Don't Miss!
- News
ಫೆಬ್ರವರಿ 6ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Exclusive: "ದೇವರ ಇಚ್ಛೆಯಂತೆ 'ವರಾಹ ರೂಪಂ' ಹೊಸ ಹಾಡು ಮಾಡಿದ್ದು": ಅಜನೀಶ್ ಲೋಕನಾಥ್
'ಕಾಂತಾರ' ಚಿತ್ರತಂಡ 'ವರಾಹ ರೂಪಂ' ಕೇಸ್ ಗೆದ್ದಿದೆ. ಮತ್ತೆ ಸಾಂಗ್ ಚಿತ್ರದಲ್ಲಿ ಸೇರ್ಪಡೆಗೊಂಡಿದೆ. ಯೂಟ್ಯೂಬ್‌ಗೂ ವಾಪಸ್ ಬಂದಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ದೇವರ ಆಶೀರ್ವಾದ ಹಾಗೂ ಜನರ ಪ್ರೀತಿಯಿಂದ ಇದೆಲ್ಲಾ ಸಾಧ್ಯವಾಯಿತು ಎಂದಿದ್ದಾರೆ.
'ವರಾಹ ರೂಪಂ' ಹಾಡಿನ ಮೇಲೆ ಕೃತಿ ಚೌರ್ಯದ ಆರೋಪದ ಕೇಸ್ ದಾಖಲಾಗಿತ್ತು. ಆರಂಭದಲ್ಲಿ ಕೇಸ್ ದಾಖಲಿಸಿದ್ದ ಕೇರಳದ 'ನವರಸಂ' ಆಲ್ಬಂನ ತೆಕ್ಕುಡಂ ಬ್ರಿಡ್ಜ್ ತಂಡಕ್ಕೆ ಮೇಲುಗೈ ಆಗಿತ್ತು. ಹಾಡನ್ನು ಪ್ರಸಾರ ಮಾಡದಂತೆ ತಡೆ ನೀಡಿ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಹಾಡನ್ನು ಯೂಟ್ಯೂಬ್ ಹಾಗೂ ಸಿನಿಮಾದಿಂದ ತೆಗೆಯಲಾಗಿತ್ತು. ಓಟಿಟಿಗೆ ಬಂದ ಚಿತ್ರದಲ್ಲೂ ಮೂಲ ಹಾಡು ಇರಲಿಲ್ಲ. ಹಾಗಾಗಿ ಬೇರೊಂದು ಟ್ಯೂನ್ ಮಾಡಿ ಅಜನೀಶ್ ಹೊಸ ಹಾಡು ಮಾಡಿದ್ದರು. ಅದನ್ನೇ ಥಿಯೇಟರ್ ಹಾಗೂ ಓಟಿಟಿಯಲ್ಲಿ ಸೇರಿಸಲಾಗಿತ್ತು.
ಹೊಸ ಹಾಡು ಮೊದಲಿನ ಹಾಡಿನಷ್ಟು ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ಆದರೂ ಕೂಡ ಚಿತ್ರತಂಡಕ್ಕೆ ಬೇರೆ ದಾರಿ ಇರಲಿಲ್ಲ. ಹೊಸ ಹಾಡನ್ನು ಕಂಪೋಸ್ ಮಾಡಿದರ ಬಗ್ಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ಜೊತೆಗೆ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ದೇವರ ಇಚ್ಛೆಯಂತೆ ಹೊಸ ಹಾಡು
"ವಹಾರ ರೂಪಂ ಹಾಡಿನ ಸಾಹಿತ್ಯ ಬರೆದ ಶಶಿರಾಜ್ ಕಾವೂರ್ ಒಂದು ಮಾತು ಹೇಳಿದ್ದರು. ದಕ್ಷಿಣ ಕನ್ನಡದ ಕಡೆ ಒಂದು ಮಾತಿದೆ. ಒಳ್ಳೆ ವಿಚಾರವನ್ನು ಎರಡೆರಡು ಬಾರಿ ಹೇಳಬೇಕು ಎಂದು. ಆ ರೀತಿ ಅಂದುಕೊಳ್ಳಿ. ಒಂದು ಒಳ್ಳೆ ವಿಚಾರ ಇದು. ಎರಡು ಬಾರಿ ಹೇಳುವಂತೆ ದೈವಾಜ್ಞೆ ಆಗಿದೆ. ಎಂದುಕೊಂಡು ಮಾಡಿ ಎಂದರು. ದೇವರ ಇಚ್ಛೆಯಂತೆ ಮಾಡಿದ್ವಿ. ಬೇರೆ ಹಾಡು ಆಗಿದ್ದರೆ ಈ ಮಾತು ಹೇಳುತ್ತಿರಲಿಲ್ಲ. ದೇವರ ಮೇಲಿನ ಭಕ್ತಿ, ಸಂಸ್ಕೃತಿ, ಆಚರಣೆ ಬಗ್ಗೆ ಮಾಡಿರೋದು. ಹಾಗಾಗಿ ಖಂಡಿತ ದೇವರ ಪ್ರೇರಣೆಯಂತೆ ಎರಡನೇ ಹಾಡು ಮಾಡಿದ್ದು"

'ಕಾಂತಾರ' ಸಕ್ಸಸ್ ನನಗೆ ದೊಡ್ಡದು
"ಕಾಂತಾರ ಹಲವು ವಿಚಾರಗಳಲ್ಲಿ ನನಗೆ ವಿಶೇಷವಾದ ಸಿನಿಮಾ. ಕಾಂತಾರ ಗೆಲುವಿನ ಗಾತ್ರ, ಹೆಸರು ತಂದುಕೊಟ್ಟಿರುವುದು. ಅಂದರೆ ರೀಚ್ ವಿಚಾರದಲ್ಲಿ ಇದು ದೊಡ್ಡ ಸಿನಿಮಾ. ಇದು ಬರೀ ಕಮರ್ಷಿಯಲ್ ಹಿಟ್ ಅಲ್ಲ. ಸಂಗೀತ ಕ್ಷೇತ್ರದಲ್ಲೂ ಕೂಡ ಯಶಸ್ವಿಯಾಗಿದೆ. ಎಷ್ಟೋ ಕರ್ನಾಟಿಕ್ ಶಾಸ್ತ್ರೀಯ ಕಛೇರಿಗಳಲ್ಲಿ ಈ ಹಾಡನ್ನು ಹಾಡುತ್ತಿದ್ದಾರೆ. ಮಕ್ಕಳು ಇಷ್ಟಪಟ್ಟು ಹಾಡುತ್ತಿದ್ದಾರೆ. ಇದನ್ನೆಲ್ಲಾ ನಿರೀಕ್ಷೆ ಮಾಡಿರಲಿಲ್ಲ. ಮಕ್ಕಳಿಂದ ಮೇಧಾವಿಗಳವರೆಗೆ ಈ ಹಾಡನ್ನು ಒಪ್ಪಿಕೊಂಡಿದ್ದಾರೆ. ಬಹಳ ಖುಷಿ ಇದೆ." ಎಂದು ಅಜನೀಶ್ ಹೇಳಿದ್ದಾರೆ.

'ಪಾದರಾಯ' ಸಿನಿಮಾ ಕಥೆ ಚೆನ್ನಾಗಿದೆ
'ರಾಘವೇಂದ್ರ ಸ್ಟೋರ್ಸ್', 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ವಾಮನ', 'ಹೊಯ್ಸಳ', 'ಕೈವಾ', 'ಯುಐ', 'ಬೆಲ್‌ಬಾಟಂ- 2', 'ಬಘೀರ', 'ರಿಚರ್ಡ್ ಆಂಟನಿ' ಹೀಗೆ ಸಾಲು ಸಾಲು ಸಿನಿಮಾಗಳಿಗೆ ಅಜನೀಶ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 'ಪಾದರಾಯ' ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೇಳುವ ಅಜನೀಶ್ ಪಾದರಾಯ ಕೂಡ ಒಳ್ಳೆ ಸಿನಿಮಾ ಆಗುತ್ತದೆ. ನಾನು ಹೊಸ ಸಿನಿಮಾ ಒಪ್ಪಿಕೊಳ್ಳಲು ಸಾಧ್ಯವಾಗದಷ್ಟು ಬ್ಯುಸಿ ಇದ್ದೀನಿ. ಆದರೆ ಆ ಕಥೆ ತುಂಬಾ ಇಷ್ಟ ಆಯ್ತು. ಕಥೆಗಾಗಿ ಅದನ್ನು ಒಪ್ಪಿಕೊಂಡೆ" ಎಂದಿದ್ದಾರೆ.

ಹೊಂಬಾಳೆಗೆ ಸಕ್ಸಸ್ ಸಿಂಹಪಾಲು
"ತೆಲುಗಿನಲ್ಲಿ ಸಾಯಿ ಧರಮ್ ತೇಜ್ ನಟನೆಯ ಚಿತ್ರಕ್ಕೆ ಮ್ಯೂಸಿಕ್ ಮಾಡ್ತಿದ್ಧೀನಿ. ಅದೊಂದೇ ಸಿನಿಮಾ. ನನ್ನ ಮೊದಲ ಆಯ್ಕೆ ಕನ್ನಡ ಸಿನಿಮಾಗಳು. ಹಾಗಾಗಿ ಇಲ್ಲೇ ಹೆಚ್ಚು ಸಿನಿಮಾಗಳು ಮಾಡಬೇಕು ಎಂದುಕೊಂಡಿದ್ದೇನೆ. 'ಕಾಂತಾರ' ಸಿನಿಮಾ ಇಷ್ಟ ದೊಡ್ಡಮಟ್ಟಕ್ಕೆ ಹೋಗಲು ಹೊಂಬಾಳೆ ಸಂಸ್ಥೆ ಮುಖ್ಯ ಕಾರಣ. ನಾವು ಏನೇ ಕೆಲಸ ಮಾಡಬಹುದು. ಅದನ್ನು ತಲುಪಿಸುವುದು ಬಹಳ ಮುಖ್ಯ. ಚಿತ್ರದ ಸಕ್ಸಸ್‌ನ ಸಿಂಹಪಾಲು ಹೊಂಬಾಳೆ ಸಂಸ್ಥೆಗೆ ಹೋಗಬೇಕು" ಎಂದು ಅಜನೀಶ್ ಅಭಿಪ್ರಾಯಪಟ್ಟಿದ್ದಾರೆ.