Just In
Don't Miss!
- Sports
ಚೇತೇಶ್ವರ ಪೂಜಾರಗೆ ಮರ್ಯಾದೆ ಪ್ರಶ್ನೆ, ಭಾರೀ ಸವಾಲೆಸೆದ ಆರ್ ಅಶ್ವಿನ್!
- Finance
ವಾಟ್ಸಾಪ್ ವೆಬ್ನಿಂದಲೂ ಆಡಿಯೋ ಮತ್ತು ವೀಡಿಯೋ ಕರೆಗಳನ್ನು ಮಾಡಬಹುದು!
- News
ಕೊರೊನಾ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ನಿಂತಿದೆ: ಭೈರತಿ ಬಸವರಾಜ
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Big News: ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ದಕ್ಷಿಣ ಭಾರತದ ಸಿನಿಮಾ
ಸೃಜನಶೀಲ ಸಿನಿಮಾಗಳ ಕಣಜ ಮಲಯಾಳಂ ಸಿನಿಮಾ ಉದ್ಯಮದಿಂದ ಆಸ್ಕರ್ ಪ್ರಶಸ್ತಿಗೆ 'ಜಲ್ಲಿಕಟ್ಟು' ಸಿನಿಮಾ ಆಯ್ಕೆಯಾಗಿದ್ದು, ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವ ಸಿನಿಮಾ ಇದಾಗಿದೆ.
ಸೆಪ್ಟೆಂಬರ್ 2019 ರಂದು ಬಿಡುಗಡೆಯಾದ ಈ ಸಿನಿಮಾ ಬಹಳ ವಿಭಿನ್ನವಾದ ಕತೆ ಹೊಂದಿರುವ ಮಹತ್ವದ ಸಂದೇಶವನ್ನು ಕಟ್ಟಿಕೊಡುವ ಸಿನಿಮಾ ಆಗಿದೆ. ಸಿನಿಮಾವನ್ನು ಲಿಜೊ ಜೋಸ್ ಫೆಲ್ಲಿಸೆರಿ ನಿರ್ದೇಶಿಸಿದ್ದಾರೆ.
ಆಸ್ಕರ್ ಪ್ರಶಸ್ತಿಯ ವಿದೇಶಿ ಭಾಷಾ ಸಿನಿಮಾ ಕ್ಯಾಟಗರಿಗಾಗಿ ಭಾರತದಿಂದ 'ಜಲ್ಲಿಕಟ್ಟು' ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಸಿನಿಮಾವು ಅಂತರಾಷ್ಟ್ರೀಯ ಭಾಷಾ ಸಿನಿಮಾದ ಅಂತಿಮ ಸುತ್ತಿಗೆ ಆಯ್ಕೆ ಆಗಿ, ಅಲ್ಲಿ ಮತ್ತೆ ಕೆಲ ಸಿನಿಮಾಗಳ ನಡುವೆ ಸ್ಪರ್ಧೆ ಮಾಡಿ ಆಸ್ಕರ್ ಗೆಲ್ಲಬೇಕಿರುತ್ತದೆ.
27 ಸಿನಿಮಾಗಳ ನಡುವೆ ಜಲ್ಲಿಕಟ್ಟು ಸಿನಿಮಾವನ್ನು ಆಸ್ಕರ್ ಸ್ಪರ್ಧೆಗೆ ಕಳಿಸಲು ಆಯ್ಕೆ ಮಾಡಲಾಗಿದೆ. 'ಶಕುಂತಲಾ ದೇವಿ, ಚಪಾಕ್, ಗುಲಾಬೊ ಸಿತಾಬೊ, ಚಲಾಂಗ್ ಇನ್ನೂ ಹಲವು ಸಿನಿಮಾಗಳ ನಡುವೆ ಸ್ಪರ್ಧೆ ನಡೆದು ಕೊನೆಗೆ 'ಜಲ್ಲಿ ಕಟ್ಟು' ಸಿನಿಮಾವನ್ನು ಆಯ್ಕೆ ಮಾಡಲಾಗಿದೆ.
ಕಡಿಯಬೇಕಿದ್ದ ಎಮ್ಮೆಯೊಂದು ಒಂದು ದಿನ ವಧಾ ಸ್ಥಾನದಿಂದ ತಪ್ಪಿಸಿಕೊಂಡು ಊರ ಒಳಗೆ ನುಗ್ಗಿಬಿಡುತ್ತದೆ. ಕೋಣ ಕಡಿಯುವವನು ಕೋಣದ ಹಿಂದೆ ಬೀಳುತ್ತಾನೆ. ಅದು ಗ್ರಾಮದಲ್ಲೆಲ್ಲಾ ಓಡಾಡುತ್ತದೆ, ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಇಡೀಯ ಗ್ರಾಮವೇ ಎಮ್ಮೆಯನ್ನು ಹಿಡಿಯಲು ಪ್ರಯತ್ನಿಸುತ್ತದೆ.
ಕೇಳಲು ಸರಳ ಕತೆಯಂತೆ ಇದು ಕಾಣುತ್ತದೆ ಆದರೆ ಕತೆ ಇರುವುದು ಕತೆಯ ರೂಪಕದಲ್ಲಿ. ಎಮ್ಮೆಯ ಪಾತ್ರ, ಹಳ್ಳಿಗರ ಸಂಭಾಷಣೆ, ಎಲ್ಲೆ ಸೃಷ್ಟಿಸುವ ಸಮಸ್ಯೆಗಳು ಹೀಗೆ ಎಲ್ಲವೂ ರೂಪಕಗಳನ್ನು ಒಳಗೊಂಡಿದೆ, ಹಾಗಾಗಿ ಇದೊಂದು ಅದ್ಭುತವಾದ ಸಿನಿಮಾ.