Just In
Don't Miss!
- News
ಎಲ್ವಿ ಪ್ರಸಾದ್ ಆಸ್ಪತ್ರೆಯಿಂದ ಗುಣಮಟ್ಟದ ನೇತ್ರ ಚಿಕಿತ್ಸೆ ಸೌಲಭ್ಯ
- Automobiles
ಮಾರ್ಚ್ ಅವಧಿಗಾಗಿ ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್
- Finance
ಮೊಟೊರೊಲಾ ಹೊಸ ಸ್ಮಾರ್ಟ್ಫೋನ್: ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್
- Sports
ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಇಂದಿಗೆ 50 ವರ್ಷ
- Lifestyle
ಮಹಾಶಿವರಾತ್ರಿ: ಶಿವನಿಗೆ ಪೂಜೆ ಸಲ್ಲಿಸುವಾಗ ಇವುಗಳನ್ನು ದೂರವಿಡಿ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಷ್ಟ್ರಪ್ರಶಸ್ತಿ ರೇಸ್‌ನ ಅಂತಿಮ ಘಟ್ಟಕ್ಕೆ 17 ಮಲಯಾಳಂ ಸಿನಿಮಾಗಳು!
ಕಳೆದ ಕೆಲ ವರ್ಷಗಳಿಂದ ಮಲಯಾಳಂ ಸಿನಿಮಾರಂಗ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸದಭಿರುಚಿಯ, ಭಿನ್ನ ಹಾದಿಯ, ಪ್ರಯೋಗಶೀಲ ಹಲವು ಸಿನಿಮಾಗಳು ಮಲಯಾಳಂ ಸಿನಿಮಾರಂಗ ನೀಡುತ್ತಿದೆ. ದೇಶವೇ ಮಲಯಾಳಂ ಸಿನಿಮಾಗಳನ್ನು ಆಸಕ್ತಿಯಿಂದ ಗಮನಿಸುವಂತಾಗಿದೆ.
ಒಂದರಹಿಂದೊಂದರಂತೆ ಸುಂದರ ಸಿನಿಮಾಗಳನ್ನು ನೀಡುತ್ತಿರುವ ಮಲಯಾಳಂ ಸಿನಿಮಾರಂಗ ಗುಣಮಟ್ಟದ ಸಿನಿಮಾಗಳಿಗಾಗಿ ಹಲವು ಪ್ರಶಸ್ತಿಗಳನ್ನು ಸಹ ಸೂರೆಹೊಡೆದಿದೆ. ಈ ಬಾರಿಯ ರಾಷ್ಟ್ರಪ್ರಶಸ್ತಿ ಸಹ ಮಲಯಾಳಂ ಸಿನಿಮಾಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.
67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಾಗಿ ಆಯ್ಕೆ ನಡೆಯುತ್ತಿದ್ದು, ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 17 ಮಲಯಾಳಂ ಸಿನಿಮಾಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.
2019 ರಲ್ಲಿ ತೆರೆಕಂಡ ಅಥವಾ ಸೆನ್ಸಾರ್ ಆದ ಸಿನಿಮಾಗಳನ್ನಷ್ಟೆ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದ್ದು. ಪ್ರಶಸ್ತಿ ರೇಸ್‌ನಲ್ಲಿ ಮಲಯಾಳಂ ಸಿನಿಮಾಗಳೇ ಮುಂಚೂಣಿಯಲ್ಲಿವೆ.
2019 ರಲ್ಲಿ ತೆರೆಕಂಡ ವೈರಸ್, ಇಶ್ಕ್, ಕುಂಬಳಂಗಿ ನೈಟ್ಸ್, ಜಲ್ಲಿಕಟ್ಟು, ಮೂತೊನ್, ಸಮೀರ್, ವಾಸಂತಿ, ಇನ್ನೂ ಹಲವಾರು ಸಿನಿಮಾಗಳು ಅಂತಿಮ ಘಟ್ಟಕ್ಕೆ ಆಯ್ಕೆ ಆಗಿವೆ. ವಿಶೇಷವೆಂದರೆ ಇನ್ನೂ ಬಿಡುಗಡೆ ಆಗದ ಮೋಹನ್‌ಲಾಲ್ ನಟನೆಯ ಮರಕ್ಕರ್ ಸಿನಿಮಾ ಸಹ ಅಂತಿಮ ಘಟ್ಟಕ್ಕೆ ಆಯ್ಕೆ ಆಗಿದೆ.
ಮರಕ್ಕರ್ ಸಿನಿಮಾ 2019 ರಲ್ಲಿ ಸೆನ್ಸಾರ್ ಆದ ಕಾರಣ ಆ ಸಿನಿಮಾವನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಮರಕ್ಕರ್ ಸಿನಿಮಾವೇ ಅತಿ ಹೆಚ್ಚು ವಿಭಾಗದಲ್ಲಿ ಪ್ರಶಸ್ತಿಗೆ ಪರಿಗಣಿಸಲಾಗಿದೆಯಂತೆ.
ಈ ಬಾರಿ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಆಯ್ಕೆ ಸಹ ಮಲಯಾಳಂ ಸಿನಿಮಾ ಜಲ್ಲಿಕಟ್ಟು. ಲಿಜೊ ಜೋಸ್ ನಿರ್ದೇಶನದ ಈ ಸಿನಿಮಾ ಮೋವೊಯಿಸ್ಟ್ ಎಂಬ ಪುಸ್ತಕ ಆಧರಿಸಿದ್ದಾಗಿದೆ.