For Quick Alerts
  ALLOW NOTIFICATIONS  
  For Daily Alerts

  ಗುರು ಬಿಟ್ಟುಹೋದ ಸಿನಿಮಾವನ್ನು ಪೂರ್ಣಗೊಳಿಸುತ್ತಿರುವ ಶಿಷ್ಯ

  |

  ಪೃಥ್ವಿರಾಜ್ ಸುಕುಮಾರನ್ ನಾಯಕರಾಗಿ ಭಾರಿ ಯಶಸ್ಸು ಕಂಡ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ನಿರ್ದೇಶಕ ಸಚ್ಚಿ ಇದೇ ವರ್ಷದ ಜೂನ್ ತಿಂಗಳಲ್ಲಿ ನಿಧನಹೊಂದಿದರು.

  ಆದರೆ ಅವರು ಪ್ರಾರಂಭಿಸಬೇಕೆಂದುಕೊಂಡಿದ್ದ ಸಿನಿಮಾ ಒಂದನ್ನು ಸಚ್ಚಿ ಅವರ ಶಿಷ್ಯ, ನಿರ್ದೇಶಕ ಜಯನ್ ನಂಬಿಯಾರ್ ಪ್ರಾರಂಭಿಸುತ್ತಿದ್ದಾರೆ.

   ಮಲಯಾಳಂ ನಾಯಕ ನಟಿಯರ 'ಚಡ್ಡಿ' ಚಳವಳಿ ಮಲಯಾಳಂ ನಾಯಕ ನಟಿಯರ 'ಚಡ್ಡಿ' ಚಳವಳಿ

  ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ನಾಯಕ ಪೃಥ್ವಿರಾಜ್ ಸುಕುಮಾರನ್ ಅವರನ್ನೇ ನಾಯಕರನ್ನಾಗಿ ಇಟ್ಟುಕೊಂಡು 'ವಿಲಯಾತ್ ಬುದ್ಧ' ಎಂಬ ಸಿನಿಮಾವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು ಸಚ್ಚಿ. ಕತೆ-ಚಿತ್ರಕತೆ ಎಲ್ಲವೂ ತಯಾರಿತ್ತು.

  ಜೂನ್18 ರಂದು ಸಚ್ಚಿ ನಿಧನ

  ಜೂನ್18 ರಂದು ಸಚ್ಚಿ ನಿಧನ

  ಕೊರೊನಾ ಕಾರಣದಿಂದ ಚಿತ್ರೀಕರಣ ಮುಂದೂಡಲಾಗಿತ್ತು, ಆದರೆ ಆ ವೇಳೆಗಾಗಲೆ ಸಚ್ಚಿ ಅವರು ಅನಾರೋಗ್ಯದಿಂದ ಜೂನ್ 18 ರಂದು ಕೊನೆ ಉಸಿರೆಳೆದರು. ಈಗ ಆ ಸಿನಿಮಾವನ್ನು, ಸಚ್ಚಿ ಅವರ ಸಹಾಯಕ ನಿರ್ದೇಶಕ ಆಗಿದ್ದ ಜಯನ್ ನಂಬಿಯಾರ್ ಪೂರ್ಣಗೊಳಿಸುತ್ತಿದ್ದಾರೆ.

  ಸ್ಮಗ್ಲರ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್

  ಸ್ಮಗ್ಲರ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್

  ಸಿನಿಮಾದಲ್ಲಿ ಫೃಥ್ವಿರಾಜ್ ಸುಕುಮಾರನ್ ಸ್ಮಗ್ಲರ್‌ ನ ಪಾತ್ರ ಮಾಡುತ್ತಿದ್ದಾರೆ. ಸಿನಿಮಾದ ಮತ್ತೊಂದು ವಿಶೇಷವೆಂದರೆ ಸಿನಿಮಾದಲ್ಲಿ ಪೃಥ್ವಿರಾಜ್ ಸಹೋದರ ಇಂದ್ರಜಿತ್ ಸುಕುಮಾರನ್ ಸಹ ಇರಲಿದ್ದಾರೆ.

  ಕಾದಂಬರಿ ಆಧರಿತ ಕತೆ 'ವಿಲಾಯತ್ ಬುದ್ಧ'

  ಕಾದಂಬರಿ ಆಧರಿತ ಕತೆ 'ವಿಲಾಯತ್ ಬುದ್ಧ'

  'ವಿಲಾಯತ್ ಬುದ್ಧ' ಸಿನಿಮಾವು, ಖ್ಯಾತ ಕಾದಂಬರಿಕಾರ ಇಂದು ಗೋಪನ್ ಅವರ ಅದೇ ಹೆಸರಿನ ಕತೆ ಆಧರಿಸಿದ್ದಾಗಿದೆ. ಸಿನಿಮಾವು ಗಂಧದ ಮರ ಹಾಗೂ ಅದರ ಸುತ್ತಾ ಸುತ್ತುವ ಕತೆಯನ್ನು ವಸ್ತುವನ್ನಾಗಿರಿಸಿಕೊಂಡಿದೆ.

  DIRECTORS DIARY : ಸಿನಿಮಾ ರಿಲೀಸ್ ಗೂ ಮುಂಚೆ ಓಡೋಗೋಣ ಅಂತ ಪ್ಲಾನ್ ಮಾಡಿದ್ದೆ | Filmibeat Kannada
  ಬಹು ಭಿನ್ನ ಕತೆ ಹೊಂದಿರುವ ಸಿನಿಮಾ

  ಬಹು ಭಿನ್ನ ಕತೆ ಹೊಂದಿರುವ ಸಿನಿಮಾ

  ಭಾಸ್ಕರನ್ ಮಾಸ್ಟರ್ ಎಂಬಾತ ತನ್ನ ಜಮೀನಿನಲ್ಲಿ ವೈಯಕ್ತಿಕ ಕಾರಣಕ್ಕೆ ಗಂಧದ ಮರ ಬೆಳೆದಿರುತ್ತಾರೆ. ಅವರ ಮಾಜಿ ಶಿಷ್ಯನೇ ಆಗಿರುವ ಈಗ ಸ್ಮಗ್ಲರ್ ಆಗಿರುವ 'ಡಬಲ್ ಮೋಹನ್' ಎಂಬಾತನಿಗೆ ಗಂಧದ ಮರ ಬೇಕಾಗುತ್ತದೆ. ಇಬ್ಬರ ನಡುವೆ ಇದೇ ಕಾರಣಕ್ಕೆ ತಿಕ್ಕಾಟಗಳು ನಡೆಯುತ್ತವೆ. ಈ ತಿಕ್ಕಾಟಗಳ ನಡುವೆ ಇಬ್ಬರೂ ಆತ್ಮೀಯರಾಗುತ್ತಾರೆ.

  English summary
  Late director Sachy's project 'Vilayath Budha' taking over by his long time associate director Jayan Nambiar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X