For Quick Alerts
  ALLOW NOTIFICATIONS  
  For Daily Alerts

  'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ

  |
  ಅಕುಲ್ ಬಾಲಾಜಿ ವಿರುದ್ಧ ದೂರು ನೀಡಲು ಮುಂದಾದ ಆದಂ ಪಾಷಾ | FILMIBEAT KANNADA

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಗಿದ್ಮೇಲೂ ಅದರಲ್ಲಿನ ಸ್ಪರ್ಧಿಗಳ ವಿವಾದ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಆಂಡ್ರ್ಯೂ ವಿರುದ್ಧ ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೀಗ 'ತಕಧಿಮಿತ' ನಿರೂಪಕ ಅಕುಲ್ ಬಾಲಾಜಿ ಮತ್ತು ನಿರ್ದೇಶಕಿ ಶ್ರದ್ಧಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಆದಮ್ ಪಾಶಾ ಮುಂದಾಗಿದ್ದಾರೆ.

  ಕಲರ್ಸ್ ಕನ್ನಡ ವಾಹಿನಿಯ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋ ವೇದಿಕೆ ಮೇಲೆ ತಮಗೆ ಅವಮಾನ ಆಗುವ ಹಾಗೆ ಅಕುಲ್ ಬಾಲಾಜಿ ಮಾತನಾಡಿದ್ದಾರೆ. ಹಾಗೂ ನಿರ್ದೇಶಕಿ ಶ್ರದ್ಧಾ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ ಆದಮ್ ಪಾಶಾ.

  ಹಾಗಾದ್ರೆ, 'ತಕಧಿಮಿತ' ವೇದಿಕೆ ಮೇಲೆ ಏನೇನೆಲ್ಲಾ ಆಯಿತು ಎಂಬುದನ್ನು 'ಫಿಲ್ಮಿಬೀಟ್ ಕನ್ನಡ' ಸಿಬ್ಬಂದಿ ಜೊತೆಗೆ ಆದಮ್ ಪಾಶಾ ಹಂಚಿಕೊಂಡಿದ್ದಾರೆ. ಆ ಎಕ್ಸ್ ಕ್ಲೂಸಿವ್ ಸಂದರ್ಶನ ಇಲ್ಲಿದೆ, ಓದಿರಿ...

  ಯಾಕೆ ಅವಮಾನ ಮಾಡಬೇಕು.?

  ಯಾಕೆ ಅವಮಾನ ಮಾಡಬೇಕು.?

  ''ನನಗೆ ಅಲ್ಲಿ ಮರ್ಯಾದೆ ಸಿಕ್ಕಿಲ್ಲ. ಅದು ಡ್ಯಾನ್ಸ್ ಶೋ. ಹೀಗಾಗಿ, ಅಲ್ಲಿ ಡ್ಯಾನ್ಸ್ ಮಾಡಬೇಕು, ಹೋಗಬೇಕು. ಅದು ಬಿಟ್ಟು ಅವಮಾನ ಮಾಡಿದರೆ.? ನನ್ನನ್ನ ಅಕುಲ್ ಬಾಲಾಜಿ ವೇದಿಕೆ ಮೇಲೆ ಕರೆದು ಸ್ತ್ರೀಲಿಂಗ, ಪುಲ್ಲಿಂಗ ಅಂತೆಲ್ಲಾ ಮಾತನಾಡುತ್ತಾರೆ. ನನಗೆ ಕನ್ನಡ ಅಷ್ಟೊಂದು ಅರ್ಥ ಆಗಲ್ಲ ನಿಜ. ಆದರೆ, ಬೇರೆಯವರು ನನಗೆ ಏನೇನಾಯ್ತು ಅಂತ ವಿವರಿಸಿದ್ದಾರೆ. ಹೀಗಾಗಿ, ನಾನು ಅವರನ್ನ ಸುಮ್ಮನೆ ಬಿಡಲ್ಲ'' ಎನ್ನುತ್ತಾರೆ ಆದಮ್ ಪಾಶಾ.

  ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!

  ಜೆಂಡರ್ ಬಗ್ಗೆ ಯಾಕೆ ತಮಾಷೆ ಮಾಡಬೇಕು.?

  ಜೆಂಡರ್ ಬಗ್ಗೆ ಯಾಕೆ ತಮಾಷೆ ಮಾಡಬೇಕು.?

  ''ಇವತ್ತು ನನಗೆ ಹೀಗೆ ಹೇಳಿರಬಹುದು. ನಾಳೆ ಇನ್ನೊಬ್ಬರಿಗೆ ಹೇಳುತ್ತಾರೆ. ಅಕುಲ್ ಬಾಲಾಜಿಗೆ ಒಳ್ಳೆ ರೆಪ್ಯುಟೇಶನ್ ಇದೆ. ಆದ್ರೆ, ಈ ತರಹ ಕೆಟ್ಟ ಜೋಕ್ಸ್ ಯಾಕೆ ಮಾಡಬೇಕು.? ನನ್ನ ಜೆಂಡರ್ ಬಗ್ಗೆ ಯಾಕೆ ತಮಾಷೆ ಮಾಡಬೇಕು.?'' - ಆದಮ್ ಪಾಶಾ

  ಆಡಮ್ ನ ಔಟ್ ಮಾಡಿದ 'ಬಿಗ್ ಬಾಸ್'ಗೆ ಡೌನ್ ಡೌನ್ ಎಂದ ವೀಕ್ಷಕರು.!

  ಅಕುಲ್ ಯಾಕೆ ಹಾಗೆ ಮಾತನಾಡಬೇಕು.?

  ಅಕುಲ್ ಯಾಕೆ ಹಾಗೆ ಮಾತನಾಡಬೇಕು.?

  ''ನಾವು ಇದನ್ನೆಲ್ಲ ಕಾರ್ಯಕ್ರಮದಲ್ಲಿ ತೋರಿಸಲ್ಲ ಅಂತ ವಾಹಿನಿಯವರು ಹೇಳಿದ್ದರು. ಪ್ರಸಾರ ಮಾಡಲ್ಲ ಸರಿ.. ಆದರೆ ಸೆಟ್ ನಲ್ಲಿ ಎಷ್ಟೊಂದು ಜನ ಇರ್ತಾರೆ. ಅವರೆಲ್ಲರ ಮುಂದೆ ನನಗ್ಯಾಕೆ ಅವಮಾನ ಮಾಡಬೇಕು.? ಪ್ರಸಾರ ಮಾಡಲ್ಲ ಅಂದ್ಮೇಲೆ ಅಕುಲ್ ಅದನ್ನೆಲ್ಲ ನನ್ನ ಬಗ್ಗೆ ಯಾಕೆ ಮಾತನಾಡಬೇಕು.? ಸ್ಪರ್ಧಿಯಾದ ನನಗೆ ನೋವು ಆಗಲ್ವಾ.?'' - ಆದಮ್ ಪಾಶಾ

  "ತಂದೆ-ತಾಯಿ ನನ್ನನ್ನು ದೂರ ಮಾಡಿದರು" - ಆಡಂ ಪಾಶಾ

  ನಿರ್ದೇಶಕಿ ಧಮ್ಕಿ ಹಾಕ್ತಾರೆ

  ನಿರ್ದೇಶಕಿ ಧಮ್ಕಿ ಹಾಕ್ತಾರೆ

  ''ತಕಧಿಮಿತ' ನಿರ್ದೇಶಕಿ ಶ್ರದ್ಧಾ ನನಗೆ ಧಮ್ಕಿ ಹಾಕುತ್ತಾರೆ. ''ನಿಮಗೆ ಜನರಿಂದ ಅತಿ ಹೆಚ್ಚು ವೋಟ್ಸ್ ಸಿಕ್ಕರೂ, ನಾನು ನಿಮ್ಮನ್ನ ಎಲಿಮಿನೇಟ್ ಮಾಡಬಹುದು'' ಅಂತ ಶ್ರದ್ಧಾ ನನಗೆ ಹೇಳಿದ್ದಾರೆ. ಹಾಗಾದ್ರೆ, ಇದು ರಿಯಾಲಿಟಿ ಶೋ ಅಲ್ಲವೇ ಅಲ್ಲ. ಶ್ರದ್ಧಾ ಶೋ ಅಷ್ಟೇ.! ಇಂತಹ ಶೋದಲ್ಲಿ ನಾನು ಯಾಕೆ ಇರಬೇಕು.?'' - ಆದಮ್ ಪಾಶಾ.

  ಅವರಿಗೇನು ಹಕ್ಕಿದೆ.?

  ಅವರಿಗೇನು ಹಕ್ಕಿದೆ.?

  ''ಅಕುಲ್ ಬಾಲಾಜಿ ದೊಡ್ಡ ಸ್ಟಾರ್.. ಅವರಿಗೆ ಯಾರೂ ಏನೂ ಹೇಳಲು ಆಗಲ್ಲ ಅಂದುಕೊಂಡಿದ್ದಾರೆ. ಆದ್ರೆ, ನಾನು ಹೇಳುವೆ. ನನ್ನ ಬಗ್ಗೆ ಕೀಳಾಗಿ ಮಾತನಾಡುವ ಹಕ್ಕು ಅವರಿಗಿಲ್ಲ'' - ಆದಮ್ ಪಾಶಾ

  ಸಾಕ್ಷಿ ಇದೆ.!

  ಸಾಕ್ಷಿ ಇದೆ.!

  ''ತೀರ್ಪುಗಾರರ ಬಗ್ಗೆ ನನಗೆ ಯಾವುದೇ ಪ್ರಾಬ್ಲಂ ಇಲ್ಲ. ಅವರು ಡ್ಯಾನ್ಸ್ ಬಗ್ಗೆ ತೀರ್ಪು ಕೊಡ್ತಾರೆ ಅಷ್ಟೇ. ನನಗೆ ಪ್ರಾಬ್ಲಂ ಇರುವುದು ಅಕುಲ್ ಬಾಲಾಜಿ ಮತ್ತು ಶ್ರದ್ಧಾ ಬಗ್ಗೆ. ನನ್ನ ಬಳಿ ಸಾಕ್ಷಿ ಇದೆ. ವಾಯ್ಸ್ ರೆಕಾರ್ಡಿಂಗ್ ಇದೆ. ಹೀಗಾಗಿ, ಪೊಲೀಸ್ ಕಂಪ್ಲೇಂಟ್ ಕೊಡಬೇಕು ಅಂತಿದ್ದೀನಿ'' - ಆದಮ್ ಪಾಶಾ.

  ಕ್ಷಮೆ ಬೇಡ

  ಕ್ಷಮೆ ಬೇಡ

  ''ನನಗೆ ಚಾನೆಲ್ ನಿಂದ ದುಡ್ಡು ಬೇಡ, ಕ್ಷಮೆ ಬೇಡ, ಏನೂ ಬೇಡ. ಆದ್ರೆ, ಅಕುಲ್ ಬಾಲಾಜಿ ಮತ್ತು ಶ್ರದ್ಧಾಗೆ ಅರಿವಾಗಬೇಕು. ಇದು ಕಾಮಿಡಿ ಶೋ ಅಲ್ಲ. ಡ್ಯಾನ್ಸ್ ಶೋ. ನನ್ನ ಮೇಲೆ ಯಾಕೆ ಕಾಮಿಡಿ ಮಾಡಬೇಕು.?'' - ಆದಮ್ ಪಾಶಾ.

  English summary
  What happened in 'Takadhimita' dance reality show sets: Here is an exclusive interview of Bigg Boss Kannada 6 Contestant Adam Pasha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X