For Quick Alerts
  ALLOW NOTIFICATIONS  
  For Daily Alerts

  ಪುರುಷ ಪಾತ್ರದಲ್ಲಿ ಮಿಂಚಲಿರುವ ನಟಿ ಪ್ರಿಯಾಮಣಿ

  |

  ಬಹುಭಾಷಾ ತಾರೆ ಪ್ರಿಯಾಮಣಿ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಈಗಾಗಲೇ ಕಾಣಿಸಿಕೊಂಡಾಗಿದೆ. ಆದರೂ ಅಪ್ಪಟ ಕಲಾವಿದೆ ಪ್ರಿಯಾಮಣಿಗೆ ತೃಪ್ತಿಯಿಲ್ಲ. ಅಷ್ಟೇ ಅಲ್ಲ, ಪ್ರಿಯಾಮಣಿಯಿಂದ ಯಾವುದೇ ಪಾತ್ರಕ್ಕಾದರೂ ನಟನೆ ತೆಗೆಸಬಹುದು ಎಂಬ ಕಾನ್ಫಿಡೆನ್ಸ್ ನಿರ್ದೇಶಕರುಗಳಿಗೂ ಇದೆ. ಹೀಗಾಗಿ ಪ್ರಿಯಾಮಣಿ ಇಂದಿನವೆರೆಗೆ ಎಂದೂ ಮಾಡದಿರುವ ಪಾತ್ರವೊಂದು ಪ್ರಿಯಾಮಣಿಯನ್ನು ಹುಡುಕಿಕೊಂಡು ಬಂದಿದೆ. ಅದು ಪರುಷನ ಪಾತ್ರ.

  ಹೌದು, ಅಂದುಕೊಂಡಂತೆ ನಡೆದರೆ, ಪ್ರಿಯಾಮಣಿ ಒಪ್ಪಿದರೆ ಆ ಪಾತ್ರಕ್ಕೆ ಪ್ರಿಯಾಮಣಿ ಜೀವ ತುಂಬಲಿದ್ದಾರೆ. ಮಲಯಾಳಂ ನಿರ್ದೇಶಕ ಮಜೀದ್ ಮನಸ್ಸೆರಿ ನಿರ್ದೇಶನದ ಮುಂಬರುವ 'ಯೆಸ್ ಐ ಆಮ್' ಚಿತ್ರದಲ್ಲಿ ವಿಶೇಷ ವ್ಯಕ್ತಿಯ ಸುತ್ತ ಕಥೆ ಹೆಣೆಯಲಾಗಿದ್ದು ಅದರಲ್ಲೊಂದಾದ ಪುರುಷ ಪಾತ್ರವನ್ನು ಪ್ರಿಯಾಮಣಿ ಪೋಷಿಸಲಿದ್ದಾರೆ. ನೈಟ್ ಕ್ಲಬ್ ಒಂದರಲ್ಲಿ ಡಾನ್ಸರ್ ಆಗಿರುವ 26 ವರ್ಷದ ವ್ಯಕ್ತಿಯೊಬ್ಬ ತಾನು ಪುರುಷ ಎಂಬ ಸಂಗತಿಯನ್ನು 'ಹೈಡ್' ಮಾಡಿರುವ ಕಥೆಯಿರುವ ಚಿತ್ರವಿದು.

  ಆದರೆ, ಅಮೆರಿಕಾದ ವಿದ್ಯಾರ್ಥಿಗಳು ಡಾನ್ಸ್ ಕಲಿಯುವುದಕ್ಕಾಗಿ ಆ ವ್ಯಕ್ತಿಯನ್ನು ಭೇಟಿಯಾಗಿ ಆತನ ಸಂಪರ್ಕದಲ್ಲಿ ಬಂದಾಗ ಆ ವ್ಯಕ್ತಿ ಹೆಣ್ಣಲ್ಲ, ಗಂಡು ಎಂಬ ಅಂಶ ಅವರಿಗೆ ಮನದಟ್ಟಾಗುತ್ತದೆ. ಆ ವ್ಯಕ್ತಿಯ ಒಂದೊಂದೇ ಗುಟ್ಟು ತಿಳಿದುಕೊಂಡು ಅವರು ಅದನ್ನು ಹೊರಜಗತ್ತಿಗೆ ರಟ್ಟು ಮಾಡುವ ನಿಟ್ಟಿನಲ್ಲಿ ಚಿತ್ರಕಥೆ ಸಾಗುತ್ತದೆ. ಇಂಥ ಅಪರೂಪದ ವಿಭಿನ್ನ ಕಥೆಯೊಂದು ಮಲಯಾಳಂ ಚಿತ್ರವಾಗಿ ಮೂಡಿಬರಲಿದೆ.

  ಈ ಚಿತ್ರದಲ್ಲಿ ನಟಿಸಲು ಪ್ರಿಯಾಮಣಿಗೆ ಆಫರ್ ನೀಡಿರುವ ನಿರ್ದೇಶಕ ಮಜೀದ್ ಮನಸ್ಸೆರಿ, ಈ ಕಥೆಯನ್ನು ಹಾಗೂ ಪಾತ್ರದ ಆಳ-ಅಗಲಗಳನ್ನುಪ್ರಿಯಾಮಣಿಗೆ ಹೇಳಿದ್ದಾರೆ. ಕಥೆಯನ್ನು ಕೇಳಿರುವ ಪ್ರಿಯಾಮಣಿಗೆ ಕಥೆ ಇಷ್ಟವಾಗಿದೆಯಂತೆ. ಆದರೆ, "ನಾನು ಸದ್ಯಕ್ಕೆ 'ಚಾರುಲತಾ' ಪ್ರಮೋಶನ್ ಕೆಲಸದಲ್ಲಿ ಬಿಜಿಯಾಗಿದ್ದೇನೆ. ನನಗೆ ಆಫರ್ ಕೊಟ್ಟಿರುವ ಆ ಪಾತ್ರ ನನಗೆ ಇಷ್ಟವಾಗಿದೆ. ಆದರೆ ಕಥೆಯನ್ನು ಸರಿಯಾಗಿ ಮತ್ತೊಮ್ಮೆ ನೋಡಿ ನಂತರ ನಾನು ನಟಿಸುವ ಬಗ್ಗೆ ದೃಢಪಡಿಸಲಿದ್ದೇನೆ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Famous actress Priyamani to act in Man role in Mollywood director Majeed Manasserry's upcoming film Yes I Am. The protagonist is a character called Vaigha, who is a dancer at Nightclub. But, Priyamani has to confirm this. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X