For Quick Alerts
  ALLOW NOTIFICATIONS  
  For Daily Alerts

  ಕಣ್ ಸನ್ನೆ ಹುಡುಗಿಯ ವಿರುದ್ಧ ಕೆಂಡಕಾರಿದ ನವರಸನಾಯಕ ಜಗ್ಗೇಶ್

  |

  Recommended Video

  Jaggesh upset about Malayalam actress Priya Varrier.

  ಕಣ್ ಸನ್ನೆಯ ಮೂಲಕ ದೇಶದಾದ್ಯಂದ ಸಂಚಲನ ಮೂಡಿಸಿದ್ದ ಕೇರಳದ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

  ಇದರ ಬೆನ್ನಲೆ ಪ್ರಿಯಾ ನವರಸ ನಾಯಕ ಜಗ್ಗೇಶ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಗ್ಗೇಶ್ ಇದ್ದಕ್ಕಿದ್ದಹಾಗೆ ಪ್ರಿಯಾ ಪ್ರಕಾಶ್ ವಾರಿಯಲ್ ಮೇಲೆ ಸಿಟ್ಟಾಗಲು ಕಾರಣವೇನು, ಅಂತ ಯೋಚಿಸುತ್ತಿದ್ದೀರಾ. ಇತ್ತೀಚಿಗೆ ಜಗ್ಗೇಶ್ ಒಕ್ಕಲಿಗರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದರು. ಇದೆ ಕಾರ್ಯಕ್ರಮಕ್ಕೆ ನಟಿ ಪ್ರಿಯಾ ವಾರಿಯರ್ ಕೂಡ ಅತಿಥಿಯಾಗಿ ವೇದಿಕೆ ಮೇಲಿದ್ದರು.

  'ವಿಷ್ಣುಪ್ರಿಯ' ಮೂಲಕ ಕನ್ನಡಕ್ಕೆ ಬಂದ ಪ್ರಿಯಾ ಪ್ರಕಾಶ್'ವಿಷ್ಣುಪ್ರಿಯ' ಮೂಲಕ ಕನ್ನಡಕ್ಕೆ ಬಂದ ಪ್ರಿಯಾ ಪ್ರಕಾಶ್

  ವೇದಿಕೆ ಮೇಲೆ ಗಣ್ಯರ ಜೊತೆ ಕೂತಿದ್ದ ಪ್ರಿಯಾ ನೋಡಿ ಜಗ್ಗೇಶ್ ಗೆ ಅಚ್ಚರಿಯಾಗಿದೆ. ಗಣ್ಯರು ಇರುವ ವೇದಿಕೆಯಲ್ಲಿ ಕೇವಲ ಕಣ್ ಸನ್ನೆಯ ಮೂಲಕ ಖ್ಯಾತಿಗಳಿಸಿದ ಪ್ರಿಯಾ ಪ್ರಕಾಶ್ ಹಾಜರಿ ಬೇಸರ ತರಿಸಿದೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

  'ಯಾರಿಕೆ' ಎಂದ ಜಗ್ಗೇಶ್

  'ಯಾರಿಕೆ' ಎಂದ ಜಗ್ಗೇಶ್

  "ಇಂದು ಬಲವಂತಕ್ಕೆ ಗೌರವಿಸಿ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕವಿಸ್ಮಿತನಾದೆ. ರಾಜ್ಯ ರಾಷ್ಟ್ರಕ್ಕೆ ಯಾವ ಕೊಡುಗೆ ಇಲ್ಲಾ. ಬರಹಗಾರ್ತಿಯಲ್ಲಾ. ಸ್ವಂತಂತ್ರ ಹೋರಾಟಗಾರ್ತಿಯಂತು ಅಲ್ಲವೆ ಅಲ್ಲಾ. ಹೋಗಲಿ ನೂರು ಸಿನಿಮಾ ನಟಿಯಂತು ಅಲ್ಲಾ. ಸಾಹಿತಿ ಅಲ್ಲಾ. ಅನಾಥ ಮಕ್ಕಳಿಗೆ ಮಹಾ ತಾಯಿ ಅಲ್ಲಾ. ಆಧುನಿಕ ಮದರ್ ತೆರೆಸಾ ಅಲ್ಲಾ. ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕ ಅಲ್ಲಾ. ಕಾದಂಬರಿ ಬರೆದ ತ್ರಿವೇಣಿ ಅಲ್ಲಾ. ಜಾನ್ಸಿ ಅಲ್ಲಾ. ಅಬ್ಬಕ್ಕನಲ್ಲಾ. ಕಿತ್ತೂರು ಚನ್ನಮ್ಮನಲ್ಲಾ" ಎಂದು ಬರೆದು ಏನು ಅಲ್ಲದ ಪ್ರಿಯಾ ಇಂದು ಯುವಜನಕ್ಕೆ ದೇವರಂತೆ ಕಾಣುತ್ತಿರುವುದು ದುರಂತ ಎಂದು ಬೇರಸ ಹೊರಹಾಕಿದ್ದಾರೆ.

  'ನೀನಂದ್ರೆ ನನಗೆ ಇಷ್ಟ': ದೇವರಕೊಂಡ ಜೊತೆ ಪ್ರಿಯಾ ವಾರಿಯರ್.!'ನೀನಂದ್ರೆ ನನಗೆ ಇಷ್ಟ': ದೇವರಕೊಂಡ ಜೊತೆ ಪ್ರಿಯಾ ವಾರಿಯರ್.!

  ಕಣ್ಣು ಹೊಡೆವ ನಟಿ ದೇವರಂತೆ ಕಂಡಳು

  ಕಣ್ಣು ಹೊಡೆವ ನಟಿ ದೇವರಂತೆ ಕಂಡಳು

  "ಮತ್ತೆ ಯಾರು ಅಂಥ ಯೋಚಿಸಿದರೆ ಬೇರ್ಯಾರು ಅಲ್ಲಾ. ಕಣ್ಣು ಹೊಡೆದು ಕಣ್ಣಲ್ಲಿ ಯುವಕನಿಗೆ ಪ್ರೀತಿ ತೋರ್ಪಡಿಸುವ ಸಾಮಾನ್ಯ ವೀಡಿಯೋ ಮಾಡಿ ಜಗ ಮೆಚ್ಚಿದ ಸಾಮಾನ್ಯ ಹೆಣ್ಣು ಮಗು. ಆಕೆ ಹೆಸರು ವಾರಿಯರ್ ಕೇರಳದ ಮಗು. ಕರೆದು ತಂದದ್ದು ಕನ್ನಡ ನಿರ್ಮಾಪಕ ಸ್ನೇಹಿತ ಮಂಜು. ಅದು ಒಕ್ಕಲಿಗರ ವಿಧ್ಯಾಸಂಸ್ಥೆಯ ವಾರ್ಷಿಕೋತ್ಸವಕ್ಕೆ. ನೂರು ಸಿನಿಮಾ ನಿರ್ದೇಶಕ ಸಾಯಿಪ್ರಕಾಶ್, ವಿದ್ಯಾಧಾನಿ ಶ್ರೀ ನಿರ್ಮಲಾನಂದ ಶ್ರೀಗಳು. ಅನೇಕ ಸಾಧಕರಿಗಿಂತ ಕಣ್ಣು ಹೊಡೆವ ವೀಡಿಯೋ ನಟಿ ಇಂದು ದೇವರಂತೆ ಕಂಡಳು ಯುವಸಮಾಜಕ್ಕೆ" ಎಂದು ಹೇಳಿದ್ದಾರೆ.

  ಎಂಥ ಶಿಕ್ಷೆ ಬದುಕು

  ಎಂಥ ಶಿಕ್ಷೆ ಬದುಕು

  ಎಂಥ ಶಿಕ್ಷೆ. ಹೋದರೆ ಸಹಿಸಲಾಗದ ಹಿಂಸೆ. ಹೋಗದಿದ್ದರೆ ದುರಾಹಂಕಾರ ಪಟ್ಟ. ಎಂಥ ಶಿಕ್ಷೆ ಬದುಕು. ಜೀವನ, ದೇಶ, ಸಂಸ್ಕೃತಿ, ತಾಯಿ-ತಂದೆ, ಶಿಕ್ಷಣ, ಶಿಕ್ಷಕರು, ಸಮಾಜ ಕಲಿಸುವ ಸಾಧಕರಿಗಿಂತ ಇಂದು ಇಂಥ ಕ್ಷಣಿಕ ಹೆಸರು ಮಾಡಿದ ಆರಾಧಕರು ದೇಶ ಸಂಸ್ಕೃತಿ ತಂದೆ-ತಾಯಿ ಭಾವನೆ ಉಳಿಸುವ ಯುವ ಸಮುದಾಯವೇ? ಪ್ರಶ್ನೆ ನನ್ನ ಕಾಡಿ ಹುಚ್ಚನಂತೆ ಚಿಂತಿಸಿ ಮರಳಿದೆ. ದೇಶದ ಬೆನ್ನೆಲುಬು ಯುವ ಸಮಾಜ. ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ." ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  ನವರಸ ನಾಯಕ ಜಗ್ಗೇಶ್ ಮೇಲೆ ಕನ್ನಡದ ಈ ನಟಿಗೆ ಕ್ರಶ್ ಆಗಿತ್ತುನವರಸ ನಾಯಕ ಜಗ್ಗೇಶ್ ಮೇಲೆ ಕನ್ನಡದ ಈ ನಟಿಗೆ ಕ್ರಶ್ ಆಗಿತ್ತು

  ಪ್ರಿಯಾ ಪ್ರಕಾಶ್ ತಪ್ಪೇನು?

  ಪ್ರಿಯಾ ಪ್ರಕಾಶ್ ತಪ್ಪೇನು?

  ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ಕಳೆದ ವರ್ಷ ಕಣ್ ಸನ್ನೆಯ ಮೂಲಕ ದೇಶದಾದ್ಯಂತ ಸಂಚಲನ ಮೂಡಿಸಿದ್ದರು. ಆ ನಂತರ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕೆ. ಮಂಜು ನಿರ್ಮಾಣದ ಚಿತ್ರದಲ್ಲಿ ಪ್ರಿಯಾ ನಾಯಕಿ. ಅದೆ ಕಾರಣಕ್ಕೊ ಏನೊ ಕೆ.ಮಂಜು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ ಪ್ರಿಯಾ ವಾರಿಯರ್ ಗೆ ಇದು ಯಾವ ಕಾರ್ಯಕ್ರಮ ಏನು? ಎನ್ನುವ ಬಗ್ಗೆ ಗೊತ್ತಿದೆಯೊ ಇಲ್ಲವೊ. ಆದರೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಕಾರಣ ಬಂದಿದ್ದಾರೆ. ಇದರಲ್ಲಿ ಆಕೆಯ ತಪ್ಪೇನಿದೆ, ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ.

  English summary
  Kannada actor Jaggesh upset about Malayalam actress Priya Varrier.
  Monday, November 11, 2019, 13:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X