Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟ್ರೋಫಿ ಗೆಲ್ಲದೆ ಬುಟ್ಬುತ್ತಿವಾ..! ಅಂದಿದ್ದಾರೆ 'ಕನ್ನಡದ ಕಣ್ಮಣಿ' ಸಂಹಿತಾ
'ಬುಟ್ಬುತ್ತಿವಾ..!' ಎಂಬ ಡೈಲಾಗ್ ಅನ್ನು ತನ್ನದೇ ಶೈಲಿಯಲ್ಲಿ ಹೇಳಿ 'ಕನ್ನಡದ ಕಣ್ಮಣಿ' ಕಾರ್ಯಕ್ರಮದಲ್ಲಿ ಹೈಲೈಟ್ ಆದ ಹುಡುಗಿ ಸಂಹಿತಾ.
ಪ್ರತಿ ವಾರ ಕೂಡ ತನ್ನ ಮಾತಿನ ಮೂಲಕ ಸಿಕ್ಸರ್ ಬಾರಿಸುವ ಸಂಹಿತಾ ಈಗ ಕಾರ್ಯಕ್ರಮದ ಅಂತಿಮ ಹಂತಕ್ಕೆ ಬಂದಿದ್ದಾರೆ. ತಮ್ಮ 'ಕನ್ನಡದ ಕಣ್ಮಣಿ' ಪಯಣ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.
ಸಂಹಿತಾ ಉಡುಪಿಯ ಹುಡುಗಿ. ಸದ್ಯ 7ನೇ ಕ್ಲಾಸ್ ಓದುತ್ತಿದ್ದಾರೆ.
'ಡ್ರಾಮಾ ಜೂನಿಯರ್'ನಲ್ಲಿ ಫೇಲ್, 'ಕನ್ನಡದ ಕಣ್ಮಣಿ'ಯಲ್ಲಿ ಫೈನಲಿಸ್ಟ್
ಸ್ಕೂಲ್ ನಲ್ಲಿ ಚೆನ್ನಾಗಿ ಮಾಡುತ್ತಾಳೆ ಎಂದು ಎಲ್ಲರೂ ಹೇಳುತ್ತಿದ್ದರಂತೆ. ಹಾಗಾಗಿ ಕೆಲವು ಶೋಗಳಿಗೆ ಪ್ರಯತ್ನ ಮಾಡಿದ್ದಾರೆ. ಕೊನೆಗೆ 'ಕನ್ನಡದ ಕಣ್ಮಣಿ' ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದಾರೆ.
ಅಪ್ಪ, ಸಾಲ, ಕುಟುಂಬದ ಸಂತೋಷಕ್ಕೆ ಮಗಳು ಕಾರಣ, ಲಕ್ ವಿರುದ್ಧ ಮಕ್ಕಳಿಗೆ ಆಸ್ತಿ ಮಾಡಬೇಡಿ... ಮಕ್ಕಳನ್ನೇ ಆಸ್ತಿಯಾಗಿ ಮಾಡಿ, ಬಡತನ ಈ ವಿಷಯಗಳ ಬಗ್ಗೆ ಸಂಹಿತಾ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಅಪ್ಪನ ಬಗ್ಗೆ ಮಾತನಾಡಿದ್ದ ಸಂಚಿಕೆ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ಕಾರ್ಯಕ್ರಮಕ್ಕೆ ಬಂದು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಸಂಹಿತಾ.
ಕಾರ್ಯಕ್ರಮದಲ್ಲಿ ತನ್ನ ಮಾತುಗಳ ಮೂಲಕ ಕರ್ನಾಟಕದ ಮನೆ ಮಾತಾಗಿರುವ ಈ ಪುಟ್ಟ ಹುಡುಗಿ ಮುಂದೆ ಒಳ್ಳೆಯ ಭಾಷಣಗಾರ್ತಿ ಆಗಬೇಕು ಎನ್ನುವ ಆಸೆ ಹೊಂದಿದ್ದಾಳೆ.