Don't Miss!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಲಯಾಳಂ ನಟಿ ಮಂಜು ವಾರಿಯರ್ ದೂರು: ನಿರ್ಮಾಪಕ ಸನಲ್ ಅರೆಸ್ಟ್!
ಮಲಯಾಳಂ ಸಿನಿಮಾ ನಿರ್ಮಾಪಕ ಸನಲ್ ಕುಮಾರ್ ಶಶಿಧರನ್ ಪೊಲೀಸರ ವಶದಲ್ಲಿ ಇದ್ದಾನೆ. ನಟಿ ಮಂಜು ವಾರಿಯರ್ ನೀಡಿದ ದೂರಿನ ಆಧಾರದ ಮೇಲೆ ಸನಲ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜು ವಾರಿಯರ್, ಕೊಚ್ಚಿಯ ಎಲಮಕ್ಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಾಗಾಗಿ ಪೊಲೀಸರು ಗುರುವಾರ (ಮೇ 5) ಬೆಳಿಗ್ಗೆ ತಿರುವನಂತಪುರಂನ ಪರಸ್ಸಾಲದಿಂದ ಸನಲ್ ಕುಮಾರ್ ಶಶಿಧರನ್‌ರನ್ನು ಬಂಧಿಸಿದ್ದಾರೆ ಎಂದು ವರದಿ ಆಗಿದೆ.
ಮಲಯಾಳಂನಲ್ಲಿ ಹಲವಾರು ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ನೀಡಿರುವ ಸನಲ್ ಕುಮಾರ್ ಶಶಿಧರನ್, ಮಂಜು ವಾರಿಯರ್‌ರೊಂದಿಗೆ 'ಕಯಾಟ್ಟಂ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮಂಜು ವಾರಿಯರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಪೋಸ್ಟ್ ಹಂಚಿಕೊಂಡಿದ್ದರು. ಮಂಜು ವಾರಿಯರ್ ಜೀವಕ್ಕೆ ಅಪಾಯವಿದೆ ಎನ್ನುವುದರ ಜೊತೆಗೆ ನಿರ್ಮಾಪಕ ಸನಲ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.
ಲೈಂಗಿಕ
ದೌರ್ಜನ್ಯ:
ನಟ,
ನಿರ್ಮಾಪಕ
ವಿಜಯ್
ಬಾಬು
ವಿರುದ್ಧ
ಪ್ರಕರಣ
ದಾಖಲು
ಇದೇ ವಿಚಾರವಾಗಿ ದೂರು ನೀಡಿದ್ದಾರೆ ನಟಿ ಮಂಜು ವಾರಿಯರ್. ದೂರಿನಲ್ಲಿ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದು, ಸಾಮಾಜಿಕ ಮಾಧ್ಯಮದ ಮೂಲಕ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಮಂಜು ವಾರಿಯರ್ ನೀಡಿದ ದೂರಿನ ಮೇರೆಗೆ ಸನಲ್‌ನನ್ನು ಬಂಧಿಸಲಾಗಿದೆ.
ಕೆಲವು ದಿನಗಳ ಹಿಂದೆ ಸನಲ್ ಕುಮಾರ್ ಶಶಿಧರನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಾಕಿಕೊಂಡ ಪೋಸ್ಟ್ ಹೀಗಿದೆ. "ತುಂಬಾ ಗಂಭೀರ: ನಟಿಯ ಜೀವಕ್ಕೆ ಅಪಾಯವಿದೆ. ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಜೀವಕ್ಕೆ ಅಪಾಯವಿದೆ ಮತ್ತು ಅವರು ಕೆಲವು ಹಿತಾಸಕ್ತಿಗಳ ವಶದಲ್ಲಿದ್ದಾರೆ. ನಾನು ಆಕೆಯ ಮ್ಯಾನೇಜರ್‌ಗಳಾದ ಬಿನೀಶ್ ಚಂದ್ರನ್ ಮತ್ತು ಬಿನು ನಾಯರ್ ಹೆಸರುಗಳನ್ನು ಪೋಸ್ಟ್ ಮಾಡಿದ್ದೇನೆ ಮತ್ತು ಆಕೆ ಬಂಧನದಲ್ಲಿದ್ದಾಳೆ ಎಂದು ತಿಳಿಸಲು ಪೋಸ್ಟ್ ಮಾಡಿದ್ದೇನೆ." ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸನಲ್ ಕುಮಾರ್ ಪೋಸ್ಟ್ ಮಾಡಿ ನಾಲ್ಕು ದಿನಗಳಾಗಿವೆ.

ಆದರೆ ಈ ಬಗ್ಗೆ ಮಂಜು ವಾರಿಯರ್ ಆಗಲಿ ಅಥವಾ ಆಕೆಯ ಆಪ್ತರಾಗಲಿ ಯಾರು ಮಾತನಾಡಿರಲಿಲ್ಲ. ಆ ಬಳಿಕ ಮತ್ತೆ ಪೋಸ್ಟ್ ಹಾಕಿದ ಸನಲ್, "ಮಂಜು ವಾರಿಯರ್ ಅವರ ಮೌನ ನನ್ನ ಅನುಮಾನವನ್ನು ಬಲಪಡಿಸುತ್ತದೆ. ನಿನ್ನೆ ನಾನು @wcc_cinema wcc ಗೆ ಇಮೇಲ್ ಕಳುಹಿಸಿದ್ದೇನೆ. ಮಲಯಾಳಂ ಚಿತ್ರರಂಗದಲ್ಲಿ ಲಿಂಗ ಸಮಾನತೆಗಾಗಿ ಕೆಲಸ ಮಾಡುವ ಸಂಸ್ಥೆ ಇದು. ಅವರೂ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಅನೇಕ ಜನರು ಈ ಗಂಭೀರ ಸಮಸ್ಯೆಯನ್ನು ತಮಾಷೆಯಾಗಿ ನೋಡುತ್ತಿದ್ದಾರೆ. ಕೇರಳದ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಈ ವಿಷಯ ಗೊತ್ತಿಲ್ಲ ಎಂಬಂತೆ ಬಿಂಬಿಸಲು ಯತ್ನಿಸುತ್ತಿರುವುದು ಭಯ ಹುಟ್ಟಿಸಿದೆ. ನಾನು ಹೇಳಿದ ಈ ವಿಷಯವು ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಚಲನಚಿತ್ರ ನಟಿಯ ಜೀವನ ಮತ್ತು ಸ್ವಾತಂತ್ರ್ಯದ ಬಗ್ಗೆ ಆಗಿರುವುದರಿಂದ, ರಾಷ್ಟ್ರೀಯ ಮಾಧ್ಯಮಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾನು ಬಯಸುತ್ತೇನೆ." ಎಂದು ಮತ್ತೊಂದು ಪೋಸ್ಟ್ ಹಾಕಿಕೊಂಡಿದ್ದರು.
ಇದೆಲ್ಲವನ್ನೂ ಗಮನಿಸಿದ ನಟಿ ಮಂಜು ವಾರಿಯರ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿ ಸನಲ್ ಕುಮಾರ್ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.