For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಬಿಟ್ಟು ಶೌಚಾಲಯ ಸ್ವಚ್ಛ ಮಾಡುವ ಕೆಲಸಕ್ಕೆ ಸೇರಿದ ಹಾಸ್ಯ ನಟ

  |

  ಬಣ್ಣದ ಲೋಕದ ಬದುಕು ಅನಿಶ್ಚಿತತೆಯಿಂದ ಕೂಡಿದ್ದು. ಇಲ್ಲಿ ಸ್ಟಾರ್ ಆಗಿದ್ದವನು ಕೆಲವೇ ದಿನಗಳಲ್ಲಿ ನೆಲಕಚ್ಚಬಲ್ಲ, ನೆಲದಲ್ಲಿದ್ದವ ಮೇಲೇರಿ ಸ್ಟಾರ್ ಆಗಬಲ್ಲ. ಸಿನಿಮಾವನ್ನೇ ನಂಬಿಕೊಂಡು ಜೀವನ ಸಾಗಿಸುತ್ತೇನೆ ಎಂದು ಧೈರ್ಯದಿಂದ ಹೇಳುವಂತೆ ಇಲ್ಲ. ಅದರಲ್ಲೂ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವವರಿಗಂತೂ ನಟನೆಯನ್ನೇ ನೆಚ್ಚಿಕೊಂಡು ಜೀವನ ಮಾಡುವುದು ಬಹಳ ದುಸ್ತರ.

  ಇದೇ ಕಾರಣಕ್ಕೆ ಮಲಯಾಳಂನ ಹಾಸ್ಯನಟನೊಬ್ಬ ಸಿನಿಮಾ, ಧಾರಾವಾಹಿ ಬದಿಗೆ ಸರಿಸಿ ಸ್ವಚ್ಛತಾ ಕಾರ್ಮಿಕನಾಗಿ ಉದ್ಯೋಗಕ್ಕೆ ಸೇರಿಕೊಂಡಿದ್ದಾನೆ.

  'ಮರಿಮಾಯಂ' ಹೆಸರಿನ ಮಲಯಾಲಂ ಧಾರಾವಾಹಿ ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದ ಹಾಸ್ಯ ನಟ ಉನ್ನಿರಂಜನ್ ಕಾಸರಗೋಡಿನ ಸರ್ಕಾರಿ ಪ್ರೌಢಶಾಲೆ ಹಾಸ್ಟೆಲ್‌ನಲ್ಲಿ ಸ್ವಚ್ಛತಾಕರ್ಮಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

  ಹಲವು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿ ಎಲ್ಲರನ್ನೂ ನಗಿಸಿದ್ದ ಉನ್ನಿರಂಜನ್ ಈಗ ಹಾಸ್ಟೆಲ್‌ನ ಶೌಚಾಲಯಗಳನ್ನು ಸ್ವಚ್ಛ ಮಾಡಬೇಕಿದೆ.

  ಸ್ವಚ್ಚತಾ ಕಾರ್ಮಿಕನ ಉದ್ಯೋಗಕ್ಕೆ ಸಂದರ್ಶನಕ್ಕೆ ಹಾಜರಾಗಿದ್ದಾಗಲೇ ಸಂದರ್ಶಕರು ಉನ್ನಿರಂಜನ್‌ಗೆ ಕೆಲಸದ ವ್ಯಾಪ್ತಿ, ಕಾರ್ಯಗಳನ್ನು ವಿವರಿಸಿ ಆತನನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಉನ್ನಿರಂಜನ್ ತಾನು ಈ ಕೆಲಸವನ್ನು ಮಾಡುವುದಾಗಿ ನಿಶ್ಚಯಿಸಿರುವುದಾಗಿ ಹೇಳಿದ್ದು, ಇಂದಷ್ಟೆ (ಮೇ 09) ಕೆಲಸಕ್ಕೆ ಸೇರಿಕೊಂಡಿದ್ದಾರೆ.

  ನಟನೆ ಎಂಬುದು ನಿಶ್ಚಿತ ಅಥವಾ ಭದ್ರತೆಯುಳ್ಳ ವೃತ್ತಿ ಆಗರದೇ ಇರುವ ಕಾರಣ ತಾವು ಈ ಕೆಲಸಕ್ಕೆ ಅರ್ಜಿ ಹಾಕಿದ್ದಾಗಿ ಉನ್ನಿರಂಜನ್ ಹೇಳಿದ್ದು, ಇದೇ ಕೆಲಸದಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ. ಸಂಬಳ ಕಡಿಮೆ ಆದರೆ ಕೆಲಸ ಪರ್ಮನೆಂಟ್ ಅಲ್ಲದೆ, ಸ್ವಚ್ಛತಾ ಕರ್ಮಿಯಿಂದ ಅಟೆಂಡರ್, ಸ್ವೀಪರ್ ವೃತ್ತಿಗೆ ಪ್ರೊಮೋಷನ್ ಆಗುವ ಸಾಧ್ಯತೆಯೂ ಇದೆ.

  ''ಮಹಾತ್ಮಾ ಗಾಂಧಿಜಿಯವರೇ ಶೌಚಾಲಯ ಸ್ವಚ್ಛ ಮಾಡಿದ್ದಾರೆ ನಾನ್ಯಾಕೆ ಮಾಡಬಾರದು ಎಂದಿದ್ದಾರೆ. ಅಲ್ಲದೆ ನಾನು ಈ ಕೆಲಸವನ್ನು ನಿರಾಕರಿಸಿದರೆ ಇನ್ನೊಬ್ಬರ್ಯಾರಾದರೂ ಈ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಎಲ್ಲಾ ಕೆಲಸವು ಒಂದೇ ಯಾವುದೂ ಸಹ ದೊಡ್ಡದು, ಚಿಕ್ಕದು ಎಂದೆಲ್ಲ ಇರುವುದಿಲ್ಲ'' ಎಂದಿದ್ದಾರೆ ಉನ್ನಿರಂಜನ್.

  ಉನ್ನಿರಂಜನ್‌ಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. 'ಮರಿಮಾಯಮ್' ಧಾರಾವಾಹಿ, ಸೂಪರ್ ಹಿಟ್ ಸಿನಿಮಾ 'ಆಪರೇಷನ್ ಜಾವಾ', 'ತೋಂಡಿಮುತ್ಯುಲಮ್ ದ್ರಿಕ್ಷಕ್ಷಿಯಮ್' ಇನ್ನೂ ಕೆಲವು ಸಿನಿಮಾಗಳಲ್ಲಿ ಹಾಸ್ಯಪಾತ್ರಗಳಲ್ಲಿ ಉನ್ನಿರಂಜನ್ ನಟಿಸಿದ್ದಾರೆ.

  ಕೋವಿಡ್ ಸಂದರ್ಭದಲ್ಲಿ ಹಲವು ಪೋಷಕ ನಟ, ನಟಿಯರು ಸಿನಿಮಾ ಬಿಟ್ಟು ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತೆಲುಗಿನ ಜನಪ್ರಿಯ ಹಾಸ್ಯನಟನೊಬ್ಬ ಬಾರ್‌ ಪ್ರಾರಂಭಿಸಿದ್ದ, ಜೊತೆಗೆ ಕಬಾಬ್, ಎಗ್‌ರೈಸ್ ಅಂಗಡಿ ಸಹ ಹಾಕಿಕೊಂಡಿದ್ದ. ನಿರ್ದೇಶಕನೊಬ್ಬ ತರಕಾರಿ ಮಾರುವ ಅಂಗಡಿ ಹಾಕಿಕೊಂಡಿದ್ದ. ಹೀಗೆ ಹಲವು ಸಿನಿಮಾ ನಟರು, ತಂತ್ರಜ್ಞರು ಕೋವಿಡ್ ಸಮಯದಲ್ಲಿ ಬೇರೆ ಉದ್ಯೋಗಗಳನ್ನು ಹುಡುಕಿಕೊಂಡಿದ್ದರು.

  English summary
  Malayalam actor Unniranjan takes up scavenger post in Kasargodu's Metric hostel. He said acting is not a permanent job.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion