»   » ನಿರ್ದೇಶಕರ ಸಂಘದ ಹೊಸ ಅಧ್ಯಕ್ಷರಾದ ವಿ.ನಾಗೇಂದ್ರ ಪ್ರಸಾದ್ ಸಂದರ್ಶನ

ನಿರ್ದೇಶಕರ ಸಂಘದ ಹೊಸ ಅಧ್ಯಕ್ಷರಾದ ವಿ.ನಾಗೇಂದ್ರ ಪ್ರಸಾದ್ ಸಂದರ್ಶನ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ವಿ.ನಾಗೇಂದ್ರ ಪ್ರಸಾದ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ವಿ.ನಾಗೇಂದ್ರ ಪ್ರಸಾದ್

ಈ ಹಿಂದೆ ನಾಗೇಂದ್ರ ಪ್ರಸಾದ್ ನಿರ್ದೇಶಕರ ಸಂಘದಲ್ಲಿ ಎರಡು ವರ್ಷಗಳ ಅವಧಿಗೆ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸದಾ ಕನ್ನಡ ಪರ ಹೋರಾಟಗಳಲ್ಲಿ ಮುಂದೆ ನಿಲ್ಲುವ ಇವರು ಈಗ ಚಿತ್ರಗಳಿಗೆ ಸಾಹಿತ್ಯ ರಚನೆ, ನಿರ್ದೇಶನ ಕಾರ್ಯಗಳ ಜೊತೆಗೆ ಹೊಸ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಫಿಲ್ಮಿಬೀಟ್ ಸಂದರ್ಶನ ನಡೆಸಿದ್ದು, ತಮ್ಮ ಮುಂದಿನ ಯೋಜನೆಗಳು, ಜವಾಬ್ದಾರಿಗಳ ಕುರಿತು ಮಾತನಾಡಿದ್ದಾರೆ. ಸಂದರ್ಶನ ಆಯ್ದ ಭಾಗ ಇಲ್ಲಿದೆ ಓದಿರಿ..

ಸಂದರ್ಶನ: ಸುನೀಲ್, ಬಿಂಡಹಳ್ಳಿ

ನಿರ್ದೇಶಕರ ಸಂಘದ ಅಧ್ಯಕ್ಷರಾಗಿದ್ದೀರಿ.. ಹೊಸ ಜವಾಬ್ದಾರಿ.. ಹೇಗ್ ಅನಿಸ್ತಿದೆ?

ಏಳು ವರ್ಷಗಳಿಂದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೀನಿ. ಈಗ ಅಧ್ಯಕ್ಷನಾಗಿದಿನಿ. ಇಲ್ಲಿನ ಎಲ್ಲಾ ಹಾಗು-ಹೋಗುಗಳು, ಕಾರ್ಯವೈಖರಿ ಗೊತ್ತಿರುವುದರಿಂದ ಕೆಲಸ ಸರಳ. ಹಳೆಯ ನಿರ್ದೇಶಕರಿಗೆ ಆರೋಗ್ಯ ಭದ್ರತೆ ಮತ್ತು ಆರ್ಥಿಕ ಭದ್ರತೆ ಮಾಡಬೇಕು. ಹೊಸ ನಿರ್ದೇಶಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೊಸ ಚಟುವಟಿಕೆಗಳನ್ನು ಮಾಡಬೇಕು. ಸಂಘದ ಏಳಿಗೆಗೆ ಶ್ರಮಿಸಬೇಕು.

ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ನಿಮ್ಮ ಯೋಜನೆಗಳು ಏನು?

ಕಾನ್ಫಿಡಾ ಶಾಲೆ ಇದೆ. ಅದು ನಿರ್ದೇಶನ ತರಬೇತಿ ನೀಡುವ ಶಾಲೆ. ಅದನ್ನ ಇನ್ನಷ್ಟು ಅಭಿವೃದ್ದಿಗೊಳಿಸಬೇಕು. ಸಿನಿಮಾ ಕಾರ್ಯಗಾರಗಳನ್ನು ಮಾಡಬೇಕು. ನಾವು ಇದುವರೆಗೂ ಬಾಡಿಗೆ ಕಟ್ಟಡದಲ್ಲಿಯೇ ಇದ್ದೇವೆ. ಆದ್ದರಿಂದ ಸ್ವಂತ ಕಟ್ಟಡ ಮಾಡುವ ಪ್ಲಾನ್ ಇದೆ. ಇನ್ನು ಹಲವು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಕೊಂಕಣಿ, ತುಳು ಸೇರಿದಂತೆ ಹಲವು ಉಪಭಾಷೆ ಸಿನಿಮಾಗಳನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಬೇಕು.

ನಿಮ್ಮ ಅಧ್ಯಕ್ಷತೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಏನನ್ನು ನಿರೀಕ್ಷೆ ಮಾಡಬಹುದು..

ನಿರ್ದೇಶಕರ ಸಂಘದ ಅಭಿವೃದ್ದಿ ಮತ್ತು ನಿರ್ದೇಶಕರಿಗೆ ಒಳ್ಳೇದು ಮಾಡಿದ್ರೆ ಚಿತ್ರರಂಗಕ್ಕೆ ಕೊಡುಗೆ ನೀಡಿದಂತೆಯೇ. ಹೊಸ ನಿರ್ದೇಶಕರನ್ನ ಪ್ರೋತ್ಸಾಹಿಸೋದು, ನಿರ್ದೇಶಕರ ಸಮಸ್ಯೆ ಆಲಿಸಿ ಶೀಘ್ರ ಪರಿಹಾರ ನೀಡುವುದು, ಕಾನ್ಫಿಡಾ ಅಭಿವೃದ್ಧಿ ಆದ್ರೆ ಇಡೀ ಚಿತ್ರರಂಗಕ್ಕೆ ಮಾದರಿ ಸಂಘವಾಗುತ್ತದೆ.

ಚಿತ್ರ ಸಾಹಿತಿ, ನಿರ್ದೇಶನ, ಕನ್ನಡ ಪರ ಹೋರಾಟದಲ್ಲಿ ಮುಂದಾಳತ್ವ ಇವುಗಳ ಜೊತೆಗೆ ಹೊಸ ಜವಾಬ್ದಾರಿನ ಹೇಗ್ ನಿಭಾಯಿಸುತ್ತೀರಾ..

ನಿಭಾಯಿಸಲೇಬೇಕು. ಕಷ್ಟ ಇದೆ. ಆದರೆ ಅನುಭವ ಇರುವುದರಿಂದ ಸಮಸ್ಯೆ ಆಗೋದಿಲ್ಲ. ಕಲಾವಿದರ ಸಂಘ, ಕಾರ್ಮಿಕರ ಒಕ್ಕೂಟ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಛಾಯಾಗ್ರಾಹಕರ ಸಂಘ, ಸಂಕಲನಕಾರರ ಸಂಘ ಮತ್ತು ಚಿತ್ರರಂಗದ ಇತರೆ ಎಲ್ಲಾ ಸಂಘದವರೂ ನಿರ್ದೇಶಕರ ಸಂಘದ ಬೆನ್ನೆಲುಬಾಗಿ ಸದಾ ಇರುವುದರಿಂದ ಯಾವುದು ಕಷ್ಟ ಅನಿಸುವುದಿಲ್ಲ.

English summary
Karnataka Director's Association's New President V Nagendra Prasad Interview

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada