For Quick Alerts
  ALLOW NOTIFICATIONS  
  For Daily Alerts

  ಜಾಕಿ ಚಾನ್ ಜೊತೆ ಮೋಹನ್ ಲಾಲ್ ಸಿನಿಮಾ: ಶೀರ್ಷಿಕೆ ಬಹಿರಂಗ!

  |

  ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಹಾಂಕಾಂಗ್ ಸೂಪರ್ ಸ್ಟಾರ್ ಜಾಕಿ ಚಾನ್ ಒಟ್ಟಿಗೆ ನಟಿಸುತ್ತಿದ್ದು, ಈ ಚಿತ್ರದ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ, ಈ ಚಿತ್ರದ ಟೈಟಲ್ ಬಹಿರಂಗವಾಗಿದೆ.

  ಮೋಹನ್ ಲಾಲ್ ಮತ್ತು ಜಾಕಿ ಚಾನ್ ಚಿತ್ರಕ್ಕೆ ನಾಯರ್ ಸಾನ್ ಎಂದು ಹೆಸರಿಡಲಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಈ ಚಿತ್ರವನ್ನು ಆಲ್ಬರ್ಟ್ ಆಂಟೋನಿ ನಿರ್ದೇಶನ ಮಾಡುತ್ತಿದ್ದಾರೆ.

  ಸ್ವಾತಂತ್ರ್ಯ ಪೂರ್ವದ ಕಥಾಹಂದರ ಹೊಂದಿರುವ ಈ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರ ಅಯ್ಯಪ್ಪನ್ ಪಿಳ್ಳೈ ಮಾಧವನ್ ನಾಯರ್ ಅವರ ಜೀವನ ಕಥೆಯನ್ನು ಆಧರಿಸಿದೆ. ಈ ಹೋರಾಟಗಾರ ಜಪಾನ್ ಪ್ರಜೆಗಳಿಗೆ ಹತ್ತಿರವಾಗಿದ್ದು, ಅವರನ್ನು ನಾಯರ್ ಸಾನ್ ಎಂದು ಕರೆಯುತ್ತಿದ್ದರು. ಮೋಹನ್ ಲಾಲ್ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಮೋಹನ್ ಲಾಲ್ ಚಿತ್ರದಲ್ಲಿ ಬಹುಭಾಷೆ ತಾರೆ ತ್ರಿಷಾ ನಾಯಕಿ!

  ಈ ಚಿತ್ರದಲ್ಲಿ ಜಾಕಿ ಚಾನ್ ಅವರ ಪಾತ್ರ ಏನು ಎಂಬುದರ ಬಗ್ಗೆ ಸ್ಪಷ್ಟವಾಗಿ ಇನ್ನು ಗೊತ್ತಾಗಿಲ್ಲ. ಆದರೆ, ಮೋಹನ್ ಲಾಲ್ ಮತ್ತು ಜಾಕಿ ಚಾನ್ ಕಾಂಬಿನೇಷನ್ ನೋಡಲು ಚಿತ್ರರಸಿಕರು ಥ್ರಿಲ್ ಆಗಿದ್ದಾರೆ.

  ಸದ್ಯ, ಈ ಪಾತ್ರಕ್ಕಾಗಿ ಮೋಹನ್ ಲಾಲ್ ತಯಾರಿ ನಡೆಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಈ ವರ್ಷದ ಅಂತ್ಯಕ್ಕೆ ಈ ಚಿತ್ರ ಸೆಟ್ಟೇರಲಿದೆಯಂತೆ. ಪ್ರಸ್ತುತ ಮೋಹನ್ ಲಾಲ್ ಅವರು 'ಮರಕ್ಕರ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

  'ಮರಕ್ಕರ್' ಮೊದಲ ನೋಟದಲ್ಲೇ ಹೃದಯ ಕದ್ದ ಕೀರ್ತಿ ಸುರೇಶ್

  ಇದಾದ ಬಳಿಕ 'ರಾಮ್' ಚಿತ್ರವನ್ನು ಆರಂಭಿಸಲಿದ್ದಾರೆ. ಈ ಸಿನಿಮಾದಲ್ಲಿ ತ್ರಿಷಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡು ಚಿತ್ರಗಳ ಬಳಿಕ ಜಾಕಿ ಚಾನ್ ಜೊತೆಗಿನ ಪ್ರಾಜೆಕ್ಟ್ ಆರಂಭವಾಗಲಿದೆ.

  English summary
  Malayalam superstar Mohan lal and hongkong superstar Jackie Chan starrer movie titled as a Nair San. movie going to starts very soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X