For Quick Alerts
  ALLOW NOTIFICATIONS  
  For Daily Alerts

  ಕೇರಳ ರಾಜ್ಯ ಪ್ರಶಸ್ತಿ: ಅತ್ಯುತ್ತಮ ನಟ ಸೂರಜ್, ಅತ್ಯುತ್ತಮ ನಟಿ ಕನಿ ಕುಶ್ರುತಿ

  |

  2019-20ನೇ ಸಾಲಿನ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದ್ದು, ಸೂರಜ್ ವೆಂಜರಮೂಡು ಅತ್ಯುತ್ತಮ ನಟ ಹಾಗೂ ಕನಿ ಕುಶ್ರುತಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮೋಹನ್ ಲಾಲ್ ನಟನೆಯ ಚಿತ್ರಕ್ಕೆ ಮೂರು ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

  ಮಾರ್ಚ್ ತಿಂಗಳಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಮಾಡಬೇಕಿತ್ತು. ಆದ್ರೆ, ಕೊರೊನಾ ಲಾಕ್‌ಡೌನ್ ಕಾರಣ ಸಾಧ್ಯವಾಗಿರಲಿಲ್ಲ. ಛಾಯಾಗ್ರಾಹಕ ಮಧು ಅಂಬತ್ ಅವರ ತೀರ್ಪುಗಾರರ ಸಮಿತಿ ಎದುರು ಒಟ್ಟು 119 ಚಿತ್ರಗಳ ಪ್ರದರ್ಶನವಾಗಿತ್ತು. ಇಂದು ಮಧ್ಯಾಹ್ನ ರಾಜ್ಯದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಎ.ಕೆ.ಬಾಲನ್ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರ ಹೆಸರು ಘೋಷಿಸಿದ್ದಾರೆ.

  50ನೇ ಕೇರಳ ರಾಜ್ಯ ಪ್ರಶಸ್ತಿ ಪಟ್ಟಿ ಇಂತಿವೆ:

  * ಅತ್ಯುತ್ತಮ ಮೊದಲ ಸಿನಿಮಾ: ವಸಂತಿ

  * ಅತ್ಯುತ್ತಮ ಎರಡನೇ ಚಿತ್ರ: ಕೆಂಚಿರಾ

  * ಅತ್ಯುತ್ತಮ ನಟ: ಸೂರಜ್ ವೆಂಜರಮ್ಮುಡು (ಆಂಡ್ರಾಯ್ಡ್ ಕುಂಜಪ್ಪನ್ ಆವೃತ್ತಿ 5.25 ಮತ್ತು ವಿಕೃತಿ)

  * ಅತ್ಯುತ್ತಮ ನಟಿ: ಕನಿ ಕುಶ್ರುತಿ (ಬಿರಿಯಾನಿ)

  * ಅತ್ಯುತ್ತಮ ನಿರ್ದೇಶಕ: ಲಿಜೊ ಜೋಸ್ ಪೆಲ್ಲಿಸ್ಸೆರಿ (ಜಲ್ಲಿಕಟ್ಟು)

  * ಅತ್ಯುತ್ತಮ ಪಾತ್ರ ನಟ: ಫಹಾದ್ ಫಾಸಿಲ್ (ಕುಂಬಲಂಗಿ ನೈಟ್ಸ್)

  * ಅತ್ಯುತ್ತಮ ಪಾತ್ರ ನಟಿ: ಸ್ವಸಿಕ (ವಸಂತಿ)

  * ಅತ್ಯುತ್ತಮ ಚೊಚ್ಚಲ ನಿರ್ದೇಶಕ: ರತೀಶ್ ಬಾಲಕೃಷ್ಣನ್ ಪೊಡುವಾಲ್ (ಆಂಡ್ರಾಯ್ಡ್ ಕುಂಜಪ್ಪನ್ ಆವೃತ್ತಿ 5.25)

  * ಅತ್ಯುತ್ತಮ ಸಂಗೀತ ನಿರ್ದೇಶಕ: ಸುಶಿನ್ ಶ್ಯಾಮ್ (ಕುಂಬಲಂಗಿ ನೈಟ್ಸ್)

  * ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶಕ: ಅಜ್ಮಲ್ ಹಸ್ಬುಲ್ಲಾ (ವೃತ್ತಕೃತಿಯುಲ್ಲಾ ಚತುರಾಮ್)

  * ಅತ್ಯುತ್ತಮ ಹಿನ್ನೆಲೆ ಗಾಯಕ: ನಜೀಮ್ ಅರ್ಷದ್

  * ಅತ್ಯುತ್ತಮ ಹಿನ್ನೆಲೆ ಗಾಯಕಿ: ಮಧುಶ್ರೀ ನಾರಾಯಣನ್

  * ಅತ್ಯುತ್ತಮ ಸಂಪಾದಕ: ಕಿರಣ್ ದಾಸ್ (ಇಷ್ಕ್)

  * ಅತ್ಯುತ್ತಮ ಕಥೆ: ಶಾಹುಲ್ ಅಲಿಯಾರ್ (ವಸಂತಿ)

  Ragini Dwivedi, ಬೇಲ್ ಕೊಟ್ಟಿಲ್ಲ ಅಂದ್ರೆ ಪರವಾಗಿಲ್ಲ ಈ 3 ವಸ್ತುಗಳನ್ನು ವಾಪಸ್ ಕೊಡಿ ಪ್ಲೀಸ್ |Filmibeat Kannada

  * ಅತ್ಯುತ್ತಮ ಛಾಯಯಾಗ್ರಹಣ: ಪ್ರತಾಪ್ ವಿ ನಾಯರ್ (ಕೆಂಚಿರಾ)

  English summary
  Kerala State Film Awards 2019 annouced: Suraj Venjarammoodu Best Actor, Best Actress Kani Kusruthi and Best film wins Vasanthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X