For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ತಂದೆಯನ್ನು ಕಳೆದುಕೊಂಡ ನಟಿ ಅಮಲಾ ಪೌಲ್

  |
  ದಕ್ಷಿಣ ಭಾರತದ ಸ್ಟಾರ್ ನಟಿಯ ತಂದೆ ವಿಧಿವಶ | Amala Paul | FilmiBeat Kannada

  ದಕ್ಷಿಣ ಭಾರತದ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ನಟಿ ಅಮಲಾ ಪೌಲ್ ತಂದೆ ಪೌಲ್ ವರ್ಗೀಸ್ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 61 ವರ್ಷ ವಯಸ್ಸಿನ ಪೌಲ್ ವರ್ಗೀಸ್ ನಿನ್ನೆ ಕೇರಳದ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.

  ಇಂದು ಕೇರಳದ ಕುರುಪ್ಪಮ್ಪಡಿಯಲ್ಲಿರುವ ಸೇಂಟ್.ಪೀಟರ್ ಮತ್ತು ಸೇಂಟ್ ಪೌಲ್ ಕ್ಯಾಥೋಲಿಕ್ ಚರ್ಚ್ ನ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪತ್ನಿ ಅನೀಸ್ ಪೌಲ್, ಪುತ್ರ ಅಭಿಜಿತ್ ಪೌಲ್ ಮತ್ತು ಪುತ್ರಿ ಅಮಲಾ ಪೌಲ್ ರನ್ನ ಪೌಲ್ ವರ್ಗೀಸ್ ಅಗಲಿದ್ದಾರೆ.

  ನಟನೆಯಿಂದ ನಿರ್ಮಾಣಕ್ಕೆ ಕೈಹಾಕಿದ 'ಹೆಬ್ಬುಲಿ' ನಟಿ ಅಮಲಾ ಪೌಲ್

  ನಟಿ ಅಮಲಾ ಪೌಲ್ ನಿನ್ನೆ ಚೆನ್ನೈನಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಂದೆ ನಿಧನದ ಸುದ್ದಿ ತಿಳಿದ ಕೂಡಲೆ ಕೇರಳಕ್ಕೆ ವಾಪಸ್ ಆದರು.

  ಅಸಲಿಗೆ, ಪುತ್ರಿ ಅಮಲಾ ಪೌಲ್ ಚಲನಚಿತ್ರಗಳಲ್ಲಿ ನಟಿಸುವುದು ತಂದೆ ಪೌಲ್ ವರ್ಗೀಸ್ ಗೆ ಇಷ್ಟವಿರಲಿಲ್ಲ. ಆದ್ರೆ, ಮಗಳ ಮೇಲಿನ ಪ್ರೀತಿಯಿಂದ ಒಪ್ಪಿಗೆ ಸೂಚಿಸಿದ್ದರು.

  ಮೊದಮೊದಲು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ ಅಮಲಾ ಪೌಲ್ ಬಳಿಕ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಕನ್ನಡದ ಚಿತ್ರದಲ್ಲೂ ನಟಿಸಿರುವ ಅಮಲಾ ಪೌಲ್ ಕೈಯಲ್ಲಿ ಸದ್ಯ ಮೂರ್ನಾಲ್ಕು ಚಿತ್ರಗಳಿವೆ.

  English summary
  Actress Amala Paul father Paul Varghese no more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X