ, ಅದಕ್ಕೆ ಲೈಕ್ ಬಂದ್ರೆ, ಏನು ಪ್ರಯೋಜನ?. ಆ ವಿಡಿಯೋ ನೋಡಿ ಯಾರಾದರೂ ಬದಲಾದರೇ ನನಗೆ ಖುಷಿ ಆಗುತ್ತದೆ.'' ಎಂದು ನಿನಾದ್ ತನ್ನ ಮಾತುಗಳ ಮೂಲಕವೇ ಮನಸ್ಸು ಗೆದ್ದ ಹುಡುಗ.
ನಿನಾದ್ ಚಿತ್ರದುರ್ಗದ ಮಾತಿನ ಚತುರ. ಯಾವುದೇ ವಿಷಯ ನೀಡಿದರೂ ತುಂಬ ಚೆನ್ನಾಗಿ ಮಾತನಾಡುತ್ತಾನೆ. ತನ್ನ ಮಾತುಗಳ ಮೂಲಕ ಕರ್ನಾಟಕಕ್ಕೆ ಸಂದೇಶ ನೀಡುತ್ತಾನೆ. ''ನಮ್ಮ ಟ್ಯಾಲೆಂಟ್ ನೋಡಿ ಬೇರೆಯವರು ಚೆನ್ನಾಗಿ ಮಾಡುತ್ತೀಯಾ ಎಂದಾಗ ಖುಷಿ, ಹೆಮ್ಮೆ'' ಆಗುತ್ತದೆ ಅಂತ್ತಾನೆ ನಿನಾದ್.

ನಿನಾದ್ ಒಂದು ಸಂಚಿಕೆಯಲ್ಲಿ ಕಾಡಿನ ಬಗ್ಗೆ ಮಾತನಾಡಿದ್ದ. ಆ ಸಂಚಿಕೆ ಆತನಿಗೆ ಒಳ್ಳೆಯ ಹೆಸರು ನೀಡಿತ್ತು. ಈ ಬಗ್ಗೆ ಕೇಳಿದ್ದರೆ ನಿನಾದ್ ''ನನ್ನ ವಿಡಿಯೋ ವೈರಲ್ ಆಗುವುದಕ್ಕಿಂತ ಗಿಡ ನೆಟ್ಟರೆ ನನಗೆ ಖುಷಿ ಆಗುತ್ತದೆ'' ಎನ್ನುತ್ತಾನೆ.
ರಾಜಕಾರಣಿಗಳು ನೀಡುವ ಸಮಸ್ಯೆ, ಗಂಡು ಮಕ್ಕಳಿಗೆ ಹೆಚ್ಚು ಜವಾಬ್ದಾರಿ, ಕಾಡು ನಮ್ದಲ್ವ, ಕುಟುಂಬದಲ್ಲಿ ಮಗ ಹೆಚ್ಚು ಖುಷಿ ನೀಡುತ್ತಾನೆ, ನಿದ್ದೆ ಗೆಡಿಸುವಂತೆ ಮಾಡುವುದು ಕನಸು, ಮತದಾರ ಈ ವಿಷಯಗಳ ಬಗ್ಗೆ ನಿನಾದ್ ಮಾತನಾಡಿದ್ದಾನೆ.

''ಅರಣ್ಯ ಅಂದರೆ ನನಗೆ ಇಷ್ಟ. ಅದಕ್ಕೆ ನಾನು ಏನಾದರೂ ಕೊಡುಗೆ ನೀಡಬೇಕು ಎನ್ನುವುದು ನನ್ನ ಆಸೆ. ಅದಕ್ಕೆ ಮುಂದೆ ಅರಣ್ಯ ಅಧಿಕಾರಿ ಆಗಬೇಕು ಎನ್ನುವುದು ನನ್ನ ಗುರಿ.'' ಅಂತಾನೆ ಈ ಪುಟ್ಟ ಬಾಲಕ.


Click it and Unblock the Notifications











