For Quick Alerts
  ALLOW NOTIFICATIONS  
  For Daily Alerts

  ಗಾಯಕ ರಘು ದೀಕ್ಷಿತ್ ಬಗ್ಗೆ ಹೀಗೊಂದು ತಪ್ಪು ಕಲ್ಪನೆ.!

  By Harshitha
  |
  Sakkath Shukravara with Pavan Ranadheera season 2 : Raghu Dixit (part 1) | Filmibeat Kannada

  'ನಿನ್ನ ಪೂಜೆಗೆ ಬಂದೆ ಮಹಾದೇಶ್ವರ...' ಹಾಡು ಕೇಳಿದ ಕೂಡಲೆ ನಿಮಗೆ ಥಟ್ ಅಂತ ನೆನಪಾಗುವುದು ಗಾಯಕ ರಘು ದೀಕ್ಷಿತ್. 'ಸೈಕೋ', 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಗಳಿಗೆ ಸಂಗೀತ ನೀಡಿರುವ ರಘು ದೀಕ್ಷಿತ್ ಕೈಯಲ್ಲಿ ಸದ್ಯ 'ಪ್ರದೇಶ ಸಮಾಚಾರ', 'ಗರುಡ' ಮುಂತಾದ ಚಿತ್ರಗಳಿವೆ.

  ಜೊತೆಗೆ ಬಾಲಿವುಡ್ ನಲ್ಲಿ ಸೈಫ್ ಅಲಿ ಖಾನ್ ಚಿತ್ರಕ್ಕೂ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇಂತಿಪ್ಪ ರಘು ದೀಕ್ಷಿತ್ ಬಗ್ಗೆ ಒಂದು ತಪ್ಪು ಕಲ್ಪನೆ ಇದೆ.

  ಅದೇನಪ್ಪಾ ಅಂದ್ರೆ, ''ರಘು ದೀಕ್ಷಿತ್ ಸಿಕ್ಕಾಪಟ್ಟೆ ಬಿಜಿ.. ಅವರು ಯಾವಾಗಲೂ ಲಂಡನ್, ಯು.ಎಸ್.ಎ ನಲ್ಲಿರ್ತಾರೆ... ಅವರು ಅಷ್ಟು ಸುಲಭವಾಗಿ ಯಾರ ಕೈಗೂ ಸಿಗಲ್ಲ'' ಅಂತ ಯಾರು ಗಾಸಿಪ್ ಹಬ್ಬಿಸಿದ್ರೋ, ಗೊತ್ತಿಲ್ಲ. ಒಟ್ನಲ್ಲಿ ರಘು ದೀಕ್ಷಿತ್ ಬಗ್ಗೆ ಹೀಗೆ ತಪ್ಪು ಕಲ್ಪನೆ ಮೂಡಿದೆ.

  ಓದಬೇಕಿದ್ದ ಕಾಲೇಜ್ ಗೆ ಅತಿಥಿಯಾಗಿ ಹೋಗಿದ್ದ 'ಬಿಗ್ ಬಾಸ್' ಜಯಶ್ರೀ ಓದಬೇಕಿದ್ದ ಕಾಲೇಜ್ ಗೆ ಅತಿಥಿಯಾಗಿ ಹೋಗಿದ್ದ 'ಬಿಗ್ ಬಾಸ್' ಜಯಶ್ರೀ

  ಇದನ್ನೆಲ್ಲ ಕೇಳಿ ಬೇಸರ ಮಾಡಿಕೊಂಡಿರುವ ರಘು ದೀಕ್ಷಿತ್, ''ಯಾವಾಗಲೂ ನಾನು ವಿದೇಶದಲ್ಲಿ ಇರಲ್ಲ. ವರ್ಷದಲ್ಲಿ ಒಂದು ತಿಂಗಳು ಮಾತ್ರ ಹೋಗುವೆ ಅಷ್ಟೇ. ಇಂದಿರಾನಗರದಲ್ಲಿ ನನ್ನ ಸ್ಟುಡಿಯೋ ಇದೆ. ಅಲ್ಲೇ ನಾನು ಸಿಗುವೆ. ಫೇಸ್ ಬುಕ್ ನಲ್ಲೂ ಸ್ಯಾಂಡಲ್ ವುಡ್ ಮಂದಿ ನನ್ನನ್ನ ಅಪ್ರೋಚ್ ಮಾಡಬಹುದು'' ಅಂತ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಘು ದೀಕ್ಷಿತ್ ಹೇಳಿದ್ದಾರೆ.

  ರಘು ದೀಕ್ಷಿತ್ ಸಂದರ್ಶನದ ಮೊದಲ ಭಾಗ ಇಲ್ಲಿದೆ ನೋಡಿ...

  English summary
  Watch video: Music Director Raghu Dixit interview with Filmibeat Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X