twitter
    For Quick Alerts
    ALLOW NOTIFICATIONS  
    For Daily Alerts

    'ಹೇಮಾ' ಜಾರಿ ಅನುಮಾನ: ಮಲಯಾಳಂ ನಟಿಯರಿಗೆ ಮತ್ತೆ ನಿರಾಸೆ, ವರದಿಯಲ್ಲೇನಿದೆ?

    |

    ಸಿನಿಮಾ ರಂಗದಲ್ಲಿ ಮಹಿಳೆಯರ ಸ್ಥಾನ ಮಾನ ಗೌಣ. ಮಹಿಳೆಯರಿಲ್ಲದ ಸಿನಿಮಾ ರಂಗವನ್ನು ಊಹಿಸಲೂ ಅಸಾಧ್ಯ ಆದರೆ ಮಹಿಳೆಯರಿಗೆ ಸಿಗುತ್ತಿರುವ ಪ್ರಾಧಾನ್ಯತೆ ಬಹಳ ಕಡಿಮೆ. ಜೊತೆಗೆ ಸಿನಿರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಅಗಣಿತ.

    ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಅನುಭವಿಸುತ್ತಿರುವ ತಾರತಮ್ಯದ ಬಗ್ಗೆ ಆಗಾಗ್ಗೆ ದನಿಗಳು ಏಳುತ್ತಿರುತ್ತವಾದರೂ ಅವು ಪ್ರಬಲವಾಗಿಲ್ಲ. ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅಸಮಾನತೆ, ತಾರತಮ್ಯದ ವಿರುದ್ಧ ತುಸು ಗಟ್ಟಿ ದನಿ ಎದ್ದಿತ್ತು. ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತೆಡೆಗೆ 'ಹೇಮಾ' ವರದಿ ಜಾರಿಗೆ ತರಬೇಕೆನ್ನುವ ನಟಿಯರ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆದರೆ ಈ ಕೂಗಿಗೆ ಮತ್ತೊಮ್ಮೆ ಹಿನ್ನೆಡೆ ಆಗಿದೆ.

    2017ರಲ್ಲಿ ಮಲಯಾಳಂ ನಟಿಯ ಮೇಲೆ ಆದ ಅಮಾನುಷ ಅತ್ಯಾಚಾರ ಯತ್ನ ಮತ್ತು ಹಲ್ಲೆ ಘಟನೆ ಬೆನ್ನಲ್ಲೆ ಡಬ್ಲುಸಿಸಿ (ವಿಮೆನ್ ಇನ್ ಸಿನಿಮಾ ಕಲೆಕ್ಟಿವ್) ಮನವಿ ಮೇರೆಗೆ ಸಿಎಂ ಪಿಣರಾಯಿ ವಿಜಯನ್, ಕೇರಳ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿಯ ವರದಿ ನೀಡುವಂತೆ ಸೂಚಿಸಿದರು.

    Hema Committee Report: Another Set Back To Women In Malayalam Movie Industry

    ಅಂತೆಯೇ ಹೇಮಾ ಕಮಿಟಿಯು ಚಿತ್ರರಂಗದಲ್ಲಿನ ಮಹಿಳೆಯರ ಸ್ಥಿತಿಗತಿ ಅಭ್ಯಸಿಸಿ ಪರಿಪೂರ್ಣ ವರದಿಯನ್ನು ತಯಾರಿಸಿ, ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯಲು ಸಲಹೆಗಳನ್ನು, ತಾರತಮ್ಯ ನಿವಾರಿಸಲು ಮಾರ್ಗಸೂಚಿಗಳನ್ನು ನೀಡಿತು. ಆದರೆ ಆ ವರದಿ ಜಾರಿ ಆಗಲಿಲ್ಲ.

    ಇದೀಗ 2017 ರಲ್ಲಿ ನಡೆದ ಕೇರಳ ನಟಿ ಮೇಲಿನ ಅತ್ಯಾಚಾರ ಯತ್ನಕ್ಕೆ ಐದು ವರ್ಷ ತುಂಬಿದ ಕಾರಣ ಮತ್ತೆ ನಟಿಯರು ಹೇಮಾ ವರದಿ ಜಾರಿಗೆ ಒತ್ತಾಯ ಮಾಡಿದ್ದಾರೆ. ಆದರೆ ಮತ್ತೆ ನಟಿಯರಿಗೆ ಹಿನ್ನಡೆ ಆಗಿದೆ. ಹೇಮಾ ವರದಿಯು ಕೇರಳ ವಿಧಾನಸಭೆಯಲ್ಲಿ ಮಂಡನೆ ಸಹ ಆಗುವುದಿಲ್ಲ ಎನ್ನಲಾಗಿದೆ.

    ಹೇಮಾ ಕಮಿಟಿಯನ್ನು 'ತನಿಖಾ ಆಯೋಗ ಕಾಯ್ದೆ'ಯ ಅಡಿಯಲ್ಲಿ ರಚಿಸಲಾಗಿಲ್ಲ ಹಾಗಾಗಿ ಹೇಮಾ ಕಮಿಟಿ ನೀಡಿರುವ ವರದಿಯನ್ನು ಕೇರಳ ವಿಧಾನಸಭೆಯಲ್ಲಿ ಚರ್ಚೆಗೆ ಮಂಡನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೇರಳ ಮಹಿಳಾ ಆಯೋಗದ ಮುಖ್ಯಸ್ಥೆ ಪಿ.ಸತ್ಯದೇವಿ ಹೇಳಿದ್ದಾರೆ. ಹೇಮಾ ವರದಿ ಕುರಿತಂತೆ ನಿನ್ನೆ (ಜನವರಿ 16) ಕೋಝಿಕೋಡ್‌ನಲ್ಲಿ ಸಭೆ ನಡೆಸಿದ ಬಳಿಕ ಸತ್ಯದೇವಿ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ''ರಾಜ್ಯ ಮಹಿಳಾ ಮತ್ತು ಸಂಸ್ಕೃತಿ ಇಲಾಖೆ ಹೇಳಿರುವಂತೆ ಹೇಮಾ ಕಮಿಟಿಯನ್ನು ತನಿಖಾ ಆಯೋಗ ಕಾಯ್ದೆಯ ಅನುಗುಣವಾಗಿ ರಚನೆ ಮಾಡಿಲ್ಲವಾದ್ದರಿಂದ ಸಮಿತಿ ನೀಡಿರುವ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗದು'' ಎಂದಿದ್ದಾರೆ ಸತ್ಯದೇವಿ.

    ''ಆಂತರಿಕ ದೂರು ವಿಭಾಗವನ್ನು ಸುಪ್ರೀಂಕೋರ್ಟ್ ಖಾಯಂಗೊಳಿಸಿ ಆದೇಶ ಹೊರಡಿಸಿದೆ. ಆದರೆ ಸಿನಿಮಾ ರಂಗದಲ್ಲಿ ಆಂತರಿಕ ದೂರು ವಿಭಾಗ ಕಾರ್ಯ ನಿರ್ವಹಿಸುತ್ತಿಲ್ಲ. ಸಮ ಸಂಭಾವನೆ ಕಾನೂನು ಇದ್ದರೂ ಸಹ ಚಿತ್ರರಂಗದಲ್ಲಿ ಪುರುಷ ಹಾಗೂ ಮಹಿಳೆಯರ ನಡುವಿನ ಸಂಭಾವನೆ ತಾರತಮ್ಯ ಎಲ್ಲರಿಗೂ ಗೊತ್ತಿರುವಂಥಹುದೇ'' ಎಂದಿದ್ದಾರೆ ಸತ್ಯದೇವಿ.

    ''ನಿಯಮದ ಪ್ರಕಾರ ಯಾವುದೇ ಸಿನಿಮಾ ನಿರ್ಮಾಣ ಸಂಸ್ಥೆಯು ಆಂತರಿಕ ದೂರು ಸಮಿತಿಯನ್ನು ರಚಿಸಿದ ಬಳಿಕವಷ್ಟೆ ಸಿನಿಮಾವನ್ನು ನೊಂದಣಿ ಮಾಡಿಸಬೇಕು. ಆದರೆ ಆ ನಿಯಮವನ್ನು ಮಲಯಾಳಂ ಸೇರಿದಂತೆ ಬಹುತೇಕ ಚಿತ್ರರಂಗದ ನಿರ್ಮಾಣ ಸಂಸ್ಥೆಗಳು ಗಾಳಿಗೆ ತೂರಿವೆ. ಎಷ್ಟೋ ನಟ-ನಟಿಯರಿಗೆ ಆಂತರಿಕ ದೂರು ಸಮಿತಿ ಒಂದಿದೆ ಎಂಬುದು ಸಹ ಗೊತ್ತಿಲ್ಲ. ನಿರ್ಮಾಣ ಸಂಸ್ಥೆಗಳಿಗೂ ಈ ವಿಷಯ ಗೊತ್ತಿಲ್ಲ'' ಎಂದಿದ್ದಾರೆ ಸತ್ಯದೇವಿ.

    ಹೇಮಾ ಸಮಿತಿಯು 2019 ರಲ್ಲಿ ವರದಿ ಸಲ್ಲಿಸಿದೆ. ಈ ಎರಡು ವರ್ಷಗಳಲ್ಲಿ ವರದಿ ಬಗ್ಗೆ ಯಾವುದೇ ಚರ್ಚೆ ಅಥವಾ ಜಾರಿ ನಡೆದಿಲ್ಲ. ಕೆಲವು ದಿನಗಳ ಹಿಂದೆ ಹೇಮಾ ವರದಿಯ ಅಂಶಗಳನ್ನು ಪರಿಶೀಲನೆ ನಡೆಸಲು ಮತ್ತೊಂದು ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಕೇರಳ ಚಲನಚಿತ್ರ ಅಕಾಡೆಮಿ ಕಾರ್ಯದರ್ಶಿ ಅಜಯ್, ಕೇರಳ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ಕೇರಳ ಸಂಸ್ಕೃತಿ ಮತ್ತು ಪ್ರಸಾರ ಇಲಾಖೆ ಸಚಿವ ಸಾಜಿ ಚೆರಿಯನ್ ಅವರುಗಳು ಇದ್ದಾರೆ. ಈ ಸಮಿತಿಯು ಹೇಮಾ ವರದಿಯ ವಸ್ತು ನಿಷ್ಠತೆಗಳನ್ನು ಪರಿಶೀಲಿಸುವ ಜೊತೆಗೆ, ವರದಿ ಜಾರಿಯಲ್ಲಿನ ಕಾನೂನು ತೊಡಕುಗಳ ಬಗ್ಗೆ ಅಭ್ಯಸಿಸಿ ಮತ್ತೊಂದು ವರದಿಯನ್ನು ಸರ್ಕಾರಕ್ಕೆ ನೀಡಲಿದೆ.

    ಕನ್ನಡದ 'ಮಿಲನ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ನಟಿ ಪಾರ್ವತಿ ಮಿಲ್ಟನ್ (ತಿರುವೋತು) ಸೇರಿದಂತೆ ಮಲಯಾಳಂನ ಹಲವು ಪ್ರಮುಖ ನಟಿಯರು, ನಿರ್ದೇಶಕರು ಹೇಮಾ ವರದಿ ಜಾರಿಗೆ ಪಟ್ಟು ಹಿಡಿದಿದ್ದಾರೆ.

    {document3}

    English summary
    Hema committee Report may not be present in Kerala assembly. Cultural department said Hema committee not been created under Commission of Inquiries act.
    Monday, January 17, 2022, 19:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X