For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟಿ ಕಲ್ಪನಾ ಪುತ್ರಿ

  |

  ಖ್ಯಾತ ನಟಿ ಕಲ್ಪನಾ ಎಂದಾಕ್ಷಣ ಮಿನುಗು ತಾರೆ ಕಲ್ಪನಾ ನೆನಪಾಗುತ್ತಾರೆ. ಆದರೆ ನಾವೀಗ ಹೇಳುತ್ತಿರುವುದು ಮಿನುಗು ತಾರೆ ಕಲ್ಪನಾ ಬಗ್ಗೆ ಅಲ್ಲ. ದಕ್ಷಿಣ ಭಾರತೀಯ ಚಿತ್ರರಂಗ ಕಂಡ ಮತ್ತೋರ್ವ ನಟಿ ಕಲ್ಪನಾ ಬಗ್ಗೆ. ಹೌದು, ಮಲಯಾಳಂನ ಖ್ಯಾತ ನಟಿ ಹಾಗೂ ನಟಿ ಊರ್ವಶಿ ಸಹೋದರಿ ದಿವಂಗತ ಕಲ್ಪನಾ ಅವರ ಮಗಳು ಶ್ರೀಮಾಯಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

  ಮಲಯಾಳಂ ಚಿತ್ರರಂಗದ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಅಂದ್ಹಾಗೆ ಶ್ರೀಮಾಯಿ ಚೊಚ್ಚಲ ಚಿತ್ರಕ್ಕೆ 'ಕಿಸ್ಸಾ' ಎಂದು ಟೈಟಲ್ ಇಡಲಾಗಿದೆ. ಚಿತ್ರಕ್ಕೆ ನಿರ್ದೇಶಕ ಮೆಹರೂಫ್ ಮುತ್ತು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ ಶ್ರೀಮಾಯಿಗೆ ಯಾರು ನಾಯಕ ಆಗಲಿದ್ದಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

  'ಚಪಲ ಚೆನ್ನಿಗರಾಯ' ಕಾಶಿನಾಥ್ ಪತ್ನಿಯಾಗಿ ನಟಿಸಿದ್ದ ನಟಿ ಇನ್ನಿಲ್ಲ'ಚಪಲ ಚೆನ್ನಿಗರಾಯ' ಕಾಶಿನಾಥ್ ಪತ್ನಿಯಾಗಿ ನಟಿಸಿದ್ದ ನಟಿ ಇನ್ನಿಲ್ಲ

  ಶ್ರೀಮಾಯಿ ಚಿಕ್ಕಮ್ಮ ನಟಿ ಊರ್ವಶಿ ಕೂಡ ಸಹೋದರಿಯ ಮಗಳ ಸಿನಿಮಾಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಕಿಸ್ಸಾ ರೋಮ್ಯಾಂಟಿಕ್ ಸಿನಿಮಾವಾಗಿದ್ದು ಮುಂದಿನ ವರ್ಷ ಜನವರಿ 10ಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಕೇರಳ ಮತ್ತು ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ

  ನಟಿ ಕಲ್ಪನಾ ಕಳೆದ ಕೆಲವು ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಯಕಿಯಾಗಿ ಮತ್ತು ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಕಲ್ಪನಾ ಅಪಾರ ಸಂಖ್ಯೆ ಅಭಿಮಾನಿ ಬಳಗ ಹೊಂದಿದ್ದರು. ಕಲ್ಪನಾ ಮಲಯಾಳಂ ಚಿತ್ರ ಸೇರಿದಂತೆ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲೂ ಮಿಂಚಿದ್ದಾರೆ.

  English summary
  South Indian famous actress Kalpana's daughter Sharmaye entered to film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X