For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಮಣ್ಣಿನ ಮಗ ಈ ಪವನ್

  |
  Kannadada Kanmani: ಕನ್ನಡದ ಕಣ್ಮಣಿ ಸ್ಪರ್ಧಿ ಜೊತೆ ಮಾತುಕತೆ | FILMIBEAT KANNADA

  ಸಾಧನೆ ಮಾಡಬೇಕು ಎನ್ನುವ ಹಠ ಇದ್ದರೇ, ಏನೇ ಕಷ್ಟ ಇದ್ದರೂ, ಬಡತನ ಇದ್ದರೂ ಅದನ್ನು ಮೀರಿ ಬೆಳೆಯಬಹುದು. ಈಗ ಆ ರೀತಿ ಸಾಧನೆ ಮಾಡಿ 'ಕನ್ನಡದ ಕಣ್ಮಣಿ' ಕಾರ್ಯಕ್ರಮದ ಮಣ್ಣಿನ ಮಗ ಆಗಿದ್ದಾನೆ ಪವನ್.

  ಪವನ್ ಜೀ ಕನ್ನಡ ವಾಹಿನಿಯ 'ಕನ್ನಡದ ಕಣ್ಮಣಿ' ಕಾರ್ಯಕ್ರಮ ಫೈನಲ್ ಹಂತಕ್ಕೆ ಬಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಎಮ್ಮೆಹಟ್ಟಿ ಎಂಬ ಸಣ್ಣ ಗ್ರಾಮದ ಹುಡುಗ ಇಂದು ಇಡೀ ಕರ್ನಾಟಕದ ತುಂಬ ಫೇಮಸ್ ಆಗಿದ್ದಾನೆ.

  'ಡ್ರಾಮಾ ಜೂನಿಯರ್'ನಲ್ಲಿ ಫೇಲ್, 'ಕನ್ನಡದ ಕಣ್ಮಣಿ'ಯಲ್ಲಿ ಫೈನಲಿಸ್ಟ್

  ಸರ್ಕಾರಿ ಶಾಲೆಯಲ್ಲಿ ಮಾಡುವ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದ್ದ ಪವನ್ ನನ್ನು ಆತನ ಶಾಲಾ ಶಿಕ್ಷಕಿ ಯಶೋಧ ಬೆಂಗಳೂರಿಗೆ 'ಕನ್ನಡ ಕಣ್ಮಣಿ' ಕಾರ್ಯಕ್ರಮಕ್ಕೆ ಕಳುಹಿಸುವ ತಯಾರಿ ಮಾಡುತ್ತಾರೆ ಆದರೆ, ಅದು ಸಾಧ್ಯ ಆಗುವುದಿಲ್ಲ. ನಂತರ ಚಿತ್ರದುರ್ಗದಲ್ಲಿ ನಡೆದ ಆಡಿಷನ್ ನಲ್ಲಿ ಪವನ್ ಆಯ್ಕೆ ಆಗುತ್ತಾನೆ. ಹೀಗೆ ಶುರುವಾದ ಆತನ ಜರ್ನಿ ಈಗ ಫೈನಲ್ ಹಂತದವರೆಗೆ ಕರೆದು ತಂದಿದೆ.

  ಬಡ ರೈತನ ಕುಟುಂಬದಲ್ಲಿ ಹುಟ್ಟಿದ ಪವನ್ ತಾನು ಕೂಡ ಅಪ್ಪನ ಜೊತೆಗೆ ಕೆಲಸ ಮಾಡುತ್ತಾನೆ. ಆಗಾಗ ತರಕಾರಿ ಮಾರುತ್ತಾನೆ. ಹೊಲದಲ್ಲಿ ಕೆಲಸ ಮಾಡುವುದು ಮಾತ್ರವಲ್ಲ ಅದೇ ವಿಷಯವನ್ನು ಮೈಕ್ ಮುಂದೆ ಮಾತನಾಡಿ ಮಣ್ಣಿನ ಮಗ ಎಂಬ ಬಿರುದು ಪಡೆದಿದ್ದಾನೆ.

  ಸಂದರ್ಶನ: ಬೇರೆ ಶೋಗಳು TRPಗೆ ಆದ್ರೆ, 'ಕನ್ನಡದ ಕಣ್ಮಣಿ' ಆತ್ಮತೃಪ್ತಿಗೆ

  ತಂದೆ ತಾಯಿಯರೇ ಮಕ್ಕಳ ಯಶಸ್ಸಿಗೆ ಕಾರಣ, ರೈತರು, ಜಂಗ್ ಫುಡ್, ಕುಟುಂಬದ ಸಂತೋಷದಲ್ಲಿ ಮಗನ ಮಾತ್ರ, ಲೈನ್ ಮ್ಯಾನ್ ಹೀಗೆ ಎಲ್ಲ ವಿಷಯದ ಮೂಲಕ ಪವನ್ ಪಂಚ್ ಕೊಟ್ಟಿದ್ದಾರೆ.

  ''ನನ್ನ ಮೇಲೆ ಆಸೆ ಇಟ್ಟುಕೊಂಡ ಅಪ್ಪ, ಅಮ್ಮ ಹಾಗೂ ಕುಟುಂಬಕ್ಕೆ ಹೆಸರು ತರಬೇಕು.'' ಎಂಬುದು ಪವನ್ ಬದುಕಿನ ಗುರಿ.

  English summary
  Zee kannada channel 'Kannadada Kanmani' contestant Pavan interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X