For Quick Alerts
  ALLOW NOTIFICATIONS  
  For Daily Alerts

  'ಕುರುಪ್' ಚಿತ್ರದಲ್ಲಿ ಸ್ಟಾರ್ ನಟ: ಸ್ಪಷ್ಟನೆ ನೀಡಿದ ದುಲ್ಕಾರ್ ಸಲ್ಮಾನ್

  |

  ಮಲಯಾಳಂ ನಟ ದುಲ್ಕಾರ್ ಸಲ್ಮಾನ್ ನಟನೆಯ ಕುರುಪ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ವೈಯಕ್ತಿಕವಾಗಿ ದುಲ್ಕಾರ್ ಬಹಳ ಇಷ್ಟಪಟ್ಟು ಮಾಡಿರುವ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

  ಇದೀಗ, ಕುರುಪ್ ಚಿತ್ರದಲ್ಲಿ ದುಲ್ಕಾರ್ ಸಲ್ಮಾನ್ ಜೊತೆ ಮಲಯಾಳಂ ಇಂಡಸ್ಟ್ರಿಯ ಮತ್ತೊಬ್ಬ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಚರ್ಚೆಯಾಗುತ್ತಿದೆ. ಈ ಸುದ್ದಿಯ ಬಳಿಕ ಸುಕುಮಾರನ್ ಮತ್ತು ದುಲ್ಕಾರ್ ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಬಹುದು ಎಂದು ಪ್ರೇಕ್ಷಕರು ಕಾಯುವಂತಾಗಿದೆ.

  ಹ್ಯಾಪಿ ಬರ್ತಡೇ ದುಲ್ಕರ್ ಸಲ್ಮಾನ್; 'ಬೆಂಗಳೂರು ಡೇಸ್' ನಟನ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಹ್ಯಾಪಿ ಬರ್ತಡೇ ದುಲ್ಕರ್ ಸಲ್ಮಾನ್; 'ಬೆಂಗಳೂರು ಡೇಸ್' ನಟನ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ

  ಕೇವಲ ಪೃಥ್ವಿರಾಜ್ ಮಾತ್ರವಲ್ಲ ಟೊವಿನೋ ಥಾಮಸ್, ನಿವಿನ್ ಪೌಲಿ ಸೇರಿದಂತೆ ಇನ್ನು ಕೆಲವು ನಟರು ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ದುಲ್ಕಾರ್ ಸಲ್ಮಾನ್, 'ಇದೆಲ್ಲ ಕೇವಲ ವಂದತಿ ಅಷ್ಟೇ' ಎಂದಿದ್ದಾರೆ.

  ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ನಟ ''ಕುರುಪ್ ಚಿತ್ರದ ಬಗ್ಗೆ ತಿಳಿಯಲು ನಿಮ್ಮ ಕಾತುರ ನೋಡಿದ್ರೆ ಖುಷಿಯಾಗುತ್ತದೆ. ಶೀಘ್ರದಲ್ಲೇ ನಿಮ್ಮ ಮುಂದೆ ಬರಲು ಉತ್ಸುಕರಾಗಿದ್ದೇವೆ. ಆದ್ರೀಗ ಕೆಲವು ವದಂತಿಗಳು ಹಬ್ಬಿವೆ. ಸರಿಯಾದ ಸಮಯ ಬಂದಾಗ, ನೀವೆಲ್ಲರೂ ಚಿತ್ರವನ್ನು ವೀಕ್ಷಿಸಬಹುದು ಮತ್ತು ಕುರುಪ್‌ನಲ್ಲಿ ಅತಿಥಿ ಪಾತ್ರಗಳನ್ನು ಮಾಡುತ್ತಿರುವವರನ್ನು ಪ್ರತ್ಯಕ್ಷವಾಗಿ ನೋಡಬಹುದು. ಈಗ ಹರಡಿರುವ ಮಾಹಿತಿ ಸುಳ್ಳು. ದಯವಿಟ್ಟು ಇಂತಹ ಸುದ್ದಿಗಳನ್ನು ನಂಬಬೇಡಿ ಮತ್ತು ಪ್ರಚಾರ ಮಾಡಬೇಡಿ ಎಂದು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ಅಭಿಮಾನಿಗಳು ಹೊಂದಿರುವ ನಿರೀಕ್ಷೆಗಳನ್ನು ನಿರಾಸೆ ಮಾಡುವುದು ಸರಿಯಲ್ಲ'' ಎಂದು ಬರೆದುಕೊಂಡಿದ್ದಾರೆ.

  ಈ ಮೂಲಕ ದುಲ್ಕಾರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಕುರಿತು ಸಂಚಲನ ಸೃಷ್ಟಿಸಿದ್ದ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದಾರೆ. ಆದರೆ, ಇವರಿಬ್ಬರನ್ನು ಒಟ್ಟಿಗೆ ನೋಡಬೇಕು ಎನ್ನುವ ಅಭಿಮಾನಿಗಳ ಆಸೆಯನ್ನು ಸದ್ಯಕ್ಕೆ ಮರೆಯುವಂತಿಲ್ಲ.

  ಕುರುಪ್ ಟೀಸರ್: ಕನ್ನಡದಲ್ಲಿ ದುಲ್ಕರ್ ಸಲ್ಮಾನ್ ನೋಡಿ ದಿಲ್ ಖುಷ್ಕುರುಪ್ ಟೀಸರ್: ಕನ್ನಡದಲ್ಲಿ ದುಲ್ಕರ್ ಸಲ್ಮಾನ್ ನೋಡಿ ದಿಲ್ ಖುಷ್

  ಇನ್ನು ಕುರುಪ್ ಚಿತ್ರವನ್ನು ಶ್ರೀನಾಥ್ ರಾಜೇಂದ್ರನ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು, ಮಲಯಾಳಂ, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಕುರುಪ್ ತೆರೆಕಾಣಲಿದೆ.

  Dulquer Salmaan Clarified about Kurup movie

  ಸುಮಾರು 36 ವರ್ಷ ಪೊಲೀಸರ ಕೈಗೆ ಸಿಗದೆ ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸುಕುಮಾರ್ ಕುರುಪ್ ಎಂಬ ವ್ಯಕ್ತಿಯ ಕುರಿತಾದ ಸಿನಿಮಾ ಇದಾಗಿದೆ, ಶೀರ್ಷಿಕೆ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ನಟಿಸಿದ್ದಾರೆ. ಶೋಭಿತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ತಾಂತ್ರಿಕವಾಗಿ ಕುರುಪ್ ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ. ನಿಮಿಶ್ ರವಿ ಅವರ ಛಾಯಾಗ್ರಹಣ, ಸುಶಿನ್ ಶ್ಯಾಮ್ ಸಂಗೀತ ನಿರ್ದೇಶಿಸಿದ್ದಾರೆ.

  'ಸೆಕೆಂಡ್ ಶೋ' ಚಿತ್ರದ ಬಳಿಕ ನಿರ್ದೇಶಕ ಶ್ರೀನಾಥ್ ರಾಜೇಂದ್ರನ್ ಜೊತೆ ದುಲ್ಕರ್ ಕೆಲಸ ಮಾಡಿದ್ದಾರೆ. ಕೆ.ಎಸ್.ಅರವಿಂದ್, ಜಿಥಿನ್ ಕೆ ಜೋಸ್ ಮತ್ತು ಡೇನಿಯಲ್ ಸಯೂಜ್ ನಾಯರ್ ಈ ಚಿತ್ರದ ಚಿತ್ರಕಥೆ ಬರೆದಿದ್ದಾರೆ.

  ಕುರುಪ್ ಚಿತ್ರ ಹೊರತುಪಡಿಸಿ, ಸೆಲ್ಯೂಟ್, ಹೇ ಸಿನಮಿಕಾ ಮತ್ತು ಯುಧಂ ತೋ ರಸಿನಾ ಪ್ರೇಮ ಕಥ ಎನ್ನುವ ಸಿನಿಮಾಗಳಲ್ಲಿ ದುಲ್ಕಾರ್ ಸಲ್ಮಾನ್ ಬ್ಯುಸಿಯಾಗಿದ್ದಾರೆ.

  English summary
  Reports said 'Prithviraj, Tovino Thomas, Nivin Pauly have done cameo roles in Kurup. Dulquer Salmaan’s declined this news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X