For Quick Alerts
  ALLOW NOTIFICATIONS  
  For Daily Alerts

  ಶಕೀಲಾ ಸಾವಿನ ಬಗ್ಗೆ ವಂದತಿ: 'ನಾನು ಆರಾಮಾಗಿದ್ದೇನೆ' ಎಂದ ನಟಿ

  |

  ವಯಸ್ಕರ ನಟಿ ಎಂದೇ ಗುರುತಿಸಿಕೊಂಡಿದ್ದ ಶಕೀಲಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಆಘಾತ ಮೂಡಿಸಿತ್ತು. ಆದರೆ, 'ಈ ಸುದ್ದಿ ಸುಳ್ಳು, ನಾನು ಆರಾಮಾಗಿದ್ದೇನೆ' ಎಂದು ಶಕೀಲಾ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

  ಮದ್ರಾಸ್ ಪ್ರಾಂತ್ಯದಲ್ಲಿ ಚಾನ್ ಬಾಷಾ ಮತ್ತು ಚಾನ್ ಬೇಗಂ ದಂಪತಿಯ ಮಗಳಾಗಿ ಶಕೀಲಾ ಜನಿಸಿದರು. ಇವರಿಗೆ ಆರು ಜನ ಸಹೋದರ-ಸಹೋದರಿಯರು. ಈ ಎಲ್ಲರ ಜವಾಬ್ದಾರಿಯನ್ನು ಶಕೀಲಾ ಅವರೇ ತೆಗೆದುಕೊಂಡಿದ್ದರು. ಆರಂಭದಲ್ಲಿ ಸಾಫ್ಟ್ ಪೋರ್ನ್ ಸಿನಿಮಾಗಳಲ್ಲಿ ನಟಿಸಿದ ಶಕೀಲಾ, ನಂತರ ಪೋಷಕ ಪಾತ್ರಗಳ ಕಡೆ ಹೆಜ್ಜೆಯಿಟ್ಟರು.

  ಸೆನ್ಸಾರ್‌ ಮಂಡಳಿಗೆ ಶಪಿಸಿ, ತನ್ನದೇ ಪ್ರತ್ಯೇಕ ಒಟಿಟಿ ಘೋಷಿಸಿದ ಶಕೀಲಾಸೆನ್ಸಾರ್‌ ಮಂಡಳಿಗೆ ಶಪಿಸಿ, ತನ್ನದೇ ಪ್ರತ್ಯೇಕ ಒಟಿಟಿ ಘೋಷಿಸಿದ ಶಕೀಲಾ

  ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹಾಸ್ಯಮಯ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ವೃತ್ತಿ ಜೀವನ ಹಾಗೂ ಖಾಸಗಿ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿರುವ ಶಕೀಲಾ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿವೆ. 47 ವರ್ಷದ ಶಕೀಲಾ ಮೃತಪಟ್ಟಿದ್ದಾರೆ ಎನ್ನುವ ಸುದ್ದಿಗೆ ಸ್ಪಷ್ಟನೆ ಕೊಟ್ಟ ನಟಿ ನಿಮ್ಮ ಪ್ರೀತಿಗೆ ಧನ್ಯವಾದ ಎಂದಿದ್ದಾರೆ. ಮುಂದೆ ಓದಿ....

  ನಾನು ಖುಷಿಯಿಂದ ಇದ್ದೇನೆ

  ನಾನು ಖುಷಿಯಿಂದ ಇದ್ದೇನೆ

  ''ನಾನು ಮೃತಪಟ್ಟಿದ್ದೇನೆ ಎನ್ನುವ ಸುದ್ದಿ ಕೇಳಿದೆ. ಆ ರೀತಿ ಏನೂ ಇಲ್ಲ. ನಾನು ಆರೋಗ್ಯವಾಗಿ ಖುಷಿಯಾಗಿದ್ದೇನೆ. ನನಗೆ ಯಾವುದೇ ಸಮಸ್ಯೆ ಇಲ್ಲ. ನನ್ನ ಈ ನಗುಮುಖ ನೋಡಿದ್ರೆ ಏನಾದರೂ ಸಮಸ್ಯೆ ಇದೆ ಎಂದು ಅನಿಸುತ್ತದೆಯೇ? ನನ್ನ ಬಗ್ಗೆ ಕಾಳಜಿ ತೋರಿದ ಜನರಿಗೆ ಧನ್ಯವಾದಗಳು'' ಎಂದಿದ್ದಾರೆ.

  ಕೆಟ್ಟ ಪ್ರಚಾರ ಮಾಡಿದವರಿಗೂ ಧನ್ಯವಾದ

  ''ನನ್ನ ಬಗ್ಗೆ ಕೆಟ್ಟದಾಗಿ ಸುದ್ದಿ ಹರಡಿಸಿದವರಿಗೆ ಥ್ಯಾಂಕ್ಸ್ ಹೇಳಬೇಕು. ಏಕಂದ್ರೆ, ನನ್ನ ಬಗ್ಗೆ ಜನ ಯೋಚಿಸುತ್ತಿದ್ದಾರೆ ಎಂದು ನನಗೆ ಇದರಿಂದ ತಿಳಿದಿದೆ. ಇಂತಹ ಸುದ್ದಿ ಸೃಷ್ಟಿಸಿದವರಿಗೂ ಧನ್ಯವಾದ'' ಎಂದು ಶಕೀಲಾ ವಿಡಿಯೋದಲ್ಲಿ ಹೇಳಿದ್ದಾರೆ.

  47 ವರ್ಷ ವಯಸ್ಸಾದರೂ ಮದುವೆಯಾಗಿಲ್ಲ ಏಕೆ? ಇದು ಶಕೀಲಾ ಪ್ರೇಮಕತೆ47 ವರ್ಷ ವಯಸ್ಸಾದರೂ ಮದುವೆಯಾಗಿಲ್ಲ ಏಕೆ? ಇದು ಶಕೀಲಾ ಪ್ರೇಮಕತೆ

  ಕಾಂಗ್ರೆಸ್ ಪಕ್ಷ ಸೇರಿದ್ದ ಶಕೀಲಾ

  ಕಾಂಗ್ರೆಸ್ ಪಕ್ಷ ಸೇರಿದ್ದ ಶಕೀಲಾ

  ಕಳೆದ ಮಾರ್ಚ್ ತಿಂಗಳಲ್ಲಿ ತಮಿಳುನಾಡು ರಾಜಕೀಯಕ್ಕೆ ಅಧಿಕೃತ ಪ್ರವೇಶದ ಪಡೆದ ಶಕೀಲಾ, ಕಾಂಗ್ರೆಸ್ ಪಕ್ಷ ಸೇರಿದ್ದರು. ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಂತೆ ಪ್ರಮುಖ ಜವಾಬ್ದಾರಿ ಸಿಕ್ಕಿತ್ತು. ತಮಿಳುನಾಡು ರಾಜ್ಯ ಕಾಂಗ್ರೆಸ್‌ನ ಮಾನವ ಹಕ್ಕು ಘಟಕದ ಕಾರ್ಯದರ್ಶಿಯಾಗಿ ಶಕೀಲ ಅವರನ್ನು ನೇಮಿಸಿತು.

  ಪ್ರತ್ಯೇಕ ಒಟಿಟಿ ನಿರ್ಮಾಣ

  ಪ್ರತ್ಯೇಕ ಒಟಿಟಿ ನಿರ್ಮಾಣ

  ಶಕೀಲಾ ತಮ್ಮದೇ ಆದ ಪ್ರತ್ಯೇಕ ಒಟಿಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆ ಒಟಿಟಿಯಲ್ಲಿ ಸಾಫ್ಟ್ ಪೋರ್ನ್ ಮಾದರಿಯ ಸಿನಿಮಾಗಳನ್ನು ಪ್ರದರ್ಶಿಸುವ ಸಾಧ್ಯತೆ ಇದೆ. ಈ ಹಿಂದೆ ಶಕೀಲಾ ನಿರ್ಮಾಣದ 'ಲೇಡೀಸ್ ನಾಟ್ ಅಲೌಡ್' ಹಾಗೂ ಇನ್ನಿತರೆ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯಿಂದ ಬಹಳ ಸಮಸ್ಯೆ ಎದುರಾಯಿತು. ಈ ಸಮಸ್ಯೆಯಿಂದ ಬಿಡುಗಡೆ ಪಡೆಯಲು ಇದೀಗ ಖುದ್ದು ಶಕೀಲಾ ಅವರೇ ಹೊಸ ಒಟಿಟಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆ.

  ಶಕೀಲಾ ಬಯೋಫಿಕ್

  ಶಕೀಲಾ ಬಯೋಫಿಕ್

  ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಶಕೀಲ ಜೀವನ ಆಧರಿಸಿ ಸಿನಿಮಾ ಮಾಡಿದ್ದರು. ಸಿನಿಮಾದಲ್ಲಿ ರಿಚಾ ಚಡ್ಡಾ, ಶಕೀಲ ಪಾತ್ರದಲ್ಲಿ ನಟಿಸಿದ್ದರು. ಹಿಂದಿಯಲ್ಲಿ ತೆರೆಕಂಡ ಚಿತ್ರ ಅಷ್ಟಾಗಿ ಸದ್ದು ಮಾಡಲಿಲ್ಲ. ಈ ಚಿತ್ರದಲ್ಲಿ ಶಕೀಲಾ ಅವರ ಬಾಲ್ಯ, ಸಿನಿಮಾ ಜರ್ನಿ, ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಘಟನೆಗಳು ಎಲ್ಲವೂ ಒಳಗೊಂಡಿತ್ತು.

  ಟಿವಿ ಕಾರ್ಯಕ್ರಮದಲ್ಲಿ ಖ್ಯಾತಿ

  ಟಿವಿ ಕಾರ್ಯಕ್ರಮದಲ್ಲಿ ಖ್ಯಾತಿ

  2012ರಲ್ಲಿ ನಾನು ಇನ್ಮುಂದೆ ಸಾಫ್ಟ್ ಪೋರ್ನ್ ಸಿನಿಮಾದಲ್ಲಿ ನಟಿಸಲ್ಲ ಎಂದು ಶಕೀಲಾ ಪ್ರಕಟಿಸಿಕೊಂಡರು. 47 ವರ್ಷದ ವಯಸ್ಸಿನ ಶಕೀಲಾಗೆ ಇನ್ನು ಮದುವೆ ಆಗಿಲ್ಲ. ಆದರೆ, ಮಂಗಳಮುಖಿ ಮಗುವೊಂದನ್ನು ದತ್ತು ಪಡೆದುಕೊಂಡು ಬೆಳೆಸುತ್ತಿದ್ದಾರೆ. ಮಿಲಾ ಎಂದು ಹೆಸರಿಟ್ಟಿದ್ದು, ಈಕೆಯೂ ನಟನೆ ಮಾಡುತ್ತಿದ್ದಾರೆ. 'ಕುಕ್ಕು ವಿತ್ ಕೋಮಲಿ 2' ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಶಕೀಲಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  English summary
  Actress Shakeela denies the rumours about her demise and health problems.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X