Don't Miss!
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಪ್ಪನಿಗೆ ಆಕ್ಷನ್-ಕಟ್ ಹೇಳಲಿದ್ದಾರೆಯೇ ದುಲ್ಕರ್ ಸಲ್ಮಾನ್?
ದುಲ್ಕರ್ ಸಲ್ಮಾನ್ ಸದ್ಯದ ಭಾರತೀಯ ಸಿನಿ ಉದ್ಯಮದಲ್ಲಿ ಮಿನುಗುತ್ತಿರುವ ನಟ. ಮಲೆಯಾಳಂ ಸಿನಿರಂಗವನ್ನು ತಮ್ಮ ಅದ್ಭುತ ಅಭಿನಯದಿಂದ ಸೂರೆಗೊಳಿಸಿರುವ ಇವರು, ಕಾಲಿವುಡ್, ಬಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದಾರೆ.
Recommended Video
ಅದ್ಭುತ ನಟರಾಗಿರುವ ದುಲ್ಕರ್ ಸಲ್ಮಾನ್, ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ನಿರ್ದೇಶನದತ್ತ ಮುಖ ಮಾಡುವ ಸೂಚನೆ ನೀಡಿದ್ದಾರೆ.
ದುಲ್ಕರ್ ತಂದೆ ಖ್ಯಾತ ನಟ ಮುಮ್ಮುಟಿ ಎಂಬುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ತಮ್ಮ ತಂದೆಗೆ ಆಕ್ಷಯ್-ಕಟ್ ಹೇಳುವ ಆಸೆಯನ್ನು ದುಲ್ಕರ್ ಹೊರ ಹಾಕಿದ್ದು, ಇದಕ್ಕಾಗಿ ತಯಾರಿ ಆರಂಭಿಸಿದ್ದಾರೆ.

ಕಿರುಚಿತ್ರಕ್ಕೆ ಅಪ್ಪನಿಗೆ ಆಕ್ಷನ್-ಕಟ್ ಹೇಳಿದ್ದಾರೆ ದುಲ್ಕರ್ ಸಲ್ಮಾನ್
ಭಾರತೀಯ ಸಿನಿ ರಂಗದ ಸ್ಟಾರ್‌ಗಳೆಲ್ಲಾ ಸೇರಿ 'ಫ್ಯಾಮಿಲಿ' ಎಂಬ ಕಿರುಚಿತ್ರ ಮಾಡಿದ್ದು, ಇದರಲ್ಲಿ ಅಮಿತಾಬ್ ಬಚ್ಚನ್, ಶಿವರಾಜ್ ಕುಮಾರ್, ಚಿರಂಜೀವಿ, ರಜನೀಕಾಂತ್, ಮುಮ್ಮುಟಿ, ಮೋಹನ್ ಲಾಲ್ ಮುಂತಾದವರು ನಟಿಸಿದ್ದರು. ಈ ಕಿರುಚಿತ್ರಕ್ಕಾಗಿ ಮುಮ್ಮುಟಿ ಪಾತ್ರದ ಶೂಟ್ ಮಾಡಿದ್ದು ದುಲ್ಕರ್ ಸಲ್ಮಾನ್ ಅಂತೆ.

ದುಲ್ಕರ್ ಸಲ್ಮಾನ್-ಮುಮ್ಮುಟಿ ಒಟ್ಟಿಗೆ ನಟನೆ?
ಮಲೆಯಾಳಂ ಸಿನಿ ಪ್ರಿಯರು ಮೊದಲಿನಿಂದಲೂ ದುಲ್ಕರ್ ಸಲ್ಮಾನ್ ಮತ್ತು ಮುಮ್ಮುಟಿ ಒಟ್ಟಿಗೆ ನಟಿಸಬೇಕೆಂದು ಒತ್ತಾಯ ಮಾಡುತ್ತಲೇ ಇದ್ದಾರೆ. ಆದರೀಗ ಅಪ್ಪನ ಸಿನಿಮಾವನ್ನು ಮಗ ನಿರ್ದೇಶಿಸಲಿ ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಸಿನಿಮಾ ಪ್ರವೇಶಕ್ಕೆ ಮೊದಲು ಕಿರುಚಿತ್ರ ಮಾಡಿದ್ದರು ದುಲ್ಕರ್ ಸಲ್ಮಾನ್
ದುಲ್ಕರ್ ಸಲ್ಮಾನ್ ಸಿನಿಮಾ ರಂಗ ಪ್ರವೇಶಿಸುವುದಕ್ಕೆ ಮೊದಲೇ ಕಿರು ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದರು. ಅವರು ನಿರ್ದೇಶಕನಾಗುವ ಕನಸಿಟ್ಟುಕೊಂಡೇ ಸಿನಿಮಾ ರಂಗಕ್ಕೆ ಬಂದವರು.

ತಮ್ಮದೇ ಪ್ರೊಡಕ್ಷನ್ ಹೌಸ್ ತೆರೆದಿರುವ ದುಲ್ಕರ್
ಇತ್ತೀಚೆಗಷ್ಟೆ ತಮ್ಮದೇ ಪ್ರೊಡಕ್ಷನ್ ಹೌಸ್ ಸಹ ತೆರೆದಿರುವ ದುಲ್ಕರ್ ಶೀಘ್ರದಲ್ಲಿಯೇ ನಿರ್ದೇಶಕನ ಟೋಪಿ ಧರಿಸುವ ಸಾಧ್ಯತೆ ಇದೆ. ಅವರು ತಮ್ಮ ಕೆಲವು ಸಂದರ್ಶನಗಳಲ್ಲಿ ಸಹ ಈ ಬಗ್ಗೆ ಹೇಳಿಕೊಂಡಿದ್ದಾರೆ.