For Quick Alerts
  ALLOW NOTIFICATIONS  
  For Daily Alerts

  ಹೊಸ ದಾಖಲೆ ಬರೆದ ಮೋಹನ್ ಲಾಲ್ -ಪೃಥ್ವಿರಾಜ್ ಜೋಡಿ

  By ಜೇಮ್ಸ್ ಮಾರ್ಟಿನ್
  |

  ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟ ಪೃಥ್ವಿರಾಜ್ ಚೊಚ್ಚಲ ನಿರ್ದೇಶನದ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಸ್ಟಾರ್ ನಟ ಮೋಹನ್ ಲಾಲ್ ನಟನೆಯ ಬಹು ತಾರಾಗಣದ ಲೂಸಿಫರ್ ಚಿತ್ರದ ಎರಡನೇ ಭಾಗವನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾದಿರುವ ಸಂದರ್ಭದಲ್ಲಿ ಮೊದಲ ಭಾಗ ದಾಖಲೆ ಬರೆದಿರುವ ಸುದ್ದಿ ಬಂದಿದೆ.

  Mohan Lal The Superstar Wishes Damayanti All the Best unveiling the Poster for Malayalam Version

  ಸೀಮಿತ ಮಾರುಕಟ್ಟೆ ಹೊಂದಿರುವ ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಹೊಂದಿದ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿ ಲೂಸಿಫರ್ ಕೂಡಾ ಕಾಣಿಸಿಕೊಳ್ಳುತ್ತದೆ. ತಮಿಳು, ತೆಲುಗು ಭಾಷೆಗೂ ಡಬ್ ಆಗಿದ್ದ ಈ ಚಿತ್ರ 2019ರ ಮಾರ್ಚ್ 28ರಂದು ತೆರೆ ಕಂಡಿದ್ದು, ಮೊದಲ 4 ದಿನಗಳಲ್ಲೇ 50 ಕೋಟಿ ರು ಗಳಿಸಿತ್ತು. 8 ದಿನಗಳಲ್ಲಿ 100 ಕೋಟಿ ರು ದಾಟಿದ ಈ ಚಿತ್ರ ಒಟ್ಟಾರೆ 200 ಪ್ಲಸ್ ಕೋಟಿ ಗಳಿಸಿದೆ.

  'ಮರಕ್ಕಾರ್' ಡಬ್ಬಿಂಗ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಯಶ್'ಮರಕ್ಕಾರ್' ಡಬ್ಬಿಂಗ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಯಶ್

  ಮೋಹನ್ ಲಾಲ್, ವಿವೇಕ್ ಒಬೆರಾಯ್, ಟೊವಿನೋ ಥಾಮಸ್, ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್ ರಂಥ ಜನಪ್ರಿಯ ನಟ, ನಟಿಯರನ್ನು ಹೊಂದಿದ್ದ ಈ ಚಿತ್ರದ ಟ್ರೇಲರ್ ಈಗ ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟ್ರೇಲರ್ ಎನಿಸಿಕೊಂಡು ಹೊಸ ದಾಖಲೆ ಬರೆದಿದೆ.

  ಟ್ರೇಲರ್ ರಿಲೀಸ್ ಆಗಿ ಮೊದಲ 24 ಗಂಟೆಗಳ ವೀಕ್ಷಣೆಯಲ್ಲೂ ದಾಖಲೆ ಬರೆದಿತ್ತು. 3.2 ಮಿಲಿಯನ್ ಬಾರಿ ವೀಕ್ಷಣೆ ಪಡೆದುಕೊಂಡಿತ್ತು. ಸದ್ಯ 11,090,117 ವೀಕ್ಷಣೆ ಹೊಂದಿದೆ.

  ಈಗ ಲೂಸಿಫರ್ ಎರಡನೇ ಆವೃತ್ತಿಗೆ ಎಂಪುರಾನ್ ಎಂದು ಹೆಸರಿಡಲಾಗಿದೆ. ಸ್ಟೀಫನ್ ನೆಡುಂಪಿಳ್ಳಿ ಅಲಿಯಾಸ್ ಖುರೇಶಿ ಅಬ್ರಾಮ್ ಆಗಿ ಮೋಹನ್ ಲಾಲ್ ಮತ್ತೆ ಮೋಡಿ ಮಾಡಲು ಸಿದ್ಧರಾಗುತ್ತಿದ್ದಾರೆ. ಲೂಸಿಫರ್ ನಲ್ಲಿ ಜಾಯೇದ್ ಮಸೂದ್ ಹೆಸರಿನ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿರಾಜ್, ಎರಡನೇ ಆವೃತ್ತಿಯಲ್ಲಿ ಹೆಚ್ಚು ಹೊತ್ತು ಪರದೆ ಮೇಲೆ ಕಾಣಿಸಿಕೊಂಡು ರಂಜಿಸುವುದಾಗಿ ಹೇಳಿದ್ದಾರೆ.

  English summary
  Lucifer movie, which pushed Malayalam cinema's boundaries in every aspect, is all set to get a sequel soon. Interestingly, Lucifer trailer has now set a new record.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X