For Quick Alerts
  ALLOW NOTIFICATIONS  
  For Daily Alerts

  ತೆಲುಗು, ತಮಿಳು ಬಳಿಕ ಮಲಯಾಳಂಗೆ ಕಾಲಿಟ್ಟ ಕೃತಿ ಶೆಟ್ಟಿ: ಯಾವುದು ಆ ಸಿನಿಮಾ?

  |

  ದಕ್ಷಿಣ ಭಾರತದ ಎರಡು ಚಿತ್ರರಂಗದಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ಕೃತಿ ಶೆಟ್ಟಿ ಮತ್ತೊಂದು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೃತಿ ಶೆಟ್ಟಿ ಚಿರಪರಿಚಿತ. ಈಗ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

  ಮಲಯಾಳಂ ಸ್ಟಾರ್ ನಟ ಟೊವಿನೋ ಥಾಮಸ್ ಸಿನಿಮಾದಲ್ಲಿ ನಟಿ ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃತಿ ಶೆಟ್ಟಿ ಹಾಗೂ ಟೊವಿನೋ ಥಾಮಸ್ ನಟನೆಯ ಈ ಸಿನಿಮಾದ ಹೆಸರು 'ಅಜಯಂತೆ ರಂದಂ ಮೋಷನಂ'. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಇಂದು (ಅಕ್ಟೋಬರ್ 11) ಸೆಟ್ಟೇರಿದೆ.

  'ಅಜಯಂತೆ ರಂದಂ ಮೋಷನಂ' ಒಂದು ಫ್ಯಾಂಟಸಿ ಅಡ್ವೆಂಚರ್ ಸಿನಿಮಾ ಇದಾಗಿದ್ದು, 3Dಯಲ್ಲಿ ತೆರೆ ಕಾಣಲಿದೆ. ಹೀಗಾಗಿ ಮಲಯಾಳಂ ಚಿತ್ರರಂಗದ ಬಿಗ್ ಬಜೆಟ್ ಆಗಿದ್ದು, ಮುಹೂರ್ತ ಅದ್ದೂರಿಯಾಗಿ ನೆಡೆದಿದೆ.

  'ಮಿನ್ನಲ್ ಮುರಳಿ' ಸಿನಿಮಾ ಬಳಿಕ ಸ್ಟಾರ್ ನಟ ಟೊವಿನೋ ಥಾಮಸ್ ವೃತ್ತಿ ಜೀವನದಲ್ಲಿಈ ಸಿನಿಮಾ ತುಂಬಾನೇ ವಿಶೇಷವಾಗಿದೆ. ಯಾಕಂದ್ರೆ ಈ ಸಿನಿಮಾದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ.

  ಈ ಸಿನಿಮಾ ಮೂರು ಯುಗಗಳನ್ನು ಸುತ್ತುವ ಕಥೆಯನ್ನು ತೆರೆಮೇಲೆ ತರುವುದಕ್ಕೆ ಸಜ್ಜಾಗಿದೆ. ಟೊವಿನೋ ಥಾಮಸ್ ಈ ಸಿನಿಮಾದಲ್ಲಿ ಮಣಿಯನ್, ಅಜಯನ್, ಕುಂಜಿಕೇಲು ಎಂಬ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳಿದ್ದಾರೆ.

  Krithi Shetty First Malayalam Movie Launched Starrer Tovino Thomas

  ಈ ಸಿನಿಮಾ ಸೌತ್ ಸಿನಿರಂಗದ ಸೆನ್ಸೇಷನಲ್ ನಟಿ ಕೃತಿ ಶೆಟ್ಟಿಗೂ ಸ್ಪೆಷಲ್. ಯಾಕಂದ್ರೆ, ತೆಲುಗು, ತಮಿಳಿನಲ್ಲಿ ಮಿಂಚಿದ್ದ ಕೃತಿ ಈಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ಇವರೊಂದಿಗೆ ಐಶ್ವರ್ಯ ರಾಜೇಶ್, ಸುರಭಿ ಲಕ್ಷ್ಮಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  'ಅಜಯಂತೆ ರಂದಂ ಮೋಷನಂ' ನಿರ್ದೇಶಕ ಜಿತಿನ್ ಲಾಲ್ ನಿರ್ದೇಶಿಸುತ್ತಿದ್ದು, ಇದು ಅವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಬಾಸಿಲ್ ಜೋಸೆಫ್, ಕಿಶೋರ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಜಗದೀಶ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Krithi Shetty First Malayalam Movie Launched Starrer Tovino Thomas, Know More.
  Tuesday, October 11, 2022, 23:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X