For Quick Alerts
  ALLOW NOTIFICATIONS  
  For Daily Alerts

  ದೃಶ್ಯಂ-2 ಚಿತ್ರದ ಕುರಿತು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ

  |

  2013ರಲ್ಲಿ ತೆರೆಕಂಡ ಮಲಯಾಳಂ ಹಿಟ್ ಸಿನಿಮಾ ದೃಶ್ಯಂ ತದನಂತರ ಹಲವು ಭಾಷೆಯಲ್ಲಿ ರೀಮೇಕ್ ಆಯ್ತು. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ದೃಶ್ಯಂ ಚಿತ್ರ ತಯಾರಾಗಿ ಒಳ್ಳೆಯ ಸಕ್ಸಸ್ ಕಂಡಿತ್ತು.

  Brahma ಚಿತ್ರದಲ್ಲಿನ ರೋಮಾಂಚಕ ಫೈಟ್ ಸೀನ್ ತಯಾರಾಗಿದ್ದು ಹೀಗೆ | Action Scene Making | Filmibeat Kannada

  ಇದೀಗ, ಮೂಲ ಭಾಷೆ ಮಲಯಾಳಂನಲ್ಲಿ ದೃಶ್ಯಂ-2 ಚಿತ್ರದ ತಯಾರಿ ನಡೆದಿದೆ. ಮೊದಲ ಭಾಗದಲ್ಲಿ ಹ್ಯಾಪಿ ಎಂಡಿಂಗ್ ಮೂಲಕ ಕಥೆ ಮುಗಿಸಿದ್ದ ನಿರ್ದೇಶಕ ಜಿತು ಜೋಸೆಫ್, ಮತ್ತೆ ಅಲ್ಲಿಂದ ಕಥೆ ಮುಂದುವರಿಸುತ್ತಿದ್ದಾರೆ.

  'ಅವತಾರ್' ಶೈಲಿಯ ಚಿತ್ರಕ್ಕೆ ಸ್ಟಾರ್ ನಟ ಸಜ್ಜು, ಕನ್ನಡದಲ್ಲೂ ರಿಲೀಸ್!

  ಸೆಪ್ಟೆಂಬರ್ ತಿಂಗಳಲ್ಲಿ ದೃಶ್ಯಂ ಸೀಕ್ವೆಲ್ ಆರಂಭವಾಗುತ್ತಿದೆ. ನಟ ಮೋಹನ್ ಲಾಲ್ ಈ ಚಿತ್ರದಲ್ಲೂ ನಾಯಕರಾಗಿ ಮುಂದುವರಿಯುತ್ತಿದ್ದಾರೆ. ಮೂಲಗಳ ಪ್ರಕಾರ ದೃಶ್ಯಂ ಮುಂದುವರಿದ ಭಾಗ ಥ್ರಿಲ್ಲಿಂಗ್ ಆಗಿರಲಿದೆ ಎನ್ನಲಾಗಿತ್ತು. ಈ ಬಗ್ಗೆ ಜಿತು ಜೋಸೆಫ್ ಸ್ಪಷ್ಟನೆ ನೀಡಿದ್ದು, ಇದು ಕೌಟುಂಬಿಕ ಭಾವನೆಗಳ ಆಧಾರಿತವಾಗಿ ತಯಾರಾಗಲಿದೆ. ಇದು ಥ್ರಿಲ್ಲರ್ ಅಲ್ಲ ಎಂದಿದ್ದಾರೆ.

  ಅಂದ್ರೆ, ದೃಶ್ಯಂ ಚಿತ್ರದಲ್ಲಿ ಅಪರಾಧದಿಂದ ತನ್ನ ಕುಟುಂಬವನ್ನು ರಕ್ಷಿಸಿಕೊಂಡ ನಾಯಕ, ಅದಾದ ಬಳಿಕ ಕುಟುಂಬವನ್ನು ಹೇಗೆ ಕಾಪಾಡಿಕೊಂಡು ಮುಂದುವರಿಯುತ್ತಾನೆ ಎಂಬುದನ್ನು ಭಾವನಾತ್ಮಕ ಅಂಶದ ಮೂಲಕ ಪ್ರಸ್ತುತ ಪಡಿಸಲು ನಿರ್ದೇಶಕರು ಒಲವು ತೋರಿದ್ದಾರೆ.

  ಸೆಪ್ಟೆಂಬರ್ 7 ರಂದು ಕೊಚ್ಚಿಯಲ್ಲಿ ದೃಶ್ಯಂ 2 ಚಿತ್ರೀಕರಣ ಆರಂಭವಾಗಲಿದೆ. ಆರಂಭದಲ್ಲಿ 14 ದಿನಗಳ ಶೆಡ್ಯೂಲ್ ನಿಗದಿಯಾಗಿದೆ. ಇನ್ನು ಈ ಹಿಂದಿನ ಚಿತ್ರದಲ್ಲಿ ಪಾತ್ರಗಳನ್ನೇ ಮುಂದುವರಿದ ಭಾಗದಲ್ಲೂ ಉಳಿಸಿಕೊಳ್ಳಲಾಗಿದೆ. ಮೋಹನ್ ಲಾಲ್, ಮೀನಾ, ಹಾಗೂ ಮಕ್ಕಳ ಪಾತ್ರದಲ್ಲಿ ಎಸ್ತರ್ ಅನಿಲ್ ಮತ್ತು ಅನ್ಸಿಬಾ ಹಸನ್ ಬಣ್ಣ ಹಚ್ಚಲಿದ್ದಾರೆ.

  ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ ಅಂದ್ರೆ ಇತರೆ ಭಾಷೆಗಳಲ್ಲೂ ಈ ಸಿನಿಮಾ ರೀಮೇಕ್ ಆಗುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಹಾಗಾಗಿ, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

  English summary
  Malayalam superstar Mohanlal starrer Drishyam 2 is all set to start rolling in September 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X