»   » ಡಾಲಿಯ ಡಾರ್ಲಿಂಗ್ 'ಕಾನ್ಸ್ ಟೇಬಲ್ ಸರೋಜ' ಸಂದರ್ಶನ

ಡಾಲಿಯ ಡಾರ್ಲಿಂಗ್ 'ಕಾನ್ಸ್ ಟೇಬಲ್ ಸರೋಜ' ಸಂದರ್ಶನ

Posted By:
Subscribe to Filmibeat Kannada
'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ? | Filmibeat Kannada

ಇಡೀ ಕನ್ನಡ ಸಿನಿಮಾರಂಗದ ತುಂಬಾ ಟಗರು ಚಿತ್ರದ್ದೇ ಸದ್ದು. ಸಾಮಾನ್ಯವಾಗಿ ಸಿನಿಮಾ ಗೆದ್ದಾಗ ಅದರ ಬಗ್ಗೆ ಮಾತನಾಡುವುದು, ಕಲಾವಿದರ ಅಭಿನಯದ ಬಗ್ಗೆ ಮೆಚ್ಚಿಕೊಳ್ಳುವುದು ಸರ್ವೇ ಸಾಮಾನ್ಯ. ಆದ್ರೆ ಟಗರು ಸಿನಿಮಾ ಆ ರೀತಿ ಆಗಿಲ್ಲ. ಸಿನಿಮಾದ ಜೊತೆಯಲ್ಲಿ ಚಿತ್ರದಲ್ಲಿರುವ ಸಣ್ಣ ಪುಟ್ಟ ಪಾತ್ರಗಳನ್ನು ಪ್ರೇಕ್ಷಕರು ಗುರುತಿಸುತ್ತಿದ್ದಾರೆ.

ಟಗರು ಚಿತ್ರದಲ್ಲಿನ ಪ್ರತಿ ಪಾತ್ರವನ್ನ ಮೆಚ್ಚಿಕೊಳ್ಳಲು ಕಾರಣ ನಿರ್ದೇಶಕ ಸೂರಿ. ಸೂರಿ ಅವರ ಪ್ರತಿ ಸಿನಿಮಾಗಳಲ್ಲೂ ಚಿಕ್ಕ ಪುಟ್ಟ ಪಾತ್ರಗಳು ನೋಡುಗರನ್ನ ಕಾಡುವಂತೆ ಮಾಡುತ್ತವೆ. ಸದ್ಯ ಟಗರು ಚಿತ್ರ ನೋಡಿ ಬಂದ ಪ್ರೇಕ್ಷಕರಿಗೆ ಡಾಲಿ, ಚಿಟ್ಟೆ. ಕಾಕ್ರೋಚ್, ಜಾಮೂನ್ ರವಿ ಜೊತೆಯಲ್ಲಿ ಹೆಚ್ಚಾಗಿ ನೆನಪಾಗುತ್ತಿರುವ ಕ್ಯಾರೆಕ್ಟರ್ ಅಂದರೆ ಸರೋಜ.

ಕಾನ್ಸ್ ಟೇಬಲ್ ಸರೋಜ. ಎರಡು ಮೂರು ಸೀನ್ ಗಳಲ್ಲಿ ಬಂದು ಹೋಗುವಂತ ಪಾತ್ರವಾದರು ಸಾಕಷ್ಟು ಜನರ ಫೇಸ್ ಬುಕ್, ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಸರೋಜ ಪಾತ್ರದ ಫೋಟೋಗಳು ಹರಿದಾಡುತ್ತಿದೆ. ಈ ಹಿಂದೆ ಸಿನಿಮಾಗಳಲ್ಲಿ ಅಭಿನಯಿಸಿದ್ದರು ಎಲ್ಲಿಯೂ ಫೇಮಸ್ ಆಗದ ನಟಿ ತ್ರಿವೇಣಿ ಈಗ ಸದ್ದು ಮಾಡುತ್ತಿದ್ದಾರೆ, ಹಾಗಾದರೆ ತ್ರಿವೇಣಿ ಯಾರು? ಯಾವೆಲ್ಲಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ? ಟಗರು ಸಿನಿಮಾ ಅವಕಾಶ ಹೇಗೆ ಸಿಕ್ಕಿತ್ತು? ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ

ಸರೋಜ ಯಾರು? ನಿಮ್ಮ ಬಗ್ಗೆ ಪರಿಚಯ ಮಾಡಿಕೊಡಿ

ನನ್ನ ಹೆಸರು ತ್ರಿವೇಣಿ. ಮೂಲತಃ ಬೆಂಗಳೂರಿನ ನಿವಾಸಿ ಓದಿದ್ದು ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಆರ್ ಆರ್ ನಗರದಲ್ಲಿ ಸದ್ಯ ವಾಸವಾಗಿದ್ದೇವೆ. ಅಪ್ಪ ದ್ವಾರಕನಾಥ್ ಅಮ್ಮ ಹೇಮಲತಾ ಇಬ್ಬರು ಸಹೋದರರು ಉಜ್ವಲ್ ಮತ್ತು ರಾಮ ಅಂತ.

ಟಗರು ನಿಮ್ಮ ಮೊದಲ ಚಿತ್ರನಾ?

ಇಲ್ಲ ಈ ಹಿಂದೆ ಸಾಕಷ್ಟು ಚಿತ್ರದಲ್ಲಿ ಅಭಿನಯಿಸಿದ್ದೇನೆ. ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದಲ್ಲಿ ಸೃಜನ್ ಅವರ ಜೋಡಿಯಾಗಿಯೂ ಆಕ್ಟ್ ಮಾಡಿದ್ದೇನೆ. ಸದ್ಯ ತೆಲುಗು ಚಿತ್ರದಲ್ಲಿ ಬ್ಯುಸಿ ಆಗಿದ್ದೇನೆ.

ಟಗರು ಚಿತ್ರಕ್ಕೆ ಅವಕಾಶ ಸಿಕ್ಕಿದ್ದು ಹೇಗೆ?

ಟಗರು ಸಿನಿಮಾಗೆ ಅವಕಾಶ ಸಿಕ್ಕಿದ್ದು ಅನಿರೀಕ್ಷಿತ. ತೆಲುಗು ಚಿತ್ರಕ್ಕಾಗಿ ಫೋಟೋ ಶೂಟ್ ಮಾಡಿಸಿದ್ದೆ. ಅದನ್ನ ನೋಡಿ ನಿರ್ದೇಶಕರಿಂದ ಕರೆ ಬಂದು . ಪಾತ್ರವೂ ಇಷ್ಟ ಆಯ್ತು ಆದ್ದರಿಂದ ಒಪ್ಪಿಕೊಂಡೆ.

ಸೂರಿ, ಶಿವರಾಜ್ ಕುಮಾರ್, ಡಾಲಿ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಸೂರಿ ಅವರ ನಿರ್ದೇಶನದಲ್ಲಿ ಅಭಿನಯ ಮಾಡಿದ್ದು ತುಂಬಾ ಖುಷಿ ಇದೆ. ನಿರ್ದೇಶಕರು ಯಾವತ್ತಿಗೂ ಆಕ್ಟ್ ಮಾಡಿ ಅಂತ ಹೇಳಲ್ಲ ನ್ಯಾಚುರಲ್ ಆಗಿ ಅಭಿನಯಿಸಿ ಅಂತಾರೆ ಹಾಗಾಗಿ ಇಷ್ಟು ಚೆನ್ನಾಗಿ ಅಭಿನಯಿಸಲು ಸಾಧ್ಯವಾಯಿತು. ಶಿವಣ್ಣನ ಜೊತೆ ಆಕ್ಟ್ ಮಾಡಬೇಕು ಅನ್ನುವುದು ಚಿಕ್ಕ ವಯಸ್ಸಿನಿಂದಲೂ ಕನಸ್ಸಾಗಿತ್ತು ಈಗ ನನಸ್ಸಾಯ್ತು. ಧನಂಜಯ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದು ಖುಷಿ ಕೊಟ್ಟಿದೆ.

ಬಾಹುಬಲಿ ಸಿನಿಮಾದಲ್ಲಿಯೂ ಅಭಿನಯಿಸಿದ ಅನುಭವ ಹೇಗಿತ್ತು?

ರಮ್ಯಾಕೃಷ್ಣ ಅವರ ಜೊತೆ ಆಕ್ಟ್ ಮಾಡಿದ್ದೇನೆ. ಬಾಹುಬಲಿ ಚಿತ್ರದ ಒಂದು ಯುದ್ಧದ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತೇನೆ. ಅದರಿಂದಲೇ ನನಗೆ ತೆಲುಗು ಮತ್ತು ತಮಿಳಿನಲ್ಲಿ ಅವಕಾಶ ಸಿಕ್ಕಿದೆ.

ಮುಂದೆ ಬಿಡುಗಡೆ ಆಗಬೇಕಿರುವ ಚಿತ್ರಗಳು ಯಾವುವು?

ತಮಿಳು ಮತ್ತು ತೆಲುಗಿನ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಬಾಹುಬಲಿ ತಂಡದವರೇ ಮಾಡುತ್ತಿರುವ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. 'ತಮಿಳ್ ತಂಬಿ 'ಎಂಬ ಸಿನಿಮಾದಲ್ಲಿ ಆಕ್ಟ್ ಮಾಡಿದ್ದೇನೆ.

ನಿಮ್ಮ ಬಗ್ಗೆ ಟ್ರೋಲ್ ಆಗುತ್ತಿದೆ. ಸ್ಟೇಟಸ್ ನಲ್ಲಿ ಫೋಟೋಗಳನ್ನ ಹಾಕಿಕೊಳ್ಳುತ್ತಿದ್ದಾರೆ ಹೇಗನ್ನಿಸುತ್ತೆ?

ಚಿಕ್ಕ ಪಾತ್ರ ಮಾಡಿದ್ದೇನೆ ಜನರಿಗೆ ಅಷ್ಟೇನೂ ಗೊತ್ತಾಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಚಿತ್ರ ಬಿಡುಗಡೆ ಆದ ದಿನ ಊರ್ವಶಿ ಚಿತ್ರಮಂದಿರಕ್ಕೆ ಭೇಟಿ ಕೊಟ್ಟಿದ್ದೆ ಜನರು ನನ್ನನ್ನು ಗುರುತಿಸಿ ಮಾತನಾಡಿಸಿದರು. ಪಾತ್ರವನ್ನ ಹಾಗೂ ಅಭಿನಯವನ್ನು ಮೆಚ್ಚಿಕೊಂಡರು ಆಗ ಗೊತ್ತಾಯ್ತು ಸಣ್ಣ ಪಾತ್ರದ ಬಗೆಗಿನ ಪ್ರಾಮುಖ್ಯತೆ.

ಮುಂದೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತೀರಾ?

ಖಂಡಿತ.. ಸರೋಜ ಅಂತಹ ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ಅಭಿನಯಿಸುತ್ತೇನೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಲೀಡ್ ರೋಲ್ ಅವಕಾಶ ಸಿಕ್ಕತೆ ತುಂಬಾ ಖುಷಿ ಆಗುತ್ತೆ.

English summary
Kannada film actress Trivani interview. Trivani has acted in the role of Saroja in theTagaru film.Trivani has acted in a lot of Kannada and Telugu films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada