For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಗೆ ಹಾರಿದ ಕೆಜಿಎಫ್ ಗರುಡ: ಮೋಹನ್‌ಲಾಲ್‌ ಜೊತೆ ನಟನೆ

  |

  ಕೆಜಿಎಫ್‌ ಚಾಪ್ಟರ್ 1 ನಲ್ಲಿ ಹೀರೋ ರಾಕಿ ಭಾಯ್ ಯಶ್ ಎದುರು ಅಷ್ಟೇ ಖದರ್ ಆಗಿ ನಟಿಸಿದ್ದ ಗರುಡ ಖ್ಯಾತಿಯ ರಾಮಚಂದ್ರ ರಾಜು ಆ ನಂತರ ಸಖತ್ ಅವಕಾಶಗಳನ್ನು ದೋಚಿಕೊಳ್ಳುತ್ತಿದ್ದಾರೆ.

  ಇದೀಗ ರಾಮಚಂದ್ರ ರಾಜು ಅಲಿಯಾಸ್ ಗರುಡ ರಾಮ್ ಅವರು ಮಲಯಾಳಂ ಗೆ ಹಾರಿದ್ದಾರೆ. ಮಲಯಾಳಂ ನ ಸೂಪರ್ ಸ್ಟಾರ್ ನಟನ ಎದುರು ವಿಲನ್ ಆಗಲಿದ್ದಾರೆ ಗರುಡ ರಾಮ್.

  ಮಲಯಾಳಂ ನ ಸ್ಟಾರ್ ನಿರ್ದೇಶಕರಲ್ಲೊಬ್ಬರಾದ ಉನ್ನಿಕೃಷ್ಣನ್ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಮೋಹನ್‌ಲಾಲ್ ಎದುರು ಗರುಡ ರಾಮ್ ನಟಿಸಲಿದ್ದಾರೆ. ಸಿನಿಮಾದಲ್ಲಿ ಅವರದ್ದು ವಿಲನ್ ಪಾತ್ರ ಎನ್ನಲಾಗುತ್ತಿದೆ.

  ಮೋಹನ್‌ಲಾಲ್-ಗರುಡ ರಾಮ್ ನಟಿಸುತ್ತಿರುವ ಈ ಸಿನಿಮಾಕ್ಕೆ 'ಅರಟ್ಟು' ಎಂದು ಹೆಸರಿಡಲಾಗಿದ್ದು. ಸಿನಿಮಾದ ಚಿತ್ರೀಕರಣ ಸಾಗಿದೆ. ಇದೇ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡತಿ ಶ್ರದ್ಧಾ ಶ್ರೀನಾಥ್ ಸಹ ನಟಿಸುತ್ತಿದ್ದಾರೆ.

  ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada

  'ಅರಟ್ಟು' ಆಕ್ಷನ್ ಸಿನಿಮಾ ಆಗಿದ್ದು, ನಾಯಕ ಪಾತ್ರಧಾರಿ ಮೋಹನ್‌ಲಾಲ್ ಪಟ್ಟಣದಿಂದ ಹಳ್ಳಿಯೊಂದಕ್ಕೆ ಒಂದು ಘನ ಉದ್ದೇಶ ಪೂರೈಸುವ ಸಲುವಾಗಿ ಹೋಗಿ, ಅಲ್ಲಿನ ಸ್ಥಳೀಯರೊಂದಿಗೆ ಹೋರಾಟಕ್ಕೆ ಇಳಿಯುವ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಸಾಕಷ್ಟು ಕಾಮಿಡಿ ದೃಶ್ಯಗಳು ಸಹ ಇವೆ ಎಂದಿದ್ದಾರೆ ನಿರ್ದೇಶಕ.

  English summary
  KGF fame Garuda Ram will play vilain charecter in a Malayalam movie in opposite of Mohanlal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X