Don't Miss!
- Automobiles
ಮುಂಬರಲಿರುವ ಹೋಂಡಾ ಬೈಕ್ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Mothers Day: ಅಮ್ಮಂದಿರಿಗೆ ಸದಾ ಒಂದು ಗಿಲ್ಟ್ ಕಾಡುತ್ತಿರುತ್ತೆ: ಶ್ವೇತಾ ಶ್ರೀವತ್ಸವ್!
ಮೇ 8 ಇಂದು ವಿಶೇಷವಾದ ದಿನ. ಇಂದು ವಿಶ್ವ ಅಮ್ಮಂದಿರ ದಿನ. ಅಮ್ಮನಿಗಾಗಿ ಯಾವುದೋ ಒಂದು ದಿನದ ಆಚರಣೆ ಸಾಧ್ಯವಿಲ್ಲ. ಅಮ್ಮನಿಲ್ಲದೆ ವಿಶ್ವವೇ ಶೂನ್ಯ. ಜೀವರಾಶಿಯೇ ಶೂನ್ಯ. ಆದರೂ, ಮೇ 8 ರಂದು ವಿಶೇಷವಾಗಿ ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. ಈ ದಿನದ ಪ್ರಯುಕ್ತ ನಟಿ ಶ್ವೇತಾ ಶ್ರೀವತ್ಸವ್ ಫಿಲ್ಮೀ ಬೀಟ್ ಜೊತೆಗೆ ಮಾತನಾಡಿದ್ದಾರೆ. ತಾಯ್ತನ, ಅಮ್ಮನಾದ ಬಳಿಕ ಬದಲಾದ ಜೀವನದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಶ್ವೇತಾ ಶ್ರೀವತ್ಸವ್ ದಂಪತಿಗೆ ಒಬ್ಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ಶ್ವೇತಾ ಮಗಳು ಅಶ್ಮಿತಾ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ. ಸೋಷಿಯಲ್ ಮೀಯಾದಲ್ಲಿ ಅಶ್ಮಿತಾ ಸಿಕ್ಕಾಪಟ್ಟೆ ಫೇಮಸ್. ಈ ಚೂಟಿ ಪೋರಿಗೆ ಈಗಲೇ ಸಾಕಷ್ಟು ಅಭಿಮಾನಿಗಳು ಇದ್ದಾರೆ.
ಪ್ಯಾನ್
ಇಂಡಿಯಾ
ಸ್ಟಾರ್
ಆಗ್ತಾರಾ
ದರ್ಶನ್:
ದರ್ಶನ್
'ಹಿಂದಿ'
ಸಿನಿಮಾಗಳ
ಯಶಸ್ಸೆಷ್ಟು?
ತಾಯಿ ಆದ ಮೇಲೆ ಜೀವನವೇ ಬದಲಾಗಿ ಹೋಯ್ತು ಎಂದು ಮಾತು ಆರಂಭಿಸಿದ ಶ್ವೇತಾ, ಅಮ್ಮ ಎನ್ನುವ ಜವಾಬ್ದಾರಿ ಬಗ್ಗೆ ಮಾತನಾಡಿದ್ದಾರೆ. ಇದು ದೊಡ್ಡ ಜವಾಬ್ದಾರಿಯೇ, ಇದನ್ನು ನಿಭಾಯಿಸಲು ಅತ್ಯಂತ ತಾಳ್ಮೆ ಅವಶ್ಯಕ ಎಂದಿದ್ದಾರೆ.

ಅಮ್ಮನ ಜವಾಬ್ದಾರಿ ನಿಭಾಯಿಸಲು ತಾಳ್ಮೆ ಬೇಕು!
"ಮಗು ಆಗಿ ಪೋಷಕರು ಆದರೆ ಅದು ದೊಡ್ಡ ಜವಾಬ್ದಾರಿ, ಮಗು ಆಗೋದಕ್ಕೂ ಮೊದಲು ಆ ಬಗ್ಗೆ ಅರಿವು ಇರುವುದಿಲ್ಲ. ಆದರೆ ಮಗು ಬಂದಮೇಲೆ ಪ್ರತಿ ಕ್ಷಣವೂ ನಾವು ಜವಾಬ್ದಾರಿಯಿಂದ ಇರಬೇಕಾಗುತ್ತದೆ. ಆರಾಮದಾಯಕ ಜೀವನ ಮಾಡಲು ಸಾಧ್ಯ ಆಗಲ್ಲ. ಪ್ರತೀ ಕ್ಷಣವೂ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ಮಗು ಬಂದ ಮೇಲೆ ಜೀವನ 360 ಡಿಗ್ರಿ ಬದಲಾಗಿ ಬಿಟ್ಟಿದೆ.
ಕೆಜಿಎಫ್
3:
ರಾಕಿ
ಭಾಯ್
ಎದುರು
ರಾಣಾ
ದಗ್ಗುಬಾಟಿ
ವಿಲನ್?

ತಾಯಂದಿರಿಗೆ ಗಿಲ್ಟ್ ಕಾಡುತ್ತಲೇ ಇರುತ್ತೆ!
ನನ್ನ ಅನುಭವಕ್ಕೆ ಬಂದ ಹಾಗೆ ಎಲ್ಲಾ ತಾಯಂದಿರಗೂ ಗಿಲ್ಟ್ ಕಾಡುತ್ತಾಲೇ ಇರುತ್ತೆ. ಅಂದರೆ ಮಕ್ಕಳ ವಿಚಾರದಲ್ಲಿ ಏನೇ ಮಾಡಿದರು ಸಮಾಧಾನ ಇರೋದಿಲ್ಲ. ಇದನ್ನು ಸ್ವಲ್ಪ ಹಾಗೆ ಮಾಡಬೇಕಿತ್ತು. ಅದನ್ನು ಹೀಗೆ ಮಾಡಿದರೆ ಚೆನ್ನಾಗಿ ಇರುತ್ತೆ ಅಂತೆಲ್ಲಾ ಸದಾ ಅನಿಸುತ್ತಿರುತ್ತೆ. ಮಕ್ಕಳ ವಿಚಾರದಲ್ಲಿ ಕಾಂಪ್ರಮೈಸ್ ಆಗಲು ಸಾಧ್ಯ ಆಗುವುದಿಲ್ಲ.

ಮಕ್ಕಳ ಬಗ್ಗೆ ಏನು ಗೊತ್ತಿರಲಿಲ್ಲ: ಶ್ವೇತಾ ಶ್ರೀವತ್ಸವ್!
ಮಕ್ಕಳ ಬಗ್ಗೆ ಯಾವ ವಿಚಾರನೂ ನನಗೆ ಗೊತ್ತಿರಲಿಲ್ಲ, ಮಗುಗೆ ಸ್ನಾನ ಮಾಡಿಸುವುದು ಕೂಡ ನನಗೆ ಗೊತ್ತಿರಲಿಲ್ಲ. ನನಗೆ ಹೆಚ್ಚಾಗಿ ಮಕ್ಕಳ ಜೊತೆಗೆ ಬೆರೆಯುವ ಅಥವಾ ಅವರ ಬೆಳವಣಿಗೆ ನೋಡುವ ಅವಕಾಶ ಸಿಕ್ಕಿರಲಿಲ್ಲ. ಎಲ್ಲವೂ ಹೊಸದು ನನಗೆ. ಮಗಳನ್ನು ಶಾಲೆಗೆ ಸೇರಿಸುವಾಗ ತುಂಬಾನೆ ಟೆನ್ಷನ್ ಆಗಿದ್ದೆ. ಈಗ ಅನಿಸುತ್ತೆ ಅಷ್ಟೊಂದು ಟೆನ್ಷನ್ ಆಗಿದ್ದನಾ ಅಂತ. ಅಷ್ಟು ದೊಡ್ಡ ಜವಾಬ್ದಾರಿ ಅದು.
'KGF
2'
ಸಾವಿರ
ಕೋಟಿ,
'ವಿಕ್ರಾಂತ್
ರೋಣ'ನತ್ತ
ಎಲ್ಲರ
ಚಿತ್ತ!

ಅಶ್ಮಿತಾ ದೇವರಂಥ ಮಗು!
ಶೂಟಿಂಗ್ ಅಂತ ಬಂದಾಗ ಮಗಳನ್ನು ಮಿಸ್ ಮಾಡಿಕೊಳ್ಳುತ್ತೀನಿ. ಅವಳೊಂದಿಗೆ ಕಳೆಯಬೇಕಾದ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತೀನಿ. ಆದರೆ ಅಶ್ಮಿತಾ ದೇವರಂಥ ಮಗು. ಏನೇ ಹೇಳಿದರು ಅರ್ಥ ಮಾಡಿಕೊಳ್ಳುತ್ತಾಳೆ. ಹಠ ಮಾಡಲ್ಲ. ಶೂಟಿಂಗ್ ಇದೆ ಅಂದರೆ ಸ್ವಲ್ಪ ಅಳುತ್ತೆ. ಆಮೇಲೆ ಅಮ್ಮ ಶೂಟಿಂಗ್ ಮುಗಿಸಿ ಬರುತ್ತಾರಲ್ಲಾ ಅಂತ ಓಕೆ ಅಂತಾಳೆ.

ಅಮ್ಮಂದಿರಿಗೆ ಅನುಭವವೇ ಟಿಪ್ಸ್!
"ತಾಯಂದಿಗೆ ಟಿಪ್ಸ್ ಕೊಡೊಕೆ ಆಗಲ್ಲ. ಅವರೇ ಅದನ್ನು ಅನುಭವಿಸಬೇಕು. ನನಗೆ ಯಾರು ಏನೇನು ಹೇಳಿದ್ದರೋ ಅದೆಲ್ಲಾ ಉಲ್ಟಾ ಆಗಿದೆ. ಎಲ್ಲರಿಗೂ ಬೇರೆ, ಬೇರೆ ಸಂದರ್ಭ ಇರುತ್ತೆ. ನಾನು ಹೇಳೋದೇನು ಅಂದರೆ, ಕೂಲಾಗಿ, ಕಾಮಾಗಿ ಇರಿ ಟೆನ್ಷನ್ ತಗೋಬೇಡಿ."