twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಮೊದಲ ಸಿನಿಮಾ : ಮೊದಲ ಶಾಟ್ ಡೈರೆಕ್ಟ್ ಮಾಡಿದ್ದ ಉತ್ಸಾಹಕ್ಕೆ ಪಿ.ಹೆಚ್.ವಿಶ್ವನಾಥ್ ಮೈ ಒದ್ದೆ ಆಗಿತ್ತು

    By Naveen
    |

    ''ನನ್ನ ಮೊದಲ ಶಾಟ್ ಇಂದಿಗೂ ಚೆನ್ನಾಗಿ ನೆನಪಿದೆ. ಶೂಟಿಂಗ್ ನಡೆಯುವಾಗ ಸಿಕ್ಕಾಪಟ್ಟೆ ಬಿಸಿಲು, ಶಕೆ ಇತ್ತು. ಫಸ್ಟ್ ಶಾಟ್ ತೆಗೆಯುತ್ತಿದ್ದೇನೆ ಎನ್ನುವ ಉತ್ಸಾಹಕ್ಕೆ ಇಡೀ ಮೈ ವದ್ದೆ ಆಗಿತ್ತು. ಸಂತೋಷಕ್ಕೆ ಕಣ್ಣು ಮುಚ್ಚಿಕೊಳ್ಳುವಷ್ಟು ನೀರು ಬರುತ್ತಿತ್ತು. ಆ ದಿನ ಬೆಳ್ಳಗೆ 9 ಗಂಟೆಗೆ ಶೂಟಿಂಗ್ ಮಾಡಿದ್ದ ವಿಶ್ಯೂವಲ್ ಇನ್ನು ನೆನೆಪು ಇದೆ. ನನ್ನ ಸಿನಿಮಾದ ಫಸ್ಟ್ ಶಾಟ್ ತೆಗೆಯುತ್ತಿದ್ದೇನೆ ಎನ್ನುವುದು ಒಂದು ಧನ್ಯತಾಭಾವ.'' ಹೀಗೆ ಹೇಳಿದ್ದು ಕನ್ನಡದ ಹಿರಿಯ ನಿರ್ದೇಶಕರಾದ ಪಿ.ಹೆಚ್.ವಿಶ್ವನಾಥ್.

    'ನನ್ನ ಮೊದಲ ಸಿನಿಮಾ' ಲೇಖನ ಸರಣಿಯ ಈ ವಾರದ ವಿಶೇಷವಾಗಿ ನಿರ್ದೇಶಕ ಪಿ.ಹೆಚ್.ವಿಶ್ವನಾಥ್ ತಮ್ಮ ಮೊದಲ ಸಿನಿಮಾ 'ಪಂಚಮ ವೇದ' ಚಿತ್ರದ ಬಗ್ಗೆ ಮಾತನಾಡಿದ್ದಾರೆ.

    ಪುಟ್ಟಣ್ಣ ಕಣಕಾಲ್ ಗರಡಿಯಲ್ಲಿ ಏಳೆಂಟು ವರ್ಷ ಪಳಗಿದ ಪಿ.ಹೆಚ್.ವಿಶ್ವನಾಥ್ ಮೊದಲ ಸಿನಿಮಾ ಮಾಡುವಾಗ ತಮಗೆ ಆದ ಅನುಭವನ್ನು ಹೇಳಿಕೊಂಡಿದ್ದಾರೆ. 'ಪಂಚಮ ವೇದ' ಪಿ.ಹೆಚ್.ವಿಶ್ವನಾಥ್ ನಿರ್ದೇಶನ ಮಾಡಿದ ಮೊದಲ ಸಿನಿಮಾ. ಈ ಚಿತ್ರದಲ್ಲಿ ರಮೇಶ್ ಮತ್ತು ಸುಧಾರಾಣಿ ಅಭಿನಯಿಸಿದ್ದರು. ಚಿತ್ರಕ್ಕೆ 23 ಪ್ರಶಸ್ತಿಗಳು ಬಂದಿದ್ದವು.

    ಅಂದಹಾಗೆ, ಒಬ್ಬ ನಿರ್ದೇಶಕನಿಗೆ ಮೊದಲ ಸಿನಿಮಾ ಎಷ್ಟು ಮುಖ್ಯ, ಆ ಸಿನಿಮಾ ಮಾಡುವಾಗ ಆತನಿಗೆ ಆಗುವ ಸಂತೋಷ, ತಳಮಳ ಎಲ್ಲವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ನಾನೇ ನಿರ್ದೇಶನ ಮಾಡುತ್ತೇನೆ ಎಂದಾಗ

    ನಾನೇ ನಿರ್ದೇಶನ ಮಾಡುತ್ತೇನೆ ಎಂದಾಗ

    ''ಒಂದು ಸಣ್ಣ ಎಳೆಯಿಂದ 'ಪಂಚಮವೇದ' ಸಿನಿಮಾದ ಕಥೆ ಶುರು ಆಯ್ತು. ಮೊದಲು ನಾನು ಪುಟ್ಟಣ್ಣ ಕಣಗಾಲ್, ದ್ವಾರಕೀಶ್, ಹುಣಸೂರು ಕೃಷ್ಣಮೂರ್ತಿ, ನಾಗಾಭರಣ ಅವರ ಜೊತೆಗೆ ಕೆಲಸ ಮಾಡಿದ್ದೆ. ನಂತರ ನಾನೇ ಒಂದು ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದಾಗ ಡಿಫರೆಂಟ್ ಕಥೆ ಮಾಡಲು ನಿರ್ಧಾರ ಮಾಡಿದೆ. ಆಗ ಕಾಲೇಜ್ ಲವ್ ಸ್ಟೋರಿ ಮತ್ತು ಸಿಟಿ ಕಥೆಗಳೆ ಹೆಚ್ಚು ಬರುತ್ತಿತ್ತು. ಅದಕ್ಕೆ ನಾನು ಹಳ್ಳಿಯಲ್ಲಿ ನಡೆಯುವ ಒಂದು ಪ್ರೇಮ ಕಥೆ ಮಾಡುವ ಎಂದು ಯೋಚನೆ ಮಾಡಿದೆ. ಏನು ಹೇಳಿದರು ನಂಬಿಬಿಡುವ ಒಬ್ಬ ಮುಗ್ಧ ಹುಡುಗಿಯ ಮನಸಿನ ಮೇಲೆ ಆಗುವ ಪರಿಣಾಮಗಳನ್ನು ಸಿನಿಮಾದ ಕಥೆಯಾಗಿ ಮಾಡಿಕೊಂಡೆ.''

    ತಲೆ ತುಂಬ ಕಥೆ ಇತ್ತು, ಆದರೆ ನಿರ್ಮಾಪಕರು ಸಿಗಲಿಲ್ಲ

    ತಲೆ ತುಂಬ ಕಥೆ ಇತ್ತು, ಆದರೆ ನಿರ್ಮಾಪಕರು ಸಿಗಲಿಲ್ಲ

    ''ನಿರ್ಮಾಪಕರನ್ನು ಹುಡುಕಿಕೊಂಡು ಹೋಗುವ ಸ್ವಭಾವ ನನಗೆ ಇರಲಿಲ್ಲ. ಪುಟ್ಟಣ್ಣ ಅವರ ಜೊತೆಗೆ ಏಳೆಂಟು ವರ್ಷ ಕೆಲಸ ಮಾಡಿದ್ದೆ. 'ರಂಗನಾಯಕಿ' ಸಿನಿಮಾ ಕೆಲಸ ಮಾಡುವಾಗ ಒಬ್ಬ ಪ್ರೊಡ್ಯೂಸರ್ ಹುಡುಕಿಕೊಂಡು ಬಂದು ಒಂದು ಪಿಚ್ಚರ್ ಮಾಡಿ ಎಂದರು. ಆದರೆ ನನಗೆ ನಾನು ಇನ್ನೂ ಪುಟ್ಟಣ್ಣ ಅವರ ಜೊತೆಗೆ ಕೆಲಸ ಮಾಡಿ ಇನ್ನಷ್ಟು ಕಲಿಯಬೇಕು ಅಂತ ಇದ್ದೇ. ಅದಕ್ಕೆ ಅವರಿಗೆ ನೇರವಾಗಿ 'ಈಗ ನಾನು ಸಿನಿಮಾ ಮಾಡಲ್ಲ' ಎಂದು ಹೇಳಿ ಕಳುಹಿಸಿದೆ. ಆದರೆ ನಾನೇ ನಿರ್ದೇಶನ ಮಾಡಲು ಹೊರಟಾಗ ಯಾವ ನಿರ್ಮಾಪಕ ಕೂಡ ಬರಲಿಲ್ಲ. ನಾನೇ ಕೇಳಿಕೊಂಡು ಹೋಗುವ ಸ್ವಭಾವ ನನಗೆ ಗೊತ್ತಿರಲಿಲ್ಲ, ಅವರಾಗಿ ಅವರು ಯಾರು ಕೂಡ ಬರಲು ಇಲ್ಲ. ಆಗ ನಾನು ತುಂಬ ಡೆಸ್ಪಿರೇಟ್ ಆದೆ. ತಲೆ ತುಂಬ ಕಥೆ ಇದೆ. ಆದರೆ ಯಾರು ನಿರ್ಮಾಪಕರು ಸಿಗಲಿಲ್ಲ. ಮೊದಲು ಪುಟ್ಟಣ್ಣ ಅವರೇ ನೀನು ಕಥೆ ಮಾಡಿಕೊ ನನ್ನ ಬ್ಯಾನರ್ ನಲ್ಲಿ ಸಿನಿಮಾ ಮಾಡುವಂತೆ ಅಂದಿದ್ದರು. ಆದರೆ ಸಿನಿಮಾ ಮಾಡುವ ಹೊತ್ತಗೆ ಅವರು ಇರಲಿಲ್ಲ.''

    ನನ್ನ ಮೊದಲ ಸಿನಿಮಾ : ರೈಟರ್ ಆಗಿದ್ದ ಚೇತನ್ ಡೈರೆಕ್ಟರ್ ಆದ ಸ್ವಾರಸ್ಯಕರ ಸಂಗತಿ ನನ್ನ ಮೊದಲ ಸಿನಿಮಾ : ರೈಟರ್ ಆಗಿದ್ದ ಚೇತನ್ ಡೈರೆಕ್ಟರ್ ಆದ ಸ್ವಾರಸ್ಯಕರ ಸಂಗತಿ

    ನಂದಿ ಬೆಟ್ಟದ ಬಂಡೆ ಮೇಲೆ ಕುಳಿತು ರಮೇಶ್ ಗೆ ಕಥೆ ಹೇಳಿದೆ

    ನಂದಿ ಬೆಟ್ಟದ ಬಂಡೆ ಮೇಲೆ ಕುಳಿತು ರಮೇಶ್ ಗೆ ಕಥೆ ಹೇಳಿದೆ

    ''ಅದೇ ವೇಳೆ ನನ್ನ ಸ್ನೇಹಿತರ 'ಮಧುಮಾಸ' ಸಿನಿಮಾಗೆ ಕೆಲಸ ಮಾಡಿದೆ. ಆ ಸಿನಿಮಾದಲ್ಲಿ ಎಲ್ಲ ವಿಭಾಗವನ್ನು ನಾನೇ ನೋಡಿಕೊಂಡೆ. ಆ ಚಿತ್ರಕ್ಕೆ ರಮೇಶ್ ಹೀರೋ ಆಗಿದ್ದರು. ಸಿನಿಮಾ ಮಾಡುವಾಗ ಒಮ್ಮೆ ನಂದಿ ಬೆಟ್ಟದ ಬಂಡೆ ಮೇಲೆ ಕುಳಿತುಕೊಂಡು ರಮೇಶ್ ಹತ್ತಿರ ಸುಮ್ಮನೆ ಕಥೆ ಹೇಳಿದೆ. ಅವರು ತುಂಬ ಚೆನ್ನಾಗಿದೆ ಅಂದರು. ಇನ್ನೊಂದು ಕಡೆ 'ಮದುಮಾಸ' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ರಾಜ್ ಕುಮಾರ್ ಅವ್ರು ನನ್ನ ಕೆಲಸ ನೋಡಿ ಖುಷಿ ಪಟ್ಟು ನೀವೇ ಒಂದು ಸಿನಿಮಾ ಮಾಡಿ ನಾನು ಬಂಡವಾಳ ಹಾಕುತ್ತೇನೆ ಎಂದರು. ನಾನು 'ಮದುಮಾಸ' ಸಿನಿಮಾ ಮುಗಿದ ಮೇಲೆ ಮಾಡೋಣ ಎಂದು ಹೇಳಿದೆ. ಅವರು ಕಥೆ ಕೂಡ ಕೇಳಲಿಲ್ಲ. ಆಮೇಲೆ ರಮೇಶ್ ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ವಿ. ''ಮಧುಮಾಸ' ಡೈರೆಕ್ಟರ್ ನಾರಾಯಣ ಸ್ವಾಮಿ ಕೂಡ ಸಪೋರ್ಟ್ ಮಾಡಿದ್ರು.''

    ಸುಧಾರಾಣಿಗೆ ಕೇವಲ 14-15 ವರ್ಷ ಇರಬೇಕು

    ಸುಧಾರಾಣಿಗೆ ಕೇವಲ 14-15 ವರ್ಷ ಇರಬೇಕು

    ''ಸಿನಿಮಾಗೆ ಯಾರನ್ನು ಹಾಕೋಣ ಎಂದಾಗ ರಾಮಕೃಷ್ಣ ನೆನಪಿಗೆ ಬಂದರು. ಅವರು ನಾವು ಪುಟ್ಟಣ್ಣ ಅವರ ಜೊತೆಗೆ ಒಟ್ಟಿಗೆ ಕೆಲಸ ಮಾಡಿದ್ವಿ. ಆಮೇಲೆ ಸಿನಿಮಾದಲ್ಲಿ ಇಬ್ಬರು ಹೀರೋಗಳಿಗೆ ಸಮನಾದ ಪಾತ್ರ ಹೀರೋಯಿನ್ ಆಗಿತ್ತು. ನಟಿಯ ಪಾತ್ರಕ್ಕೆ ಯಾರನ್ನು ಹಾಕೋಣ ಅಂತ ಯೋಚಿಸಿದ್ವಿ. ಆಗ ಸುಧಾರಾಣಿಗೆ ಅಷ್ಟೊಂದು ಜನಪ್ರಿಯತೆ ಇರಲಿಲ್ಲ. ನನಗೆ ಹೀರೋಯಿನ್ ಪಾತ್ರಕ್ಕೆ ರೇವತಿ ತಲೆಯಲ್ಲಿ ಇದ್ದರು. ಅವರ ಜೊತೆಗೆ ಮಾತಾಡಿ ಒನ್ ಲೈನ್ ಕಥೆ ಹೇಳಿದೆ. ಅವರಿಗೆ ಇಷ್ಟ ಆಯ್ತು. ಆದರೆ ಆಗ ಅವರು ತುಂಬ ಫೀಕ್ ನಲ್ಲಿ ಇದ್ದರು. ಆಗ ಆಕೆ ಒಂದು ಮಾತು ಹೇಳಿದರು ''ಖಂಡಿತ ಈ ಸಿನಿಮಾ ಬಿಡುವುದಕ್ಕೆ ಮನಸಿಲ್ಲ. ಆದರೆ ತಮಿಳು, ತೆಲುಗು, ಮಲೆಯಾಳ ಸಿನಿಮಾಗಳ ನಡುವ ನನಗೆ ಡೇಟ್ ಸರಿದೂಗಿಸಲು ಆಗುತ್ತಿಲ್ಲ. ನೀವು ಹೊಸ ನಿರ್ದೇಶಕರು ಅದಷ್ಟು ಬೇಗ ಸಿನಿಮಾ ಮಾಡಿ'' ಎಂದರು. ಆಮೇಲೆ ಸುಧಾರಾಣಿ ಅವರನ್ನು ಈ ಪಾತ್ರಕ್ಕೆ ಹೇಗೆ ಆಯ್ಕೆ ಮಾಡುವುದು ಎಂಬ ಚಿಂತೆ ಇತ್ತು. ಆ ಹುಡುಗಿಗೆ ಆಗ ಕೇವಲ 14-15 ವರ್ಷ ಇರಬೇಕು. ನಂತರ ಆಕೆಗೆ ಕಥೆ ಹೇಳಿದೆ ಇಷ್ಟ ಆಯ್ತು. ಇಷ್ಟೆಲ್ಲ ಆದರೂ ಹೀರೋಯಿನ್ ಆಯ್ಕೆಯನ್ನು ನಾನು ಸರಿಯಾಗಿ ಮಾಡಿಲ್ಲ ಎಂಬುದು ನನ್ನ ಮನಸಲ್ಲಿ ಇತ್ತು.''

    ನನ್ನ ಮೊದಲ ಸಿನಿಮಾ : 35 ಸಾವಿರದಲ್ಲಿ ಸಿನಿಮಾ ಮಾಡಿ ತೋರಿಸಿದ್ದ ಗಿರಿರಾಜ್ ನನ್ನ ಮೊದಲ ಸಿನಿಮಾ : 35 ಸಾವಿರದಲ್ಲಿ ಸಿನಿಮಾ ಮಾಡಿ ತೋರಿಸಿದ್ದ ಗಿರಿರಾಜ್

    ಸುಧಾರಾಣಿ ನಟನೆಗೆ ರಾಜ್ಯ ಪ್ರಶಸ್ತಿ ಬಂತು

    ಸುಧಾರಾಣಿ ನಟನೆಗೆ ರಾಜ್ಯ ಪ್ರಶಸ್ತಿ ಬಂತು

    ''ಶೂಟಿಂಗ್ ಶುರು ಆದಾಗಲೂ ಆ ಪಾತ್ರ ಸುಧಾರಾಣಿ ಮಾಡುತ್ತಾಳೋ ಇಲ್ವೋ ಎನ್ನುವ ಗೊಂದಲ ನನಗೆ ಇತ್ತು. ಮೊದಲೆರಡು ದಿನ ಕಾಮಿಡಿ ದೃಶ್ಯಗಳನ್ನು ಶೂಟ್ ಮಾಡಿದೆ ಮೂರನೇ ದಿನ ಒಂದು ಗಂಬೀರ ದೃಶ್ಯ ಚಿತ್ರೀಕರಣ ಮಾಡುವಾಗ ಆ ಹುಡುಗಿ (ಸುಧಾರಾಣಿ) ತುಂಬ ಚೆನ್ನಾಗಿ ನಟನೆ ಮಾಡಿದಳು. ನನಗೆ ತುಂಬ ಖುಷಿ ಆಯ್ತು. ಅವತ್ತೇ ಆಕೆಗೆ ಹೇಳಿದೆ. ನೀನು 100% ಮನಸು ಕೊಟ್ಟು ಸಿನಿಮಾ ಮಾಡಿದರೆ ನಿನಗೆ ಪ್ರಶಸ್ತಿ ಬರುತ್ತೇ ಅಂತ ಹೇಳಿದೆ. ಅದೇ ರೀತಿ ಸುಧಾರಾಣಿಗೆ ಈ ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿ ಬಂತು. ಇನ್ನೂ ಉಳಿದ ಪಾತ್ರಕ್ಕೆ ನಾಟಕದಲ್ಲಿ ಇದ್ದ ಹೊಸಬರನ್ನು ಹಾಕಿಕೊಂಡೆ.''

    ಚಿತ್ರ ಚೆನ್ನಾಗಿ ಬರುವವರೆಗೆ ಪುಟ್ಟಣ್ಣ ಅಸಿಸ್ಟೆಂಟ್ ಅಂತ ಹೇಳಿಕೊಳ್ಳಲಿಲ್ಲ

    ಚಿತ್ರ ಚೆನ್ನಾಗಿ ಬರುವವರೆಗೆ ಪುಟ್ಟಣ್ಣ ಅಸಿಸ್ಟೆಂಟ್ ಅಂತ ಹೇಳಿಕೊಳ್ಳಲಿಲ್ಲ

    ''ಈ ಸಿನಿಮಾ ಮಾಡುವಾಗ ಪುಟ್ಟಣ್ಣ ಅವರು ಹೊರಟು ಹೋಗಿದ್ದರು. ಅವರು ಇದ್ದಿದ್ದರೆ ಈ ಚಿತ್ರಕ್ಕೆ ಅವರ ಕೈ ನಲ್ಲಿಯೇ ಕ್ಲಾಪ್ ಮತ್ತು ಎಡಿಟಿಂಗ್ ಮಾಡಿಸುತ್ತಿದ್ದೇ. ಕುಂದಾಪುರದಲ್ಲಿ ಚಿತ್ರದ ಮುಹೂರ್ತ ಮಾಡಿದೆ. ಸಂಜೆ ಸಣ್ಣ ಪೂಜೆ ಮಾಡಿದ್ವಿ ಅಷ್ಟೆ. ಮುಹೂರ್ತದ ದಿನ ಮಾಜಿ ಸಚಿವರಾದ ಜಯಪ್ರಕಾಶ್ ಹೆಗಡೆ ಅವರ ತಂದೆ ಚಂದ್ರಶೇಖರ ಹೆಗಡೆ ಅವರು ಕ್ಲಾಪ್ ಮಾಡಿದರು. ಸಿನಿಮಾ ಚೆನ್ನಾಗಿ ಬರುವವರೆಗೆ ನಾನು ಪುಟ್ಟಣ್ಣ ಅವರ ಅಸಿಸ್ಟೆಂಟ್ ಅಂತ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಸಿನಿಮಾ ಫಸ್ಟ್ ಕಾಪಿ ಬಂದ ಮೇಲೆ ಸಿನಿಮಾ ನೋಡಿ ಓಪನ್ ಆಗಿ ನಾನು ಪುಟ್ಟಣ್ಣ ಅವರ ಅಸಿಸ್ಟೆಂಟ್ ಅಂತ ಹೇಳಿಕೊಂಡೆ.''

    ನನ್ನ ಮೊದಲ ಸಿನಿಮಾ : ಸುಮ್ಮನೆ ಮಲಗಿದ್ದ ನಂದ ಕಿಶೋರ್ ಬಳಿಗೆ ಬಂದಿತ್ತು 'ವಿಕ್ಟರಿ' ಆಫರ್ ನನ್ನ ಮೊದಲ ಸಿನಿಮಾ : ಸುಮ್ಮನೆ ಮಲಗಿದ್ದ ನಂದ ಕಿಶೋರ್ ಬಳಿಗೆ ಬಂದಿತ್ತು 'ವಿಕ್ಟರಿ' ಆಫರ್

    ಮೊದಲ ಶಾಟ್ ತೆಗೆದಾಗ

    ಮೊದಲ ಶಾಟ್ ತೆಗೆದಾಗ

    ''ಮೊದಲ ಶಾಟ್ ಇಂದಿಗೂ ಚೆನ್ನಾಗಿ ನೆನಪಿದೆ. ಚಿತ್ರದಲ್ಲಿ ಅಜ್ಜಿ ಮೊಮ್ಮಗಳು ತುಳಿಸಿ ಕಟ್ಟೆಯನ್ನು ಸುತ್ತುವ ದೃಶ್ಯ ಇದೆ. ಆ ಶಾಟ್ ನಿಂದ ಈ ಸಿನಿಮಾ ಶುರು ಆಯ್ತು. ಅಲ್ಲಿ ಸಿಕ್ಕಾಪಟ್ಟೆ ಬಿಸಿಲು, ಶಕೆ ಇತ್ತು. ಫಸ್ಟ್ ಶಾಟ್ ತೆಗೆಯುತ್ತಿದ್ದೇನೆ ಎನ್ನುವ ಉತ್ಸಾಹಕ್ಕೆ ಇಡೀ ಮೈ ವದ್ದೆ ಆಗಿತ್ತು. ಸಂತೋಷಕ್ಕೆ ಕಣ್ಣು ಮುಚ್ಚಿಕೊಳ್ಳುವಷ್ಟು ನೀರು ಬರುತ್ತಿತ್ತು. ಆ ದಿನ ಬೆಳ್ಳಗೆ 9 ಗಂಟೆಗೆ ಶೂಟಿಂಗ್ ಮಾಡಿದ್ದ ವಿಶ್ಯೂವಲ್ ಇನ್ನು ನೆನೆಪು ಇದೆ. ನನ್ನ ಸಿನಿಮಾದ ಫಸ್ಟ್ ಶಾಟ್ ತೆಗೆಯುತ್ತಿದ್ದೇನೆ ಎನ್ನುವುದು ಒಂದು ಧನ್ಯತಾಭಾವ.''

    23 ಪ್ರಶಸ್ತಿ ಬಂತು

    23 ಪ್ರಶಸ್ತಿ ಬಂತು

    ''ರಿಲೀಸ್ ಆದ ದಿನ ಕಲೆಕ್ಷನ್ ತುಂಬ ದೊಡ್ಡ ಮಟ್ಟದಲ್ಲಿ ಏನ್ ಇರಲಿಲ್ಲ. ಆದರೆ ಆಮೇಲೆ ಚೆನ್ನಾಗಿ ಪಿಕ್ ಅಪ್ ಆಯ್ತು. ರಿಲೀಸ್ ಆದ ಮೇಲೆ ಮೈಸೂರು, ಮಂಡ್ಯಗೆ ಹೋಧ್ವಿ. ಎಲ್ಲ ಕಡೆ ದೊಡ್ಡ ರೆಸ್ಪಾನ್ಸ್ ಸಿಕ್ಕಿತು. ಚಿತ್ರಮಂದಿರದಿಂದ ಹೊರ ಬರುವ ಪ್ರೇಕ್ಷಕರು ಅಳುತ್ತ ಬರುತ್ತಿದ್ದರು. ಭಾನುವಾರ ರಿವ್ಯೂಗಳು ಕೂಡ ಪಾಸಿಟಿವ್ ಆಗಿ ಬಂತು. ಸಣ್ಣ ಪುಟ್ಟ ಪತ್ರಿಕೆಯಿಂದ ಹಿಡಿದು, ಇಂಗ್ಲೀಷ್ ಪತ್ರಿಕೆಗಳಲ್ಲಿಯೂ ಒಳ್ಳೆಯ ವಿಮರ್ಶೆ ಬಂತು. ಜೊತೆಗೆ ಸುಧಾರಾಣಿ ಅವರಿಗೆ ರಾಜ್ಯ ಪ್ರಶಸ್ತಿ, ಸುರೇಶ್ ಅರಸ್ ಅವರಿಗೆ ಪ್ರಶಸ್ತಿ, ಬೆಸ್ಟ್ ಡೈಲಾಗ್ ಅವಾರ್ಡ್, ಬರ್ಲಿ ಅವಾರ್ಡ್ ಸೇರಿದಂತೆ 23 ಪ್ರಶಸ್ತಿ ಈ ಸಿನಿಮಾಗೆ ಬಂತು.''

    ಮೊದಲ ಸಿನಿಮಾ ಬೆಂಚ್ ಮಾರ್ಕ್

    ಮೊದಲ ಸಿನಿಮಾ ಬೆಂಚ್ ಮಾರ್ಕ್

    ''ಒಬ್ಬ ಡೈರೆಕ್ಟರ್ ಗೆ ಮೊದಲ ಸಿನಿಮಾ ಬಹಳ ಎನ್ನುವುದು ಬಹಳ ಮುಖ್ಯವಾದದ್ದು. ಮೊದಲ ಸಿನಿಮಾವನ್ನು ಯಾಕೆ ಒಬ್ಬ ಡೈರೆಕ್ಟರ್ ಸೀರಿಯಸ್ ಆಗಿ ತೆಗೆದುಕೊಳ್ಳಬೇಕು ಅಂದರೆ ಅದು ಒಂದು ಬೆಂಚ್ ಮಾರ್ಕ್ ಆಗಿರುತ್ತದೆ. ಮುಂದೆ ಮಾಡುವ ಸಿನಿಮಾಗಳ ಸ್ಟಾಂಡರ್ಡ್ ಅನ್ನು ಅದು ನಿರ್ಧಾರ ಮಾಡುತ್ತದೆ. ಆ ದೃಷ್ಟಿಯಿಂದ ನಿರ್ದೇಶಕನಿಗೆ ಮೊದಲ ಸಿನಿಮಾ ಬಹಳ ಮುಖ್ಯ.''

    English summary
    Nanna Modala Cinema Series: Kannada director P H Vishwanath spoke about his first movie 'Panchama veda' in an exclusive interview with FilmiBeat Kannada.
    Sunday, April 1, 2018, 13:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X