For Quick Alerts
  ALLOW NOTIFICATIONS  
  For Daily Alerts

  ಹತ್ತು ವರ್ಷದಲ್ಲಿ ಮಾಡಿದ ಮೂವತ್ತು ಸಿನಿಮಾಗಳಿಂದ ಬದಲಾದ ಪ್ರಜ್ವಲ್

  By Pavithra
  |

  ಪ್ರಜ್ವಲ್ ದೇವರಾಜ್... ಚಿಕ್ಕ ವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ ಅಭಿನಯದಲ್ಲಿ, ನೃತ್ಯದಲ್ಲಿ ಸೈ ಎನ್ನಿಸಿಕೊಂಡ ನಟ. ಅಭಿನಯಿಸಿದ ಮೊದಲ ಚಿತ್ರದಲ್ಲೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡ ಡೈನಾಮಿಕ್ ಪ್ರಿನ್ಸ್ ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರ್ಷಗಳು ಕಳೆದು ಹೋಗಿವೆ.

  ಮೂವತ್ತು ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರಜ್ವಲ್ ಚಿಕ್ಕ ವಯಸ್ಸಿನಲ್ಲೇ ಸಿನಿಮಾರಂಗದಲ್ಲಿ ಏಳು ಬೀಳುಗಳನ್ನು ಕಂಡಿದ್ದಾರೆ. ಸ್ಟಾರ್ ನಟಿಯರಿಂದ ಹಿಡಿದು ಹೊಸ ಕಲಾವಿದರ ಜೊತೆಯಲ್ಲಿಯೂ ಅಭಿನಯ ಮಾಡಿರುವ ಪ್ರಜ್ವಲ್ ದೇವರಾಜ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ.

  ಪ್ರಜ್ವಲ್ ಹುಟ್ಟುಹಬ್ಬಕ್ಕೆ ಬಂತು 'ಇನ್ಸ್ ಪೆಕ್ಟರ್ ವಿಕ್ರಂ' ಟೀಸರ್ ಪ್ರಜ್ವಲ್ ಹುಟ್ಟುಹಬ್ಬಕ್ಕೆ ಬಂತು 'ಇನ್ಸ್ ಪೆಕ್ಟರ್ ವಿಕ್ರಂ' ಟೀಸರ್

  ಈ ಹುಟ್ಟುಹಬ್ಬ ಸಾಕಷ್ಟು ವಿಶೇಷವಾದ ಹುಟ್ಟುಹಬ್ಬ. ಹೊಸ ಚಿತ್ರದ ಪೂಜೆ, ಮತ್ತೊಂದು ಸಿನಿಮಾ ಅನೌನ್ಸ್ ಹಾಗೂ ಬರ್ತಡೇಗಾಗಿ ಟೀಸರ್ ಗಿಫ್ಟ್ . ಈ ಎಲ್ಲಾ ಸ್ಪೆಷಲ್ ಗಳ ಮಧ್ಯೆ ಪ್ರಜ್ವಲ್ ಫಿಲ್ಮೀ ಬೀಟ್ ಜೊತೆ ಮಾತನಾಡಿದ್ದಾರೆ. ಹಾಗಾದರೆ ಪ್ರಜ್ವಲ್ ಏನೆಲ್ಲಾ ಹೊಸ ವಿಚಾರ ಹೇಳಿದ್ದಾರೆ ಮುಂದೆ ಓದಿ

  ಈ ಬರ್ತಡೇ ಎಷ್ಟು ಸ್ಪೆಷಲ್ ?

  ಈ ಬರ್ತಡೇ ಎಷ್ಟು ಸ್ಪೆಷಲ್ ?

  ತುಂಬಾ ಸಂತೋಷ ಇದೆ.. ಡಬಲ್ ಖುಷಿ 'ಇನ್ಸ್ ಪೆಕ್ಟರ್ ವಿಕ್ರಂ' ಟೀಸರ್ ಬಿಡುಗಡೆ ಆಗಿದೆ. ಮಿಡಿಯಾದವರು ಎಲ್ಲರೂ ಮೆಚ್ಚಿಕೊಂಡಿದ್ದೀರಾ. ಚೆನ್ನಾಗಿದೆ ಎನ್ನುವ ಪ್ರತಿಕ್ರಿಯೆ ಸಿಕ್ಕಿರೋದು ಖುಷಿ ಇದೆ. ಅದರ ಜೊತೆಯಲ್ಲಿ 'ಜಂಟಲ್ ಮ್ಯಾನ್' ಸಿನಿಮಾ ಸೆಟ್ಟೇರುತ್ತಿದೆ. ಗುರುದೇಶ್ ಪಾಂಡೆ ತುಂಬಾ ವರ್ಷದಿಂದ ಪರಿಚಯ ಅವರ ನಿರ್ಮಾಣದಲ್ಲಿ ಚಿತ್ರ ಸೆಟ್ಟೇರಿದೆ ಖುಷಿ ಆಗ್ತಿದೆ.

  ಹತ್ತು ವರ್ಷದ ಜರ್ನಿ ಹೇಗಿತ್ತು

  ಹತ್ತು ವರ್ಷದ ಜರ್ನಿ ಹೇಗಿತ್ತು

  ವಂಡರ್ ಫುಲ್ ಜರ್ನಿ.. ವಯಸ್ಸು ಹೆಚ್ಚಾಗಿಲ್ಲ ಆದರೆ ಮೂವತ್ತು ಸಿನಿಮಾ ಆಗೋಯ್ತು. 18 ವರ್ಷಕ್ಕೆ ಹೀರೋ ಆದವನು ನಾನು. ಅನುಭವ ತುಂಬಾ ಹೆಚ್ಚಾಗಿದೆ ಆದರೆ ಕೆಲಸ ಮಾಡೋದಕ್ಕೆ ಇನ್ನು ವಯಸ್ಸಿದೆ ಎನ್ನುವುದೇ ಖುಷಿ.

  ಸ್ಮಾರ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದೀರಾ, ಗುಟ್ಟೇನು?

  ಸ್ಮಾರ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದೀರಾ, ಗುಟ್ಟೇನು?

  ಅದರ ಸೀಕ್ರೆಟ್ ಗೊತ್ತಿಲ್ಲ... ಆದರೆ ಮನೆಯಿಂದ ಸರಿಯಾಗಿ ರೆಡಿ ಆಗಿ ಹೋಗಿಲ್ಲ ಅಂದ್ರೆ ಹೆಂಡತಿ ಬೈತಾರೆ..ಒಂದು ವಯಸ್ಸು ಎಲ್ಲರೂ ಚೆನ್ನಾಗಿ ಕಾಣಿಸಿಕೊಳ್ತಾರೆ ಅದೇ ರೀತಿ ನಾನು ಪಾಸಿಟಿವ್ ಆಗಿ ಚೆನ್ನಾಗಿ ಆಗಿದ್ದೇನೆ ಎನ್ನಿಸುತ್ತಿದೆ.

  ರಾಗಿಣಿ ನೀವು ಇಬ್ಬರು ಒಟ್ಟಿಗೆ ವರ್ಕ್ ಔಟ್ ಮಾಡ್ತಿರಾ?

  ರಾಗಿಣಿ ನೀವು ಇಬ್ಬರು ಒಟ್ಟಿಗೆ ವರ್ಕ್ ಔಟ್ ಮಾಡ್ತಿರಾ?

  ನಮ್ಮ ವರ್ಕ್ ಔಟ್ ತುಂಬಾ ಹೆವಿ ಆಗಿ ಬಾಡಿ ಬಿಲ್ಡ್ ಮಾಡೋದಕ್ಕೆ ಅಲ್ಲ. ಯಾವುದಾದರೂ ಸಿನಿಮಾಗೆ ಬೇಕು ಅಂದ್ರೆ ಮಾತ್ರ ಮಾಡುತ್ತೇನೆ. ಪ್ರತಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ವರ್ಕ್ ಔಟ್ ಹಾಗೂ ಆಹಾರ ಪದ್ದತಿಯನ್ನು ನಾನು ಮತ್ತು ರಾಗಿಣಿ ಪ್ರಚಾರ ಮಾಡುವುದಕ್ಕೆ ಪಯತ್ನ ಪಡುತ್ತಿದ್ದೇವೆ. ಸಾಕಷ್ಟು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರಿಗೆ ಉಪಯುಕ್ತವಾಗುವ ಕೆಲಸಕ್ಕೆ ಮುಂದಾಗಿದ್ದೇವೆ.

  ಪತ್ನಿ ಜೊತೆ ಸ್ಕ್ರೀನ್ ಸೇರ್ ಮಾಡುವುದು ಯಾವಾಗ?

  ಪತ್ನಿ ಜೊತೆ ಸ್ಕ್ರೀನ್ ಸೇರ್ ಮಾಡುವುದು ಯಾವಾಗ?

  ಖಂಡಿತವಾಗಿಯೂ. ಈ ಬಗ್ಗೆ ನಾವು ಕೂಡ ಯೋಚನೆ ಮಾಡಿದ್ದೇವೆ. ನಮಗೂ ಇಷ್ಟ ಇದೆ. ಆದರೆ ಅದಕ್ಕೆ ತಕ್ಕಂತ ಒಂದು ಕಥೆ ಸಿಗ್ತಿಲ್ಲ. ಈಗಾಗಲೇ ಸಾಕಷ್ಟು ಕಥೆ ಕೇಳಿದ್ದೇವೆ. ಸೂಕ್ತ ಅನ್ನಿಸಿದನ್ನ ಓಕೆ ಅಭಿನಯಿಸುತ್ತೇವೆ.

  'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಬಗ್ಗೆ ಹೇಳಿ ?

  'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಬಗ್ಗೆ ಹೇಳಿ ?

  'ಇನ್ಸ್ ಪೆಕ್ಟರ್ ವಿಕ್ರಂ'..ಒಂದು ಹೊಸ ರೀತಿಯ ಪೋಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ತಾನೆ. ಒಬ್ಬ ಕಾಲೇಜ್ ಹುಡುಗನ್ನ ಪೋಲೀಸ್ ಆಫೀಸರ್ ಡ್ರಸ್ ಹಾಕಿ ಕೂರಿಸಿದ್ರೆ ಹೇಗಿರ್ತಾನೆ ಅದೇ ರೀತಿ ಇವನು. ಆದರೆ ಅವನ ಕೆಲಸವನ್ನ ಮಾತ್ರ ಶ್ರದ್ಧೆಯಿಂದ ಮಾಡುತ್ತಾನೆ. 'ಇನ್ಸ್ ಪೆಕ್ಟರ್ ವಿಕ್ರಂ' ತುಂಬಾ ಮಜವಾಗಿರ್ತಾನೆ.

  ಹತ್ತು ವರ್ಷದ ನಂತರ ಪ್ರಜ್ವಲ್ ಬದಲಾಗಿದ್ದಾರೆ ?

  ಹತ್ತು ವರ್ಷದ ನಂತರ ಪ್ರಜ್ವಲ್ ಬದಲಾಗಿದ್ದಾರೆ ?

  ಹೌದು. ಅದು ಒಂದು ಕೂಡ ವಯಸ್ಸು ಅನ್ಸುತ್ತೆ. ಇಷ್ಟು ದಿನ ಅಪ್ಪ ಸಲಹೆ ಕೊಡ್ತಿದ್ರು. ನಂತರ ನಾನು ಸಿನಿಮಾ ಕಥೆ ಕೇಳುತ್ತಿದ್ದೆ. ಅಪ್ಪನ ಸಲಹೆ ಕೂಡ ಇತ್ತು ಆದರೆ ಅಲ್ಲಿ ಸ್ಪಲ್ಪ ದುಡುಕಿದೆ ಅನ್ಸುತ್ತೆ. ತುಂಬಾ ಸಲಿಸಾಗಿ ಚಿತ್ರಗಳನ್ನ ಒಪ್ಪಿಕೊಂಡೆ. ಯಾರಿಗೊ ಸಹಾಯ ಮಾಡಲು ಸಿನಿಮಾ ಮಾಡೋದು ಇವೆಲ್ಲವೂ ಶುರು ಆಯ್ತು. ನಂತರ ಈಗ ನನ್ನ ಅಭಿಮಾನಿಗಳಿಗಾಗಿ. ನನಗಾಗಿ ಚಿತ್ರ ಮಾಡಲು ಆರಂಭಿಸಿದ ನಂತರ ವಿಭಿನ್ನ ಕಥೆಯಗಳು, ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ.

  English summary
  Kannada actor Prajwal Devaraj today celebrates his birthday. Prajwal talked with Filmi Beat about birthday and future films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X