Just In
Don't Miss!
- News
ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Lifestyle
ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ನಾನು 'ಕೆಜಿಎಫ್' ಅಭಿಮಾನಿ' ಎಂದ ಮಲಯಾಳಂ ಸ್ಟಾರ್ ನಟ
ನಿಗದಿಪಡಿಸಿದ್ದ ಅವಧಿಗೆ ಮುನ್ನವಾ ಕೆಜಿಎಫ್ 2 ಸಿನಿಮಾದ ಟೀಸರ್ ಅನ್ನು ಅನಿವಾರ್ಯ ಕಾರಣಗಳಿಂದ ಬಿಡುಗಡೆ ಮಾಡಿದೆ ಚಿತ್ರತಂಡ.
ಟೀಸರ್ ಅನ್ನು ಯಾರೊ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ ಕಾರಣ, ನಾಳೆ (ಜನವರಿ 08) ರ ಬದಲಿಗೆ ಇಂದೇ ಟೀಸರ್ ಅನ್ನು ಚಿತ್ರತಂಡ ತರಾತುರಿಯಲ್ಲಿ ಬಿಡುಗಡೆ ಮಾಡಿದೆ. ಹಾಗೆಂದು ಕೆಜಿಎಫ್ ಅಭಿಮಾನಿಗಳಿಗೆ ನಿರಾಸೆ ಏನೂ ಇಲ್ಲ. ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಮಿಲಿಯನ್ ಗೂ ಹೆಚ್ಚು ಮಂದಿ ಕೆಜಿಎಫ್ 2 ಟೀಸರ್ ವೀಕ್ಷಿಸಿದ್ದಾರೆ.
ಕೇವಲ ಸಿನಿ ಪ್ರೇಕ್ಷಕರು ಮಾತ್ರವಲ್ಲ, ಸಿನಿಮಾ ಸೆಲೆಬ್ರಿಟಿಗಳು ಸಹ ಕೆಜಿಎಫ್ ಫ್ಯಾನ್ಸ್‌ಗಳಾಗಿದ್ದು ಹಲವರು ಟೀಸರ್ ಅನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ಮಲಯಾಳಂ ನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪೃಥ್ವಿರಾಜ್ ಸುಕುಮಾರನ್, 'ನಾನು ಕೆಜಿಎಫ್ ಸರಣಿಯ ದೊಡ್ಡ ಅಭಿಮಾನಿ. ಆ ಚಿತ್ರತಂಡದೊಂದಿಗೆ ಸಂಪರ್ಕವನ್ನೂ ಹೊಂದಿದ್ದೇನೆ. ಲುಸೀಫರ್ ಸಿನಿಮಾದ ಬಳಿಕ ಕೆಜಿಎಫ್ ತಂಡ ನನ್ನನ್ನು ಭೇಟಿಯಾಗಿ ಸಿನಿಮಾ ಜೊತೆಗಾರಿಕೆ ಬಗ್ಗೆ ನನ್ನೊಂದಿಗೆ ಮಾತುಕತೆ ನಡೆಸಿತು. ಹಾಗಾಗಿ ಬಹು ಗೌರವದೊಂದಿಗೆ ಕೆಜಿಎಫ್ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ' ಎಂದಿದ್ದಾರೆ ಪೃಥ್ವಿರಾಜ್ ಸುಕುಮಾರನ್.
ದೇಶದ ಅತ್ಯಂತ ನಿರೀಕ್ಷೆಯ ಸಿನಿಮಾ ಕೆಜಿಎಫ್ 2 ಅನ್ನು ಪೃಥ್ವಿರಾಜ್ ಪ್ರೊಡಕ್ಷನ್ ಕಡೆಯಿಂದ ಪ್ರೆಸೆಂಟ್ ಮಾಡುತ್ತಿರುವುದು ಬಹಳ ಗೌರವದ ವಿಷಯ. ರಾಕಿ ಭಾಯ್ ನ ಮುಂದುವರೆದ ಕತೆಯನ್ನು ನೋಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ ಪೃಥ್ವಿರಾಜ್ ಸುಕುಮಾರನ್.
'ಕೆಜಿಎಫ್ 2' ಸಿನಿಮಾದ ಮಲಯಾಳಂ ಅವತರಣಿಕೆಯ ವಿತರಣೆಯನ್ನು ಪೃಥ್ವಿರಾಜ್ ಸುಕುಮಾರನ್ ಪ್ರೊಡಕ್ಷನ್ಸ್ ಮಾಡುತ್ತಿದೆ.