For Quick Alerts
  ALLOW NOTIFICATIONS  
  For Daily Alerts

  ಒಟ್ಟಾರೆ 400 ಕೋಟಿ ಗಳಿಸಿದ ಕಾಂತಾರ ಕೇರಳದಲ್ಲೇ ತನ್ನ ಬಜೆಟ್‌ಗಿಂತ ಹೆಚ್ಚು ಗಳಿಸಿದೆ!

  |

  ಈ ವರ್ಷ ಅತಿ ದೊಡ್ಡ ಸೆನ್ಸೇಷನ್ ಹುಟ್ಟುಹಾಕಿದ ಚಿತ್ರವೆಂದರೆ ಅದು ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಕಾಂತಾರ ಚಿತ್ರ. ಹೌದು, ಕೇವಲ ಹದಿನಾರು ಕೋಟಿ ಬಜೆಟ್‌ನಲ್ಲಿ ಬಿಡುಗಡೆಗೊಂಡ ಕಾಂತಾರ ಚಿತ್ರ 400 ಕೋಟಿ ಗಳಿಸಿದ್ದು ಬೃಹತ್ ಸಾಧನೆಯೇ ಸರಿ. ಇನ್ನು ಕಾಂತಾರ ಪ್ಯಾನ್ ಇಂಡಿಯಾ ಚಿತ್ರವಾಗಿ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದ್ದು, ಮೊದಲಿಗೆ ಬಿಡುಗಡೆಯಾಗಿದ್ದು ಕೇವಲ ಕನ್ನಡದಲ್ಲಿ ಮಾತ್ರ.

  ಹೌದು, ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರಕ್ಕೆ ಬಂದ ಅತೀವ ಪ್ರಶಂಸೆ ಹಾಗೂ ಇತರೆ ಭಾಷೆಗಳಿಗೆ ಡಬ್ ಮಾಡಿ ಎಂಬ ಬೇಡಿಕೆಯಿಂದ ಎಚ್ಚೆತ್ತ ಹೊಂಬಾಳೆ ಫಿಲ್ಮ್ಸ್ ಚಿತ್ರವನ್ನು ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಮಾಡಿತು. ಎಲ್ಲಕ್ಕಿಂತ ಅಂತಿಮವಾಗಿ ಕಾಂತಾರ ಮಲಯಾಳಂ ವರ್ಷನ್ ತೆರೆಗೆ ಬಂದಿತ್ತು.

  ಇನ್ನು ಕೇರಳದಲ್ಲೂ ಸಹ ಒಳ್ಳೆಯ ಓಪನಿಂಗ್ ಪಡೆದುಕೊಂಡ ಕಾಂತಾರ ಚಿತ್ರ ಭರ್ಜರಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಯಿತು. ಕಾಂತಾರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಲಯಾಳಂನ ಸೆನ್ಸೇಷನಲ್ ಹಿಟ್ ಚಿತ್ರ 'ಜಯ ಜಯ ಜಯ ಜಯ ಹೇ' ಬಿಡುಗಡೆಯಾದರೂ ಸಹ ಕಾಂತಾರ ಕುಗ್ಗದೇ ಒಳ್ಳೆಯ ಗಳಿಕೆಯನ್ನು ಮಾಡಿದ್ದು ಚಿತ್ರದ ಕಂಟೆಂಟ್‌ಗಿರುವ ಪವರ್ ಅನ್ನು ತೋರಿಸಿತ್ತು.

  ಕೇರಳದಲ್ಲೇ ಬಜೆಟ್ ವಾಪಸ್

  ಕೇರಳದಲ್ಲೇ ಬಜೆಟ್ ವಾಪಸ್

  ಅಕ್ಟೋಬರ್ 20ರಂದು ಕಾಂತಾರ ಮಲಯಾಳಂ ವರ್ಷನ್ ಅನ್ನು ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಕೇರಳ ರಾಜ್ಯಾದ್ಯಂತ ವಿತರಿಸಿದ್ದರು. ಕೇರಳದಲ್ಲಿ ಬಿಡುಗಡೆಯಾಗುವಷ್ಟರಲ್ಲಿ ಇತರೆ ಎಲ್ಲಾ ಭಾಷೆಗಳಲ್ಲೂ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ಕಾಂತಾರ ಮಲಯಾಳಂನಲ್ಲಿಯೂ ಸಹ ಮೋಡಿ ಮಾಡಿತು. ಸದ್ಯ ಅಮೆಜಾನ್ ಪ್ರೈಮ್ ವಿಡಿಯೊ ಅಪ್ಲಿಕೇಶನ್‌ನಲ್ಲಿ ಓಟಿಟಿ ಬಿಡುಗಡೆಗೊಂಡಿರುವ ಕಾಂತಾರ ಚಿತ್ರ ಕೇರಳದಲ್ಲಿ ಒಟ್ಟು 19.45 ಕೋಟಿ ಗಳಿಸಿದೆ ಎಂದು ಬಾಕ್ಸ್ ಆಫೀಸ್ ಟ್ರೇಡರ್ಸ್ ತಿಳಿಸಿದ್ದಾರೆ. ಈ ಮೂಲಕ ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಾಂತಾರ ಚಿತ್ರ ಕೇರಳದ ಕಲೆಕ್ಷನ್ ಮೂಲಕವೇ ತನ್ನ ಬಜೆಟ್ ಅನ್ನು ವಾಪಸ್ ಪಡೆದಿದೆ.

  ಕಾಂತಾರ ಎಲ್ಲೆಲ್ಲಿ ಎಷ್ಟು ಗಳಿಸಿತು?

  ಕಾಂತಾರ ಎಲ್ಲೆಲ್ಲಿ ಎಷ್ಟು ಗಳಿಸಿತು?


  ಕಾಂತಾರ ಚಿತ್ರ ಯಾವ ರಾಜ್ಯಗಳಲ್ಲಿ ಎಷ್ಟು ಗಳಿಸಿತು ಹಾಗೂ ವಿದೇಶದ ನೆಲದಲ್ಲಿ ಎಷ್ಟು ಗಳಿಸಿತು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ

  ಕರ್ನಾಟಕ: 170 ಕೋಟಿ

  ಆಂಧ್ರ ಪ್ರದೇಶ ಹಾಗೂ ತೆಲಂಗಾಣ : 61 ಕೋಟಿ

  ತಮಿಳು ನಾಡು : 12.90 ಕೋಟಿ

  ಕೇರಳ : 19.45 ಕೋಟಿ

  ವಿದೇಶ : 45 ಕೋಟಿ

  ಉತ್ತರ ಭಾರತ: 101 ಕೋಟಿ

  ಕಾಂತಾರ ತುಳು ವರ್ಷನ್ ಬಿಡುಗಡೆ

  ಕಾಂತಾರ ತುಳು ವರ್ಷನ್ ಬಿಡುಗಡೆ


  ಹೀಗೆ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡಗಡೆಯಾಗಿ ಅಬ್ಬರಿಸಿದ್ದ ಕಾಂತಾರ ಸದ್ಯ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ನಿನ್ನೆಯಿಂದ ( ಡಿಸೆಂಬರ್ 2 ) ಚಿತ್ರಮಂದಿರಗಳಲ್ಲಿ ಕಾಂತಾರ ತುಳು ವರ್ಷನ್ ತೆರೆ ಕಂಡಿದೆ. ವಿಶ್ವದಾದ್ಯಂತ ಸುಮಾರು ಐವತ್ತು ಚಿತ್ರಮಂದಿರಗಳಲ್ಲಿ ಕಾಂತಾರ ತುಳು ಚಿತ್ರ ತೆರೆಗೆ ಬಂದಿದ್ದು, ಈ ಮೂಲಕ ಕಾಂತಾರ ಆರು ಭಾಷೆಯ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ರಿಷಬ್ ಶೆಟ್ಟಿ ಚಿತ್ರಗಳು ಆರು ಭಾಷೆಗಳಲ್ಲಿ ತೆರೆ ಕಾಣುವುದು ಸಾಮಾನ್ಯವಾಗಿರಲಿದೆ.

  English summary
  Kantara grossed 19 crores in Kerala state and it's more than it's budget
  Saturday, December 3, 2022, 8:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X