For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ 31 ಕ್ಕೆ ದೃಶ್ಯಂ 2 ಟೀಸರ್: ಮತ್ತೊಂದು ಥ್ರಿಲ್ಲರ್ ಯಾನಕ್ಕೆ ತಯಾರಾಗಿ

  |

  ಕೆಲವು ವರ್ಷಗಳ ಹಿಂದೆ ಬಿಡುಗಡೆ ಆಗಿ ದಾಖಲೆಗಳನ್ನು ಸೃಷ್ಟಿಸಿದ ಮಲಯಾಳಂ ಸಿನಿಮಾ 'ದೃಶ್ಯಂ' ನ ಎರಡನೇ ಭಾಗ ರೆಡಿಯಾಗಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆ ಸಹ ಆಗಲಿದೆ.

  ಆದರೆ ಅದಕ್ಕೆ ಮುನ್ನಾ ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿದ್ದು, ಮೋಹನ್‌ಲಾಲ್ ಅವರು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ಡಿಸೆಂಬರ್ 31 ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ದೃಶ್ಯಂ 2 ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ.

  ಮೋಹನ್ ಲಾಲ್ ಅವರು ದೃಶ್ಯಂ 2 ಸಿನಿಮಾದ ಟೀಸರ್‌ನ ಚಿತ್ರವೊಂದನ್ನು ಸಹ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  ದೃಶ್ಯಂ ಸಿನಿಮಾದ ಮುಂದುವರೆದ ಭಾಗವೇ ದೃಶ್ಯಂ 2 ಆಗಿರಲಿದೆ. ಆ ಸಿನಿಮಾದಲ್ಲಿ ನಟಿಸಿದ್ದ ಮೋಹನ್‌ ಲಾಲ್, ಮೀನಾ, ಅನ್ಸಿಬಾ ಹಾಸನ್, ಎಸ್ತರ್ ಅನಿಲ್ ಇನ್ನೂ ಕೆಲವರು ನಟಿಸಲಿದ್ದಾರೆ. ದೃಶ್ಯಂ ಸಿನಿಮಾ ನಡೆದ ಅದೇ ಹಳ್ಳಿಯಲ್ಲಿ ಎರಡನೇ ಸಿನಿಮಾದ ಕತೆಯೂ ನಡೆಯಲಿದೆ.

  ಪೊಗರು ರಿಲೀಸ್ ಗೆ ಮೊದಲೆ ಮತ್ತೊಂದು ಸುರ್ಪ್ರೈಸ್ ಕೊಟ್ಟ ಧ್ರುವ ಸರ್ಜಾ | Filmibeat Kannada

  ದೃಶ್ಯಂ ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಕನ್ನಡ, ತೆಲುಗು, ತಮಿಳು, ಹಿಂದಿ, ಕೊರಿಯಾ, ಶ್ರೀಲಂಕಾದ ಸಿಂಹಳಿ ಇನ್ನೂ ಕೆಲವು ಭಾಷೆಗಳಿಗೆ ರೀಮೇಕ್ ಆಗಿತ್ತು ದೃಶ್ಯಂ ಸಿನಿಮಾ. ದೃಶ್ಯಂ ಸಿನಿಮಾ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ದೃಶ್ಯಂ 2 ಸಿನಿಮಾ ನಿರ್ದೇಶಿಸಿದ್ದಾರೆ. ಮೊದಲ ಸಿನಿಮಾ ನಿರ್ಮಿಸಿದ್ದ ಅಂಥೋಣಿ ಪೆರಂಬೂರ್ ಅವರೇ ಎರಡನೇ ಸಿನಿಮಾ ಸಹ ನಿರ್ಮಿಸುತ್ತಿದ್ದಾರೆ.

  English summary
  Mohanlal starer Malayalam thriller movie Drishyam 2's teaser will release on December 31 night 12 o'clock.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X