For Quick Alerts
  ALLOW NOTIFICATIONS  
  For Daily Alerts

  ಬಹುಭಾಷಾ ನಟ, ನಿರ್ದೇಶಕ ಪ್ರತಾಪ್ ಪೋತೆನ್ ವಿಧಿವಶ

  |

  ಖ್ಯಾತ ಬಹುಭಾಷಾ ನಟ, ನಿರ್ದೇಶಕ, ಸಿನಿ ಬರಹಗಾರ ಪ್ರತಾಪ್ ಪೋತೆನ್ ಇಂದು (ಜುಲೈ 15) ನಿಧನ ಹೊಂದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

  ಮಲಯಾಳಂ ಮೂಲದ ಪ್ರತಾಪ್ ಪೋತೆನ್ ಚೆನ್ನೈನ ಕಿಲ್‌ಪೌಕ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ತಮ್ಮ ನಿವಾಸದಲ್ಲಿ ಅವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಪ್ರತಾಪ್ ಪೋತೆನ್ ನಿಧನಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

  ಕೇರಳದ ತಿರುವನಂತರಪುರದಲ್ಲಿ ಆಗಸ್ಟ್ 13, 1951 ರಲ್ಲಿ ಜನಿಸಿದ ಪ್ರತಾಪ್ ಪೋತೆನ್ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದರು. ಜಾಹೀರಾತು ಸಂಸ್ಥೆಗಳಿಗೆ ಕಾಪಿ ರೈಟರ್ ಆಗಿಯೂ ಕೆಲಸ ಮಾಡಿದ್ದರು. ಇಂಗ್ಲೀಷ್ ನಾಟಕ ಒಂದರಲ್ಲಿ ಇವರ ಅಭಿನಯ ಮೆಚ್ಚಿ ನಿರ್ದೇಶಕರೊಬ್ಬರು ಮಲಯಾಳಂ ಸಿನಿಮಾಗಳಲ್ಲಿ ನಟಿಸುವಂತೆ ಆಹ್ವಾನಿಸಿದರು. ಅಂತೆಯೇ 1978 ರಲ್ಲಿ 'ಆರವಮ್' ಹೆಸರಿನ ಸಿನಿಮಾದಲ್ಲಿ ನಟಿಸಿದರು. ತಾವು ನಟಿಸಿದ ಎರಡನೇಯ ಸಿನಿಮಾಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಸಹ ಪಡೆದುಕೊಂಡರು.

  ಆ ನಂತರ ಹಿಂತಿರುಗಿ ನೋಡದ ಪ್ರತಾಪ್ ಪೋತೆನ್ ವರ್ಷಕ್ಕೆ ಹತ್ತು-ಹನ್ನೆರಡು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಭಾರಿ ಬೇಡಿಕೆಯ ನಟರಾದ ಪ್ರತಾಪ್ ಪೋತೆನ್ ಕೇವಲ ಮಲಯಾಳಂ ಮಾತ್ರವೇ ಅಲ್ಲದೆ, ತಮಿಳು, ತೆಲುಗು ಸಿನಿಮಾಗಳಲ್ಲಿ ಸಹ ನಟಿಸಿ ಸೈ ಎನಿಸಿಕೊಂಡರು. ಮಲಯಾಳಂನಲ್ಲಿ ಗಳಿಸಿದ್ದಷ್ಟೆ ಪ್ರಸಿದ್ಧಿ, ಖ್ಯಾತಿಯನ್ನು ತಮಿಳು ಚಿತ್ರರಂಗದಲ್ಲಿಯೂ ಪ್ರತಾಪ್ ಗಳಿಸಿಕೊಂಡರು.

  ನಾಯಕ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ಖಳನಾಟನಾಗಿ ಪ್ರತಾಪ್ ಪೋತೆನ್ ನಟಿಸಿ ಸೈ ಎನಿಸಿಕೊಂಡಿದ್ದರು. ಅವರ ಹಲವು ಪಾತ್ರಗಳಿಗೆ ರಾಜ್ಯ, ಸೈಮಾ, ಫಿಲಂಫೇರ್ ಪ್ರಶಸ್ತಿಗಳು ಲಭಿಸಿವೆ.

  ಪ್ರತಾಪ್ 1985 ರಲ್ಲಿ ಖ್ಯಾತ ನಟಿ ರಾಧಿಕಾರನ್ನು ವಿವಾಹವಾದರು, ಆದರೆ ಅವರ ನಡುವೆ ಹೊಂದಾಣಿಕೆ ಸರಿಬರದ ಕಾರಣ ಒಂದೇ ವರ್ಷದಲ್ಲಿ ವಿಚ್ಛೇಧನ ಪಡೆದುಕೊಂಡರು. ಬಳಿಕ ರಾಧಿಕಾ, ನಟ ಶರತ್ ಕುಮಾರ್ ಅನ್ನು ವಿವಾಹವಾದರು. ಪ್ರತಾಪ್ ಪೋತೆನ್ ಉದ್ಯಮಿಯಾಗಿದ್ದ ಅಮಲ್ಯ ಸತ್ಯನಾಥನ್ ಅವರನ್ನು 1990 ರಲ್ಲಿ ವಿವಾಹವಾದರು. ಅವರಿಗೆ ಒಬ್ಬ ಮಗಳಿದ್ದಾಳೆ. ಅಮಲ್ಯ ಹಾಗೂ ಪ್ರತಾಪ್ 22 ವರ್ಷಗಳ ಕಾಲ ಜೊತೆಗೆ ಸಂಸಾರ ನಡೆಸಿ ಬಳಿಕ ವಿಚ್ಛೇಧನ ಪಡೆದು ದೂರಾದರು.

  ಪ್ರತಾಪ್ ಅಗಲಿಕೆಗೆ ಮಲಯಾಳಂ ಖ್ಯಾತ ನಟ ಮೋಹನ್‌ಲಾಲ್, ಮಮ್ಮುಟಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಪ್ರತಾಪ್ ನಟಿಸಿದ ಕೊನೆಯ ಸಿನಿಮಾ 'ಬರೋಜ್' ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

  Recommended Video

  Neetha Ashok | ಸಲ್ಮಾನ್ ಖಾನ್‌ನ ಕಂಡು ನೀತಾ ಅಶೋಕ್‌ ನರ್ವಸ್ | Vikrant Rona | Kiccha Sudeep *Press Meet
  English summary
  Famous Malayalam and Tamil actor Prathap Pothen passed away in Chennai on July 15. He was 69 years of age.
  Friday, July 15, 2022, 13:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X