Just In
Don't Miss!
- Lifestyle
ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು
- Automobiles
ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ
- News
ಡೊನಾಲ್ಡ್ ಟ್ರಂಪ್ರನ್ನು ಮತ್ತೆ ಕೆಣಕಿದ ಗ್ರೆಟಾ ಥನ್ಬರ್ಗ್
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- Finance
ದಿನದ ಗರಿಷ್ಠ ಮಟ್ಟದಿಂದ 500ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಠ ಬಿಡದೆ ಹೀರೋ ಆದ ಕುಂದಾಪುರ ಹುಡುಗ ರಾಹುಲ್
ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಅದೇ ರೀತಿಯ ಆಸೆ, ಕನಸು ಹೊಂದಿದ್ದ ಕುಂದಾಪುರದ ಹುಡುಗ ಇಂದು ಅದನ್ನು ನನಸು ಮಾಡಿದ ಖುಷಿಯಲ್ಲಿ ಇದ್ದಾರೆ ಅವರೇ ರಾಹುಲ್ ಹೆಗ್ಡೆ.
'ಸಮಯದ ಹಿಂದೆ ಸವಾರಿ' ಸಿನಿಮಾದ ಮೂಲಕ ರಾಹುಲ್ ಹೀರೋ ಆಗುತ್ತಿದ್ದಾರೆ. ಈ ಸಿನಿಮಾವನ್ನು ಜೋಗಿ ರವರ 'ನದಿಯ ನೆನಪಿನ ಹಂಗು' ಕಾದಂಬರಿಯನ್ನು ಆಧಾರವಾಗಿ ಇಟ್ಟುಕೊಂಡು ಮಾಡಲಾಗಿದೆ.
ಕಾಲೇಜಿನಲ್ಲಿ ಆದ ಸಣ್ಣ ಘಟನೆ ರಾಹುಲ್ ಗೆ ನಟನೆ ಕಡೆ ಮುಖ ಮಾಡುವಂತೆ ಸ್ಫೂರ್ತಿ ನೀಡಿತ್ತು. ಅದೇ ರೀತಿ ಸಿನಿಮಾ ರಂಗಕ್ಕೆ ಬಂದ ಇವರಿಗೆ ಅನೇಕ ಕಷ್ಟಗಳು ಎದುರಾಯಿತು. ಎಷ್ಟೋ ಜನ ನಿರ್ದೇಶಕರ ಭೇಟಿ ಮಾಡಿದರೂ ಯಾವುದೇ ಪ್ರಯೋಜನೆ ಆಗಲಿಲ್ಲ. ಕೊನೆಗೆ ಒಂದು ಸಿನಿಮಾ ಮುಹೂರ್ತ ಆಯ್ತು, ಆದರೆ, ಅದು ಮುಂದೆ ಹೋಗಲೇ ಇಲ್ಲ.
ಜೋಗಿ ಕಾದಂಬರಿ ಆಧಾರಿತ 'ಸಮಯದ ಹಿಂದೆ ಸವಾರಿ' ಚಿತ್ರ ಜೂನ್ 28ಕ್ಕೆ ಬಿಡುಗಡೆ
ಏನೇ ಅಡೆ ತಡೆ ಆದರು ಈಗ ರಾಹುಲ್ ಹೀರೋ ಆಗಿದ್ದಾರೆ. ಅವರ ಮೊದಲ ಸಿನಿಮಾ 'ಸಮಯದ ಹಿಂದೆ ಸವಾರಿ' ಇದೇ ತಿಂಗಳ 28 ರಂದು ಬಿಡುಗಡೆಯಾಗುತ್ತಿದೆ. ಈ ವಿಶೇಷವಾಗಿ ಅವರ ಪುಟ್ಟ ಪರಿಚಯ ಇಲ್ಲದೆ...

ಕಾಲೇಜಿನಲ್ಲಿ ನಡೆದ ಘಟನೆ ಸ್ಫೂರ್ತಿ
ರಾಹುಲ್ ಮೂಲತಃ ಕುಂದಾಪುರದ ಹುಡುಗ. ಚಿಕ್ಕ ವಯಸ್ಸಿನಿಂದ ಇವರಿಗೆ ಸಿನಿಮಾದ ಬಗ್ಗೆ ಆಸೆ ಏನು ಇರಲಿಲ್ಲವಂತೆ. ಆದರೆ, ಇಂಜಿನಿಯರಿಂಗ್ ಓದುವಾಗ ಕಾಲೇಜಿನಲ್ಲಿ ಒಂದು ಸಿನಿಮಾದ ಶೂಟಿಂಗ್ ನಡೆಯುತಿತಂತೆ. ಆಗ ಒಬ್ಬ ಸಹ ನಟ ಸರಿಯಾಗಿ ನಟನೆ ಮಾಡುತ್ತಿರಲಿಲ್ಲ ಎಂದು ಯಾರಾದರೂ ಬನ್ನಿ ಕಾಲೇಜ್ ಹುಡುಗರನ್ನು ಕರೆದರು. ಕೂಡಲೇ ರಾಹುಲ್ ಹೋಗಿ ಆ ಪಾತ್ರ ಮಾಡಿದರು. ಎಲ್ಲರ ಚಪ್ಪಾಳೆ ಸದ್ದು ಅವರಿಗೆ ಸ್ಫೂರ್ತಿ ನೀಡಿತು.

ನಿಮ್ಮ ಸಿನಿಮಾ ಏನ್ ಆಯ್ತು..?
ಬಳಿಕ ಬೆಂಗಳೂರಿನಲ್ಲಿ ಸಿನಿಮಾ ಪ್ರಯತ್ನ ಶುರು ಮಾಡಿದರು. ಬಳಿಕ ಮನೆಯವರ ಒತ್ತಾಯಕ್ಕೆ ಕುವೈಟ್ ಗೆ ಹೋಗಿ ಕೆಲಸ ಮಾಡುತ್ತಿದ್ದರು. ಆದರೆ, ಸಿನಿಮಾ ಕನಸು ಮಾತ್ರ ಅವರನ್ನು ಬಿಡಲಲ್ಲ. ಕೊನೆಗೂ ಅವರ ಒಂದು ಸಿನಿಮಾದ ಮುಹೂರ್ತ ಆಯ್ತು. ಆದರೆ, ಆ ಚಿತ್ರ ಮುಂದುವರೆಯಲೇ ಇಲ್ಲ. ಊರಿನಲ್ಲಿ ಎಲ್ಲರೂ ನಿಮ್ಮ ಸಿನಿಮಾ ಏನ್ ಆಯ್ತು..? ಎಂದು ಕೇಳಲು ಶುರು ಮಾಡಿದರು.

ರಾಜ್ ಗುರು ರನ್ನು ಭೇಟಿ ಮಾಡಿದರು
ಏನೇ ಅವಮಾನ ಆದರೂ ಸಿನಿಮಾ ಮಾಡಲೇ ಬೇಕು ಎನ್ನುವ ಹಠವನ್ನು ಮಾತ್ರ ರಾಹುಲ್ ಬಿಡಲಿಲ್ಲ. ಒಬ್ಬ ಸ್ನೇಹಿತರ ಮೂಲಕ ರಾಜ್ ಗುರು ಹೊಸಕೋಟೆಯವರನ್ನು ಭೇಟಿ ಮಾಡಿದರು. ಅವರ ನಾಟಕವನ್ನೇ ಸಿನಿಮಾ ಮಾಡುವ ನಿರ್ಧಾರ ಮಾಡಿದರು. ಹೀಗೆ 'ಸಮಯದ ಹಿಂದೆ ಸವಾರಿ' ಸಿನಿಮಾ ಶುರು ಆಯ್ತು.

ನಟನೆ ಜೊತೆಗೆ ನಿರ್ಮಾಣ
ರಘುನಂದನ್ ಎಂಬ ಮುಖ್ಯ ಪಾತ್ರದಲ್ಲಿ ರಾಹುಲ್ ನಟಿಸುತ್ತಿದ್ದಾರೆ. ನಟನೆಯನ್ನು ಕಲಿತು, ಸಿನಿಮಾದ ಚಿತ್ರೀಕರಣಕ್ಕೂ ಮೊದಲು ತಯಾರಿ ಮಾಡಿಕೊಂಡಿದರಂತೆ. ಇಡೀ ಸಿನಿಮಾ ಕುಂದಾಪುರದಲ್ಲಿ ಶೂಟಿಂಗ್ ಮಾಡಿದ್ದು, ಚಿತ್ರ ಮರ್ಡರ್ ಮಿಸ್ಟರಿ ಕಥೆಯನ್ನು ಸಿನಿಮಾ ಹೊಂದಿದೆಯಂತೆ. ರಾಹುಲ್ ಹೆಗ್ಡೆ ಚಿತ್ರದ ನಿರ್ಮಾಣ ಮಾಡಿದ್ದು, ರಂಜಿತ್, ಪ್ರವೀಣ್ ಹೆಗ್ಡೆ ಸಹ ನಿರ್ಮಾಪಕರಾಗಿದ್ದಾರೆ.

ಜೂನ್ 28 ಕ್ಕೆ ಬಿಡುಗಡೆ
ರಂಗಭೂಮಿಯ ಪ್ರತಿಭಾವಂತ ನಟ, ಸಂಗೀತಗಾರ ಹಾಗೂ ನಿರ್ದೇಶಕ ರಾಜ್ ಗುರು ಹೊಸಕೋಟೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಗೀತ, ಸಂಭಾಷಣೆಯ ಜವಾಬ್ದಾರಿಯನ್ನು ಕೂಡ ಅವರೇ ನಿರ್ವಹಿಸಿದ್ದಾರೆ. ಇದೆಲ್ಲದರ ನಡುವೆ ಒಂದು ಪಾತ್ರವನ್ನು ಮಾಡಿದ್ದಾರೆ. ರಾಹುಲ್ ಹೆಗ್ಡೆ, ಪ್ರಕೃತಿ, ಕಿರಣ್ ವಟಿ, ರಂಜಿತ್ ಶೆಟ್ಟಿ, ಶಿವ ಶಂಕರ್, ಪ್ರವಿನ್ ಹೆಗ್ಡೆ ಚಿತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ, ಸಿನಿಮಾ ಜೂನ್ 28ಕ್ಕೆ ಬಿಡುಗಡೆಯಾಗಲಿದೆ.