»   » ಸಂದರ್ಶನ: ಬಿಗ್ ಬಾಸ್ ನಿಂದ ಔಟಾದ ವಾಣಿಶ್ರೀ ಬಿಚ್ಚಿಟ್ಟ ಸೀಕ್ರೆಟ್ ಗಳು

ಸಂದರ್ಶನ: ಬಿಗ್ ಬಾಸ್ ನಿಂದ ಔಟಾದ ವಾಣಿಶ್ರೀ ಬಿಚ್ಚಿಟ್ಟ ಸೀಕ್ರೆಟ್ ಗಳು

Posted By: ಸುನೀತಾ ಗೌಡ
Subscribe to Filmibeat Kannada

ಹಲವು ಧಾರಾವಾಹಿ ಮತ್ತು ಕೆಲವು ಸಿನಿಮಾಗಳಲ್ಲಿ, ವಿಲನ್ ಪಾತ್ರಗಳು ಮತ್ತು ಕೆಲವಾರು ಒಳ್ಳೆಯ ಪಾತ್ರಗಳನ್ನು ಪೋಷಣೆ ಮಾಡುತ್ತಿದ್ದ, ಕಿರುತೆರೆ ನಟಿ ವಾಣಿಶ್ರೀ ಅವರು ಈ ಬಾರಿಯ ಜನಪ್ರಿಯ ಕನ್ನಡ ರಿಯಾಲಿಟಿ ಶೋ 'ಬಿಗ್ ಬಾಸ್ 4'ಕ್ಕೆ ಎಂಟ್ರಿ ಕೊಟ್ಟಿದ್ದರು.

ಆದ್ರೆ ಸರಿಯಾಗಿ ಎಲ್ಲರ ಬಳಿ ಬೆರೆಯದೇ ಇದ್ದ ವಾಣಿಶ್ರೀ ಅವರು ವೀಕ್ಷಕರಿಂದ ಅತ್ಯಂತ ಹೆಚ್ಚು ಓಟು ಗಳಿಸಿ, ಮನೆಯಿಂದ ಹೊರ ಬಿದ್ದಿದ್ದಾರೆ.

ತಾವು ಮನೆಯಲ್ಲಿ ಜಾಸ್ತಿ ತಮ್ಮನ್ನು ತೊಡಗಿಸಿಕೊಂಡು, ಎಲ್ಲರ ಬಳಿ ಓಪನ್ ಆಗಿ ಇದ್ರೆ, ಇನ್ನೂ ಅಲ್ಲಿ ಮುಂದುವರಿಯಬಹುದಿತ್ತು, ಎನ್ನುವ ವಾಣಿಶ್ರೀ ಅವರು ಒಂದೇ ವಾರಕ್ಕೆ ಮನೆಯಿಂದ ಆಚೆ ಬಂದಿದ್ದಕ್ಕೆ ಬೇಸರಗೊಂಡಿದ್ದಾರೆ.['ಬಿಗ್ ಬಾಸ್ ಕನ್ನಡ-4': ಮೊದಲ ವಾರವೇ ನಟಿ ವಾಣಿಶ್ರೀ ಔಟ್.!]

ಇದೀಗ ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆದು ಬಂದ ವಾಣಿಶ್ರೀ ಅವರನ್ನು, ನಿಮ್ಮ ಫಿಲ್ಮಿಬೀಟ್ ಕನ್ನಡ ಸಂಪರ್ಕಿಸಿದಾಗ, ಕೆಲವೊಂದು ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ವಾಣಿಶ್ರೀ ಅವರ ಸಂಪೂರ್ಣ ಸಂದರ್ಶನಕ್ಕಾಗಿ ಮುಂದೆ ಓದಿ....

ಸಂದರ್ಶನ: ಸುನೀತಾ ಗೌಡ

* 'ಬಿಗ್ ಬಾಸ್ 4' ಮನೆಯಲ್ಲಿ ನೀವು ಕಳೆದ 1 ವಾರ ಹೇಗಿತ್ತು?

- ಅನುಭವ ಅಂದ್ರೆ, ಒಂಥರಾ ಆಗಿತ್ತು. ಯಾಕೆಂದ್ರೆ 14 ಜನ ಸ್ಪರ್ಧಿಗಳು, ಯಾರೂ ಅಂತ ಗೊತ್ತಿಲ್ಲ. ಹೇಗಪ್ಪಾ ಅವರ ಜೊತೆ ಇರೋದು ಅನ್ನೋ ತಳಮಳ ಆಯ್ತು. ಆದ್ರೆ ಮನೆ ಒಳಗೆ ಹೋಗಿ ಆದ ಮೇಲೆ ಅಲ್ಲಿ ಇದ್ದ ಕೆಲವರು ನನಗೆ ಪರಿಚಯದವರೇ ಆಗಿದ್ದರು. ಹಾಗಂತ ತುಂಬಾ ಪರಿಚಯ ಅಲ್ಲ. ಸ್ವಲ್ಪ-ಸ್ವಲ್ಪ ಪರಿಚಯ ಇದ್ದಿದ್ದರಿಂದ ಆಮೇಲೆ ನಿರಾಳ ಆಯ್ತು. -ವಾಣಿಶ್ರೀ[ನಿರಂಜನ್ ದೇಶಪಾಂಡೆಗೆ ನಟಿ ವಾಣಿಶ್ರೀ ಕೊಟ್ಟ ಶಿಕ್ಷೆ ಇದು.!]

ಗಿಮಿಕ್ ಮಾಡ್ಬೇಕು ಅನಿಸಲಿಲ್ಲ

ಆಮೇಲೆ ಮನೆ ಒಳಗಡೆ ಹೋದ ಮೇಲೂ ಅಷ್ಟೇ ನನಗೆ ಗಿಮಿಕ್ ಮಾಡಬೇಕು, ಜಾಸ್ತಿ ಓಟುಗಳನ್ನು ಪಡೆಯಬೇಕು ಅಂತ ಅನಿಸಲೇ ಇಲ್ಲ. ನಾನಾಯ್ತು, ನನ್ನ ಪಾಡಾಯ್ತು, ಹೇಗೋ ಇದ್ರಾಯ್ತು, ಬಂದಾಗ ಎಲ್ಲಾ ಎದುರಿಸೋಣ ಅಂತ ಸುಮ್ಮನೆ ಇದ್ದೆ. ಆಮೇಲೆ ಸುಮ್ನೆ ಡ್ರಾಮಾ ಮಾಡೋದು, ನನ್ನ ಸ್ಟೈಲ್ ಬದಲಾಯಿಸೋದು ಅದೆಲ್ಲಾ ನನಗೆ ಗೊತ್ತಿಲ್ಲ, ನಾನು ಮಾಡೋದು ಇಲ್ಲ. ನಾನು ಹೆಂಗೆ ಇದ್ನೋ ಹಂಗೆ ಒಂದೇ ವಾರದಲ್ಲಿ ವಾಪಸ್ ಹೊರಗಡೆ ಬಂದೆ. -ವಾಣಿಶ್ರೀ.[ಬಿಗ್ ಬಾಸ್-4: ಈ ವಾರ ಮನೆಯಿಂದ ಹೊರ ಹೋಗೋರು ಯಾರು?]

ಮನೆಯ ಒಳಗೆ ಹೋಗೋ ಮುನ್ನ ಏನಾದ್ರೂ ಅಂನ್ಕೊಂಡು ಹೋಗಿದ್ರಾ?

ನನಗೆ ಮೊದಲೇ ಗೊತ್ತಿತ್ತು. 'ಬಿಗ್ ಬಾಸ್' ಮನೆ ಅನ್ನೋದು ನಾವಂದುಕೊಂಡ ಹಾಗೆ ಇಲ್ಲ, ಮತ್ತೆ ಅದು ಅಂದುಕೊಂಡಷ್ಟು ಸುಲಭ ಕೂಡ ಅಲ್ಲ ಅಂತ. ನಮ್ಮ ಜೀವನಕ್ಕಿಂತ ದೊಡ್ಡದು ಬಿಗ್ ಬಾಸ್ ಮನೆ ಅನ್ನೋದು. 14 ಜನರ ಜೊತೆ ಹೊಂದಾಣಿಕೆ ಮಾಡಿಕೊಂಡು, ಅವರ ಮನಗೆದ್ದು ಅಲ್ಲಿ ಇರೋದು ತುಂಬಾ ಕಷ್ಟದ ಕೆಲಸ ಕೂಡ ಹೌದು. ಆಮೇಲೆ ನಾನು ಎಲ್ಲರ ಜೊತೆ ಬೆರೆಯೋಕೆ ತುಂಬಾ ಟೈಮ್ ತೆಗೆದುಕೊಂಡೆ ಅನ್ಸುತ್ತೆ.

ಮನೆಯಲ್ಲಿ ಯಾರು ತುಂಬಾ ನಾಟ್ಕ ಮಾಡ್ತಾರೆ

ಪ್ರಥಮ್ ತುಂಬಾ ನಾಟ್ಕ ಮಾಡ್ತಾರೆ ಅಂತ ನನಗೆ ಅನಿಸುತ್ತೆ. ಅವರು ಸ್ವಲ್ಪ ಓವರ್ ಆಗೇ ಮಾಡ್ತಾ ಇದಾರೆ ಅಂತ ಅನ್ಸುತ್ತೆ. ಅವರು ಮಾತ್ರ ಅಲ್ಲ, ಎಲ್ಲರೂ ಅಷ್ಟೇ ಅವರವರ ಸ್ಟ್ರಾರ್ಟಜಿ ಗಳನ್ನು ಮಾಡಿಕೊಂಡೇ ಬಂದಿರುತ್ತಾರೆ. ಶಾಲಿನಿ ಅವರೇ ಇರಬಹುದು, ಕೀರ್ತಿ, ನಿರಂಜನ್ ಅವರು ಎಲ್ಲರೂ ಕೂಡ ಒಳಗೊಂದು-ಹೊರಗೊಂದು ಇದ್ದೇ ಇರ್ತಾರೆ. ಅವರೆಲ್ಲಾ ಬಿಗ್ ಬಾಸ್ ಅನ್ನು ಅರೆದು ಕುಡಿದಿದ್ದಾರೆ.

ನಿಮಗೆ ಅಲ್ಲಿಂದ ಹೊರಟು ಬರೋವಾಗ ಬೇಸರ ಆಯ್ತಾ? ಅಥವಾ ಅಲ್ಲಿ ಯಾರ ಮೇಲಾದ್ರೂ ಬೇಸರ ಇದ್ಯಾ?

ಇಲ್ಲಪ್ಪಾ ಬೇಸರ ಅಂತೂ ಖಂಡಿತ ಇಲ್ಲ. ಅದರಲ್ಲಿ ಬೇಸರ ಆಗೋವಂತಹದು ಏನೂ ಇಲ್ಲ. ಇದು ಎಲ್ಲರಿಗೂ ಗೊತ್ತೇ ಇರೋದು. ಬರೀ ಗೇಮ್ ಅಷ್ಟೇ. ಒಂದೋ ನೀವು, ಅವರು ಯಾರೂಂತ ನನಗೆ ಗೊತ್ತಿಲ್ಲ ಅಂತ ವೋಟ್ ಔಟ್ ಮಾಡಬೇಕು, ಇಲ್ವೋ ನಿಮಗೆ ಆಗ್ಲಿಲ್ಲಾಂದ್ರೆ ವೋಟ್ ಮಾಡಬೇಕು ಅಷ್ಟೇ. ಆದ್ರಿಂದ ನನಗೆ ಬೇಸರ ಇಲ್ಲ. ನಾನು ಬೇಗ ಓಪನ್ ಆಗಿಲ್ಲಾ ಅದಿಕ್ಕೆ ಬಂದೆ.

ಪ್ರಥಮ್ ಬಗ್ಗೆ ನಿಮ್ಮ ಕಾಮೆಂಟ್ ಏನು?

ಪ್ರಥಮ್ ಬಗ್ಗೆ ಹೇಳಬೇಕು ಅಂದ್ರೆ, ಅವರು ಇದಕ್ಕಿಂತ ಮುನ್ನ ನನಗೆ ಒಂದು ರೋಲ್ ಇದೆ ಮಾಡ್ತೀರಾ ಅಂತ ಫೋನ್ ಮಾಡಿದ್ರು. ಆವಾಗ ಅವರು ಹೀಗೆ ಇರಲಿಲ್ಲ, ಸರಿಯಾಗೇ ಮಾತು ಕೂಡ ಆಡಿದ್ದಾರೆ. ಆದ್ರೆ ಇಲ್ಲಿ ಅವರ ಹುಚ್ಚಾಟ-ಕಿರುಚಾಟ-ಅರಚಾಟ ನೋಡಿದ್ರೆ ಏನೋ ಒಂಥಾರಾ ಅನ್ಸುತ್ತೆ. ಅವರು ಬೇಕೂಂತಲೇ ಹೀಗೆ ಮಾಡುತ್ತಿದ್ದಾರೆ ಅಂತ ಅನ್ಸುತ್ತೆ. ಕೀರ್ತಿ ಮತ್ತು ಅವರು ಎಷ್ಟೇ ಜಗಳ ಆಡಿದ್ರೂ ಮತ್ತೆ ಒಂದಾಗೋದು ನೋಡಿ, ಇಬ್ಬರೂ ನಾಟಕ ಮಾಡ್ತಾರೆ ಅಂತ ಅನ್ಸುತ್ತೆ.

ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ಯಾರು ಗೆಲ್ಲಬಹುದು?

ನನ್ ಪ್ರಕಾರ ಕೀರ್ತಿ ಅವರು ಗೆಲ್ಲಬಹುದು.

ನೀವು ಉತ್ತಮ ಕ್ರೀಡಾಪಟು ಆಗಿ, ಮನೆಯಲ್ಲಿ ಆಟ ಆಡದೇ ಹೊರಬಂದಿದ್ದು, ಬೇಸರ ಆಗಿಲ್ವೇ?.

ಹೌದು ಅದೊಂದು ನನಗೆ ತುಂಬಾ ತುಂಬಾ ಬೇಸರ ಇದೆ. ಒಂದು ಆಟ ಆಡಿಲ್ಲ, ಇನ್ನೊಂದು ಕನ್ ಫೆಶನ್ ರೂಮ್ ನೋಡಿಲ್ಲ ಅಂತ ಬೇಸರ ಇದೆ. ನಾನು ಮೊದಲಿನಿಂದಲೂ ಹಾಗೆ ನನಗೆ ಆಗಲ್ಲ ಅಂತ ಅನಿಸಿದ್ರೆ ಬಿಡ್ತೀನೇ ಹೊರತು. ಮತ್ತೆ ಯಾವುದೇ ಕಾರಣಕ್ಕೂ ಗೆಲುವನ್ನು ಬಿಟ್ಟು ಕೊಟ್ಟಿರಲಿಲ್ಲ. ಆದ್ರೆ ಯಾಕೋ ಈ ಬಾರಿ ನಾನು ಬೇಗ ಓಪನ್ ಆಗದ ಕಾರಣ ಎಲ್ಲವನ್ನೂ ಕಳೆದುಕೊಂಡೆ.

ನಿಮ್ಮ ಮಗಳು ಹೇಳಿದ್ರು 'ಅಮ್ಮಾ ಬೇಗ ಓಪನ್ ಅಪ್ ಆಗಿಲ್ಲ' ಅಂತ, ನಿಮಗೂ ಹಾಗೆ ಅನಿಸ್ತಾ?

ಹೌದು ಎಲ್ಲರೂ ಅದನ್ನೇ ಹೇಳಿದ್ರೂ, ಸುದೀಪ್ ಅವರು ಕೂಡ ಅದನ್ನೇ ಹೇಳಿದ್ರು, ಆವಾಗ ನನಗೂ ಹಾಗೆ ಅನಿಸ್ತು. ಹೌದು ನಾನು ಬೇಗ ಓಪನ್ ಅಪ್ ಆಗಬೇಕಿತ್ತು. ನಾನೇ ಬೇಕೂಂತ ಸೈಲೆಂಟ್ ಆದೆ. ಒಂದು ವಾರ ಮನೆ ಒಳಗಡೆ ಇರೋವಾಗ, 'ಹೇ ಆದ್ರೆ ಆಗುತ್ತೆ, ಹೋದ್ರೆ ಹೋಗುತ್ತೆ ಅಂತ, ಉಳಿದವರ ಜೊತೆ ಬೇಗ ಓಪನ್ ಅಪ್ ಆಗದೇ ಸುಮ್ಮನಿದ್ದು ತಪ್ಪು ಮಾಡಿದೆ ಅಂತ ಅನ್ಸುತ್ತೆ'.-ವಾಣಿಶ್ರೀ

ಇನ್ನೊಂದು ಬಾರಿ ಬಿಗ್ ಬಾಸ್ ಮನೆಗೆ ಹೋಗೋ ಅವಕಾಶ ಸಿಕ್ರೆ ಹೋಗ್ತೀರಾ?

ಅದು ಅವರ ಮೇಲೆ ಡಿಪೆಂಡ್, ಅವರು ಕರೀತಾರೋ, ಕರಿಯದೇ ಇರ್ತಾರೋ. ಮತ್ತೆ ನನ್ನ ಟೈಮ್ ನಾನು ನೋಡ್ಕೊಬೇಕು. ಈಗ್ಲಾದ್ರೆ ನನ್ನ ಎಲ್ಲಾ ಕೆಲ್ಸ ಮುಗಿದಿತ್ತು. ಟೈಮ್ ಮಾಡಿಕೊಂಡಿದ್ದೆ, ಫ್ರೀ ಇದ್ದೆ ಸೋ ಹಾಗೆ ಬಿಗ್ ಬಾಸ್ ಗೆ ಬಂದೆ. ಮುಂದೆ ನೋಡಬೇಕು ಏನಾಗುತ್ತೆ ಅಂತ.

English summary
Kannada Serial Actress Vanishri shares experience Bigg Boss Kannada 4. Serial Actress Vanishri after exit 'Bigg Boss kannada 4' and Shared her experience with Filmibeat Kannada. Here is the Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada