Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವರ್ಷ ಕೇರಳದ ಅತಿ ಹೆಚ್ಚು ಜನ ನೋಡಿದ್ದು ಕನ್ನಡ ಸಿನಿಮಾವನ್ನು! RRRಗೆ ನಾಲ್ಕನೇ ಸ್ಥಾನ!
ಕನ್ನಡ ಸಿನಿಮಾಗಳು ಗಡಿಗಳನ್ನು ಮುರಿದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಾಡಿದ ವರ್ಷ 2022. ಕನ್ನಡ ಚಿತ್ರರಂಗದ ತಾಕತ್ತು ದೇಶಕ್ಕೆ ಪರಿಚಯವಾದ ವರ್ಷವಿದು.
'ಕೆಜಿಎಫ್ 2' ಸಿನಿಮಾದಿಂದ ಆರಂಭಗೊಂಡು ಕನ್ನಡದ ಹಲವು ಸಿನಿಮಾಗಳು ಈ ವರ್ಷ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು.
ರಾಷ್ಟ್ರಮಟ್ಟದಲ್ಲಿಯಂತೂ ಕನ್ನಡ ಸಿನಿಮಾಗಳಿಗೆ ಭಾರಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಯಿತು. ಹಲವು ರಾಜ್ಯಗಳಲ್ಲಿ ಈಗ ಕನ್ನಡ ಸಿನಿಮಾಗಳಿಗೆ ಭಾರಿ ಬೇಡಿಕೆ. ಈ ವರ್ಷ ದೇಶದ ಹಲವು ರಾಜ್ಯಗಳಲ್ಲಿ ಜನ ಅತಿ ಹೆಚ್ಚು ನೋಡಿದ ಸಿನಿಮಾ ಕನ್ನಡ ಸಿನಿಮಾ ಎಂದರೆ ನಂಬಲೇ ಬೇಕು. ಅದಕ್ಕೆ ಸೂಕ್ತ ದಾಖಲೆಗಳೂ ಇವೆ. ಇದೀಗ ಕೇರಳ ರಾಜ್ಯದ ಈ ವರ್ಷದ ಚಿತ್ರಮಂದಿರಗಳ ಟಿಕೆಟ್ ಮಾರಾಟದ ಮಾಹಿತಿ ಹೊರಬಂದಿದ್ದು, ಈ ವರ್ಷ ಕೇರಳದ ಅತಿ ಹೆಚ್ಚು ಜನ ನೋಡಿರುವುದು ಕನ್ನಡ ಸಿನಿಮಾವನ್ನು.t

ಅತಿ ಹೆಚ್ಚು ಜನ ನೋಡಿರುವುದು ಕನ್ನಡ ಸಿನಿಮಾವನ್ನು
ಈ ವರ್ಷ ಕೇರಳದಲ್ಲಿ ಅತಿ ಹೆಚ್ಚು ಜನ ಖರೀದಿಸಿರುವುದು ಕನ್ನಡ ಸಿನಿಮಾದ ಟಿಕೆಟ್ ಅನ್ನು. ಹೌದು, ಯಶ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ 'ಕೆಜಿಎಫ್ 2' ಸಿನಿಮಾವನ್ನು ಕೇರಳದ ಹೆಚ್ಚು ಜನ ಈ ವರ್ಷ ನೋಡಿದ್ದಾರೆ. ಈ ವರ್ಷ ಬಿಡುಗಡೆ ಆದ ಯಾವುದೇ ಮಲಯಾಳಂ ಸಿನಿಮಾಗಳಿಗಿಂತಲೂ ಹೆಚ್ಚಾಗಿ 'ಕೆಜಿಎಫ್ 2' ಸಿನಿಮಾ ನೋಡಿದ್ದಾರೆ. 'ಕೆಜಿಎಫ್ 2' ಸಿನಿಮಾದ 67,580 ಟಿಕೆಟ್‌ಗಳು ಕೇರಳದಲ್ಲಿ ಈ ವರ್ಷ ಮಾರಾಟವಾಗಿದೆ.

ಭರ್ಜರಿ ಕಲೆಕ್ಷನ್ ಮಾಡಿರುವ 'ಕೆಜಿಎಫ್ 2'
ಕೇರಳದಲ್ಲಿ 'ಕೆಜಿಎಫ್ 2' ಸಿನಿಮಾ 1.21 ಕೋಟಿ ರುಪಾಯಿ ಗಳಿಸಿದೆ. 'ಕೆಜಿಎಫ್ 2' ಸಿನಿಮಾವನ್ನು ಮಲಯಾಳಂನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿ ಆ ಸಿನಿಮಾವನ್ನು ಅಲ್ಲಿನ ಜನಪ್ರಿಯ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ವಿತರಣೆ ಮಾಡಿದ್ದರು. 'ಕೆಜಿಎಫ್ 2' ಸಿನಿಮಾ ಮಲಯಾಳಂನಲ್ಲಿ ಬಹಳ ದೊಡ್ಡ ಹಿಟ್ ಆಗಿತ್ತು.

ಎರಡನೇ ಸ್ಥಾನದಲ್ಲಿ ಕಮಲ್ ಹಾಸನ್ ಸಿನಿಮಾ
ಇನ್ನು ಎರಡನೇ ಸ್ಥಾನದಲ್ಲಿರುವುದು ತಮಿಳಿನ 'ವಿಕ್ರಂ' ಸಿನಿಮಾ ಈ ಸಿನಿಮಾದ 46 ಸಾವಿರ ಟಿಕೆಟ್‌ಗಳು ಕೇರಳದಲ್ಲಿ ಈ ವರ್ಷ ಸೇಲ್ ಆಗಿವೆ. ಮೂರನೇ ಸ್ಥಾನದಲ್ಲಿರುವ ತಮಿಳು ಸಿನಿಮಾ ಇದ್ದು, 'ಪೊನ್ನಿಯಿನ್ ಸೆಲ್ವನ್' ಸಿನಿಮಾದ 39 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಈ ವರ್ಷದ ಮತ್ತೊಂದು ಸೂಪರ್ ಹಿಟ್ ಸಿನಿಮಾ 'RRR' ನಾಲ್ಕನೇ ಸ್ಥಾನದಲ್ಲಿದೆ. 'RRR' ಸಿನಿಮಾದ 37.5 ಸಾವಿರ ಟಿಕೆಟ್‌ಗಳು ಕೇರಳದಲ್ಲಿ ಮಾರಾಟವಾಗಿವೆ. ಮೊದಲ ನಾಲ್ಕು ಸಹ ಅನ್ಯಭಾಷೆಯ ಸಿನಿಮಾಗಳೇ ಆಗಿವೆ.

ಪಟ್ಟಿಯಲ್ಲಿದೆ ಮತ್ತೊಂದು ಕನ್ನಡ ಸಿನಿಮಾ!
ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಮಲಯಾಳಂ ಸಿನಿಮಾ ಇದೆ. ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಆದ ಫ್ಯಾಮಿಲಿ ಡ್ರಾಮಾ 'ಜಯ ಜಯ ಜಯ ಜಯ ಹೇ' ಹೆಸರಿನ ಮಲಯಾಳಂ ಸಿನಿಮಾದ 35,333 ಟಿಕೆಟ್‌ಗಳು ಮಾರಾಟವಾಗಿವೆ. ನಂತರ ಆರನೇ ಸ್ಥಾನದಲ್ಲಿ ಮತ್ತೆ ಕನ್ನಡ ಸಿನಿಮಾ ಇದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ 'ಕಾಂತಾರ' ಸಿನಿಮಾದ 33,484 ಟಿಕೆಟ್‌ಗಳು ಮಾರಾಟವಾಗಿ 59.64 ಲಕ್ಷ ರುಪಾಯಿ ಕಲೆಕ್ಷನ್ ಆಗಿತ್ತು. ಅದಾದ ಬಳಿಕ ಏಳನೇ ಸ್ಥಾನದಲ್ಲಿ ಮಲಯಾಳಂನ 'ಭೀಷ್ಮ ಪರ್ವಂ' ಇದೆ. ಈ ಸಿನಿಮಾದ 29.5 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ.

ಕೊನೆಯಲ್ಲಿವೆ ಮಲಯಾಳಂ ಸಿನಿಮಾಗಳು
ಎಂಟನೇ ಸ್ಥಾನದಲ್ಲಿ ಭಿನ್ನವಾಗಿಯೂ, ಸ್ಟೈಲಿಷ್ ಆಗಿಯೂ ನಿರ್ಮಿಸಲಾಗಿರುವ ಮಲಯಾಳಂನ 'ತಲ್ಲುಮಾಲ' ಸಿನಿಮಾ ಇದೆ. ಈ ಸಿನಿಮಾದ 24.3 ಸಾವಿರ ಟಿಕೆಟ್‌ಗಳು ಈ ವರ್ಷ ಮಾರಾಟವಾಗಿವೆ. ಮೋಹನ್‌ಲಾಲ್ ಪುತ್ರ ನಟಿಸಿರುವ 'ಹೃದಯಂ' ಮಲಯಾಳಂ ಸಿನಿಮಾದ 22.3 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಹತ್ತನೇ ಸ್ಥಾನದಲ್ಲಿ ಪೃಥ್ವಿರಾಜ್ ಸುಕುಮಾರ್ ನಟಿಸಿರುವ ಮಲಯಾಳಂ ಸಿನಿಮಾ 'ಜನ ಗಣ ಮನ' ಇದೆ. ಈ ಸಿನಿಮಾದ 20.9 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಅಲ್ಲಿಗೆ ಈ ವರ್ಷ ಕೇರಳದಲ್ಲಿ ಮಲಯಾಳಂ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಅನ್ಯಭಾಷೆಯ ಸಿನಿಮಾಗಳೇ ಚೆನ್ನಾಗಿ ಪ್ರದರ್ಶನ ಕಂಡಿವೆ.