For Quick Alerts
  ALLOW NOTIFICATIONS  
  For Daily Alerts

  ಹೇಳದೇ ಹೊರಟು ಹೋದ 'ಹೂವಿ'ನಂತಹ ಹುಡುಗಿ

  |

  ದಂಡುಪಾಳ್ಯ ಚಿತ್ರದಲ್ಲಿನ ತಮ್ಮ ಅಮೋಘ ನಟನೆಯಿಂದ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿರುವ ನಟಿ ಪೂಜಾ ಗಾಂಧಿ ಈಗ ಬದಲಾಗಿದ್ದಾರೆಯೇ? ದಂಡುಪಾಳ್ಯ ಯಶಸ್ಸು ಪೂಜಾ ಗಾಂಧಿಯವರ ತಲೆಕೆಡಿಸಿದೆಯೇ ಹೇಗೆ ಎಂಬುದೀಗ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಕಾರಣವಿಷ್ಟೇ, ಮೊದಲು ಒಪ್ಪಿಕೊಂಡಿದ್ದ 'ಹೂವಿ' ಚಿತ್ರವನ್ನು ಈಗ ಪೂಜಾ ದೂರ ತಳ್ಳಿದ್ದಾರೆ.

  ಪಕ್ಕಾ ಕಲಾತ್ಮಕ ಚಿತ್ರವಾಗಿರುವ 'ಹೂವಿ'ಯನ್ನು ಈ ಮೊದಲ ಒಪ್ಪಿಕೊಂಡಿದ್ದರು ಪೂಜಾ ಗಾಂಧಿ. ಈ ಕುರಿತು ಉದ್ದುದ್ದ ಭಾಷಣವನ್ನೂ ಬಿಗಿದಿದ್ದರು ಪೂಜಾ ಗಾಂಧಿ. ಆದರೆ ಈಗ ತಮ್ಮ ನಟನೆಯ ದಂಡುಪಾಳ್ಯ ಯಶಸ್ವಿಯಾಗುತ್ತಿದ್ದಂತೆ, ಪೂಜಾ ಗಾಂಧಿ ಈ ಚಿತ್ರದಂದ ಹೊರಬಿದ್ದಿದ್ದಾರೆ. "ನಾನು ಅದರಲ್ಲಿ ನಟಿಸೋದಿಲ್ಲ" ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

  ಸಂತೋಷ್ ನಾಯಕತ್ವದ ಹೂವಿ ಚಿತ್ರವು ಸಾಹಿತಿ, ಪತ್ರಕರ್ತ ಸರಜೂ ಕಾಟ್ಕರ್ ಅವರ 'ಹೂವಕ್ಕ' ಆಧರಿಸಿದ್ದು. ಈ ಚಿತ್ರಕ್ಕೆ ಪೂಜಾ ಗಾಂಧಿ ನಾಯಕಿ ಎಂದು ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಗಿತ್ತು. ಸ್ವತಃ ಪೂಜಾ ಗಾಂಧಿ ಕೂಡ ಹೂವಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದರು. ಇಂತಪ್ಪ ಪೂಜಾ ಗಾಂಧಿ ಈಗ ಉಲ್ಟಾಹೊಡೆದಿದ್ದಾರೆ.

  "ಈ ಚಿತ್ರದ ಕಥೆಯೊಂದು ಪೊಲಿಟಿಕಲ್ ಡ್ರಾಮಾ. ವಾಸ್ತವ ಜೀವನಕ್ಕೆ ತುಂಬಾ ಹತ್ತಿರವಾಗಿದೆ. ಈಗಾಗಲೇ ನಾನು ರಾಜಕೀಯದತ್ತ ಒಲವು ಬೆಳೆಸಿಕೊಂಡಿದ್ದೇನೆ ಹಾಗೂ ಮಹಿಳಾ ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದೇನೆ. ಹೀಗಾಗಿ, ನನಗಿದು ರಿಯಲ್ ಲೈಫಿಗೆ ತುಂಬಾ ಹತ್ತಿರವಾದ ಪಾತ್ರವೆನಿಸಿದೆ. ಈ ಚಿತ್ರದಲ್ಲಿ ನೀವು ಹೋರಾಟಗಾರ್ತಿ ಪೂಜಾ ಗಾಂಧಿಯನ್ನು ನೋಡುವಿರಿ" ಎಂದಿದ್ದರು.

  ಆದರೀಗ ಕಾರಣವನ್ನೇ ಹೇಳದೆ ಪೂಜಾ ಗಾಂಧಿ ಚಿತ್ರವನ್ನು ಬಿಟ್ಟು ಹೋಗಿದ್ದಾರೆ. 'ಹೂವಿ' ಚಿತ್ರದಲ್ಲಿ ನಾನು ನಟಿಸೋದಿಲ್ಲ ಎಂದು ಹೇಳಿದ್ದಾರೆ. ಪೂಜಾ ಗಾಂಧಿ ನಟನೆಯ ದಂಡುಪಾಳ್ಯ ಬಾಕ್ಸ್ ಆಫೀಸಿನಲ್ಲಿ ಯಶಸ್ವಿ ಎನಿಸಿದೆ. ಅತ್ತ, ಮಲಯಾಳಂನಲ್ಲಿ ರೇವತಿ ವರ್ಮಾ ನಿರ್ದೇಶನದ 'ಮ್ಯಾಡ್ ಡ್ಯಾಡ್'ನಲ್ಲಿ ಟಾಮ್ ಗರ್ಲ್ ಪಾತ್ರ ಸಿಕ್ಕಿದೆ. ಮಳೆ ಹುಡುಗಿ ಪೂಜಾ ಮತ್ತೆ ಮಿಂಚತೊಡಗಿದ್ದಾರೆ.

  ಆದರೆ, ಯಾಕೆ ಪೂಜಾ ಗಾಂಧಿ ಹೂವಿಯನ್ನು ಬಿಟ್ಟರು ಎಂಬುದಕ್ಕೆ ನಿರ್ಧಿಷ್ಟ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ಅದನ್ನು ಪೂಜಾ ಸ್ವತಃ ಹೇಳುವವರೆಗೆ ಈ ಅಂತೆ-ಕಂತೆ ಸುದ್ದಿಗಳೇ ಗಾಂಧಿನಗರದಲ್ಲಿ ಓಡಾಡುತ್ತಿರುತ್ತವೆ. ಆದಷ್ಟು ಬೇಗ ಪೂಜಾ ಹೇಳಿದರೆ ಅವರ ಅಭಿಮಾನಿಗಳಿಗೂ ಅನಾವಶ್ಯಕ ಗೊಂದಲ ಆಗುವುದಿಲ್ಲ. ಸದಯಕ್ಕಂತೂ ಹೂವಿಯನ್ನು ಬಿಟ್ಟ ಹುಡುಗಿ ಪೂಜಾ ಈ ಮೂಲಕ ಸುದ್ದಿಯಲ್ಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Actress Pooja Gandhi went out from the movie Hoovi. After her movie Dandupalya Success, Pooja Gandhi told she will not act in that movie. Nobody knows the exact reason. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X