For Quick Alerts
  ALLOW NOTIFICATIONS  
  For Daily Alerts

  ಕೊಟ್ಟ ಸಾಲ ವಾಪಸ್ ಕೇಳಿದವನ ಮೇಲೆ ನಟನ ದಾಳಿ! ಬಂಧನ

  |

  ಮಲಯಾಳಂನ ಕೆಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಪೋಷಕ ನಟನೊ ವಿನೀತ್ ತಟ್ಟಿಲ್ ಅನ್ನು ಕೇರಳ ಪೊಲೀಸರು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.

  ನಟ ವಿನೀತ್, ತನ್ನ ಗೆಳೆಯನಾಗಿದ್ದ ಅಲೆಕ್ಸ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ತ್ರಿಶೂರ್ ಪೊಲೀಸರು ವಿನೀತ್‌ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

  ನಟ ವಿನೀತ್, ಅಲೆಕ್ಸ್‌ನಿಂದ ಆರು ಲಕ್ಷ ರುಪಾಯಿ ಹಣ ಸಾಲ ಪಡೆದಿದ್ದನಂತೆ, ಮೂರು ಲಕ್ಷ ಹಣವನ್ನು ಹಿಂತಿರುಗಿಸಿದ್ದಾನೆ ಸಹ. ಬಾಕಿ ಮೂರು ಲಕ್ಷ ಹಣವನ್ನು ಕೇಳಲು ಅಲೆಕ್ಸ್ ವಿನೀತ್ ಮನೆಗೆ ಹೋಗಿದ್ದಾಗ ಇಬ್ಬರ ನಡುವೆ ಮಾತಿಗೆ-ಮಾತು ಬೆಳೆದು ವಿನೀತ್, ಅಲೆಕ್ಸ್ ಮೇಲೆ ದಾಳಿ ಮಾಡಿದ್ದಾನೆ.

  ಗಾಯಗೊಂಡಿದ್ದ ಅಲೆಕ್ಸ್‌, ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ನಟ ವಿನೀತ್ ವಿರುದ್ಧ ದೂರು ನೀಡಿದ್ದು, ಕೊಲ್ಲಲು ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರು ಸಹ ಕೊಲೆಗೆ ಯತ್ನ ಎಂದೇ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

  ಘಟನೆಯು ಭಾನುವಾರ ನಡೆದಿದ್ದು ತ್ರಿಶೂರ್ ಪೊಲೀಸರು ಸೋಮವಾರ ನಟನನ್ನು ವಶಕ್ಕೆ ಪಡೆಸಿದ್ದಾರೆ. ಪ್ರಾಥಮಿಕ ವಿಚಾರಣೆ ಬಳಿಕ ಮಂಗಳವಾರ ನಟನನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ನಟ ವಿನೀತ್ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

  ವಿನೀತ್, ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಾದ 'ಅಂಗಮಲೈ ಡೈರೀಸ್', 'ಅಯ್ಯಪ್ಪನುಂ ಕೋಶಿಯುಂ', 'ತ್ರಿಶೂರ್ ಪೂರಂ' ಸಿನಿಮಾ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Malayalam actor Vineeth Thattil arrested for attacking a man who asks to repay his loan of 3 lakh rs.
  Wednesday, July 27, 2022, 17:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X