For Quick Alerts
  ALLOW NOTIFICATIONS  
  For Daily Alerts

  ನಟ-ಬರಹಗಾರ ಪಿ ಬಾಲಚಂದ್ರನ್ ನಿಧನ: ಮೋಹನ್ ಲಾಲ್, ಮಮ್ಮುಟ್ಟಿ ಸಂತಾಪ

  |

  ಮಲಯಾಳಂ ಚಿತ್ರರಂಗದಲ್ಲಿ ಬರಹಗಾರ, ನಟನಾಗಿ ಗುರುತಿಸಿಕೊಂಡಿದ್ದ ಪಿ ಬಾಲಚಂದ್ರನ್ ನಿಧನರಾಗಿದ್ದಾರೆ. ಮಲಯಾಳಂ ಚಿತ್ರರಂಗಕ್ಕೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದ ಬಾಲಚಂದ್ರನ್ (69 ವರ್ಷ) ಇಂದು (ಏಪ್ರಿಲ್ 5) ಮುಂಜಾನೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.

  ಫೆಬ್ರವರಿ 2, 1952 ರಂದು ಕೇರಳದ ಕೊಲ್ಲಂ ಜಿಲ್ಲೆಯ ಸಸ್ತಂಕೋಟ ಗ್ರಾಮದ ಪದ್ಮನಾಭ ಪಿಳ್ಳೈ ಮತ್ತು ಸರಸ್ವತಿ ಭಾಯಿ ದಂಪತಿಗೆ ಮಗನಾಗಿ ಬಾಲಚಂದ್ರನ್ ಜನಿಸಿದರು. ಕಳೆದ ಕೆಲವು ತಿಂಗಳಿಂದ ಬಾಲಚಂದ್ರನ್ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಪತ್ನಿ ಶ್ರೀಲತಾ ಮತ್ತು ಮಕ್ಕಳಾದ ಶ್ರೀಕಾಂತ್, ಪಾರ್ವತಿ ಅವರನ್ನು ಅಗಲಿದ್ದಾರೆ.

  ಬಾಲಚಂದ್ರನ್ ಅವರ ನಿಧನಕ್ಕೆ ಮಾಲಿವುಡ್ ಚಿತ್ರರಂಗ ಮರುಗಿದೆ. ಹಿರಿಯ ನಟ ಮೋಹನ್ ಲಾಲ್, ಮಮ್ಮುಟ್ಟಿ, ಗಾಯಕಿ ಕೆಎಸ್ ಚಿತ್ರಾ, ನಟಿ ಮಂಜು ವಾರಿಯರ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

  1982ರಲ್ಲಿ ರಿಚರ್ಡ್ ನಿರ್ದೇಶನದ 'ಗಾಂಧಿ' ಚಿತ್ರದಲ್ಲಿ ನಟಿಸುವ ಮೂಲಕ ಬಾಲಚಂದ್ರನ್ ತಮ್ಮ ನಟನಾ ವೃತ್ತಿ ಪ್ರಾರಂಭಿಸಿದರು. ರಂಗಭೂಮಿ, ಸಿನಿಮಾ ಹಾಗೂ ಸಾಹಿತ್ಯ ಲೋಕದಲ್ಲಿ ತೊಡಗಿಕೊಂಡಿದ್ದರು. ನಾಟಕಗಳನ್ನು ಬರೆದಿದ್ದಾರೆ. ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  ಮಲಯಾಳಿ ಮಾಮಾನು ವನಕ್ಕಂ (2002), ಶೇಷಮ್ (2002), ಐವರ್ (2003), ಬ್ಯೂಟಿಫುಲ್ (2011), ತ್ರಿವಂದ್ರಮ್ ಲಾಡ್ಜ್ (2012), ಅನ್ನಾಯಮ್ ರಸೂಲಂ (2013), ಕಾಮಾಟಿ ಪಾದಂ(2016), ಅಥೀರನ್ (2019) ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಬಾಲಚಂದ್ರನ್ ಕಾಣಿಸಿಕೊಂಡಿದ್ದರು.

  ಅಂಕಲ್ ಬನ್ (1991), ಉಲ್ಲಾಡಕ್ಕಂ (1994), ಪವಿತ್ರಮ್ (1995), ಪೊಲೀಸ್ (2005), ಇವಾನ್ ಮೇಘರೂಪನ್ (2012) ಹಾಗೂ ಕಾಮಾಟಿ ಪಾದಂ(2016) ಅಂಥ ಚಿತ್ರಗಳಲ್ಲಿ ಬರಹಗಾರನಾಗಿ ಕೆಲಸ ಮಾಡಿದ್ದಾರೆ. ವಿಶೇಷ ಅಂದ್ರೆ ಇವಾನ್ ಮೇಘರೂಪನ್ ಚಿತ್ರವನ್ನು ಇವರೇ ನಿರ್ದೇಶಿಸಿದ್ದರು.

  1989 ರಲ್ಲಿ 'ಪಾವಮ್ ಉಸ್ಮಾನ್' ನಾಟಕಕ್ಕಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ವೃತ್ತಿಪರ ನಟಕಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.

  English summary
  Malayalam film writer, director and actor P Balachandran Passes Away at the age 69.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X