ಕೀರ್ತಿ ಸುರೇಶ್-ಅನಿರುದ್ಧ ಮದುವೆ: ನಟಿಯ ತಂದೆ ಕೊಟ್ಟರು ಸ್ಪಷ್ಟನೆ
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಮದುವೆ ಸುದ್ದಿ ಮತ್ತೆ ಹರಿದಾಡುತ್ತಿದೆ. ನಟಿ ಕೀರ್ತಿ ಸುರೇಶ್, ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಕೆಲವೇ ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದ್ದು ಅವರಿಬ್ಬರೂ ಒಟ್ಟಿಗಿರುವ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Recommended Video
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೀರ್ತಿ ಸುರೇಶ್ ತಂದೆ ಜಿ.ಸುರೇಶ್ ಕುಮಾರ್ ಮದುವೆ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಮಗಳ ಮದುವೆ ಸುದ್ದಿಯ ಬಗ್ಗೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿರುವ ಸುರೇಶ್, 'ಅದು ಪೂರ್ಣವಾಗಿ ಸುಳ್ಳು ಸುದ್ದಿ' ಎಂದು ಹೇಳಿದ್ದಾರೆ.
ಈ ಹಿಂದೆಯೂ ಕೀರ್ತಿ ಮದುವೆ ಬಗ್ಗೆ ಸುಳ್ಳು ಸುದ್ದಿಗಳು ಪ್ರಕಟವಾಗಿವೆ, ಇದು ಮೂರನೇ ಬಾರಿ ಕೀರ್ತಿ ಮದುವೆ ಬಗ್ಗೆ ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿರುವುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸುರೇಶ್ ಕುಮಾರ್.

ಸಂಗೀತ ನಿರ್ದೇಶಕ ಅನಿರುದ್ಧ ಹಾಗೂ ಕೀರ್ತಿ ಸುರೇಶ್ ಜೊತೆಗಿರುವ ಚಿತ್ರಗಳನ್ನು ಹಂಚಿಕೊಂಡು, ಇಬ್ಬರು ಕೆಲ ತಿಂಗಳಿಂದ ಪ್ರೀತಿಯಲ್ಲಿದ್ದಾರೆ, ಕೆಲವೇ ದಿನಗಳಲ್ಲಿ ಮದುವೆ ಆಗಲಿದ್ದಾರೆ ಎಂದು ಸುದ್ದಿಗಳು ಹರಿದಾಡಿದ್ದವು. ಆದರೆ ಆ ಸುದ್ದಿಗಳು ಸುಳ್ಳು ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ ಸುರೇಶ್ ಕುಮಾರ್.
ಇನ್ನು ನಟಿ ಕೀರ್ತಿ ಸುರೇಶ್ ಹಲವಾರು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಸರ್ಕಾರು ವಾರಿ ಪಾಠ, ಗುಡ್ ಲಕ್ ಸಖಿ, ರಂಗ್ ದೇ, ಐನಾ ಇಷ್ಟಂ ನುವು, ತಮಿಳಿನಲ್ಲಿ ಅಣ್ಣಾತೆ, ಸಾನಿ ಕಾಯಿದಂ, ಮಲಯಾಳಂನಲ್ಲಿ ಮರಕ್ಕರ್ ಹಾಗೂ ವಾಶಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











